OTT Release: ಈ ವಾರ ಒಟಿಟಿಯಲ್ಲಿ ನೋಡಬಹುದಾದ ಹೊಸ ಕನ್ನಡ, ತೆಲುಗು, ಮಲಯಾಳಂ, ತಮಿಳು ಸಿನಿಮಾಗಳು; ಒಂದಕ್ಕಿಂತ ಒಂದು ಬೆಸ್ಟ್
OTT releases This week: ಈ ವಾರ ಒಟಿಟಿಯಲ್ಲಿ ಹೊಸ ಕನ್ನಡ, ತೆಲುಗು, ಮಲಯಾಳಂ, ತಮಿಳು ಸಿನಿಮಾಗಳು ಬಿಡುಗಡೆಯಾಗಿವೆ. ಕೆಲವು ಸಿನಿಮಾಗಳು ಮಾರ್ಚ್ 21ರಂದು ಬಿಡುಗಡೆಯಾಗಲಿವೆ. ಆಫೀಸರ್ ಆನ್ ಡ್ಯೂಟಿ, ನೋಡಿದವರು ಏನಂತಾರೆ ಸೇರಿದಂತೆ ವಿವಿಧ ಸಿನಿಮಾಗಳ ವಿವರ ಇಲ್ಲಿದೆ.

OTT releases This week: ದಕ್ಷಿಣ ಭಾರತದ ಸಿನಿಮಾಗಳಿಗೆ ಈಗ ಒಟಿಟಿಯಲ್ಲಿ ವೀಕ್ಷಕರು ಹೆಚ್ಚಿದ್ದಾರೆ. ಈ ವಾರ ಕನ್ನಡ, ತೆಲುಗು, ಮಲಯಾಳಂ, ತಮಿಳು ಸಿನಿಮಾಗಳು ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ವಾರ ಕನ್ನಡದ ನೋಡಿದವರು ಏನಂತಾರೆ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ. ಆಫೀಸರ್ ಆನ್ ಡ್ಯೂಟಿ ಎಂಬ ಮಲಯಾಳಂ ಸಿನಿಮಾವೂ ಈ ವಾರ ಬಿಡುಗಡೆಯಾಗುತ್ತಿದ್ದು, ನಿರೀಕ್ಷೆ ಹೆಚ್ಚಿಸಿದೆ. ಪ್ರದೀಪ್ ರಂಗನಾಥನ್ ಅವರ ಬ್ಲಾಕ್ಬಸ್ಟರ್ ಡ್ರ್ಯಾಗನ್ ಕೂಡ ಈ ವಾರ ರಿಲೀಸ್ ಆಗುತ್ತಿದೆ.
ನೋಡಿದವರು ಏನಂತಾರೆ (ಕನ್ನಡ)
ನೋಡಿದವರು ಏನಂತಾರೆ ಚಿತ್ರ ನಾಳೆ (ಮಾರ್ಚ್ 21) ಅಮೆಜಾನ್ ಪ್ರೈಮ್ ವಿಡಿಯೋ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಇದು ಈಗ ಕನ್ನಡದಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿರುತ್ತದೆ. 'ನೋಡಿದವರು ಏನಂತಾರೆ' ಚಿತ್ರದಲ್ಲಿ ಜೀವನದಲ್ಲಿ ಸತತ ಕಷ್ಟಗಳನ್ನು ಎದುರಿಸುವ ಯುವಕನಾಗಿ ನವೀನ್ ಶಂಕರ್ ಅಭಿನಯಿಸಿದ್ದಾರೆ. ನಿರ್ದೇಶಕ ಕುಲದೀಪ್ ಕರಿಯಪ್ಪ ಈ ಚಿತ್ರವನ್ನು ಭಾವನಾತ್ಮಕ ರೀತಿಯಲ್ಲಿ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಅಪೂರ್ವ ಭಾರದ್ವಾಜ್, ಪದ್ಮಾವತಿ ರಾವ್, ಆರ್ಯ ಕೃಷ್ಣ, ರಾಜೇಶ್ ಮತ್ತು ಸೋನು ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಆಫೀಸರ್ ಆನ್ ಡ್ಯೂಟಿ (ಮಲಯಾಳಂ)
ಈ ಮಲಯಾಳಂ ಸಿನಿಮಾ ಮಾರ್ಚ್ 20ರಂದು ಬಿಡುಗಡೆಯಾಗುತ್ತಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಆಫೀಸರ್ ಆನ್ ಡ್ಯೂಟಿ ಚಿತ್ರ ಮಾರ್ಚ್ 20 ರಂದು ಮಲಯಾಳಂ, ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂದು ನೆಟ್‌ಫ್ಲಿಕ್ಸ್ ಘೋಷಿಸಿದೆ. ಫೆಬ್ರವರಿ 20 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರ ಸೂಪರ್ ಹಿಟ್ ಆಯಿತು. ಆಫೀಸರ್ ಆನ್ ಡ್ಯೂಟಿ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಬ್ಲಾಕ್‌ಬಸ್ಟರ್ ಆಗಿತ್ತು. ಸುಮಾರು 12 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸುಮಾರು ಒಟ್ಟು 50 ಕೋಟಿ ರೂ ಸಂಗ್ರಹಿಸಿದೆ.
ಡ್ರ್ಯಾಗನ್ (ತಮಿಳು)
ಡ್ರ್ಯಾಗನ್ ತಮಿಳು ಸಿನಿಮಾವು ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಮಾರ್ಚ್ 21ರಂದು ಬಿಡುಗಡೆಯಾಗಲಿದೆ. ಪ್ರದೀಪ್ ರಂಗನಾಥನ್ ಅವರು ಡಿ ರಾಘವನ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಬ್ಲಾಕ್‌ಬಸ್ಟರ್ ತಮಿಳು ಸಿನಿಮಾದಲ್ಲಿ ಅನುಪಮಾ ಪರಮೇಶ್ವರನ್ ನಾಯಕಿಯಾಗಿ ನಟಿಸಿದ್ದಾರೆ.
ನೀಲವುಕು ಎನ್ ಮೆಲ್ ಎನ್ನಡಿ ಕೋಬಮ್ (ಮಲಯಾಳಂ)
ಈ ತಮಿಳು ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಗಳು ಹೇಳಿವೆ. ಈ ವಾರವೇ ಬಿಡುಗಡೆಯಾಗುತ್ತಿದೆ ಎನ್ನಲಾಗಿದೆ. ಆದರೆ, ಈ ಕುರಿತು ಒಟಿಟಿ ವೇದಿಕೆಯು ಅಧಿಕೃತವಾಗಿ ಇನ್ನೂ ಪ್ರಕಟಣೆ ಹೊರಡಿಸಿಲ್ಲ.
ಜಿತೇಂದರ್ ರೆಡ್ಡಿ (ತೆಲುಗು)
ಈ ತೆಲುಗು ಸಿನಿಮಾವು ಮಾರ್ಚ್ 17ರಂದು ಇಟಿವಿ ವಿನ್‌ನಲ್ಲಿ ಬಿಡುಗಡೆಯಾಗಿದೆ. ಇದು ಬಯೋಪಿಕ್ ಸಿನಿಮಾ. ಬಾಕ್ಸ್ ಆಫೀಸ್‌ನಲ್ಲಿ ದೊಡ್ಡಮಟ್ಟದ ಯಶಸ್ಸು ಪಡೆಯಲು ವಿಫಲವಾಗಿದೆ.
