OTT Releases This Week: ಎರಡು ದಿನಗಳಲ್ಲಿ ಒಟಿಟಿಗೆ ಬಂದ 19 ಸಿನಿಮಾಗಳು; ಕನ್ನಡದಲ್ಲಿಯೂ ಡಬ್ ಆಗಿ ಸ್ಟ್ರೀಮಿಂಗ್ ಆಗುತ್ತಿವೆ ಈ ಚಿತ್ರಗಳು
ಎರಡೇ ದಿನಗಳ ಅವಧಿಯಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 19 ಸಿನಿಮಾಗಳು ಒಟಿಟಿ ಅಂಗಳ ಪ್ರವೇಶಿಸಿವೆ. ಕೆಲವು ಸಿನಿಮಾಗಳು ಕನ್ನಡಕ್ಕೂ ಡಬ್ ಆಗಿ ಸ್ಟ್ರೀಮಿಂಗ್ ಆರಂಭಿಸಿವೆ. ಆ ಎಲ್ಲ 19 ಚಿತ್ರಗಳ ವಿವರ ಇಲ್ಲಿದೆ.

OTT Movies This Week: ಗುರುವಾರ (ಫೆಬ್ರವರಿ 13) ಮತ್ತು ಶುಕ್ರವಾರ (ಫೆಬ್ರವರಿ 14) ಈ ಎರಡು ದಿನಗಳ ಅಂತರದಲ್ಲಿ ಒಟಿಟಿಯಲ್ಲಿ ಒಟ್ಟು 19 ಸಿನಿಮಾಗಳು ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸಿವೆ. ನೆಟ್‌ಫ್ಲಿಕ್ಸ್ , ಅಮೆಜಾನ್ ಪ್ರೈಮ್, ಜೀ5, ಆಹಾ, ಸೋನಿ ಲೈವ್ ಸೇರಿ ಹಲವು ಒಟಿಟಿ ಫ್ಲಾಟ್‌ಫಾರ್ಮ್‌ಗಳಲ್ಲಿ ಹಾರರ್, ಸೈನ್ಸ್ ಫಿಕ್ಷನ್, ಕಾಮಿಡಿ, ಆಕ್ಷನ್, ಕಾಮಿಡಿ ಥ್ರಿಲ್ಲರ್, ರೊಮ್ಯಾಂಟಿಕ್ ಮತ್ತು ಬೋಲ್ಡ್ ಜಾನರ್‌ನ ಸಾಕಷ್ಟು ಸಿನಿಮಾಗಳ ಆಗಮನವಾಗಿವೆ.
ನೆಟ್‌ಫ್ಲಿಕ್ಸ್ ಒಟಿಟಿ
- ದಿ ಎಕ್ಸ್‌ಚೇಂಜ್ ಸೀಸನ್ 2 (ಇಂಗ್ಲಿಷ್ ಡ್ರಾಮಾ ವೆಬ್ ಸರಣಿ) - ಫೆಬ್ರವರಿ 13
- ಕೋಬ್ರಾ ಕೈ ಸೀಸನ್ 6, ಭಾಗ 3 (ಇಂಗ್ಲಿಷ್ ಮಾರ್ಷಲ್ ಆರ್ಟ್ಸ್, ಆಕ್ಷನ್ ವೆಬ್ ಸರಣಿ) - ಫೆಬ್ರವರಿ 13
- ಲಾ ಡೋಲ್ಸಿ ವಿಲ್ಲಾ (ಇಂಗ್ಲಿಷ್ ರೊಮ್ಯಾಂಟಿಕ್ ಕಾಮಿಡಿ ಫಿಲ್ಮ್) - ಫೆಬ್ರವರಿ 13
- ಧೂಮ್ ಧಾಮ್ (ಹಿಂದಿ ಕಾಮಿಡಿ, ಆಕ್ಷನ್, ಇನ್ವೆಸ್ಟಿಗೇಟಿವ್ ಥ್ರಿಲ್ಲರ್ ಚಿತ್ರ) - ಫೆಬ್ರವರಿ 14
- ಮೆಲೋ ಮೂವಿ (ಕೊರಿಯನ್ ರೊಮ್ಯಾಂಟಿಕ್ ವೆಬ್ ಸರಣಿ)- ಫೆಬ್ರವರಿ 14
- ಐ ಯಾಮ್ ಮ್ಯಾರೀಡ್ ಬಟ್! (ಕೊರಿಯನ್ ಫ್ಯಾಮಿಲಿ ರೊಮ್ಯಾಂಟಿಕ್ ಕಾಮಿಡಿ ವೆಬ್ ಸರಣಿ) - ಫೆಬ್ರವರಿ 14
- ಲವ್ ಈಸ್ ಬ್ಲೈಂಡ್ ಸೀಸನ್ 8 (ಇಂಗ್ಲಿಷ್ ರಿಯಾಲಿಟಿ ಶೋ)- ಫೆಬ್ರವರಿ 14
ಇದನ್ನೂ ಓದಿ: ಅಮೆಜಾನ್ ಪ್ರೈಮ್ ವಿಡಿಯೋದ ಟ್ರಾನ್ಸ್‌ಫಾರ್ಮರ್ಸ್ ಒನ್ ಸಿನಿಮಾದಲ್ಲಿ ಮನುಷ್ಯರಿಲ್ಲ ಏಕೆ? ಹೀಗಿದೆ ಕಾರಣ
ಅಮೆಜಾನ್ ಪ್ರೈಮ್ ಒಟಿಟಿ
- ಲವ್ ಫಾರ್ ಸೇಲ್ (ಮಲಯಾಳಂ ರೊಮ್ಯಾಂಟಿಕ್ ಮೂವಿ)- ಫೆಬ್ರವರಿ 13
ಟು ಲೆಟ್ (ತಮಿಳು ಥ್ರಿಲ್ಲರ್ ಹಾಸ್ಯ ಚಿತ್ರ) - ಫೆಬ್ರವರಿ 13
- ಮೈ ಫಾಲ್ಟ್: ಲಂಡನ್ (ಬ್ರಿಟಿಷ್ ರೊಮ್ಯಾಂಟಿಕ್ ಡ್ರಾಮಾ ಫಿಲ್ಮ್) - ಫೆಬ್ರವರಿ 13
- ಪ್ಯಾರ್ ಕಾ ಪ್ರೊಫೆಸರ್ (ಹಿಂದಿ ರೊಮ್ಯಾಂಟಿಕ್ ಮತ್ತು ಬೋಲ್ಡ್ ವೆಬ್ ಸರಣಿ) - ಅಮೆಜಾನ್, ಎಂಎಕ್ಸ್
ಆಹಾ ಒಟಿಟಿ
- ಭೈರತಿ ರಣಗಲ್ (ತೆಲುಗು ಅವತರಣಿಕೆ ಕನ್ನಡ ಆಕ್ಷನ್ ಫಿಲ್ಮ್) - ಫೆಬ್ರವರಿ 13
- ಬಿಶೋಹೋರಿ (ಬಂಗಾಳಿ ಅಲೌಕಿಕ ಭಯಾನಕ ಸೈ-ಫಿಕ್ಷನ್ ಮಿಸ್ಟರಿ ಥ್ರಿಲ್ಲರ್ ವೆಬ್ ಸರಣಿ) - ಫೆಬ್ರವರಿ 13
ಮಾರ್ಕೊ (ಕನ್ನಡ ಡಬ್ ಮಲಯಾಳಂ ಆಕ್ಷನ್ ಥ್ರಿಲ್ಲರ್ ಚಿತ್ರ) - ಸೋನಿ ಲಿವ್ ಒಟಿಟಿ - ಫೆಬ್ರವರಿ 14
ಪೊಟೆಲ್ (ತೆಲುಗು ಭಾವನಾತ್ಮಕ ಕುಟುಂಬ ಥ್ರಿಲ್ಲರ್ ಚಿತ್ರ) - ಸನ್ NXT ಒಟಿಟಿ - ಫೆಬ್ರವರಿ 14
ಮನೋರಾಜ್ಯಂ (ಮಲಯಾಳಂ ಬೋಲ್ಡ್ ಮತ್ತು ಫ್ಯಾಮಿಲಿ ಡ್ರಾಮಾ ಚಿತ್ರ) - ಮನೋರಮಾ ಮ್ಯಾಕ್ಸ್ ಒಟಿಟಿ - ಫೆಬ್ರವರಿ 14
ಪ್ಯಾರ್ ಟೆಸ್ಟಿಂಗ್ (ಹಿಂದಿ ರೊಮ್ಯಾಂಟಿಕ್ ಕಾಮಿಡಿ ವೆಬ್ ಸರಣಿ) - ಜೀ5 ಒಟಿಟಿ - ಫೆಬ್ರವರಿ 14
ಸಬ್ ಸರ್ವಿಸ್ (ಇಂಗ್ಲಿಷ್ ಸೈ-ಫಿಕ್ಷನ್ ಥ್ರಿಲ್ಲರ್ ಮೂವಿ)- ಲಯನ್ಸ್ ಗೇಟ್ ಪ್ಲೇ ಒಟಿಟಿ - ಫೆಬ್ರವರಿ 14
ಈ ಸಿನಿಮಾಗಳು ವಿಶೇಷ
ಕನ್ನಡದ ಭೈರತಿ ರಣಗಲ್ ಆಹಾ ಒಟಿಟಿಯಲ್ಲಿ ತೆಲುಗಿನಲ್ಲಿ ಡಬ್ ಆಗಿ ಸ್ಟ್ರೀಮಿಂಗ್ ಆರಂಭಿಸಿದರೆ, ಮಲಯಾಳಂನ ಮಾರ್ಕೊ ಸಿನಿಮಾ ಸಹ ಸೋನಿ ಲೈವ್‌ನಲ್ಲಿ ಕನ್ನಡದಲ್ಲಿಯೂ ಸ್ಟ್ರೀಮಿಂಗ್ ಆಗುತ್ತಿದೆ. ಇದರ ಜತೆಗೆ ಬಾಲಿವುಡ್‌ನಲ್ಲಿ ನಿರ್ಮಾಣವಾಗಿರುವ ಧೂಮ್ ಧಾಮ್ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.
