ಹೊಸ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ ಡಾರ್ಕ್‌ ಕಾಮಿಡಿ ಹ್ಯಾಪಿ ಬರ್ತ್‌ಡೇ ಟು ಮಿ ಕನ್ನಡ ಸಿನಿಮಾ
ಕನ್ನಡ ಸುದ್ದಿ  /  ಮನರಂಜನೆ  /  ಹೊಸ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ ಡಾರ್ಕ್‌ ಕಾಮಿಡಿ ಹ್ಯಾಪಿ ಬರ್ತ್‌ಡೇ ಟು ಮಿ ಕನ್ನಡ ಸಿನಿಮಾ

ಹೊಸ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ ಡಾರ್ಕ್‌ ಕಾಮಿಡಿ ಹ್ಯಾಪಿ ಬರ್ತ್‌ಡೇ ಟು ಮಿ ಕನ್ನಡ ಸಿನಿಮಾ

ರಾಕೇಶ್‌ ಕದ್ರಿ ನಿರ್ದೇಶನದಲ್ಲಿ ಚೈತ್ರಾ ಆಚಾರ್‌, ಸಿದ್ದಾರ್ಥ್‌ ಮಾಧ್ಯಮಿಕ, ಸಿದ್ದು ಮೂಲಿಮನಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಹ್ಯಾಪಿ ಬರ್ತ್‌ಡೇ ಟು ಮಿ ಸಿನಿಮಾ ಅಕ್ಟೋಬರ್‌ 25 ರಿಂದ ಸಿನಿ ಬಜಾರ್‌ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ಜೂನ್‌ 28 ರಂದು, ಈ ಸಿನಿಮಾ ಇತರ ಒಟಿಟಿಯಲ್ಲಿ ರಿಲೀಸ್‌ ಆಗಿತ್ತು.

ಅಕ್ಟೋಬರ್‌ 25ರಿಂದ ಸಿನಿ ಬಜಾರ್‌ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿರುವ ಚೈತ್ರ ಜೆ ಆಚಾರ್‌, ಸಿದ್ದು ಮೂಲಿಮನಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಹ್ಯಾಪಿ ಬರ್ತ್‌ಡೇ ಟು ಮಿ ಕನ್ನಡ ಸಿನಿಮಾ
ಅಕ್ಟೋಬರ್‌ 25ರಿಂದ ಸಿನಿ ಬಜಾರ್‌ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿರುವ ಚೈತ್ರ ಜೆ ಆಚಾರ್‌, ಸಿದ್ದು ಮೂಲಿಮನಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಹ್ಯಾಪಿ ಬರ್ತ್‌ಡೇ ಟು ಮಿ ಕನ್ನಡ ಸಿನಿಮಾ (PC: Kadri Rakesh)

ಪ್ರತಿದಿನವೂ ಒಟಟಿಯಲ್ಲಿ ವಿವಿಧ ಭಾಷೆಗಳ ಸಿನಿಮಾಗಳ, ವೆಬ್‌ ಸೀರೀಸ್‌ಗಳು ಪ್ರಸಾರವಾಗುತ್ತದೆ. ಕೆಲವೊಂದು ಸಿನಿಮಾಗಳು ನೇರವಾಗಿ ಒಟಿಟಿಯಲ್ಲಿ ರಿಲೀಸ್‌ ಆದರೆ, ಇನ್ನೂ ಕೆಲವು ಚಿತ್ರಮಂದಿರದಲ್ಲಿ ರಿಲೀಸ್‌ ಆಗಿ ಕೆಲವು ದಿನಗಳ ನಂತರ ಒಟಿಟಿಗೆ ಲಗ್ಗೆ ಇಡುತ್ತವೆ. ಅಮೆಜಾನ್‌ ಪ್ರೈಂ ವಿಡಿಯೋ, ನೆಟ್‌ಫ್ಲಿಕ್ಸ್‌, ಜೀ5, ಡಿಸ್ನಿ ಪ್ಲಸ್‌ ಹಾಟ್‌ ಸ್ಟಾರ್‌ ಸೇರಿದಂತೆ ನಾನಾ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಸಿನಿಮಾಗಳು ಸ್ಟ್ರೀಮ್‌ ಆಗುತ್ತಿವೆ.‌

ರಾಕೇಶ್‌ ಕದ್ರಿ ನಿರ್ದೇಶನದ ಹ್ಯಾಪಿ ಬರ್ತ್‌ಡೇ ಟು ಮಿ ಸಿನಿಮಾ

ಜೂನ್‌ನಲ್ಲಿ ಒಟಿಟಿಯಲ್ಲೇ ರಿಲೀಸ್ ಆಗಿದ್ದ ಕನ್ನಡ ಸಿನಿಮಾ ಇದೀಗ ಮತ್ತೊಂದು ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಲು ಸಜ್ಜಾಗಿದೆ. ಚೈತ್ರಾ ಜೆ ಆಚಾರ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಹ್ಯಾಪಿ ಬರ್ತ್‌ಡೇ ಟು ಮಿ ಸಿನಿಮಾ ಸಿನಿ ಬಜಾರ್‌ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಶೀಘ್ರದಲ್ಲೇ ಸ್ಟ್ರಿಮಿಂಗ್‌ ಆರಂಭಿಸಲಿದೆ. ಹ್ಯಾಪಿ ಬರ್ತ್‌ಡೇ ಟು ಮಿ ಸಿನಿಮಾವನ್ನು ರಾಕೇಶ್‌ ಕದ್ರಿ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಗೆ ಆಲ್ಫ್ರೆಡ್ ಹಿಚ್‌ಕಾಕ್ ಅವರ 1948ರ ರೋಪ್‌ ಸಿನಿಮಾ ಸ್ಪೂರ್ತಿ ಎಂದು ನಿರ್ದೇಶಕ ರಾಕೇಶ್‌ ಹೇಳಿಕೊಂಡಿದ್ದಾರೆ. ಶೂಲಿನ್‌ ಫಿಲ್ಮ್ಸ್‌ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ವಿನಯ್ ಶಂಕರ್‌ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಚೈತ್ರಾ ಆಚಾರ್‌, ಸಿದ್ದಾರ್ಥ್‌ ಮಾಧ್ಯಮಿಕ, ಸಿದ್ದು ಮೂಲಿಮನಿ, ಗೋಪಾಲಕೃಷ್ಣ ದೇಶಪಾಂಡೆ, ಅಚರ್ನಾ ಕೊಟ್ಟಿಗೆ, ರಚನಾ ರೈ ಹಾಗೂ ಇನ್ನಿತರರು ಇದ್ದಾರೆ.

ಚೈತ್ರಾ ಜೆ ಆಚಾರ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಿತ್ರ

ಹ್ಯಾಪಿ ಬರ್ತ್‌ಡೇ ಟು ಮಿ ಸಾವಿನ ಸುತ್ತ ಹೆಣೆದಿರುವ ಕಥೆ. ಈ ಬ್ಲಾಕ್‌ ಕಾಮಿಡಿ ಸಿನಿಮಾದಲ್ಲಿ ಹಾಸ್ಯಕ್ಕೆ ಕೊರತೆ ಇಲ್ಲ. ಸಿನಿಮಾ ಟೈಟಲ್‌ ಸೂಚಿಸುವಂತೆ ಚಿತ್ರದ ನಾಯಕ ಪುನೀತ್ (ಸಿದ್ಧಾರ್ಥ ಮಾಧ್ಯಮಿಕ) ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಲು ನಿರ್ಧರಿಸಿ ತನ್ನ ರೂಮ್‌ಮೇಟ್‌ (ಸಿದ್ದು ಮೂಲಮನಿ)ನನ್ನು ಹೊರ ಹಾಕಲು ಪ್ರಯತ್ನಿಸುತ್ತಾನೆ. ಮನೆಗೆ ಬಂದಿದ್ದ ಯುವತಿ (ಚೈತ್ರಾ ಆಚಾರ್‌) ಇದ್ದಕ್ಕಿದ್ದಂತೆ ಸಾವನ್ನಪ್ಪಿದಾಗ ಅವಳ ಶವವನ್ನು ಹೊರಗೆ ಸಾಗಿಸಲು ಪ್ರಯತ್ನಿಸುತ್ತಾನೆ. ಆಗ ನಡೆಯುವ ಘಟನೆಯನ್ನು ಚಿತ್ರದಲ್ಲಿ ಹಾಸ್ಯ ರೂಪದಲ್ಲಿ ತೋರಿಸಲಾಗಿದೆ. ಜೊತೆಗೆ ಸಮಸ್ಯೆ ಎದುರಾದಾಗ ಸಹಾಯ ಮಾಡಿ ಗೆಳೆಯನನ್ನು ರಕ್ಷಿಸುವ ಗೆಳೆತನದ ಬಗ್ಗೆಯೂ ಈ ಚಿತ್ರದಲ್ಲಿ ತೋರಿಸಲಾಗಿದೆ. ಬೋಲ್ಡ್ ಕಾಮಿಡಿ ದೃಶ್ಯಗಳನ್ನೂ ಚಿತ್ರದಲ್ಲಿ ತೋರಿಸಲಾಗಿದೆ.

ಅಕ್ಟೋಬರ್‌ 25ರಿಂದ ಸ್ಟ್ರೀಮಿಂಗ್‌ ಶುರು

ಈಗಿನ ತಲೆಮಾರಿನ ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು ಈ ಸಿನಿಮಾ ರಿಲೀಸ್‌ ಮಾಡಲಾಗಿದೆ. ಜೂನ್‌ 28 ರಂದು ಹ್ಯಾಪಿ ಬರ್ತ್‌ಡೇ ಟು ಮಿ ಸಿನಿಮಾ ಏರ್‌ಟೆಲ್‌ಎಕ್ಸ್‌ಟ್ರೀಮ್‌, ಹಂಗಾಮಾ ಪ್ಲೇ, ವೋಡಾಫೋನ್‌ಟಿವಿ, ವಿಟಿ, ಟಾಟಾಪ್ಲೇ ಬಿಂಗ್‌ ಒಟಿಟಿಗಳಲ್ಲಿ ರಿಲೀಸ್‌ ಆಗಿತ್ತು. ಮನೆಯಲ್ಲೇ ಕುಳಿತು ಒಂದೊಳ್ಳೆ ಕಾಮಿಡಿ ಸಿನಿಮಾ ನೋಡಲು ಬಯಸುವವರು ತಪ್ಪದೆ ಈ ಸಿನಿಮಾ ನೋಡಬಹುದು. ಹ್ಯಾಪಿ ಬರ್ತ್‌ಡೇ ಟು ಮಿ ಸಿನಿಮಾ ಅಕ್ಟೋಬರ್‌ 25 ರಿಂದ ಸಿನಿ ಬಜಾರ್‌ ಒಟಿಟಿಯಲ್ಲಿ ಕೂಡಾ ಸ್ಟ್ರೀಮಿಂಗ್‌ ಆಗಲಿದೆ.