ಈ ವಾರ ಒಟಿಟಿಯಲ್ಲಿ ಹೊಸ ಥ್ರಿಲ್ಲರ್, ಕಾಮಿಡಿ, ರೋಮ್ಯಾಂಟಿಕ್ ಸಿನಿಮಾ, ಸರಣಿಗಳ ಜಾತ್ರೆ; ಮಾಲಿವುಡ್‌ನಿಂದ ಹಾಲಿವುಡ್ ತನಕ ಇಲ್ಲಿದೆ ಲಿಸ್ಟ್
ಈ ವಾರ ವಿವಿಧ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ವಿವಿಧ ಹೊಸ ಚಲನಚಿತ್ರಗಳು ಮತ್ತು ಸರಣಿಗಳು ಬಿಡುಗಡೆಯಾಗುತ್ತಿವೆ. ಒಟಿಟಿಯಲ್ಲಿ ಕನ್ನಡ ಸಿನಿಮಾ ಬಿಡುಗಡೆ ವಿವರ ಸದ್ಯಕ್ಕೆ ಲಭ್ಯವಿಲ್ಲ. ಉಳಿದಂತೆ ಮಾಲಿವುಡ್‌ನಿಂದ ಹಾಲಿವುಡ್ ತನಕ ಹೊಸ ಬಿಡುಗಡೆಯ ವಿವರ ಪಡೆಯೋಣ. ಲಿಸ್ಟ್‌ನಲ್ಲಿ ಭೂಲ್ ಚುಕ್ ಮಾಫ್ , ಡಿಯರ್ ಹಾಂಗ್‌ರಾಂಗ್, ಮರಣಮಾಸ್ ಸೇರಿವೆ.

ಮೊದಲೆಲ್ಲ ವೀಕೆಂಡ್ ಬಂತೆಂದರೆ ಚಿತ್ರಮಂದಿರಗಳಲ್ಲಿ ಯಾವೆಲ್ಲ ಸಿನಿಮಾಗಳು ಬಿಡುಗಡೆಯಾಗುತ್ತವೆ ಎಂದು ಜನರು ಕುತೂಹಲದಿಂದಕ ಕಾಯುತ್ತಿದ್ದರು. ಈಗ ಥಿಯೇಟರ್‌ಗಳ ಜತೆ ಒಟಿಟಿ ಬಿಡುಗಡೆ ಕುರಿತು ಜನರು ಹೆಚ್ಚು ಕುತೂಹಲದಿಂದ ಕಾಯುತ್ತಿದ್ದಾರೆ. ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಒಟಿಟಿ ಪ್ಲೇ, ಜೀ5, ಜಿಯೋಹಾಟ್‌ಸ್ಟಾರ್, ಸೋನಿಲಿವ್, ಆಪಲ್‌ಟಿವಿ ಸೇರಿದಂತೆ ಹಲವು ಒಟಿಟಿಗಳಲ್ಲಿ ಯಾವ ಸಿನಿಮಾ ಅಥವಾ ಸರಣಿ ಬಿಡುಗಡೆಯಾಗುತ್ತಿದೆ ಎಂದು ಜನರು ಕಾಯುತ್ತಿರುತ್ತಾರೆ. ಈ ರೀತಿ ನಿರೀಕ್ಷೆಯಲ್ಲಿರುವವರಿಗೆ ಈ ವಾರ ನಿರಾಶೆಯಾಗದು. ಭೂಲ್ ಚುಕ್ ಮಾಫ್ , ಡಿಯರ್ ಹಾಂಗ್‌ರಾಂಗ್, ಮರಣಮಾಸ್ ಸೇರಿದಂತೆ ಹಲವು ಸಿನಿಮಾಗಳು, ವೆಬ್‌ಸರಣಿಗಳು ಈ ವಾರ ಬಿಡುಗಡೆಯಾಗಲಿವೆ.
ಭೂಲ್ ಚುಕ್ ಮಾಫ್
ರಾಜ್‌ಕುಮಾರ್ ರಾವ್ ಮತ್ತು ವಾಮಿಕಾ ಗಬ್ಬಿ ನಟಿಸಿರುವ ಭೂಲ್ ಚುಕ್ ಮಾಫ್ ಈ ವಾರ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗುತ್ತಿದೆ. ಇದು ಕರಣ್ ಶರ್ಮಾ ನಿರ್ದೇಶನದ ವೈಜ್ಞಾನಿಕ ಕಾದಂಬರಿ ಹಾಸ್ಯ ಚಿತ್ರವಾಗಿದೆ. ಮ್ಯಾಡಾಕ್ ಫಿಲ್ಮ್ಸ್ ಮತ್ತು ಅಮೆಜಾನ್ ಎಂಜಿಎಂ ಸ್ಟುಡಿಯೋಸ್ ಅಡಿಯಲ್ಲಿ ದಿನೇಶ್ ವಿಜನ್ ಅವರು ಬಂಡವಾಳ ಹೂಡಿರುವ ಈ ಚಿತ್ರವು ಮೇ 9 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಬೇಕಿತ್ತು ಆದರೆ ಭಾರತ-ಪಾಕಿಸ್ತಾನ ಸಂಘರ್ಷದಿಂದಾಗಿ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಸಂಜಯ್ ಮಿಶ್ರಾ, ಜಾಕಿರ್ ಹುಸೇನ್ ಮತ್ತು ರಘುಬೀರ್ ಯಾದವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ತಾರಾಗಣ: ರಾಜ್‌ಕುಮಾರ್ ರಾವ್, ವಾಮಿಕಾ ಗಬ್ಬಿ, ಸೀಮಾ ಪಹ್ವಾ
ಪ್ರಕಾರ: ವೈಜ್ಞಾನಿಕ ಕಾದಂಬರಿ ಪ್ರಣಯ ಹಾಸ್ಯ
ಯಾವ ಒಟಿಟಿಯಲ್ಲಿ ಬಿಡುಗಡೆ?: ಅಮೆಜಾನ್ ಪ್ರೈಮ್ ವಿಡಿಯೋ
ಬಿಡುಗಡೆ ದಿನಾಂಕ: ಮೇ 16, 2025
ಹೇ ಜುನೋನ್! ಡ್ರೀಮ್, ಡೇರ್, ಡಾಮಿನೇಟ್
ಇದು ಭಾರತೀಯ ಸಂಗೀತ ನಾಟಕ. ಅಂದ್ರೆ ಮ್ಯೂಸಿಕಲ್ ಡ್ರಾಮಾ. ನೀಲ್ ನಿತಿನ್ ಮುಖೇಶ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಅಭಿಷೇಕ್ ಶರ್ಮಾ ನಿರ್ದೇಶಿಸಿದ್ದಾರೆ. ಇದು ಜಿಯೋ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.
ತಾರಾಗಣ: ನೀಲ್ ನಿತಿನ್ ಮುಖೇಶ್, ಜಾಕ್ವೆಲಿನ್ ಫರ್ನಾಂಡಿಸ್
ಪ್ರಕಾರ: ಸಂಗೀತ ನಾಟಕ
ಯಾವ ಒಟಿಟಿಯಲ್ಲಿ ಬಿಡುಗಡೆ?: ಜಿಯೋ ಹಾಟ್‌ಸ್ಟಾರ್
ಬಿಡುಗಡೆ ದಿನಾಂಕ: ಮೇ 16, 2025
ಡಿಯರ್ ಹಾಂಗ್‌ರಾಂಗ್
ಈ ಕೊರಿಯನ್ ಡ್ರಾಮಾದಲ್ಲಿ ಲೀ ಜೇ-ವೂಕ್ ಮತ್ತು ಜೋ ಬೋ-ಆಹ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಬೋ-ಆಹ್ ನಿರ್ವಹಿಸಿದ ಜೇ-ಯಿ, ತನ್ನ ಮಲಸಹೋದರ ಹಾಂಗ್-ರಾಂಗ್‌ನನ್ನು ಹುಡುಕುವ ಕಥೆ ಇದೆ. 12 ವರ್ಷಗಳ ನಂತರ ಹಾಂಗ್-ರಾಂಗ್ (ಜೇ-ವೂಕ್ ) ಹಿಂತಿರುಗಿದಾಗ ಆ ವ್ಯಕ್ತಿ ನಿಜವಾಗಿಯೂ ಯಾರೆಂದು ಕಂಡುಹಿಡಿಯುವ ಸವಾಲು ಜೇ-ಯಿಯ ಮೇಲೆ ಬೀಳುತ್ತದೆ. ಇದು ಮೇ 16ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಪ್ರಾರಂಭವಾಗುತ್ತದೆ.
ತಾರಾಗಣ: ಲೀ ಜೇ-ವೂಕ್, ಜೋ ಬೋ-ಆಹ್
ಪ್ರಕಾರ: ಐತಿಹಾಸಿಕ ಕೆ-ಡ್ರಾಮಾ
ಯಾವ ಒಟಿಟಿಯಲ್ಲಿ ಬಿಡುಗಡೆ?: ನೆಟ್‌ಫ್ಲಿಕ್ಸ್
ಬಿಡುಗಡೆ ದಿನಾಂಕ: ಮೇ 16, 2025
ಲವ್, ಡೆತ್ ಆಂಡ್ ರೊಬೊಟ್ಸ್ ವಾಲ್ಯೂಂ4
ಈ ಅನಿಮೇಟೆಡ್ ಸರಣಿಯು ವಿಭಿನ್ನ ಪಾತ್ರವರ್ಗಗಳು ಮತ್ತು ತಂಡಗಳಿಂದ ನಿರ್ಮಿಸಲ್ಪಟ್ಟ ಕಿರುಚಿತ್ರಗಳ ಸಂಗ್ರಹವನ್ನು ಒಳಗೊಂಡಿದೆ. ಈ ಹಲವು ಕಥೆಗಳ ಗುಚ್ಚಗಳು ಒಂದನ್ನೊಂದು ಸಂಪರ್ಕಿಸುತ್ತವೆ.
ತಾರಾಗಣ: ರೆಡ್ ಹಾಟ್ ಚಿಲ್ಲಿ ಪೆಪ್ಪರ್ಸ್, ಜಾನ್ ಬೊಯೆಗಾ, ಕೆವಿನ್ ಹಾರ್ಟ್, ಡಾನ್ ಸ್ಟೀವನ್ಸ್
ಪ್ರಕಾರ: ವಯಸ್ಕರ ಅನಿಮೇಷನ್
ಯಾವ ಒಟಿಟಿಯಲ್ಲಿ ಬಿಡುಗಡೆ?: ನೆಟ್‌ಫ್ಲಿಕ್ಸ್
ಬಿಡುಗಡೆ ದಿನಾಂಕ: ಮೇ 15, 2025
ಓವರ್‌ಕಾಂಪೋನ್ಸೆಟಿಂಗ್
ಬೆನಿಟೊ ಸ್ಕಿನ್ನರ್ ರಚಿಸಿದ ಈ ಕಾಮಿಡಿ ಶೋನಲ್ಲಿ ಲೈಂಗಿಕತೆಯ ಸಮಸ್ಯೆಯನ್ನು ಎದುರಿಸುತ್ತಿರುವ ಮಾಜಿ ಫುಟ್ಬಾಲ್ ಆಟಗಾರನ ಮುಖ್ಯ ಪಾತ್ರದಲ್ಲಿ ಸ್ಕಿನ್ನರ್ ಕಾಣಿಸಿಕೊಳ್ಳುತ್ತಾನೆ.
ಪಾತ್ರವರ್ಗ: ಬೆನಿಟೊ ಸ್ಕಿನ್ನರ್, ವ್ಯಾಲಿ ಬರಮ್, ಮೇರಿ ಬೆತ್ ಬರೋನ್, ಆಡಮ್ ಡಿಮಾರ್ಕೊ
ಪ್ರಕಾರ: ಹಾಸ್ಯ
ಯಾವ ಒಟಿಟಿಯಲ್ಲಿ ಬಿಡುಗಡೆ?: ಅಮೆಜಾನ್ ಪ್ರೈಮ್ ವಿಡಿಯೋ
ಬಿಡುಗಡೆ ದಿನಾಂಕ: ಮೇ 15, 2025
ಅಮೆರಿಕನ್ ಮ್ಯಾನ್‌ಹಂಟ್: ಒಸಮಾ ಬಿನ್ ಲಾಡೆನ್
ಒಸಮಾ ಬಿನ್ ಲಾಡನ್‌ನ ಹುಡುಕಾಟ, ಸಿಐಎಗೆ ಸಂಬಂಧಪಟ್ಟವರ ಸಂದರ್ಶನ ಮತ್ತು ಅಪರೂಪದ ದೃಶ್ಯಗಳನ್ನು ಹೊಂದಿರುವ ಡಾಕ್ಯುಮೆಂಟರಿ ಇದಾಗಿದೆ.
ಪ್ರಕಾರ: ಸಾಕ್ಷ್ಯಚಿತ್ರ
ಯಾವ ಒಟಿಟಿಯಲ್ಲಿ ಬಿಡುಗಡೆ?: ನೆಟ್‌ಫ್ಲಿಕ್ಸ್
ಬಿಡುಗಡೆ ದಿನಾಂಕ: ಮೇ 14, 2025
ಮರಣಮಾಸ್
ಮರಣಮಾಸ್ ಎನ್ನುವುದು ಕುಖ್ಯಾತ ಸರಣಿ ಕೊಲೆಗಾರ ರಿಪ್ಪರ್ ಬದುಕಿನ ಕಥೆ. ನಿರ್ದೇಶಕ ಶಿವಪ್ರಸಾದ್ ಅವರ ಮೊದಲ ಚಿತ್ರ. ಬಾಸಿಲ್ ಜೋಸೆಫ್ ನಾಯಕನಾಗಿ ನಟಿಸಿರುವ ಈ ಚಿತ್ರವನ್ನು ಟೋವಿನೋ ಮತ್ತು ಟಿಂಗ್‌ಸ್ಟನ್ ಥಾಮಸ್ ನಿರ್ಮಿಸಿದ್ದಾರೆ.
ತಾರಾಗಣ: ಬೇಸಿಲ್ ಜೋಸೆಫ್, ರಾಜೇಶ್ ಮಾಧವನ್, ಸಿಜು ಸನ್ನಿ, ಬಾಬು ಆಂಟನಿ
ಪ್ರಕಾರ: ಬ್ಲ್ಯಾಕ್ ಕಾಮಿಡಿ
ಯಾವ ಒಟಿಟಿಯಲ್ಲಿ ಬಿಡುಗಡೆ?: ಸೋನಿಲಿವ್
ಬಿಡುಗಡೆ ದಿನಾಂಕ: ಮೇ 15, 2025