OTT News: ದೇಶದ ಇತಿಹಾಸದಲ್ಲಿ ಅತಿ ದೊಡ್ಡ ವಿಮಾನ ಅಪಹರಣ ಕುರಿತ ‘ಐಸಿ 814; ದಿ ಕಂದಹಾರ್‌ ಹೈಜಾಕ್‌’ ಸರಣಿಯ ಸ್ಟ್ರೀಮಿಂಗ್‌ ದಿನಾಂಕ ನಿಗದಿ
ಕನ್ನಡ ಸುದ್ದಿ  /  ಮನರಂಜನೆ  /  Ott News: ದೇಶದ ಇತಿಹಾಸದಲ್ಲಿ ಅತಿ ದೊಡ್ಡ ವಿಮಾನ ಅಪಹರಣ ಕುರಿತ ‘ಐಸಿ 814; ದಿ ಕಂದಹಾರ್‌ ಹೈಜಾಕ್‌’ ಸರಣಿಯ ಸ್ಟ್ರೀಮಿಂಗ್‌ ದಿನಾಂಕ ನಿಗದಿ

OTT News: ದೇಶದ ಇತಿಹಾಸದಲ್ಲಿ ಅತಿ ದೊಡ್ಡ ವಿಮಾನ ಅಪಹರಣ ಕುರಿತ ‘ಐಸಿ 814; ದಿ ಕಂದಹಾರ್‌ ಹೈಜಾಕ್‌’ ಸರಣಿಯ ಸ್ಟ್ರೀಮಿಂಗ್‌ ದಿನಾಂಕ ನಿಗದಿ

ನೈಜ ಘಟನೆ ಆಧರಿತ ಐಸಿ 814; ದಿ ಕಂದಹಾರ್‌ ಹೈಜಾಕ್‌ ವೆಬ್‌ಸಿರೀಸ್‌ನ ಟೀಸರ್‌ ಬಿಡುಗಡೆಯಾಗಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಇನ್ನೇನು ಶೀಘ್ರದಲ್ಲಿಯೇ ಈ ಸರಣಿ ಸ್ಟ್ರೀಮಿಂಗ್‌ ಆರಂಭಿಸಲಿದೆ. ಹಾಗಾದರೆ ಏನಿದು ಕಂದಹಾರ್‌ ಹೈಜಾಕ್‌? ಇಲ್ಲಿದೆ ನೋಡಿ ಮಾಹಿತಿ.

OTT News: ದೇಶದ ಇತಿಹಾಸದಲ್ಲಿ ಅತಿ ದೊಡ್ಡ ಹೈಜಾಕ್ ಕುರಿತ ವೆಬ್‌ ಸಿರೀಸ್‌ IC 814: The Kandahar Hijack ಸ್ಟ್ರೀಮಿಂಗ್‌ ದಿನಾಂಕ ನಿಗದಿ
OTT News: ದೇಶದ ಇತಿಹಾಸದಲ್ಲಿ ಅತಿ ದೊಡ್ಡ ಹೈಜಾಕ್ ಕುರಿತ ವೆಬ್‌ ಸಿರೀಸ್‌ IC 814: The Kandahar Hijack ಸ್ಟ್ರೀಮಿಂಗ್‌ ದಿನಾಂಕ ನಿಗದಿ

OTT Thriller Web Series: OTT ಗೆ ಮತ್ತೊಂದು ಥ್ರಿಲ್ಲರ್ ವೆಬ್ ಸರಣಿ ಬರುತ್ತಿದೆ. ಈ ಬಾರಿ ಹಿಂದಿಯಲ್ಲಿ ಕಂದಹಾರ್ ವಿಮಾನ ಅಪಹರಣದ ಕುರಿತು ಐಸಿ 814; ದಿ ಕಂದಹಾರ್‌ ಹೈಜಾಕ್‌ ವೆಬ್‌ಸಿರೀಸ್‌ ಮಾಡಲಾಗಿದ್ದು, ಇದು ದೇಶದ ಇತಿಹಾಸದಲ್ಲಿಯೇ ಅತಿ ದೊಡ್ಡ ಹೈಜಾಕ್ ಎಂದು ಹೇಳಲಾಗುತ್ತಿದೆ. ಈ ಸರಣಿಯ ಟೀಸರ್ ತುಂಬಾ ಕುತೂಹಲಕಾರಿಯಾಗಿದೆ. ವಿಜಯ್ ವರ್ಮಾ ಮತ್ತು ಅರವಿಂದ್ ಸ್ವಾಮಿ ಮುಂತಾದವರು ನಟಿಸಿರುವ ಈ ಸರಣಿಯು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ.

ಕಂದಹಾರ್‌ ಹೈಜಾಕ್‌ ವೆಬ್‌ಸಿರೀಸ್‌ ಟೀಸರ್‌ ರಿಲೀಸ್

ಈ ವೆಬ್ ಸರಣಿಯಲ್ಲಿ ವಿಜಯ್ ವರ್ಮಾ ಅವರು IC 814 ಫ್ಲೈಟ್‌ನ ಕ್ಯಾಪ್ಟನ್ ಶರಣ್ ದೇವ್ ಪಾತ್ರವನ್ನು ನಿರ್ವಹಿಸಿದ್ದಾರೆ. ಡಿಸೆಂಬರ್ 24, 1999 ರಂದು ನಡೆದ ಭಯಾನಕ ಹೈಜಾಕ್ ಘಟನೆಯನ್ನು ವಿವರಿಸುವ ಅವರ ಧ್ವನಿಯೊಂದಿಗೆ ಟೀಸರ್ ಪ್ರಾರಂಭವಾಗುತ್ತದೆ. ಇದು ನಮ್ಮ ಇತಿಹಾಸದಲ್ಲಿ ಕರಾಳ ದಿನ ಎಂಬ ಡೈಲಾಗ್‌ ಸಹ ಅವರ ಬಾಯಿಂದ ಬಂದಿದೆ. ಈ ಮೂಲಕ ಮತ್ತೊಂದು ನೈಜ ಘಟನೆ ಆಧರಿತ ಕಥೆ ಶೀಘ್ರದಲ್ಲಿ ಒಟಿಟಿಗೆ ಬರಲಿದೆ. ಜನಪ್ರಿಯ ನಟಿ ಪತ್ರಲೇಖಾ ಈ ಸರಣಿಯಲ್ಲಿ ವಿಮಾನದ ಅಟೆಂಡೆಂಟ್‌ ಇಂದ್ರಾಣಿ ಪಾತ್ರವನ್ನು ನಿರ್ವಹಿಸಿದ್ದಾರೆ.

ಇದು ಕೇವಲ ಒಂದೇ ವಿಮಾನದ ಹೈಜಾಕ್‌ ಅಲ್ಲ, ಇಡೀ ದೇಶದ ಹೈಜಾಕ್ ಎನ್ನುತ್ತಾರೆ ಸಂಪಾದಕಿ ಶಾಲಿನಿ ಚಂದ್ರ ಪಾತ್ರಧಾರಿ ದಿಯಾ ಮಿರ್ಜಾ. ರಾ ಸಂಸ್ಥೆಯ ಜಂಟಿ ಕಾರ್ಯದರ್ಶಿ ರಂಜನ್ ಮಿಶ್ರಾ ಪಾತ್ರದಲ್ಲಿ ನಟ ಕುಮುದ್ ಮಿಶ್ರಾ ಕಾಣಿಸಿಕೊಂಡಿದ್ದಾರೆ. ಈ ವಿಮಾನದಲ್ಲಿ ಎಲ್ಲಾ 189 ಜೀವಗಳನ್ನು ಉಳಿಸಬೇಕು, ಇಲ್ಲವಾದರೆ ಹೈಜಾಕರ್‌ಗಳ ಬೇಡಿಕೆಗಳನ್ನು ಈಡೇರಿಸಬೇಕು. ಮತ್ತೊಂದು ಸವಾಲಾಗಿದೆ ಎಂದು ಅವರು ಹೇಳುತ್ತಾರೆ.

ಈ ವೆಬ್ ಸರಣಿಯಲ್ಲಿ ಖ್ಯಾತ ತಮಿಳು ನಟ ಅರವಿಂದ್ ಸ್ವಾಮಿ ವಿದೇಶಾಂಗ ಕಾರ್ಯದರ್ಶಿ ಶಿವರಾಮಕೃಷ್ಣನ್ ಪಾತ್ರದಲ್ಲಿ ನಟಿಸಿದ್ದಾರೆ. ಈ ನಮ್ಮ ಹೋರಾಟ ಕೇವಲ ಶತ್ರುವಿನೊಂದಿಗೆ ಮಾತ್ರವಲ್ಲ, ಕಳೆದುಹೋಗುತ್ತಿರುವ ಸಮಯದ ಜತೆಗಿನ ಹೋರಾಟ ಎಂದೂ ಅವರು ಹೇಳುತ್ತಾರೆ. ಒಟ್ಟು ಏಳು ದಿನಗಳ ಕಾಲ ಇಡೀ ದೇಶವೇ ರೋಮಾಂಚನಗೊಳ್ಳುವಂತೆ ಮಾಡಿದ ಕಂದಹಾರ್ ಹೈಜಾಕ್ ಹೇಗಾಯಿತು ಎಂಬುದನ್ನು ಈ ವೆಬ್ ಸೀರಿಸ್ ತೋರಿಸಲು ಹೊರಟಿರುವುದು ಬಿಡುಗಡೆ ಆಗಿರುವ ಟೀಸರ್‌ನಿಂದ ಸ್ಪಷ್ಟವಾಗಿದೆ.

ಯಾರೆಲ್ಲ ನಟಿಸಿದ್ದಾರೆ?

ಕುತೂಹಲ ಭರಿತ ಈ IC 814: ದಿ ಕಂದಹಾರ್ ಹೈಜಾಕ್ ಸಿರೀಸ್‌ ಆಗಸ್ಟ್ 29 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ಸಿರೀಸ್‌ನಲ್ಲಿ ಯಾರೆಲ್ಲ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಸದ್ಯ ಬಿಡುಗಡೆ ಆಗಿರುವ ಟೀಸರ್‌ನಲ್ಲಿದೆ. ವಿಜಯ್ ವರ್ಮಾ, ಅರವಿಂದ್ ಸ್ವಾಮಿ, ಪತ್ರಲೇಖಾ, ದಿಯಾ ಮಿರ್ಜಾ, ಕುಮುದ್ ಮಿಶ್ರಾ ಮತ್ತು ನಾಸಿರುದ್ದೀನ್ ಶಾ ಈ ವೆಬ್‌ ಸರಣಿಯ ಭಾಗವಾಗಿದ್ದಾರೆ.

1999ರಲ್ಲಿ ನಡೆದ ನೈಜ ಘಟನೆ..

ಅದು 24 ಡಿಸೆಂಬರ್ 1999. ಇಂಡಿಯನ್ ಏರ್‌ಲೈನ್ಸ್ ವಿಮಾನ IC 814 ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನವದೆಹಲಿಗೆ ಹೊರಟಿತು. ಈ ವಿಮಾನದಲ್ಲಿ 176 ಪ್ರಯಾಣಿಕರು ಸೇರಿದಂತೆ ಒಟ್ಟು 15 ಸಿಬ್ಬಂದಿ ಇದ್ದರು. ಕೆಲವು ಅಪಹರಣಕಾರರು ಪ್ರಯಾಣಿಕರಂತೆ ವಿಮಾನ ಹತ್ತಿದ್ದರು. ವಿಮಾನವು ಭಾರತೀಯ ವಾಯುಪ್ರದೇಶವನ್ನು ಪ್ರವೇಶಿಸಿದ ತಕ್ಷಣ, ಅಪಹರಣಕಾರರು ತಮ್ಮ ನಿಜವಾದ ಬಣ್ಣವನ್ನು ತೋರಿಸಿದರು ಮತ್ತು ಇಡೀ ವಿಮಾನವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು. ಸಿಬ್ಬಂದಿ ಮತ್ತು ಪ್ರಯಾಣಿಕರ ಮೇಲೆ ಬಂದೂಕುಗಳನ್ನಿಟ್ಟು ಹಲ್ಲೆ ನಡೆಸಿದರು. ವಿಮಾನವನ್ನು ದೆಹಲಿಯಿಂದ ಪಾಕಿಸ್ತಾನಕ್ಕೆ ತಿರುಗಿಸಿದರು.

ಭಾರತದಲ್ಲಿ ವಿಮಾನ ಅಪಹರಣದ ಸುದ್ದಿ ಬರಸಿಡಿಲಿನಂತೆ ಬಂದಪ್ಪಳಿಸಿತು. ವಿಮಾನದಲ್ಲಿದ್ದ ಪ್ರಯಾಣಿಕರ ಕುಟುಂಬಗಳು ಮತ್ತು ಇಡೀ ದೇಶವು ಈ ಘಟನೆಯಿಂದ ಉಸಿರು ಬಿಗಿಹಿಡಿದಿತ್ತು. ಈ ಘಟನೆ ಪ್ರಪಂಚದಾದ್ಯಂತ ಚರ್ಚೆಗೂ ಗ್ರಾಸವಾಯಿತು, ಏಕೆಂದರೆ ಭಾರತೀಯರಲ್ಲದೆ ಕೆಲವು ವಿದೇಶಿ ಪ್ರಯಾಣಿಕರೂ ಆ ವಿಮಾನದಲ್ಲಿದ್ದರು. ಅಪಹರಣಕ್ಕೊಳಗಾದ ವಿಮಾನವು ಅಮೃತಸರದಲ್ಲಿ ಸ್ವಲ್ಪ ಸಮಯ ನಿಲ್ಲಿಸಿ ನಂತರ ಲಾಹೋರ್‌ಗೆ ಹೊರಟಿತು. ಪಾಕಿಸ್ತಾನ ಸರ್ಕಾರದಿಂದ ಅನುಮತಿ ಪಡೆಯದೆ ರಾತ್ರಿ 8:07ಕ್ಕೆ ಲಾಹೋರ್‌ನಲ್ಲಿ ವಿಮಾನ ಲ್ಯಾಂಡ್ ಆಗಿತ್ತು. ಕೊನೆಗೆ ಹೈಜಾಕ್‌ ಆದ ಆ ವಿಮಾನ ಹೇಗೆ ಭಾರತಕಕ್ಕೆ ಸುರಕ್ಷಿತವಾಗಿ ಮರಳಿತು ಎಂಬುದೇ ಈ ಸಿರೀಸ್‌ನ ಎಳೆ.

Whats_app_banner