ಈ ವಾರ ಒಟಿಟಿಯಲ್ಲಿ ಬಿಡುಗಡೆ ಆಗಲಿರುವ ಟಾಪ್‌ 3 ಮಲಯಾಳಿ ಸಿನಿಮಾಗಳಿವು; ಎಲ್ಲವೂ ಒಂದಕ್ಕಿಂತ ಒಂದು ಟಾಪ್
ಕನ್ನಡ ಸುದ್ದಿ  /  ಮನರಂಜನೆ  /  ಈ ವಾರ ಒಟಿಟಿಯಲ್ಲಿ ಬಿಡುಗಡೆ ಆಗಲಿರುವ ಟಾಪ್‌ 3 ಮಲಯಾಳಿ ಸಿನಿಮಾಗಳಿವು; ಎಲ್ಲವೂ ಒಂದಕ್ಕಿಂತ ಒಂದು ಟಾಪ್

ಈ ವಾರ ಒಟಿಟಿಯಲ್ಲಿ ಬಿಡುಗಡೆ ಆಗಲಿರುವ ಟಾಪ್‌ 3 ಮಲಯಾಳಿ ಸಿನಿಮಾಗಳಿವು; ಎಲ್ಲವೂ ಒಂದಕ್ಕಿಂತ ಒಂದು ಟಾಪ್

ಈ ವಾರ ಕೆಲವು ಆಸಕ್ತಿದಾಯಕ ಮಲಯಾಳಂ ಸಿನಿಮಾಗಳು ಒಟಿಟಿಗೆ ಬರುತ್ತಿವೆ. ಬಾಕ್ಸ್‌ ಆಫೀಸ್‌ನಲ್ಲಿ ಹಿಟ್‌ ಆಗಿದ್ದಷ್ಟೇ ಅಲ್ಲದೆ, ವಿಮರ್ಶೆ ದೃಷ್ಟಿಯಿಂದಲೂ ಸೈ ಎನಿಸಿಕೊಂಡಿವೆ ಈ ಮೂರು ಸಿನಿಮಾಗಳು. ಹೀಗಿದೆ ಈ ಚಿತ್ರಗಳ ಕುರಿತ ಮಾಹಿತಿ.

ಒಟಿಟಿಯಲ್ಲಿ ಈ ವಾರ ಟಾಪ್‌ ಮೂರು ಮಲಯಾಳಂ ಸಿನಿಮಾಗಳು
ಒಟಿಟಿಯಲ್ಲಿ ಈ ವಾರ ಟಾಪ್‌ ಮೂರು ಮಲಯಾಳಂ ಸಿನಿಮಾಗಳು

OTT Top 3 Malayalam Movies: ಒಟಿಟಿಯಲ್ಲಿ ಮಲಯಾಳಂ ಸಿನಿಮಾಗಳಿಗೆ ಹೆಚ್ಚಿನ ಡಿಮಾಂಡ್‌ ಇದೆ. ಅದೇ ರೀತಿ ಒಳ್ಳೊಳ್ಳೆ ಸಿನಿಮಾಗಳ ಪೂರೈಕೆಯೂ ಇದೆ. ಏನಿಲ್ಲ ಅಂದರೂ, ವಾರಕ್ಕೆ ಒಂದೆರಡು ಸಿನಿಮಾಗಳು ಒಟಿಟಿ ಅಂಗಳಕ್ಕೆ ಆಗಮಿಸುತ್ತಲೇ ಇರುತ್ತವೆ. ಅದೇ ರೀತಿ ಈ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಸೂಪರ್‌ ಹಿಟ್‌ ಎನಿಸಿಕೊಂಡಿರುವ ಮೂರು ಮಲಯಾಳಂ ಸಿನಿಮಾಗಳು ಆಗಮಿಸುತ್ತಿವೆ. ಇಲ್ಲಿವೆ ಆ ಚಿತ್ರಗಳ ಕುರಿತ ಮಾಹಿತಿ.

ಈ ವಾರ ಟಾಪ್ 3 ಮಲಯಾಳಂ ಚಿತ್ರಗಳು

ಪ್ರತಿ ವಾರದಂತೆ, ಈ ವಾರವೂ ಮಲಯಾಳಂ ಸಿನಿಮಾಗಳು ಒಟಿಟಿಗೆ ಬರುತ್ತಿವೆ. ಈ ಸಿನಿಮಾಗಳು ಸೋನಿಲೈವ್ ಮತ್ತು ಮನೋರಮಾ ಮ್ಯಾಕ್ಸ್ ಒಟಿಟಿ ಪ್ಲಾಟ್ ಫಾರ್ಮ್‌ಗಳಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿವೆ. ಆ ಸಿನಿಮಾಗಳು ಯಾವವು? ಅವುಗಳ ವೈಶಿಷ್ಟ್ಯತೆ ಏನು? ಇಲ್ಲಿದೆ ವಿವರ.

ರೇಖಾಚಿತ್ರಂ - ಸೋನಿಲೈವ್

ಈ ವರ್ಷದ ಜನವರಿ 9ರಂದು ಬಿಡುಗಡೆಯಾದ ಮಲಯಾಳಂ ಸಿನಿಮಾ ರೇಖಾಚಿತ್ರಂ. ಆಸಿಫ್ ಅಲಿ ಅಭಿನಯದ ಈ ಕ್ರೈಮ್ ಥ್ರಿಲ್ಲರ್ ಚಿತ್ರ ಬುಧವಾರದಿಂದ (ಫೆಬ್ರವರಿ 5) ಸೋನಿಲೀವ್‌ ಒಟಿಟಿಯಲ್ಲಿ ಪ್ರಸಾರವಾಗಲಿದೆ. ಕೇವಲ 9 ಕೋಟಿ ರೂ.ಗಳ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ 55 ಕೋಟಿ ರೂ. ಗಳಿಸಿದೆ. ಜೋಫಿನ್ ಚಾಕೋ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಆಸಿಫ್ ಅಲಿ ಅವರೊಂದಿಗೆ ಅನಸ್ವರ ರಾಜನ್ ಮತ್ತು ಮನೋಜ್ ಕೆ ಜಯನ್. ನಟಿಸಿದ್ದಾರೆ. ಇದು ಮರ್ಡರ್ ಮಿಸ್ಟರಿ ಇನ್ವಿಸ್ಟಿಗೇಟಿವ್‌ ಕ್ರೈಮ್ ಥ್ರಿಲ್ಲರ್ ಚಿತ್ರವಾಗಿದ್ದು, ಜೂಜಾಟ ಹಗರಣದಲ್ಲಿ ಸಿಕ್ಕಿಬಿದ್ದು, ಅಮಾನತುಗೊಂಡ ಪೊಲೀಸ್ ಅಧಿಕಾರಿ, 40 ವರ್ಷಗಳ ಹಿಂದಿನ ಕೊಲೆ ಪ್ರಕರಣವನ್ನು ಹೇಗೆ ಬಗೆಹರಿಸುತ್ತಾನೆ ಎಂಬುದೇ ಕಥೆ.

ಸ್ವರ್ಗಂ - ಮನೋರಮಾ ಮ್ಯಾಕ್ಸ್

ಈ ಶುಕ್ರವಾರ (ಫೆಬ್ರವರಿ 7) ಒಟಿಟಿಗೆ ಬರುತ್ತಿರುವ ಮತ್ತೊಂದು ಮಲಯಾಳಂ ಚಿತ್ರ ಸ್ವರ್ಗಂ. ಫ್ಯಾಮಿಲಿ ಡ್ರಾಮಾ ಜಾನರ್‌ನ ಈ ಸಿನಿಮಾವನ್ನು ರೆಗಿಸ್ ಆಂಟನಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಚಿತ್ರಮಂದಿರಗಳಲ್ಲಿ ತೆರೆಕಂಡು ಮೂರು ತಿಂಗಳ ಬಳಿಕ ಒಟಿಟಿಗೆ ಬರುತ್ತಿದೆ. ಅಜು ವರ್ಗೀಸ್, ಜಾನಿ ಆಂಟನಿ ಮತ್ತು ಅನನ್ಯಾ ಈ ಚಿತ್ರದ ಮುಖ್ಯ ಪಾತ್ರಗಳಲ್ಲಿದ್ದಾರೆ.

ಕುಟುಂಬವಾಗಿ ಒಟ್ಟಿಗೆ ಜೀವನದ ಸವಾಲುಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಕುಟುಂಬ ಸಂಬಂಧಗಳನ್ನು ಅಷ್ಟೇ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಪ್ರೀತಿ ಮತ್ತು ವಾತ್ಸಲ್ಯವೇ ನಿಜವಾದ ಸ್ವರ್ಗ ಮತ್ತು ಬೇರೆಲ್ಲಿಯೂ ಇಲ್ಲ ಎಂಬುದು ಈ ಚಿತ್ರದ ಮೂಲ ಸಂದೇಶ.

ವಲಿಯೆಟ್ಟನ್ (4 ಕೆ ವರ್ಷನ್‌)- ಮನೋರಮಾ ಮ್ಯಾಕ್ಸ್

ಈ ವಾರ ಒಟಿಟಿಗೆ ಬರುತ್ತಿರುವ ಮತ್ತೊಂದು ಚಿತ್ರ ವಾಲಿಯೆಟ್ಟನ್ (4 ಕೆ ವರ್ಷನ್‌). 24 ವರ್ಷಗಳ ಹಿಂದೆ ಬಿಡುಗಡೆಯಾಗಿ ಸೆನ್ಸೇಷನಲ್ ಹಿಟ್ ಆದ ಮಮ್ಮುಟ್ಟಿ ಅವರ ಚಿತ್ರವು ಕಳೆದ ವರ್ಷ 4 ಕೆ ಆವೃತ್ತಿಯಲ್ಲಿ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಯಾಯಿತು. ಈ 4 ಕೆ ಆವೃತ್ತಿಯು ಈ ಶುಕ್ರವಾರ (ಫೆಬ್ರವರಿ 7) ಮನೋರಮಾ ಮ್ಯಾಕ್ಸ್‌ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ.

Whats_app_banner