ಕನ್ನಡ ಸುದ್ದಿ  /  Entertainment  /  Ott Releases This Weekend He Indrani Mukerjea Story Buried Truth, Maamla Legal Hai, My Name Is Loh Kiwan Pcp

OTT Release: ಈ ವಾರಾಂತ್ಯದಲ್ಲಿ ಒಟಿಟಿಯಲ್ಲಿ ವೀಕ್ಷಿಸಿ, ಇಂದ್ರಾಣಿ ಮುಖರ್ಜಿಯ ಕಥೆಯಿಂದ ನೆಪೋಲಿಯನ್‌ವರೆಗೆ ಇಲ್ಲಿದೆ ಲಿಸ್ಟ್‌

OTT releases this weekend: ಈ ವೀಕೆಂಡ್‌ನಲ್ಲಿ ಒಟಿಟಿಯಲ್ಲಿ ಯಾವ ಸಿನಿಮಾ, ವೆಬ್‌ ಸರಣಿ ನೋಡಲು ಬಯಸುವಿರಿ. ಭಾರತ ಮಾತ್ರವಲ್ಲದೆ ಜಗತ್ತಿನ ವಿವಿಧ ಸಿನಿಮಾ, ಸರಣಿಗಳ ವಿವರ ಇಲ್ಲಿದೆ. ಇಂದ್ರಾಣಿ ಮುಖರ್ಜಿಯ ಬುರಿಡ್‌ ಟ್ರೂತ್‌, ಮಾಮ್ಲಾ ಲೀಗಲ್‌ ಹೈ, ಮೈ ನೇಮ್‌ ಈಸ್‌ ಲೊಹ್‌ ಕಿವಾನ್‌ ಇತ್ಯಾದಿ ಹಲವು ಆಯ್ಕೆಗಳು ನಿಮಗಿವೆ.

OTT Release: ಈ ವಾರಾಂತ್ಯದಲ್ಲಿ ಒಟಿಟಿಯಲ್ಲಿ ವೀಕ್ಷಿಸಿ, ಇಂದ್ರಾಣಿ ಮುಖರ್ಜಿಯ ಕಥೆಯಿಂದ ನೆಪೋಲಿಯನ್‌ವರೆಗೆ ಇಲ್ಲಿದೆ ಲಿಸ್ಟ್‌
OTT Release: ಈ ವಾರಾಂತ್ಯದಲ್ಲಿ ಒಟಿಟಿಯಲ್ಲಿ ವೀಕ್ಷಿಸಿ, ಇಂದ್ರಾಣಿ ಮುಖರ್ಜಿಯ ಕಥೆಯಿಂದ ನೆಪೋಲಿಯನ್‌ವರೆಗೆ ಇಲ್ಲಿದೆ ಲಿಸ್ಟ್‌

ವಾರಾಂತ್ಯ ಬಂದಾಗ ಹೊರಗಡೆ ಸುತ್ತಾಡುವುದು, ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವುದು ಕಡಿಮೆಯಾಗಿದೆ. ಮನೆಯಲ್ಲಿಯೇ ಮನೆ ಮಂದಿಯ ಜತೆ ಒಟಿಟಿಯಲ್ಲಿ ಸಿನಿಮಾ ಅಥವಾ ವೆಬ್‌ ಸರಣಿ ನೋಡಲು ಸಾಕಷ್ಟು ಜನರು ಇಷ್ಟಪಡುತ್ತಾರೆ. ನೆಟ್ಫ್ಲಿಕ್ಸ್, ಆಪಲ್ ಟಿವಿ + ಮತ್ತು ಇತರ ಒಟಿಟಿಗಳಲ್ಲಿ ಹಲವು ಸಿನಿಮಾ, ಸರಣಿಗಳು ಬಿಡುಗಡೆಯಾಗಿವೆ. ಮೈ ನೇಮ್ ಈಸ್ ಲೋಹ್ ಕಿವಾನ್ ಮತ್ತು ಸೂರ್ಯಕಾಂತಿ ಸೀಸನ್ 2 ಮುಂತಾದವು ನಿಮ್ಮ ವೀಕ್ಷಣೆ ಪಟ್ಟಿಯಲ್ಲಿ ಇರಲಿ. ಇಂಡಿಯನ್ ಪ್ರಿಡೇಟರ್, ಕರಿ ಆಂಡ್‌ ಸೈನೈಡ್ - ದಿ ಜಾಲಿ ಜೋಸೆಫ್ ಕೇಸ್ ಮುಂತಾದ ವೆಬ್ ಸರಣಿಗಳನ್ನು ನೋಡಿದ್ದೀರಾ? ನೆಟ್‌ಫ್ಲಿಕ್ಸ್‌ನಲ್ಲಿ ಮತ್ತೊಮ್ಮೆ ಶೀನಾ ಬೋರಾ ಕೊಲೆ ಪ್ರಕರಣವನ್ನು ಆಧರಿಸಿದ ಹೊಸ ವೆಬ್‌ ಸರಣಿ ಆರಂಭವಾಗುತ್ತಿದೆ.

ಈ ವಾರ ಒಟಿಟಿಯಲ್ಲಿ ಲಭ್ಯವಿರುವ ಹೊಸ ಸಿನಿಮಾ, ವೆಬ್‌ ಸರಣಿಗಳು

ದಿ ಇಂದ್ರಾಣಿ ಮುಖರ್ಜಿ ಸ್ಟೋರಿ: ಬುರಿಡ್ ಟ್ರೂತ್ (ನೆಟ್‌ಫ್ಲಿಕ್ಸ್‌)

ದಿ ಇಂದ್ರಾಣಿ ಮುಖರ್ಜಿ ಸ್ಟೋರಿ: ಬುರಿಡ್ ಟ್ರೂತ್ ಅನ್ನು ಒಟಿಟಿಯಲ್ಲಿ ನೋಡಬಹುದು. ಇಂದ್ರಾಣಿ ಮುಖರ್ಜಿಯ ಕುರಿತು ಹೆಚ್ಚಿನ ವಿವರವನ್ನು ಇದರಲ್ಲಿ ಪಡೆಯಬಹುದು. ಶೀನಾ ಬೋರಾ ಕಣ್ಮರೆಯಾದ ವಿವರ ಇದರಲ್ಲಿ ದೊರಕುತ್ತದೆ.

ಮಾಮ್ಲಾ ಲೀಗಲ್ ಹೈ, (ನೆಟ್‌ಫ್ಲಿಕ್ಸ್‌)

ಇದು ನ್ಯಾಯಾಲಯದೊಳಗಿನ ಡ್ರಾಮಾ. ಮಾರ್ಚ್‌ 1ರಂದು ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್‌ ಆಗಿದೆ. ರವಿ ಕಿಶನ್, ನಿಧಿ ಬಿಶ್ತ್, ಯಶ್ಪಾಲ್ ಶರ್ಮಾ, ಅಂಜುಮ್ ಬಾತ್ರಾ, ಅನಂತ್ ಜೋಶಿ ಮತ್ತು ಇತರರು ನಟಿಸಿದ್ದಾರೆ ಇದು ಕಾಮಿಡಿ ಸಿನಿಮಾ.

ಸೂರ್ಯಕಾಂತಿ ಸೀಸನ್ 2 ( ಝೀ5)

ಸುನಿಲ್ ಗ್ರೋವರ್ ಅಭಿನಯದ ನಿಗೂಢ ಕೊಲೆ ರಹಸ್ಯವನ್ನು ಕಂಡುಹಿಡಿಯುವ ಕಥೆ ಹೊಂದಿದೆ. ಸೂರ್ಯಕಾಂತಿಯ ಸೀಸನ್ 2 ಶ್ರೀ ಕಪೂರ್ (ಅಶ್ವಿನ್ ಕೌಶಲ್) ಸಾವಿನ ತನಿಖೆಯನ್ನು ಮುಂದುವರೆಸಲಾಗಿದೆ. ಹೌಸಿಂಗ್‌ ಸೊಸೈಟಿಗೆ ಭೇಟಿ ನೀಡುವವರ ಕುರಿತು ಅನುಮಾನ ಇಲ್ಲೂ ಮುಂದುವರೆದಿದೆ.

ಸಮ್‌ಬಡಿ ಫೀಡ್‌ ಫಿಲ್‌ ಸೀನ್‌ 7 (ನೆಟ್‌ಫ್ಲಿಕ್ಸ್‌)

ಫಿಲಿಪ್ ರೊಸೆಂಥಾಲ್ ಅವರ ವೆಬ್‌ ಸರಣಿ. ಈ ಸರಣಿಗೆ ಜಗತ್ತಿನಾದ್ಯಂತ ವೀಕ್ಷಕರಿದ್ದಾರೆ.

ಫ್ಯೂರಿಸ್ (ನೆಟ್‌ಫ್ಲಿಕ್ಸ್‌)

ಪ್ಯಾರಿಸ್‌ನ ಕ್ರಿಮಿನಲ್‌ ಭೂಗತ ಜಗತ್ತಿನ ಕುರಿತು ಹೊಸ ಎಂಟು ಭಾಗಗಳ ಸರಣಿ ಬಿಡುಗಡೆ ಮಾಡುತ್ತಿದೆ. ಫ್ರೆಂಚ್ ಆಕ್ಷನ್-ಥ್ರಿಲ್ಲರ್ ಅನ್ನು ಈ ಹಿಂದಿನ ನಿರ್ದೇಶಕರೇ ನಿರ್ದೇಶಿಸಿದ್ದಾರೆ.

ದಿ ಕಂಪ್ಲೀಟ್ಲೀ ಮೇಡ್‌ ಅಪ್‌ ಅಡ್ವೇಂಚರ್ಸ್‌ ಆಫ್‌ ಡಿಕ್‌ ಟರ್ಪಿನ್‌ (ಆಪಲ್‌ ಟೀವಿ ಪ್ಲಸ್‌)

ಗ್ರೇಟ್ ಬ್ರಿಟಿಷ್ ಬೇಕ್ ಆಫ್ ಪರಿಚಯಿಸಿದ ನೋಯೆಲ್ ಫೀಲ್ಡಿಂಗ್ ಇದೀಗ ದಿ ಕಂಪ್ಲೀಟ್ಲೀ ಮೇಡ್‌ ಅಪ್‌ ಅಡ್ವೇಂಚರ್ಸ್‌ ಆಫ್‌ ಡಿಕ್‌ ಟರ್ಪಿನ್‌ ಎಂಬ ಕಾಮಿಡಿ ಅಡ್ವೇಂಚರ ಸರಣಿಯೊಂದಿಗೆ ಬಂದಿದ್ದಾರೆ.

ಮೈ ನೇಮ್ ಈಸ್ ಲೋಹ್ ಕಿವಾನ್ (ನೆಟ್‌ಫ್ಲಿಕ್ಸ್‌)

ಉತ್ತರ ಕೊರಿಯಾದಲ್ಲಿ ಆಶ್ರಯ ಬಯಸುವವರ ಕಥೆಯನ್ನು ಹೊಂದಿದೆ. ಸಾಂಗ್ ಜೂಂಗ್-ಕಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ನೆಪೋಲಿಯನ್ ( ಆಪಲ್ ಟಿವಿ +)

ರಿಡ್ಲೆ ಸ್ಕಾಟ್ ಮತ್ತು ಜೊವಾಕ್ವಿನ್ ಫೀನಿಕ್ಸ್ ಮತ್ತೆ ಒಂದಾಗಿ ನೆಪೋಲಿಯನ್ ಎಂಬ ಫ್ರೆಂಚ್ ಚಕ್ರವರ್ತಿಯ ಸಿನಿಮಾ ತಯಾರಿಸಿದ್ದಾರೆ.

IPL_Entry_Point