ಶಿಕ್ಷಕರೇ ಜಾಂಬಿಗಳಾಗಿ ಮಕ್ಕಳನ್ನು ಕೊಂದರೆ ಮುಂದೇನು ಗತಿ; ಒಟಿಟಿಯಲ್ಲಿ ಸ್ಟ್ರೀಮ್‌ ಆಗಲಿದೆ ಕೊರಿಯನ್‌ ಹಾರರ್‌ ಜಾಂಬಿ ಸ್ಕೂಲ್‌ ಸಿನಿಮಾ
ಕನ್ನಡ ಸುದ್ದಿ  /  ಮನರಂಜನೆ  /  ಶಿಕ್ಷಕರೇ ಜಾಂಬಿಗಳಾಗಿ ಮಕ್ಕಳನ್ನು ಕೊಂದರೆ ಮುಂದೇನು ಗತಿ; ಒಟಿಟಿಯಲ್ಲಿ ಸ್ಟ್ರೀಮ್‌ ಆಗಲಿದೆ ಕೊರಿಯನ್‌ ಹಾರರ್‌ ಜಾಂಬಿ ಸ್ಕೂಲ್‌ ಸಿನಿಮಾ

ಶಿಕ್ಷಕರೇ ಜಾಂಬಿಗಳಾಗಿ ಮಕ್ಕಳನ್ನು ಕೊಂದರೆ ಮುಂದೇನು ಗತಿ; ಒಟಿಟಿಯಲ್ಲಿ ಸ್ಟ್ರೀಮ್‌ ಆಗಲಿದೆ ಕೊರಿಯನ್‌ ಹಾರರ್‌ ಜಾಂಬಿ ಸ್ಕೂಲ್‌ ಸಿನಿಮಾ

ಕೊರಿಯನ್‌ ಸಿನಿಪ್ರಿಯರಿಗಾಗೇ ಒಟಿಟಿಯಲ್ಲಿ ಮತ್ತೊಂದು ಸಿನಿಮಾ ಎಂಟ್ರಿ ಆಗಿದೆ. ಶಿಕ್ಷಕರೇ ಜಾಂಬಿಯಾಗಿ ಬದಲಾಗಿ ಮಕ್ಕಳನ್ನು ಕೊಲ್ಲುವ ಒಂದು ವಿಭಿನ್ನ ಕಥೆ ಹೊಂದಿರುವ ಜಾಂಬಿ ಸ್ಕೂಲ್‌ ಥಿಯೇಟರ್‌ನಲ್ಲಿ ರಿಲೀಸ್‌ ಆಗಿ 10 ವರ್ಷಗಳ ಹಿಂದೆ ರಿಲೀಸ್‌ ಆಗಿ ಯಶಸ್ವಿಯಾಗಿತ್ತು.

ಶಿಕ್ಷಕರೇ ಜಾಂಬಿಗಳಾಗಿ ಮಕ್ಕಳನ್ನು ಕೊಂದರೆ ಮುಂದೇನು ಗತಿ; ಒಟಿಟಿಯಲ್ಲಿ ಸ್ಟ್ರೀಮ್‌ ಆಗಲಿದೆ ಕೊರಿಯನ್‌ ಹಾರರ್‌ ಜಾಂಬಿ ಸ್ಕೂಲ್‌ ಸಿನಿಮಾ
ಶಿಕ್ಷಕರೇ ಜಾಂಬಿಗಳಾಗಿ ಮಕ್ಕಳನ್ನು ಕೊಂದರೆ ಮುಂದೇನು ಗತಿ; ಒಟಿಟಿಯಲ್ಲಿ ಸ್ಟ್ರೀಮ್‌ ಆಗಲಿದೆ ಕೊರಿಯನ್‌ ಹಾರರ್‌ ಜಾಂಬಿ ಸ್ಕೂಲ್‌ ಸಿನಿಮಾ

ಒಟಿಟಿಯಲ್ಲಿ ಕೊರಿಯನ್‌ ಡ್ರಾಮಾಗೆ ಕ್ರೇಜ್‌ ಹೆಚ್ಚಾಗುತ್ತಿದೆ. ಇದೇ ಕಾರಣಕ್ಕೆ ಸುಮಾರು 10 ವರ್ಷಗಳ ಹಿಂದೆ ರಿಲೀಸ್‌ ಆಗಿದ್ದ ಹಾರರ್‌ ಸಿನಿಮಾವೊಂದು ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗಲು ಸಿದ್ಧವಾಗಿದೆ. ಒಂದೊಳ್ಳೆ ವಿಭಿನ್ನ ಕಥೆಯೊಂದಿಗೆ ತಯಾರಾಗಿರುವ ಈ ಸಿನಿಮಾ ಈ ವಾರ ಒಟಿಟಿಯಲ್ಲಿ ತೆರೆ ಕಾಣುತ್ತಿದೆ.

10 ವರ್ಷಗಳ ನಂತರ ಒಟಿಟಿಗೆ ಬರುತ್ತಿರುವ ಸಿನಿಮಾ

ಕೊರಿಯನ್‌ ಕಂಟೆಂಟ್‌ಗಳನ್ನು ಪ್ಲೇಫಿಕ್ಸ್‌ನಲ್ಲಿ ಕನ್ನಡ, ಹಿಂದಿ, ತೆಲುಗು, ತಮಿಳು, ಮರಾಠಿ, ಮಲಯಾಳಂ ಭಾಷೆಗಳಿಗೆ ಡಬ್‌ ಮಾಡುತ್ತಿದೆ. ಬರುವ ಶುಕ್ರವಾರ (ಅಕ್ಟೋಬರ್‌ 25) ರಂದು ಈ ಸಿನಿಮಾ ಪ್ಲೇಫ್ಲಿಕ್ಸ್‌ನಲ್ಲಿ ರಿಲೀಸ್‌ ಆಗುತ್ತಿದೆ. ಈ ಸಿನಿಮಾ 2014ರಲ್ಲಿ ಕೊರಿಯಾದಲ್ಲಿ ರಿಲೀಸ್‌ ಆಗಿತ್ತು. ಇದೀಗ 10 ವರ್ಷಗಳ ನಂತರ ಸಿನಿಮಾ ಒಟಿಟಿಯಲ್ಲಿ ಬರುತ್ತಿರುವುದು ವಿಶೇಷ. ಇದೊಂದು ಜಾಂಬಿ ಕಂಟೆಂಟ್‌ ಅಡಿ ತಯಾರಾಗಿರುವ ವಿಭಿನ್ನ ಸಿನಿಮಾ. ಕಿಮ್‌ ಸಿಯುಂಗ್‌, ಹೋ ಯುನ್‌ ಸಿಯೋಲ್‌, ಚಾಮಿನ್‌ ಜಿ ಹಾಗೂ ಇನ್ನಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ. ದಕ್ಷಿಣ ಕೊರಿಯಾದ ಚಿಲ್ಸುಂಗ್‌ ಎಂಬ ಶಾಲೆಯಲ್ಲಿ ಶಾಲಾ ಶಿಕ್ಷಕರು ಜಾಂಬಿಯಾಗಿ ಬದಲಾದ ಕಥೆಯನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.

ಜಾಂಬಿಗಳಾಗಿ ಬದಲಾಗುವ ಶಿಕ್ಷಕರು

ಆ ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಅಶಿಸ್ತಿನ ಮತ್ತು ಅನುಚಿತವಾಗಿ ವರ್ತಿಸುವ ಮೂಲಕ ಕುಖ್ಯಾತಿ ಪಡೆದಿರುತ್ತಾರೆ. ಮಕ್ಕಳನನ್ನು ನಿಯಂತ್ರಿಸಲು ಶಿಕ್ಷಕರು ಎಷ್ಟೇ ಪ್ರಯತ್ನ ಮಾಡಿದರೂ ಅದು ಸಾಧ್ಯವಾಗುವುದಿಲ್ಲ. ಕೊನೆಗೆ ಒಮ್ಮೆ ಆ ಶಿಕ್ಷಕರೆಲ್ಲಾ ಜಾಂಬಿಗಳಾಗಿ ಬದಲಾಗುತ್ತಾರೆ. ಶಾಲೆಯ ಸುತ್ತಮುತ್ತ ಓಡಾಡುವ ವಿದ್ಯಾರ್ಥಿಗಳನ್ನು ಹತ್ಯೆ ಮಾಡಲು ಯತ್ನಿಸುತ್ತಾರೆ. ಆದರೆ ಮಕ್ಕಳು ಭಯದಿಂದ ಓಡಿ ಹೋಗುವ ಬದಲು, ಎಲ್ಲರೂ ಒಗ್ಗೂಡಿ ತಮ್ಮ ಶಿಕ್ಷಕರನ್ನು ಎದುರಿಸಲು ನಿರ್ಧರಿಸುತ್ತಾರೆ. ಈ ಪ್ರಯತ್ನದಲ್ಲಿ ವಿಫಲವಾದರೆ ನಮ್ಮೊಂದಿಗೆ ಇಡೀ ಊರೇ ಸಮಸ್ಯೆಗೆ ಸಿಲುಕುತ್ತದೆ ಎಂದು ಮಕ್ಕಳು ನಿರ್ಧರಿಸಿ ಜಾಂಬಿಗಳ ವಿರುದ್ಧ ಹೋರಾಡಲು ಆರಂಭಿಸುತ್ತಾರೆ. ಆ ಪ್ರಯತ್ನದಲ್ಲಿ ಮಕ್ಕಳು ಯಶಸ್ವಿಯಾಗುತ್ತಾರಾ? ಜಾಂಬಿಗಳಾಗಿ ಬದಲಾಗಿರುವ ಶಿಕ್ಷಕರ ಪರಿಸ್ಥಿತಿ ನಂತರ ಏನಾಗುತ್ತದೆ ಎಂದು ತಿಳಿಯಲು ನೀವು ಈ ಸಿನಿಮಾ ನೋಡಬೇಕು.

ಅಕ್ಟೋಬರ್‌ 25ರಿಂದ ಸ್ಟ್ರೀಮಿಂಗ್

ಜಾಂಬಿ ಸ್ಕೂಲ್‌ ಸಿನಿಮಾ, ಅಕ್ಟೋಬರ್‌ 25ಕ್ಕೆ ಪ್ಲೇಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ. ಈ ವೇದಿಕೆಯಲ್ಲಿ ಈಗಾಗಲೇ ಸಾಕಷ್ಟು ಕೊರಿಯನ್‌ ಸಿನಿಮಾಗಳು ಲಭ್ಯವಿದೆ. ಸ್ವೀಟ್‌ ಅಂಡ್‌ ಸಾಲ್ಟಿ ಆಫೀಸ್‌, ಲೋನ್ಲಿ ಎನಫ್‌ ಟು ಲವ್‌, ರಿಚ್‌ ಮ್ಯಾನ್‌, 1 ಪರ್ಸೆಂಟ್‌ ಸಮ್‌ಥಿಂಗ್‌, ಚಿಲ್ಡ್ರನ್‌ ಆಫ್‌ ನೋ ಬಾಡಿ, ಯು ಆರ್ ಮೈ ಡೆಸ್ಟಿನಿ, ಲೆಸ್ ದೇನ್ ಇವಿಲ್‌ ನಂತಹ ಚಲನಚಿತ್ರಗಳು ಈ OTT ನಲ್ಲಿ ಕನ್ನಡ, ತೆಲುಗು ಸೇರಿ ವಿವಿಧ ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ.

Whats_app_banner