ಕನ್ನಡ ಸುದ್ದಿ  /  ಮನರಂಜನೆ  /  Ott Releases: ಈ ವೀಕೆಂಡ್‌ನಲ್ಲಿ ಒಟಿಟಿಯಲ್ಲಿ ಹೊಸ ಸಿನಿಮಾ, ಸರಣಿಗಳ ಹಬ್ಬ, ದೋ ಔರ್ ದೋ ಪ್ಯಾರ್‌ನಿಂದ ದಿ ಬಾಯ್ಸ್‌ವರೆಗೆ ಇಲ್ಲಿದೆ ವಿವರ

OTT releases: ಈ ವೀಕೆಂಡ್‌ನಲ್ಲಿ ಒಟಿಟಿಯಲ್ಲಿ ಹೊಸ ಸಿನಿಮಾ, ಸರಣಿಗಳ ಹಬ್ಬ, ದೋ ಔರ್ ದೋ ಪ್ಯಾರ್‌ನಿಂದ ದಿ ಬಾಯ್ಸ್‌ವರೆಗೆ ಇಲ್ಲಿದೆ ವಿವರ

OTT releases this week: ಈ ವಾರ ಹಲವು ಹೊಸ ಸಿನಿಮಾ, ವೆಬ್‌ ಸರಣಿಗಳು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ. ವಿದ್ಯಾ ಬಾಲನ್ ಅವರ ದೋ ಔರ್ ದೋ ಪ್ಯಾರ್ ನಿಂದ ಹಿಡಿದು ಎಮ್ಮಾ ಡಿ'ಆರ್ಸಿ ಅವರ ಹೌಸ್ ಆಫ್ ದಿ ಡ್ರ್ಯಾಗನ್ ವರೆಗೆ ಹೊಸ ಸರಣಿಗಳು, ಸಿನಿಮಾಗಳನ್ನು ಮನೆಯಲ್ಲೇ ಕುಳಿತು ನೋಡಬಹುದು.

OTT releases: ಈ ವೀಕೆಂಡ್‌ನಲ್ಲಿ ಒಟಿಟಿಯಲ್ಲಿ ಹೊಸ ಸಿನಿಮಾ, ಸರಣಿಗಳ ಹಬ್ಬ
OTT releases: ಈ ವೀಕೆಂಡ್‌ನಲ್ಲಿ ಒಟಿಟಿಯಲ್ಲಿ ಹೊಸ ಸಿನಿಮಾ, ಸರಣಿಗಳ ಹಬ್ಬ

OTT releases this week: ಈ ವಾರ ಹಲವು ಹೊಸ ಸಿನಿಮಾ, ವೆಬ್‌ ಸರಣಿಗಳು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ. ಕೆಲವೊಂದು ಸಿನಿಮಾ, ಸರಣಿ ಇಂದು ಮುಂಜಾನೆಯೇ ರಿಲೀಸ್‌ ಆಗಿವೆ. ಈ ವಾರದ ಆರಂಭದಿಂದಲೇ ಹಲವು ಸಿನಿಮಾ, ಶೋ, ಸರಣಿಗಳು ಬಿಡುಗಡೆಯಾಗಿವೆ. ಬಾಕ್ಸ್‌ ಆಫೀಸ್‌ನಲ್ಲಿ ಬಿಡುಗಡೆಯಾದ ಬಳಿಕ ಕೆಲವೇ ದಿನಗಳಲ್ಲಿ, ತಿಂಗಳುಗಳಲ್ಲಿ ಹೊಸ ಸಿನಿಮಾಗಳನ್ನು ಮನೆಯಲ್ಲಿಯೇ ನೋಡುವ ಅವಕಾಶ ಒಟಿಟಿ ವೀಕ್ಷಕರಿಗೆ ದೊರಕುತ್ತಿದೆ.

ಹೌಸ್ ಆಫ್ ದಿ ಡ್ರ್ಯಾಗನ್ (ಸೀಸನ್ 2)

ಟ್ರೆಂಡಿಂಗ್​ ಸುದ್ದಿ

ಎಚ್‌ಬಿಒದ ಹಿಟ್ ಫ್ಯಾಂಟಸಿ ಡ್ರಾಮಾ ಗೇಮ್ ಆಫ್ ಥ್ರೋನ್‌ನ ಪ್ರಿಕ್ವೆಲ್ ಸರಣಿಯು 2022 ರಲ್ಲಿ ಬಿಡುಗಡೆಯಾಗಿತ್ತು. ಇದು ಮೂಲ ಸರಣಿಗಿಂತ ಉತ್ತಮವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಈದೀಗ ಹೌಸ್ ಆಫ್ ದಿ ಡ್ರ್ಯಾಗನ್ ಜೂನ್ 16 ರಂದು (ಭಾರತದಲ್ಲಿ ಜೂನ್ 17) ಬಿಡುಗಡೆಯಾಗಲಿದೆ. ಹೊಂಸ ಸಂಚು, ಸೇಡು, ಹೊಡೆದಾಟ, ಸಾಹಸ ಎಲ್ಲವೂ ಈ ಸೀಸನ್‌ನಲ್ಲಿ ಇರಲಿದೆ. ಲೇಖಕ ಮಾರ್ಟಿನ್ ಅವರ ಎ ಸಾಂಗ್ ಆಫ್ ಐಸ್ ಮತ್ತು ಫೈರ್ ಪುಸ್ತಕ ಫೈರ್ & ಬ್ಲಡ್ ಅನ್ನು ಆಧರಿಸಿದ ಹೌಸ್ ಆಫ್ ದಿ ಡ್ರ್ಯಾಗನ್ ಕಾಲ್ಪನಿಕ ಖಂಡವಾದ ವೆಸ್ಟೆರೋಸ್ ನ ಟಾರ್ಗೇರಿಯನ್ ರಾಜವಂಶದ ಕಥೆಯನ್ನು ಹೊಂದಿದೆ.

ಎಲ್ಲಿ ನೋಡಬಹುದು?: ಜಿಯೋ ಸಿನೆಮಾ

ಯಾವಾಗ ನೋಡಬಹುದು: ಜೂನ್ 16, ಬೆಳಿಗ್ಗೆ 6.30

ಬ್ರಿಡ್ಜರ್ಟನ್ (ಸೀಸನ್ 3, ಭಾಗ 2)

ನೆಟ್‌ಫ್ಲಿಕ್ಸ್‌ನ ಹಿಟ್‌ ಸೀಸನ್‌ ಇದಾಗಿದೆ. ಈ ಸರಣಿಯಲ್ಲಿ ಕಾಲಿನ್ ಮತ್ತು ಪೆನೆಲೋಪ್ ತಮ್ಮ ಪ್ರಣಯ ಕಣ್ತುಂಬಿಕೊಳ್ಳಬಹುದು. ರೀಜೆನ್ಸಿ-ಯುಗದ ಪ್ರಣಯ ಸರಣಿಯು ಜೂಲಿಯಾ ಕ್ವಿನ್ ಅವರ ಪುಸ್ತಕಗಳನ್ನು ಆಧರಿಸಿದೆ. ಬ್ರಿಡ್ಜರ್ಟನ್ ಕುಟುಂಬದ ಒಡಹುಟ್ಟಿದವರ ಕಥೆಗಳನ್ನು ಹೊಂದಿದೆ. ಈ ಬಾರಿ, ಲೇಡಿ ವಿಸ್ಲ್ಡೌನ್ ರಹಸ್ಯ ಬಹಿರಂಗವಾದರೆ ಪೆನಲೋಪ್‌ ಪ್ರೀತಿಗೆ ತೊಂದರೆಯಾಗಲಿದೆ. ಈ ಬಾರಿ ಆಕೆಯ ಬಗೆಗಿನ ಸತ್ಯವು ಬಹಿರಂಗವಾಗಲಿದೆಯೇ? ಆಕೆಯ ಸಂತೋಷದ ಬದುಕು ಮುಂದುವರೆಯುವುದೇ? ಎಂಬ ಕುತೂಹಲಕ್ಕೆ ಉತ್ತರ ದೊರಕಲಿದೆ.

ಎಲ್ಲಿ ವೀಕ್ಷಿಸಬಹುದು?: ನೆಟ್‌ಫ್ಲಿಕ್ಸ್‌

ಯಾವಾಗ ವೀಕ್ಷಿಸಬಹುದು?: ಒಟಿಟಿಯಲ್ಲಿ ಈಗಾಗಲೇ ಬಿಡುಗಡೆಯಾಗಿದೆ.

ದೋ ಔರ್ ದೋ ಪ್ಯಾರ್

ಬಾಕ್ಸ್ ಆಫೀಸ್ ನಲ್ಲಿ ನೀರಸ ಪ್ರದರ್ಶನ ಕಂಡ ವಿದ್ಯಾ ಬಾಲನ್ ಅವರ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಇದಾಗಿದೆ. ಇದೀಗ ಒಟಿಟಿಯಲ್ಲಿ ಎರಡನೇ ಬಾರಿಗೆ ಬಂದಿದೆ. ದೋ ಔರ್ ದೋ ಪ್ಯಾರ್ ಸಿನಿಮಾವು ಕಾವ್ಯಾ ಮತ್ತು ಆನಿ ಪಾತ್ರಗಳ ಪ್ರೇಮಕಥೆಯಾಗಿದೆ. ವಿದ್ಯಾ ಮತ್ತು ಪ್ರತೀಕ್ ಗಾಂಧಿ ಇಲ್ಲಿ ವಿವಾಹಿತ ದಂಪತಿ ಪಾತ್ರದಲ್ಲಿ ನಟಿಸಿದ್ದಾರೆ. ಊಟಿ ಪ್ರವಾಸದ ನಂತರ ಈ ದಂಪತಿ ವಿವಾಹೇತರ ಸಂಬಂಧಗಳಲ್ಲಿ ತೊಡಗಿದ್ದರೂ ಪರಸ್ಪರ ಪ್ರೀತಿಸುತ್ತಾರೆ.

ಎಲ್ಲಿ ನೋಡಬಹುದು?: ಡಿಸ್ನಿ + ಹಾಟ್‌ಸ್ಟಾರ್‌

ಯಾವಾಗ ವೀಕ್ಷಿಸಬಹುದು?: ಒಟಿಟಿಯಲ್ಲಿ ಈಗಾಗಲೇ ಬಿಡುಗಡೆಯಾಗಿದೆ.

ದಿ ಬಾಯ್ಸ್ (ಸೀಸನ್ 4)

ವಿಡಂಬನಾತ್ಮಕ ಸೂಪರ್‌ಹೀರೋ ಸರಣಿ ದಿ ಬಾಯ್ಸ್ ಸೀಸನ್ 4 ರ ಮೊದಲ ಮೂರು ಕಂತುಗಳನ್ನು ಗುರುವಾರ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ ಮಾಡಲಾಗಿದೆ. ಹಳೆಯ ಪಾತ್ರದಾರಿಗಳು: ಕಾರ್ಲ್ ಅರ್ಬನ್, ಜ್ಯಾಕ್ ಕ್ವಾಯಿದ್, ಆಂಟನಿ ಸ್ಟಾರ್, ಜೆಸ್ಸಿ ಟಿ. ಅಶರ್, ಎರಿನ್ ಮೊರಿಯಾರ್ಟಿ ಮತ್ತು ಚೇಸ್ ಕ್ರಾಫೋರ್ಡ್ ಮುಂತಾದವರು ನಟಿಸಿದ್ದಾರೆ. ಹೊಸ ಪಾತ್ರದಾರಿಗಳು: ವಾಲೋರಿ ಕರಿ ಮತ್ತು ಸುಸಾನ್ ಹೇವರ್ಡ್ ಇಬ್ಬರು ಹೊಸ ಸೂಪರ್ ಹೀರೋಗಳಾಗಿ, ಪಟಾಕಿ ಮತ್ತು ಸಿಸ್ಟರ್ ಸೇಜ್. ಜೆಫ್ರಿ ಡೀನ್ ಮೋರ್ಗನ್ (ಗ್ರೇಸ್ ಅನಾಟಮಿ, ದಿ ವಾಕಿಂಗ್ ಡೆಡ್) ಕೂಡ ನಿಗೂಢ ಪಾತ್ರದಲ್ಲಿ ನಟಿಸಿದ್ದಾರೆ.

ಎಲ್ಲಿ ನೋಡಬಹುದು?: ಪ್ರೈಮ್ ವಿಡಿಯೋ

ಯಾವಾಗ ವೀಕ್ಷಿಸಬಹುದು?: ಒಟಿಟಿಯಲ್ಲಿ ಈಗಾಗಲೇ ಬಿಡುಗಡೆಯಾಗಿದೆ.

ಪ್ರಿಸ್ಯೂಮ್ಡ್‌ ಇನ್ನೊಸೆಂಟ್‌ (Presumed Innocent)

ಜೇಕ್ ಗಿಲೆನ್ಹಾಲ್ ಕೊಲೆ ಆರೋಪ ಹೊತ್ತಿರುವ ಪ್ರಾಸಿಕ್ಯೂಟರ್ ಪಾತ್ರದಲ್ಲಿ ನಟಿಸಿದ್ದಾರೆ. ಇದು ಸ್ಕಾಟ್ ಟುರೊ ಅವರ ಕಾದಂಬರಿಯನ್ನು ಆಧರಿಸಿದೆ (ಇದೇ ಕಥೆ 1990 ರಲ್ಲಿ ಹ್ಯಾರಿಸನ್ ಫೋರ್ಡ್ ನಟಿಸಿದ ಚಲನಚಿತ್ರದಲ್ಲೂ ಇತ್ತು. ನಿಜ ಜೀವನದಲ್ಲಿ ಜೇಕ್ ನ ಸಹೋದರಿ ಮ್ಯಾಗಿಯನ್ನು ಮದುವೆಯಾದ ಪೀಟರ್ ಸರ್ಸ್ಗಾರ್ಡ್, ಗಿಲೆನ್ಹಾಲ್ ಎದುರಾಳಿಯಾಗಿ ನಟಿಸಿದ್ದಾರೆ.

ಎಲ್ಲಿ ನೋಡಬಹುದು?: ಆಪಲ್ ಟಿವಿ

ಯಾವಾಗ ವೀಕ್ಷಿಸಬಹುದು?: ಒಟಿಟಿಯಲ್ಲಿ ಈಗಾಗಲೇ ಬಿಡುಗಡೆಯಾಗಿದೆ.