ಒಟಿಟಿಗೆ ಬಂದ 19 ಸಿನಿಮಾ, ವೆಬ್‌ಸಿರೀಸ್‌ಗಳು; ಲಿಸ್ಟ್‌ನಲ್ಲಿವೆ ಬ್ಲಾಕ್‌ ಬಸ್ಟರ್‌ ಸಿನಿಮಾದಿಂದ ಅಟ್ಟರ್‌ ಪ್ಲಾಪ್‌ ಚಿತ್ರದವರೆಗೂ!
ಕನ್ನಡ ಸುದ್ದಿ  /  ಮನರಂಜನೆ  /  ಒಟಿಟಿಗೆ ಬಂದ 19 ಸಿನಿಮಾ, ವೆಬ್‌ಸಿರೀಸ್‌ಗಳು; ಲಿಸ್ಟ್‌ನಲ್ಲಿವೆ ಬ್ಲಾಕ್‌ ಬಸ್ಟರ್‌ ಸಿನಿಮಾದಿಂದ ಅಟ್ಟರ್‌ ಪ್ಲಾಪ್‌ ಚಿತ್ರದವರೆಗೂ!

ಒಟಿಟಿಗೆ ಬಂದ 19 ಸಿನಿಮಾ, ವೆಬ್‌ಸಿರೀಸ್‌ಗಳು; ಲಿಸ್ಟ್‌ನಲ್ಲಿವೆ ಬ್ಲಾಕ್‌ ಬಸ್ಟರ್‌ ಸಿನಿಮಾದಿಂದ ಅಟ್ಟರ್‌ ಪ್ಲಾಪ್‌ ಚಿತ್ರದವರೆಗೂ!

ಒಟಿಟಿಯಲ್ಲಿ ಈ ವಾರ (ಮಾ. 14) ಒಂದಲ್ಲ ಎರಡಲ್ಲ ಒಟ್ಟು 19 ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಡಿಜಿಟಲ್ ಸ್ಟ್ರೀಮಿಂಗ್‌ ಆರಂಭಿಸಿವೆ. ಈ 19 ಕಂಟೆಂಟ್‌ಗಳಲ್ಲಿ, ಹಾರರ್‌, ಕ್ರೈಮ್ ಥ್ರಿಲ್ಲರ್, ಸ್ಪೈ ಆಕ್ಷನ್, ಸೈನ್ಸ್‌- ಫಿಕ್ಷನ್, ಬೋಲ್ಡ್, ಕಾಮಿಡಿ ಮುಂತಾದ ವಿವಿಧ ಪ್ರಕಾರಗಳ ಚಲನಚಿತ್ರಗಳು ಸೇರಿವೆ.

ಒಟಿಟಿಗೆ ಬಂದ 19 ಸಿನಿಮಾ, ವೆಬ್‌ಸಿರೀಸ್‌ಗಳು
ಒಟಿಟಿಗೆ ಬಂದ 19 ಸಿನಿಮಾ, ವೆಬ್‌ಸಿರೀಸ್‌ಗಳು

OTT Releases This Week: ಒಟಿಟಿಯಲ್ಲಿ ಈ ವಾರ (ಮಾ. 14) ಒಂದಲ್ಲ ಎರಡಲ್ಲ ಒಟ್ಟು 19 ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಡಿಜಿಟಲ್ ಸ್ಟ್ರೀಮಿಂಗ್‌ ಆರಂಭಿಸಿವೆ. ಈ 19 ಕಂಟೆಂಟ್‌ಗಳಲ್ಲಿ, ಹಾರರ್‌, ಕ್ರೈಮ್ ಥ್ರಿಲ್ಲರ್, ಸ್ಪೈ ಆಕ್ಷನ್, ಸೈನ್ಸ್‌- ಫಿಕ್ಷನ್, ಬೋಲ್ಡ್, ಕಾಮಿಡಿ ಮುಂತಾದ ವಿವಿಧ ಪ್ರಕಾರಗಳ ಚಲನಚಿತ್ರಗಳು ಸೇರಿವೆ. ನೆಟ್‌ಪ್ಲಿಕ್ಸ್‌, ಅಮೆಜಾನ್ ಪ್ರೈಮ್, ಜಿಯೋ ಹಾಟ್‌ಸ್ಟಾರ್‌, ಆಹಾ ಸೇರಿ ಹಲವು ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾದ ಚಿತ್ರಗಳು ಯಾವುವು? ಇಲ್ಲಿದೆ ವಿವರ.

ನೆಟ್‌ಫ್ಲಿಕ್ಸ್‌ ಒಟಿಟಿ

  • ಆಡ್ರೆ (ಇಂಗ್ಲಿಷ್ ಕಾಮಿಡಿ ಚಿತ್ರ)- ಮಾರ್ಚ್ 14
  • ಎಮರ್ಜೆನ್ಸಿ (ಇಂದಿರಾ ಗಾಂಧಿ ಕುರಿತ ಹಿಂದಿ ಪೊಲಿಟಿಕಲ್‌ ಡ್ರಾಮಾ ಚಿತ್ರ)- ಮಾರ್ಚ್ 14
  • ಆಜಾದ್ (ಹಿಂದಿ ರೊಮ್ಯಾಂಟಿಕ್ ಆಕ್ಷನ್ ಥ್ರಿಲ್ಲರ್ ಚಲನಚಿತ್ರ)- ಮಾರ್ಚ್ 14
  • ದಿ ಎಲೆಕ್ಟ್ರಿಕ್ ಸ್ಟೇಟ್ (ಇಂಗ್ಲಿಷ್ ಸೈ-ಫಿಕ್ಷನ್ ಅಡ್ವೆಂಚರ್ ಥ್ರಿಲ್ಲರ್ ಚಲನಚಿತ್ರ)- ಮಾರ್ಚ್ 14

ಇದನ್ನೂ ಓದಿ: ಸದ್ದಿಲ್ಲದೆ ಒಟಿಟಿಗೆ ಆಗಮಿಸಿದ ಕಂಗನಾ ರಣಾವತ್‌ ನಟನೆಯ ಎಮರ್ಜೆನ್ಸಿ; ಹೋಳಿ ಹಬ್ಬಕ್ಕೆ ಇಂದಿರಾ ಗಾಂಧಿ ತುರ್ತುಪರಿಸ್ಥಿತಿ ಕಥೆ

  • ಕಾರ್ಸ್ ಆಫ್ ದಿ ಸೆವೆನ್ ಸೀಸ್ (ಇಂಡೋನೇಷ್ಯಾ ಸಿನೆಮಾ)- ಮಾರ್ಚ್ 14
  • ಒರು ಜಾತಿ ಜಾತಿಕಂ (ಮಲಯಾಳಂ ರೊಮ್ಯಾಂಟಿಕ್ ಕಾಮಿಡಿ ಚಿತ್ರ) - ಮಾರ್ಚ್ 14
  • ಬಿ ಹ್ಯಾಪಿ (ಹಿಂದಿ ಭಾವನಾತ್ಮಕ ಸಿನಿಮಾ) ಮಾರ್ಚ್‌ 14

ಜಿಯೋ ಹಾಟ್‌ಸ್ಟಾರ್‌ ಒಟಿಟಿ

  • ಮೋನಾ 2 (ಇಂಗ್ಲಿಷ್ ಅನಿಮೇಷನ್, ಫ್ಯಾಮಿಲಿ, ಅಡ್ವೆಂಚರ್ ಥ್ರಿಲ್ಲರ್ ಚಿತ್ರ)- ಮಾರ್ಚ್ 14
  • ಪೊನ್ಮನ್ (ಮಲಯಾಳಂ ಹಾಸ್ಯ ಚಿತ್ರ ಕನ್ನಡದಲ್ಲೂ ಲಭ್ಯ)- ಮಾರ್ಚ್ 14

ಬುಕ್ ಮೈ ಶೋ ಒಟಿಟಿ

  • ಮರ್ಸಿ ಕಿಲ್ಲಿಂಗ್ (ತೆಲುಗು ರೊಮ್ಯಾಂಟಿಕ್ ಆಕ್ಷನ್ ಥ್ರಿಲ್ಲರ್ ಚಿತ್ರ) - ಮಾರ್ಚ್ 14
  • ಕಂಪ್ಯಾನಿಯನ್ (ಇಂಗ್ಲಿಷ್ ಸೈನ್ಸ್ ಫಿಕ್ಷನ್ ಹಾರರ್ ಮೂವಿ) - ಮಾರ್ಚ್ 14

ಇದನ್ನೂ ಓದಿ: ಒಟಿಟಿಯಲ್ಲಿ ಬಿಡುಗಡೆಯಾಗಿದೆ ಹೊಸ ಐತಿಹಾಸಿಕ ಪ್ರಣಯ ನಾಟಕ; 80 ಕೋಟಿ ಬಜೆಟ್, ಸ್ಟಾರ್ ಕಿಡ್ಸ್‌ ಇರೋ ಸಿನಿಮಾ

ಆಹಾ ಒಟಿಟಿ

  • ಗ್ರಾಫ್ (ಮಲಯಾಳಂ ತನಿಖಾ ಥ್ರಿಲ್ಲರ್ ಚಲನಚಿತ್ರ) - ಮಾರ್ಚ್ 14
  • ಸೀ ಸಾ (ತಮಿಳು ಕ್ರೈಮ್ ಥ್ರಿಲ್ಲರ್ ಚಿತ್ರ) - ಮಾರ್ಚ್ 14
  • ಏಜೆಂಟ್ (ತೆಲುಗು ಸ್ಪೈ ಆಕ್ಷನ್ ಥ್ರಿಲ್ಲರ್ ಚಿತ್ರ) - ಸೋನಿ ಲಿವ್ ಒಟಿಟಿ - ಮಾರ್ಚ್ 14
  • ರಾಮಂ ರಾಘವಂ (ತೆಲುಗು ಫ್ಯಾಮಿಲಿ ಡ್ರಾಮಾ ಚಿತ್ರ)- ಸನ್ NXT ಒಟಿಟಿ - ಮಾರ್ಚ್ 14
  • ಡೋಪ್ ಥೀಫ್ (ಅಮೇರಿಕನ್ ಕ್ರೈಮ್ ಡ್ರಾಮಾ ವೆಬ್ ಸರಣಿ) - ಆಪಲ್ ಪ್ಲಸ್ ಟಿವಿ ಒಟಿಟಿ - ಮಾರ್ಚ್ 14

ಇಂಟ್ರೆಸ್ಟಿಂಗ್‌ ಸಿನಿಮಾಗಳಿವು

ಮಾರ್ಚ್‌ 14ರಂದು ಇಂದು ಒಂದೇ ದಿನ ಒಟ್ಟು 19 ಸಿನಿಮಾಗಳು ಒಟಿಟಿಗೆ ಆಗಮಿಸಿವೆ. ಅವುಗಳಲ್ಲಿ ಅಖಿಲ್ ಅಕ್ಕಿನೇನಿ ನಟನೆಯ ಏಜೆಂಟ್, ರಾಮಂ ರಾಘವಂ, ಸ್ಕೆಚ್, ಮರ್ಸಿ ಕಿಲ್ಲಿಂಗ್, ಮೋನಾ 2, ಪೊನ್ಮನ್ ಬಹಳ ವಿಶೇಷ. ಇದಲ್ಲದೆ, ಕಂಗನಾ ರಣಾವತ್‌ ನಟನೆಯ ಎಮರ್ಜೆನ್ಸಿ, ಆಜಾದ್, ಅಭಿಷೇಕ್ ಬಚ್ಚನ್ ಅವರ ಬೀ ಹ್ಯಾಪಿ, ಸೈನ್ಸ್‌ ಫಿಕ್ಷನ್ ಹಾರರ್‌ ಥ್ರಿಲ್ಲರ್ ಕಂಪ್ಯಾನಿಯನ್ ಮತ್ತು ಒರು ಜಾತಿ ಜಾತಿಕಂ ಕೂಡ ಈ ವಾರ ಒಟಿಟಿಗೆ ಆಗಮಿಸಿವೆ. ಒಂದಷ್ಟು ಸಿನಿಮಾಗಳು ಕನ್ನಡಕ್ಕೂ ಡಬ್‌ ಆಗಿ ವೀಕ್ಷಣೆಗೆ ಲಭ್ಯ ಇವೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.
Whats_app_banner