ಒಟಿಟಿಯಲ್ಲಿ ಸ್ಟ್ರೀಮ್ ಆಗ್ತಿದೆ ಅಲ್ಲರಿ ನರೇಶ್ ಅಭಿನಯದ ಬಚ್ಚಲ ಮಲ್ಲಿ ಮಾಸ್ ಆಕ್ಷನ್ ಸಿನಿಮಾ; ಎಲ್ಲಿ ನೋಡಬಹುದು?
ಅಲ್ಲರಿ ನರೇಶ್ ಹಾಗೂ ಅಮೃತಾ ಅಯ್ಯರ್ ಜೊತೆಯಾಗಿ ನಟಿಸಿರುವ ಬಚ್ಚಲ ಮಲ್ಲಿ ತೆಲುಗು ಸಿನಿಮಾ ಜನವರಿ 10 ರಿಂದ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ. ಚಿತ್ರವನ್ನು ರಾಜೇಶ್ ದಂಡ ಮತ್ತು ಬಾಲಾಜಿ ಗುಟ್ಟ ಜಂಟಿಯಾಗಿ ನಿರ್ಮಿಸಿದ್ದು ಸುಬ್ಬು ಮಂಗಾದೇವಿ ನಿರ್ದೇಶನ ಮಾಡಿದ್ದಾರೆ.
ಇತ್ತೀಚೆಗೆ ಚಿತ್ರಮಂದಿರಗಳಲ್ಲಿ ತೆರೆ ಕಂಡ ಕೆಲವು ಸಿನಿಮಾಗಳು ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿವೆ. ಇನ್ನೂ ಕೆಲವು ಚಿತ್ರಗಳು ಸ್ಟ್ರೀಮಿಂಗ್‌ಗಾಗಿ ಕಾಯುತ್ತಿವೆ. ತೆಲುಗು, ತಮಿಳು, ಹಿಂದಿಯ ವಿವಿಧ ಝೋನರ್ ಸಿನಿಮಾಗಳು ಶುಕ್ರವಾರದಿಂದ ಒಟಿಟಿಯಲ್ಲಿ ಲಭ್ಯವಿದೆ. ಅದರಲ್ಲಿ ತೆಲುಗಿನ ಅಲ್ಲರಿ ನರೇಶ್ ಅಭಿನಯದ ಬಚ್ಚಲ ಮಲ್ಲಿ ಸಿನಿಮಾ ಕೂಡಾ ಒಂದು.
ಕಳೆದ ವರ್ಷ ಡಿಸೆಂಬರ್ 20 ರಂದು ರಿಲೀಸ್ ಆಗಿದ್ದ ಸಿನಿಮಾ
ಅಲ್ಲರಿ ನರೇಶ್ ಅಭಿನಯದ ಬಚ್ಚಲ ಮಲ್ಲಿ ಸಿನಿಮಾ ಕಳೆದ ವರ್ಷ ಡಿಸೆಂಬರ್ 20 ರಂದು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿತ್ತು. ಚಿತ್ರದಲ್ಲಿ ಕನ್ನಡತಿ ಅಮೃತಾ ಅಯ್ಯರ್, ನರೇಶ್‌ಗೆ ಜೋಡಿಯಾಗಿದ್ದಾರೆ.ಚಿತ್ರವನ್ನು ರಾಜೇಶ್ ದಂಡ ಮತ್ತು ಬಾಲಾಜಿ ಗುಟ್ಟ ಜಂಟಿಯಾಗಿ ನಿರ್ಮಿಸಿದ್ದು ಸುಬ್ಬು ಮಂಗಾದೇವಿ ನಿರ್ದೇಶನ ಮಾಡಿದ್ದಾರೆ. ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಬಹುತೇಕ ಕಾಮಿಡಿ ಹೀರೋ ಆಗಿ ಮಿಂಚಿದ್ದ ಅಲ್ಲರಿ ನರೇಶ್ ಈ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಮಾಸ್ ಆಕ್ಷನ್ ಎಂಟರ್‌ಟೈನರ್ ಆಗಿ ತಯಾರಾದ ಈ ಚಿತ್ರ ಇತ್ತೀಚೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಉತ್ತಮ ಯಶಸ್ಸು ಕಂಡಿತ್ತು. ಇದೀಗ ಸಿನಿಮಾ ರಿಲೀಸ್ ಆಗಿ 20 ದಿನಗಳ ನಂತರ ಒಟಿಟಿಗೆ ಬಂದಿದೆ.
ಈಟಿವಿ ವಿನ್‌ನಲ್ಲಿ ಸ್ಟ್ರೀಮಿಂಗ್
ಸಂಕ್ರಾಂತಿ ಉಡುಗೊರೆಯಾಗಿ ಅಲ್ಲರಿ ನರೇಶ್ ಅಭಿಮಾನಿಗಳಿಗೆ ಚಿತ್ರತಂಡ ಈ ಉಡುಗೊರೆ ನೀಡಿದೆ. ನರೇಶ್ ಅಭಿನಯ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿದೆ. ಬಚ್ಚಲ ಮಲ್ಲಿ ಸಿನಿಮಾ ಈಟಿವಿ ವಿನ್‌ನಲ್ಲಿ ಜನವರಿ 10, ಶುಕ್ರವಾರದಿಂದ ಸ್ಟ್ರಿಮ್ ಆಗುತ್ತಿದೆ. ನಾಯಕ ಮಲ್ಲಿ ಜೀವನಕ್ಕೆ ಯುವತಿಯೊಬ್ಬಳು ಪ್ರವೇಶಿಸಿದಾಗ, ಅವಳ ಪ್ರೀತಿ ಅವನನ್ನು ಹೇಗೆ ಬದಲಿಸುತ್ತದೆ ಎನ್ನುವುದು ಚಿತ್ರದ ಕಥೆ. ಆಂಧ್ರಪ್ರದೇಶದ ತುನಿ ಬಳಿಯ ಸುರವರಂ ಎಂಬ ಊರಿನಲ್ಲಿ ಜರುಗುವ ಕಥೆಯಾಗಿ ಈ ಚಿತ್ರವನ್ನು ತಯಾರಿಸಲಾಗಿದೆ.ಇಟ್ಲು ಮಾರೇಡುಮಿಲ್ಲಿ ಪ್ರಜಾನಿಕಂ ಸಿನಿಮಾ ನಂತರ ಅಲ್ಲರಿ ನರೇಶ್ ನಟಿಸಿರುವ ಲವ್ ಎಂಟರ್‌ಟೈನರ್ ಸಿನಿಮಾ ಬಚ್ಚಲ ಮಲ್ಲಿ.
ಓದಿನಲ್ಲಿ ಸದಾ ಮುಂದೆ ಇದ್ದ ನಾಯಕ ಮಲ್ಲಿ, ತನ್ನ ತಂದೆ ತೆಗೆದುಕೊಂಡ ಒಂದು ನಿರ್ಧಾರದಿಂದ ಹೇಗೆ ಹಟಮಾರಿ ವ್ಯಕ್ತಿಯನ್ನಾಗಿ ಬದಲಿಸಿತು? ನಂತರ ಮಲ್ಲಿ ಜೀವನದಲ್ಲಿ ಬಂದ ಕಾವೇರಿಯ ಪ್ರೀತಿ ಮಲ್ಲಿಯ ಜೀವನವನ್ನು ಹೇಗೆ ಬದಲಿಸಿತು? ಮಲ್ಲಿಯ ತಂದೆ ಮಾಡಿದ ತಪ್ಪೇನು? ಮಲ್ಲಿ ಹಾಗೂ ಕಾವೇರಿ ತಮ್ಮ ಜೀವನದಲ್ಲಿ ಎದುರಿಸಿದ ಸಮಸ್ಯೆಗಳೇನು? ಎಲ್ಲವನ್ನೂ ಸಿನಿಮಾದಲ್ಲಿ ನೋಡಬಹುದು.