Friday OTT Releases: ಇಂದು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ ಒಂದಲ್ಲ, ಎರಡಲ್ಲ 5 ಸಿನಿಮಾಗಳು; ಸಿನಿ ಪ್ರಿಯರಿಗೆ ಹಬ್ಬ
ಕನ್ನಡ ಸುದ್ದಿ  /  ಮನರಂಜನೆ  /  Friday Ott Releases: ಇಂದು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ ಒಂದಲ್ಲ, ಎರಡಲ್ಲ 5 ಸಿನಿಮಾಗಳು; ಸಿನಿ ಪ್ರಿಯರಿಗೆ ಹಬ್ಬ

Friday OTT Releases: ಇಂದು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ ಒಂದಲ್ಲ, ಎರಡಲ್ಲ 5 ಸಿನಿಮಾಗಳು; ಸಿನಿ ಪ್ರಿಯರಿಗೆ ಹಬ್ಬ

Friday OTT Releases: ಈ ವಾರಾಂತ್ಯ ಸಿನಿ ಪ್ರಿಯರಿಗೆ ಹಬ್ಬ ಖಚಿತ. ಒಟಿಟಿಯಲ್ಲಿ ಇಂದು (ಏಪ್ರಿಲ್ 11) ಬಿಡುಗಡೆಯಾಗುತ್ತಿವೆ ವಿಭಿನ್ನ ಕಥಾಹಂದರದ 5 ಸಿನಿಮಾಗಳು. ಛಾವಾದಿಂದ ಚೋರಿ 2 ವರೆಗೆ ಯಾವೆಲ್ಲಾ ಸಿನಿಮಾ ಬಿಡುಗಡೆಯಾಗಲಿವೆ, ಎಲ್ಲಿ ನೋಡಬಹುದು? ವಿವರ ಇಲ್ಲಿದೆ.

ಇಂದು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ ಒಂದಲ್ಲ, ಎರಡಲ್ಲ 5 ಸಿನಿಮಾ
ಇಂದು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ ಒಂದಲ್ಲ, ಎರಡಲ್ಲ 5 ಸಿನಿಮಾ

Friday OTT Releases: ಈ ವಾರಾಂತ್ಯದಲ್ಲಿ ಎಲ್ಲೂ ಹೊರಗಡೆ ಹೋಗದೇ ಮನೆಯಲ್ಲೇ ಕೂತು ಸಿನಿಮಾ ನೋಡುವ ಪ್ಲಾನ್ ಇದ್ದರೆ ಖಂಡಿತ ನಿಮಗೆ ನಿರಾಸೆಯಾಗುವುದಿಲ್ಲ. ಯಾಕೆಂದರೆ ಇಂದು (ಏಪ್ರಿಲ್ 11) ವಿಭಿನ್ನ ಕಥಾಹಂದರದ 5 ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ. ಈ ವಾರ ಸಿನಿ ಪ್ರಿಯರಿಗೆ ಹಬ್ಬ ಅಂತಲೇ ಹೇಳಬಹುದು.

ಅಮೆಜಾನ್ ಪ್ರೈಮ್ ವಿಡಿಯೊ, ನೆಟ್‌ಫ್ಲಿಕ್ಸ್, ಜಿಯೋಹಾಟ್‌ಸ್ಟಾರ್‌ನಂತಹ ಪ್ರಮುಖ ಒಟಿಟಿ ವೇದಿಕೆಗಳಲ್ಲಿ ಈ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಹಾರರ್‌ನಿಂದ ಡಾರ್ಕ್ ಕಾಮೆಡಿವರೆಗೆ ವಿಭಿನ್ನ ಜಾನರ್‌ನ ಸಿನಿಮಾಗಳು ಒಟಿಟಿಗೆ ಬರ್ತಿವೆ.

ವಿಕ್ಕಿ ಕೌಶಲ್ ನಟನೆಯ ಐತಿಹಾಸಿಕ ಕಥಾಹಂದರ ಸಿನಿಮಾದಿಂದ ನುಶ್ರತ್ ಭರುಚ್ಚ ಅವರ ಹಾರರ್‌ ಸಿನಿಮಾದವರೆಗೆ ಒಟಿಟಿಗೆ ಬರುತ್ತಿರುವ ಸಿನಿಮಾಗಳು ಯಾವುವು, ಯಾವ ವೇದಿಕೆಯಲ್ಲಿ ಸ್ಟ್ರೀಮ್ ಆಗುತ್ತದೆ ಎನ್ನುವ ವಿವರ ಇಲ್ಲಿದೆ.

ಛಾವಾ

ಚಿತ್ರಮಂದಿರಗಳಲ್ಲಿ ಯಶಸ್ಸು ಕಂಡು, ಸಾಕಷ್ಟು ಹೆಸರು ಮಾಡಿದ್ದ ಐತಿಹಾಸಿಕ ಕಥಾ ಹಿನ್ನಲೆಯ ಛಾವಾ ಸಿನಿಮಾ ಒಟಿಟಿಗೆ ಬರ್ತಿದೆ. ಈ ಸಿನಿಮಾವು ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್‘ ಅನ್ನು ಹಿಂದಿಕ್ಕಿ ವಿಕ್ಕಿ ಕೌಶಲ್ ನಟನೆಯ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಶಿವಾಜಿ ಸಾವಂತ್ ಅವರ ಅದೇ ಹೆಸರಿನ ಮರಾಠಿ ಕಾದಂಬರಿಯಿಂದ ರೂಪಾಂತರಗೊಂಡ ‘ಛಾವಾ’, ಮರಾಠಾ ಸಾಮ್ರಾಜ್ಯದ ಎರಡನೇ ಆಡಳಿತಗಾರ ಮತ್ತು ಛತ್ರಪತಿ ಶಿವಾಜಿ ಪುತ್ರ ಛತ್ರಪತಿ ಸಂಭಾಜಿ ಮಹಾರಾಜರ ಜೀವನ ಕಥೆಯನ್ನು ಆಧರಿಸಿದೆ. ಇದರಲ್ಲಿ ಲಕ್ಷಣ್ ಉಟೇಕರ್ ನಿರ್ದೇಶನದ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಅಕ್ಷಯ್ ಖನ್ನಾ ಕೂಡ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಫೆಬ್ರುವರಿ 14ಕ್ಕೆ ಛಾವಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರವು ಇಂದಿನಿಂದ (ಏಪ್ರಿಲ್ 11) ನೆಟ್‌ಫಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ.

ಚೋರಿ 2

ವಿಶಾಲ್ ಫ್ಯೂರಿಯಾ ನಿರ್ದೇಶನದ ಚೋರಿ 2, 2021ರಲ್ಲಿ ಬಿಡುಗಡೆಯಾದ ಚೋರಿ ಚಿತ್ರದ ಮುಂದುವರಿದ ಭಾಗ. ನುಶ್ರತ್ ಭರುಚ್ಚಾ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸಾಕ್ಷಿ ಪಾತ್ರದಲ್ಲಿ ನುಶ್ರುತ್ ತನ್ನ 7 ವರ್ಷ ಮಗಳನ್ನು ದುಷ್ಟರಿಂದ ಕಾಪಾಡಿಕೊಳ್ಳಲು ಅಪಾಯಕಾರಿ ಹಾದಿಯಲ್ಲಿ ಸಾಗುವ ಮಹಿಳೆಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸೋಹಾ ಅಲಿ ಖಾನ್, ಸೌರಭ್ ಗೋಯಲ್ ಮತ್ತು ಗಶ್ಮೀರ್ ಮಹಾಜನಿ ಕೂಡ ಗಮನಾರ್ಹ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರ ಕೂಡ ಇಂದಿನಿಂದ (ಏಪ್ರಿಲ್ 11) ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗುತ್ತಿದೆ.

ಪ್ರವಿಂಕೂಡು ಶಪ್ಪು

ಕ್ರೈಂ ಥ್ರಿಲ್ಲರ್ ಹಾಗೂ ಡಾರ್ಕ್ ಕಾಮಿಡಿ ಇರುವ ಪ್ರವಿಂಕೂಡು ಶಪ್ಪು ಮಲಯಾಳಂ ಸಿನಿಮಾ. ಒಂದು ಕಳ್ಳಂಗಡಿಯಲ್ಲಿ ನಡೆಯುವ ಕೊಲೆಯ ರಹಸ್ಯವನ್ನು ಇದು ಬಿಚ್ಚಿಡುತ್ತದೆ. ತನಿಖಾಧಿಕಾರಿಗಳು ಆಳವಾಗಿ ಅಗೆಯುತ್ತಿದ್ದಂತೆ, ಪ್ರಕರಣವು ಅನಿರೀಕ್ಷಿತ ಮತ್ತು ಗಾಢವಾದ ಹಾಸ್ಯಮಯ ತಿರುವುಗಳ ಸರಣಿಯನ್ನು ತೆಗೆದುಕೊಳ್ಳುತ್ತದೆ,ಸೌಬಿನ್ ಶಾಹಿರ್, ಬಾಸಿಲ್ ಜೋಸೆಫ್ ಮತ್ತು ಚೆಂಬನ್ ವಿನೋದ್ ಜೋಸ್ ಅವರ ಅದ್ಭುತ ಅಭಿನಯಗಳನ್ನು ಹೊಂದಿರುವ ಈ ಮಲಯಾಳಂ ಚಿತ್ರವು ಸಸ್ಪೆನ್ಸ್ ಮತ್ತು ಹಾಸ್ಯದ ವಿಶಿಷ್ಟ ಮಿಶ್ರಣವನ್ನು ಭರವಸೆ ನೀಡುತ್ತದೆ. ಈ ಚಿತ್ರವು ಇಂದಿನಿಂದ ಸೋನಿಲೈವ್‌ನಲ್ಲಿ ಸ್ಟ್ರೀಮ್ ಆರಂಭಿಸಲಿದೆ.

ದಿ ಲೆಜೆಂಡ್ ಆಫ್ ಹನುಮಾನ್ ಸೀಸನ್ 6

ದಿ ಲೆಜೆಂಡ್ ಆಫ್ ಹನುಮಾನ್’ ನ ಬಹು ನಿರೀಕ್ಷಿತ ಹೊಸ ಸೀಸನ್, ಸಂಜೀವಿನಿ ಬೆಟ್ಟವನ್ನು ಮರಳಿ ಪಡೆಯಲು ಮತ್ತು ಭಗವಾನ್ ರಾಮನ ಸಹೋದರ ಲಕ್ಷ್ಮಣನನ್ನು ಉಳಿಸಲು ಹನುಮಂತನು ಎದುರಿಸುವ ಭೀಕರ ಸವಾಲುಗಳು ಹಾಗೂ ಅದನ್ನು ಅವನು ಹೇಗೆ ಜಯಿಸುತ್ತಾನೆ ಎಂಬುದನ್ನು ತೋರಿಸುವ ರಾಮಾಯಣ ಆಧಾರಿತ ಕಥೆ ಹೊಂದಿರುವ ಸರಣಿ. ಇದರ ಅದ್ಭುತ ಅನಿಮೇಷನ್‌ನೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸಿದೆ. ಇದು ಏಪ್ರಿಲ್ 11 ರಿಂದ ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿದೆ.

ದಿ ಗಾರ್ಡನರ್

ತಾಯಿ ಪ್ರೀತಿ ಸಿಗದ ಯುವಕನೊಬ್ಬ ಭಾವನೆಗಳೇ ಇಲ್ಲದಂತೆ ಬದುಕುವ, ಹಲವು ದುರಂತಗಳಿಗೆ ಕಾರಣನಾಗುವ ಕಥೆಯನ್ನು ಹೊಂದಿದೆ. ಈ ಕ್ರೈಂ ಥ್ರಿಲ್ಲರ್ ಸರಣಿಯು ಇಂದಿನಿಂದ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿದೆ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner