OTT Movies: ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಸೌತ್ ಇಂಡಿಯನ್ ಸಿನಿಮಾಗಳು; ಥ್ರಿಲ್ಲರ್, ಕಾಮಿಡಿ ಚಿತ್ರಗಳಿಗೆ ಸ್ವಾಗತ
OTT releases: ಈ ವಾರ ವಿವಿಧ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಮಲಯಾಳಂ, ತಮಿಳು ಮತ್ತು ತೆಲುಗು ಸಿನಿಮಾಗಳು ಬಿಡುಗಡೆಯಾಗಲಿವೆ. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಒಟಿಟಿಯಲ್ಲಿ ಯಾವುದೇ ಕನ್ನಡ ಸಿನಿಮಾಗಳು ಈ ವಾರ ರಿಲೀಸ್ ಆಗುವ ಸೂಚನೆ ಇಲ್ಲ. ಪ್ರವೀಂಕೂಡ್ ಶಾಪ್ಪು, ಕಿಂಗ್‌ಸ್ಟಾನ್ ಸೇರಿದಂತೆ ಹಲವು ಸಿನಿಮಾಗಳು ಈ ವಾರ ಬಿಡುಗಡೆಯಾಗಲಿವೆ.

OTT releases this week: ಈ ವಾರ ಒಟಿಟಯಲ್ಲಿ ಹೊಸ ಸೌತ್ ಇಂಡಿಯನ್ ಸಿನಿಮಾಗಳನ್ನು ನೋಡಲು ಬಯಸಿದರೆ ನಿಮಗೆ ನಿರಾಶೆಯಾಗದು. ಬಾಸಿಲ್ ಜೋಸೆಫ್ ನಟನೆಯ ಮರ್ಡರ್ ಮಿಸ್ಟರಿ ಸಿನಿಮಾ ಪ್ರವೀಂಕೂಡು ಶಾಪ್ಪು, ಜಿವಿ ಪ್ರಕಾಶ್ ಕುಮಾರ್ ಅವರ ಕಿಂಗ್‌ಸ್ಟನ್ ಸೇರಿದಂತೆ ಹಲವು ಸಿನಿಮಾಗಳು ರಿಲೀಸ್ ಆಗಲಿವೆ. ಮಲಯಾಳಂ ಮಾತ್ರವಲ್ಲದೆ ತೆಲುಗು, ತಮಿಳು ಸಿನಿಮಾಗಳು ಬಿಡುಗಡೆಯಾಗಲಿವೆ. ಈ ವಾರ ಕನ್ನಡದ ಯಾವ ಸಿನಿಮಾ ಬಿಡುಗಡೆಯಾಗಲಿದೆ ಎಂಬ ಅಪ್‌ಡೇಟ್ ಇನ್ನೂ ದೊರಕಿಲ್ಲ. ಸದ್ದಿಲ್ಲದೆ ಯಾವುದಾದರೂ ಕನ್ನಡ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾದರೆ ಅಚ್ಚರಿಯಿಲ್ಲ. ಏಪ್ರಿಲ್ ತಿಂಗಳ 7 – 13ರವರೆಗೆ ಯಾವೆಲ್ಲ ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್ ಆಗಲಿದೆ ಎಂದು ನೋಡೋಣ.
ಪ್ರವಿಂಕೂಡು ಶಪ್ಪು
ಒಟಿಟಿ ಬಿಡುಗಡೆ ದಿನಾಂಕ: ಏಪ್ರಿಲ್ 11
ಒಟಿಟಿ ಪ್ಲಾಟ್‌ಫಾರ್ಮ್: ಸೋನಿ ಲಿವ್, ಒಟಿಟಿ ಪ್ಲೇ ಪ್ರೀಮಿಯಂ
ಭಾಷೆ: ಮಲಯಾಳಂ
ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಸಿನಿಮಾ ಇದಾಗಿದೆ. ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ 1.5 ಕೋಟಿ ರೂ. ಗಳಿಕೆ ಮಾಡಿದ ಈ ನಿಗೂಢ-ಥ್ರಿಲ್ಲರ್ ಮಲಯಾಳಂ ಚಿತ್ರವು ಬಿಡುಗಡೆಯಾದ ಸುಮಾರು ಮೂರು ತಿಂಗಳ ನಂತರ ಏಪ್ರಿಲ್ 11 ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಬೇಸಿಲ್ ಜೋಸೆಫ್ ನಟಿಸಿದ ಈ ಸಿನಿಮಾ ಜನವರಿ 16 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಹಳ್ಳಿಯ ಶೇಂದಿ ಅಂಗಡಿಯಲ್ಲಿ ನಡೆಯುವ ಕೊಲೆ ರಹಸ್ಯದ ಸುತ್ತ ಈ ರೋಮಾಂಚಕಾರಿ ಸಿನಿಮಾದ ಕಥೆ ಇದೆ. ಶ್ರೀಮಂತ ವ್ಯಕ್ತಿ ಬಾಬು ಸಾವಿನ ತನಿಖೆ ನಡೆಸುವ ಪೊಲೀಸ್ ಇನ್ಸ್‌ಪೆಕ್ಟರ್ 'ಸಂತೋಷ್' ಪಾತ್ರವನ್ನು ಬೇಸಿಲ್ ಜೋಸೆಫ್ ನಿರ್ವಹಿದ್ದಾರೆ. ಈ ಸಾವಿನ ಪ್ರಕರಣವನ್ನು ಆಳವಾಗಿ ತನಿಖೆ ಮಾಡುವಾಗ ಅನಿರೀಕ್ಷಿತ ತಿರುವುಗಳು ಎದುರಾಗುತ್ತವೆ.
ಕಿಂಗ್‌ಸ್ಟನ್
ಒಟಿಟಿ ಬಿಡುಗಡೆ ದಿನಾಂಕ: ಏಪ್ರಿಲ್ 13
ಒಟಿಟಿ ಪ್ಲಾಟ್‌ಫಾರ್ಮ್: ಜೀ5, ಒಟಿಟಿಪ್ಲೇ ಪ್ರೀಮಿಯಂ
ಭಾಷೆ: ತಮಿಳು
ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ತಮಿಳು ಸಿನಿಮಾವಿದು. ಕಮಲ್ ಪ್ರಕಾಶ್ ನಿರ್ದೇಶನದ ಈ ಕಾಲಿವುಡ್ ಫ್ಯಾಂಟಸಿ ಹಾರರ್ ಸಾಹಸ ಚಿತ್ರವು ಬಿಡುಗಡೆಯಾದ ಸುಮಾರು ಒಂದು ತಿಂಗಳ ನಂತರ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. "1982 ರಲ್ಲಿ ನಡೆದ ಒಂದು ಅಲೌಕಿಕ ಘಟನೆಯ ನಂತರ ತೂವಥೋರ್ ಕರಾವಳಿಯ ಸಮುದ್ರವು ಶಾಪಗ್ರಸ್ತವಾಗುತ್ತದೆ. ಧೈರ್ಯಶಾಲಿ ಸಮುದ್ರ ಕಳ್ಳಸಾಗಣೆದಾರ ಕಿಂಗ್‌ಸ್ಟನ್, ಶಾಪವನ್ನು ಮುರಿಯಲು ಮತ್ತು ಅವರ ನಾಶವಾದ ಹಳ್ಳಿಗೆ ಭರವಸೆಯನ್ನು ಮರಳಿ ತರಲು ತನ್ನ ಸ್ನೇಹಿತರೊಂದಿಗೆ ದೆವ್ವದ ನೀರಿಗೆ ಇಳಿಯುತ್ತಾನೆ." ಎಂದು ಐಎಂಡಿಬಿಯಲ್ಲಿ ಈ ಸಿನಿಮಾದ ವಿವರಣೆ ನೀಡಲಾಗಿದೆ.
ಕೋರ್ಟ್- ಸ್ಟೇಟ್ ವರ್ಸಸ್ ಎ ನೋಬಡಿ
ಒಟಿಟಿ ಬಿಡುಗಡೆ ದಿನಾಂಕ: ಏಪ್ರಿಲ್ 11
ಒಟಿಟಿ ಪ್ಲಾಟ್‌ಫಾರ್ಮ್: ನೆಟ್‌ಫ್ಲಿಕ್ಸ್
ಭಾಷೆ: ತೆಲುಗು
ರಾಮ್ ಜಗದೀಶ್ ನಿರ್ದೇಶನದ ಈ ತೆಲುಗು ಕೋರ್ಟ್ ಡ್ರಾಮಾದಲ್ಲಿ 9 ವರ್ಷದ ಯುವಕ ಆರೋಪಿಯಾಗಿರುವ ಪೋಕ್ಸೊ ಪ್ರಕರಣದ ವಿಚಾರಣೆಯ ಕಥೆ ಇದೆ. ಪ್ರಿಯದರ್ಶಿ ಪುಲಿಕೊಂಡ ಮತ್ತು ಹರ್ಷ್ ರೋಷನ್ ಜತೆಗೆ ಶ್ರೀದೇವಿ, ಶಿವಾಜಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಪೈಂಕಿಲಿ
ಒಟಿಟಿ ಬಿಡುಗಡೆ ದಿನಾಂಕ: ಏಪ್ರಿಲ್ 11, 2025
ಒಟಿಟಿ ಪ್ಲಾಟ್‌ಫಾರ್ಮ್: ಮನೋರಮಾ ಮ್ಯಾಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ
ಭಾಷೆ: ಮಲಯಾಳಂ
ಈ ವಿಚಿತ್ರ ಮನೋರಂಜನಾ ಚಿತ್ರದಲ್ಲಿ ಆವೇಶಮ್ ಖ್ಯಾತಿಯ ಸಜಿನ್ ಗೋಪು ಮತ್ತು ಅನಸ್ವರ ರಾಜನ್ ಜೋಡಿ ನಟಿಸಿದ್ದಾರೆ. ಈ ಹಿಂದೆ ಆಸಿಫ್ ಅಲಿ ಅವರ 'ರೇಖಾಚಿತ್ರಂ' ಚಿತ್ರದಲ್ಲಿ ತಮ್ಮ ಸೂಕ್ಷ್ಮವಾದ ಪಾತ್ರದ ಮೂಲಕ ವೀಕ್ಷಕರನ್ನು ಬೆರಗುಗೊಳಿಸಿದ್ದರು. ಆದರೆ ಪೈಂಕಿಲಿ ಅತಿರೇಕದ ಹಾಸ್ಯಮಯ ಚಿತ್ರವಾಗಿ ಹೊರಹೊಮ್ಮಿದೆ.
ಪೆರಸು
ಒಟಿಟಿ ಪ್ಲಾಟ್‌ಫಾರ್ಮ್: ನೆಟ್‌ಫ್ಲಿಕ್ಸ್
ಒಟಿಟಿ ಬಿಡುಗಡೆ ದಿನಾಂಕ: ಏಪ್ರಿಲ್ 11
ಭಾಷೆ: ತಮಿಳು
ಈ ತಮಿಳು ವಯಸ್ಕ ಕಾಮಿಡಿ ಡ್ರಾಮಾದಲ್ಲಿವೈಭವ್ ಜೊತೆಗೆ ಸುನಿಲ್, ನಿಹಾರಿಕಾ ಎನ್ಎಂ, ಬಾಲ ಸರವಣನ್ ಮತ್ತು ದೀಪಾ ಶಂಕರ್ ನಟಿಸಿದ್ದಾರೆ. ಹಳ್ಳಿಯಲ್ಲಿ ವೃದ್ಧರೊಬ್ಬರು ಸಾವನ್ನಪ್ಪಿದ ನಂತರದ ಘಟನೆಗಳನ್ನು ಈ ಚಿತ್ರ ಅನುಸರಿಸುತ್ತದೆ . ಇಳಂಗೊ ರಾಮ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
