OTT Releases This Week: ಈ ವಾರ ಒಟಿಟಿಯಲ್ಲಿ ಯಾವ ಸಿನಿಮಾ, ವೆಬ್‌ಸಿರೀಸ್‌ ನೋಡಬೇಕು ಎಂದು ಸರ್ಚ್‌ ಮಾಡ್ತಿದ್ದೀರಾ? ಇಲ್ಲಿದೆ ನೋಡಿ ಲಿಸ್ಟ್‌
ಕನ್ನಡ ಸುದ್ದಿ  /  ಮನರಂಜನೆ  /  Ott Releases This Week: ಈ ವಾರ ಒಟಿಟಿಯಲ್ಲಿ ಯಾವ ಸಿನಿಮಾ, ವೆಬ್‌ಸಿರೀಸ್‌ ನೋಡಬೇಕು ಎಂದು ಸರ್ಚ್‌ ಮಾಡ್ತಿದ್ದೀರಾ? ಇಲ್ಲಿದೆ ನೋಡಿ ಲಿಸ್ಟ್‌

OTT Releases This Week: ಈ ವಾರ ಒಟಿಟಿಯಲ್ಲಿ ಯಾವ ಸಿನಿಮಾ, ವೆಬ್‌ಸಿರೀಸ್‌ ನೋಡಬೇಕು ಎಂದು ಸರ್ಚ್‌ ಮಾಡ್ತಿದ್ದೀರಾ? ಇಲ್ಲಿದೆ ನೋಡಿ ಲಿಸ್ಟ್‌

OTT Releases This Week: ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಜೀ5 ಮತ್ತು ಡಿಸ್ನಿ+ ಹೀಗೆ ಸಾಕಷ್ಟು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಟ್ರೆಂಡಿಂಗ್ ಸಿನಿಮಾಗಳು ಈ ವಾರ ಬಿಡುಗಡೆಯಾಗಲಿದೆ. ಆ ಸಿನಿಮಾ ಹಾಗೂ ವೆಬ್‌ಸಿರೀಸ್‌ಗಳ ಪಟ್ಟಿ ಇಲ್ಲಿದೆ.

ಈ ವಾರ ಒಟಿಟಿಯಲ್ಲಿ ನೋಡಬಹುದಾದ ಸಿನಿಮಾ, ವೆಬ್‌ಸಿರೀಸ್‌
ಈ ವಾರ ಒಟಿಟಿಯಲ್ಲಿ ನೋಡಬಹುದಾದ ಸಿನಿಮಾ, ವೆಬ್‌ಸಿರೀಸ್‌

OTT Releases This Week: 2024 ಕೊನೆಗೊಳ್ಳುತ್ತಿದ್ದಂತೆ ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಜೀ5 ಮತ್ತು ಇತರ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಹೊಸ ಹೊಸ ಸಿನಿಮಾಗಳನ್ನು ವೀಕ್ಷಕರಿಗಾಗಿ ನೀಡುತ್ತಿವೆ. ಈ ವಾರ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗುವ ಹೊಸ ಚಲನಚಿತ್ರಗಳು ಮತ್ತು ವೆಬ್ ಸರಣಿಗಳ ಪಟ್ಟಿಯನ್ನು ನಾವಿಲ್ಲಿ ನೀಡಿದ್ದೇವೆ. ನಿಮ್ಮ ವಾರಾಂತ್ಯದಲ್ಲಿ ನೀವು ಈ ಸಿನಿಮಾಗಳನ್ನು ನೋಡಬಹುದು. ಅಥವಾ ನಿಮ್ಮಿಷ್ಟದ ಯಾವುದೇ ನೋಡಲೇಬೇಕು ಎಂದೆನಿಸುವ ವೆಬ್‌ಸಿರೀಸ್‌ ಕೂಡ ಈ ಪಟ್ಟಿಯಲ್ಲಿರಬಹುದು ಗಮನಿಸಿ.

ಗ್ಲಾಡಿಯೇಟರ್ 2

ಗ್ಲಾಡಿಯೇಟರ್ 2 ಸಿನಿಮಾವನ್ನು ನೀವು ಒಟಿಟಿಯಲ್ಲಿ ವೀಕ್ಷಿಸಬಹುದು. ರಿಡ್ಲಿ ಸ್ಕಾಟ್ ನಿರ್ದೇಶಿಸಿದ ಈ ಚಿತ್ರವು ಸಾಕಷ್ಟು ವೀಕ್ಷಕರಿಂದ ಪಾಸಿಟಿವ್ ಟಾಕ್ ಪಡೆದುಕೊಂಡಿದೆ. ಡಿಯೇಟರ್ 2 ಚಿತ್ರಮಂದಿರಗಳಲ್ಲಿ ವೀಕ್ಷಿಸಲು ಮಾತ್ರ ಲಭ್ಯವಿದೆ. ನವೆಂಬರ್ 15 ರಂದು UK ನಲ್ಲಿ ಮತ್ತು ನವೆಂಬರ್ 22 ರಂದು US ನಲ್ಲಿ ಬಿಡುಗಡೆಯಾದ ನಂತರ ಇದರ ರಿವ್ಯೂ ಪಡೆದುಕೊಂಡ ವೀಕ್ಷಕರು ಈ ಸಿನಿಮಾ ಯಾವಾಗ ಒಟಿಟಿಗೆ ಬರುತ್ತದೆ ಎಂದು ಕಾಯುತ್ತಿದ್ದಾರೆ. ಈ ಚಲನಚಿತ್ರವು ಡಿಸೆಂಬರ್ 23, 2024 ರಂದು US ಮತ್ತು UKಯಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

ಸ್ಕ್ವಿಡ್ ಗೇಮ್‌ 2

ಕೊರಿಯನ್ ಶೋಗಳಲ್ಲಿ ಒಂದಾದ ಸ್ಕ್ವಿಡ್ ಗೇಮ್‌ ಎರಡನೇ ಸೀಸನ್‌ನೊಂದಿಗೆ ಮತ್ತೆ ವೀಕ್ಷಕರ ಎದುರು ಬರಲು ರೆಡಿಯಾಗಿದೆ. ಲೀ ಜಂಗ್-ಜೇ, ಲೀ ಬ್ಯುಂಗ್-ಹನ್, ವೈ ಹಾ-ಜುನ್ ಮತ್ತು ಗಾಂಗ್ ಯೂ ಪಾತ್ರಗಳ ಪುನರಾವರ್ತನೆ ಇದೆ ಎನ್ನಲಾಗಿದೆ. 'ಸ್ಕ್ವಿಡ್ ಗೇಮ್ ಸೀಸನ್ 2' ಡಿಸೆಂಬರ್ 26 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.

ಭೂಲ್ ಭುಲೈಯಾ 3
ಕಾರ್ತಿಕ್ ಆರ್ಯನ್, ಮಾಧುರಿ ದೀಕ್ಷಿತ್, ವಿದ್ಯಾ ಬಾಲನ್ ಮತ್ತು ಟ್ರಿಪ್ಟಿ ಡಿಮ್ರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ ಭೂಲ್ ಭುಲೈಯಾ 3 ಚಿತ್ರವು ಡಿಸೆಂಬರ್ 25 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಒಟಿಟಿ ಪ್ಲೇ ವರದಿಮಾಡಿದೆ.

ಸೊರ್ಗವಾಸಲ್

ತಪ್ಪೇ ಮಾಡದೇ ಜೈಲು ಸೇರಿದ ವ್ಯಕ್ತಿಯನ್ನು ಆಧಾರವಾಗಿ ಇಟ್ಟುಕೊಂಡು ನಿರ್ಮಾಣ ಮಾಡಿದ ಸಿನಿಮಾ ಇದು. 1999 ರ ಮದ್ರಾಸ್ ಕೇಂದ್ರ ಕಾರಾಗೃಹದ ಗಲಭೆಗಳನ್ನು ಆಧರಿಸಿ ಈ ಸಿನಿಮಾವನ್ನು ಮಾಡಲಾಗಿದೆ. ಇದೊಂದು ಕ್ರೈಮ್ ಥ್ರಿಲರ್ ಸಿನಿಮಾವಾಗಿದೆ. ಚಿತ್ರದಲ್ಲಿ ಆರ್‌ಜೆ ಬಾಲಾಜಿ ಮತ್ತು ಸೆಲ್ವರಾಘವನ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಡಿಸೆಂಬರ್ 27, 2024 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.

ಯುವರ್ ಫಾಲ್ಟ್
ಸ್ಪ್ಯಾನಿಷ್ ರೊಮ್ಯಾಂಟಿಕ್ ಡ್ರಾಮಾ ‘ಯುವರ್ ಫಾಲ್ಟ್’ ಚಿತ್ರದಲ್ಲಿ ಗೇಬ್ರಿಯಲ್ ಗುವೇರಾ ಮತ್ತು ನಿಕೋಲ್ ವ್ಯಾಲೇಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಲನಚಿತ್ರವು ಡಿಸೆಂಬರ್ 27, 2024 ರಂದು ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ.

ಈ ವರ್ಷದ ಅಂತ್ಯದಲ್ಲಿ ನೀವು ಇವಿಷ್ಟೂ ಸಿನಿಮಾಗಳನ್ನು ಒಟಿಟಿಯಲ್ಲಿ ವೀಕ್ಷಿಸಬಹುದು. ಕ್ರಿಸ್‌ಮಸ್‌ ರಜೆಯಲ್ಲಿ ಎಲ್ಲರೂ ಸೇರಿ ಮನೆಯಲ್ಲಿ ಒಂದೊಳ್ಳೆ ಸಿನಿಮಾ ನೋಡಬೇಕು ಎಂದು ನೀವು ನಿರ್ಧರಿಸಿದ್ದರೆ ಈ ಪಟ್ಟಿಯಲ್ಲಿನ ಯಾವುದೇ ಸಿನಿಮಾವನ್ನು ನೀವು ವೀಕ್ಷಿಸಬಹುದು.

ಯುವರ್ ಫಾಲ್ಟ್ ಸಿನಿಮಾ ಟ್ರೇಲರ್ ಇಲ್ಲಿದೆ

Whats_app_banner