ಆಶಿಕಾ ರಂಗನಾಥ್ ನಟನೆಯ ತಮಿಳಿನ ಮಿಸ್ ಯೂ ಸೇರಿ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿರುವ 10 ಹೊಸ ಸಿನಿಮಾಗಳು: 6 ಚಿತ್ರಗಳಿಗೆ ಭಾರೀ ಬೇಡಿಕೆ
OTT Update: ಜನವರಿ 10, 11 ರಂದು ಒಟಿಟಿಯಲ್ಲಿ ಹತ್ತು ಹೊಸ ಸಿನಿಮಾಗಳು ಸ್ಟ್ರೀಮಿಂಗ್ ಆರಂಭಿಸುತ್ತಿವೆ. ಅದರಲ್ಲಿ ನೈಜ ಘಟನೆ ಆಧಾರಿತ ದಿ ಸಾಬರಮತಿ ರಿಪೋರ್ಟ್, ಆಶಿಕಾ-ಸಿದ್ದಾರ್ಥ್ ನಟನೆಯ ಮಿಸ್ ಯೂ, ಅಲ್ಲರಿ ನರೇಶ್ ಅಭಿನಯದ ಬಚ್ಚಲ ಮಲ್ಲಿ ಸೇರಿದಂತೆ 6 ಚಿತ್ರಗಳು ಬಹಳ ಕುತೂಹಲ ಕೆರಳಿಸಿವೆ.
OTT Update: ತೆಲುಗು, ಹಿಂದಿ, ತಮಿಳು ಸೇರಿದಂತೆ OTT ಯಲ್ಲಿ ಶುಕ್ರವಾರದಿಂದ 10 ಹೊಸ ಸಿನಿಮಾಗಳು ಸ್ಟ್ರೀಮ್ ಆಗುತ್ತಿವೆ. ಹಿಂದಿಯ ಸಾಬರಮತಿ ರಿಪೋರ್ಟ್ ಸೇರಿದಂತೆ ಕ್ರೈಂ, ಹಾರರ್, ಕಾಮಿಡಿ, ರೊಮ್ಯಾಂಟಿಕ್ ಆಕ್ಷನ್ ಥ್ರಿಲ್ಲರ್ ಜೋನರ್‌ಗೆ ಸೇರಿದ ವಿವಿಧ ಚಿತ್ರಗಳು ಜನರಿಗೆ ಮನರಂಜನೆ ನೀಡಲು ಸಿದ್ಧವಿದೆ. ಯಾವ ಒಟಿಟಿ ವೇದಿಕೆಯಲ್ಲಿ ಯಾವ ಸಿನಿಮಾಗಳು ಲಭ್ಯವಿದೆ ನೋಡೋಣ.
ಅಮೆಜಾನ್ ಪ್ರೈಮ್ ಒಟಿಟಿ
ಮಿಸ್ ಯು (ತೆಲುಗು, ತಮಿಳು ರೊಮ್ಯಾಂಟಿಕ್ ಸಿನಿಮಾ)- ಜನವರಿ 10
ಫೋಕಸ್ (ಇಂಗ್ಲಿಷ್ ಕ್ರೈಂ ಕಾಮಿಡಿ ಸಿನಿಮಾ)- ಜನವರಿ 10
ನೆಟ್‌ಫ್ಲಿಕ್ಸ್ ಒಟಿಟಿ
ಅಡ್ ವಿಟಮ್ (ಹಾಲಿವುಡ್ ಆಕ್ಷನ್ ಥ್ರಿಲ್ಲರ್ ಸಿನಿಮಾ)- ಜನವರಿ 10
ಬ್ಲ್ಯಾಕ್ ವಾರಂಟ್ (ಹಿಂದಿ ವೆಬ್ ಸರಣಿ) - ಜನವರಿ 10
ಆಲ್ಫಾ ಮೇಲ್ ಸೀಸನ್ 3 (ಇಂಗ್ಲಿಷ್ ಕಾಮಿಡಿ ವೆಬ್ ಸರಣಿ) - ಜನವರಿ 10
ಬಚ್ಚಲ ಮಲ್ಲಿ (ತೆಲುಗು ಗ್ರಾಮೀಣ ರೊಮ್ಯಾಂಟಿಕ್ ಆಕ್ಷನ್ ಸಿನಿಮಾ) – ETV ವಿನ್ – ಜನವರಿ 10
ಹೈಡ್ ಅಂಡ್ ಸೀಕ್ (ತೆಲುಗು ಸಸ್ಪೆನ್ಸ್ ಕ್ರೈಮ್ ಥ್ರಿಲ್ಲರ್ ಸಿನಿಮಾ) - ಆಹಾ - ಜನವರಿ 10
ಅಥೋಮುಗಂ (ತಮಿಳು ಥ್ರಿಲ್ಲರ್ ಸಿನಿಮಾ) - ಆಹಾ ತಮಿಳು - ಜನವರಿ 10
ಗೂಸ್‌ಬಂಪ್ಸ್ ದಿ ವ್ಯಾನಿಶಿಂಗ್ (ಇಂಗ್ಲಿಷ್ ಹಾರರ್ ಫ್ಯಾಂಟಸಿ ಥ್ರಿಲ್ಲರ್ ವೆಬ್ ಸರಣಿ) - ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ - ಜನವರಿ 10
ದಿ ಸಾಬರಮತಿ ರಿಪೋರ್ಟ್ (ಹಿಂದಿ ಸಿನಿಮಾ) - ಜೀ5 - ಜನವರಿ 10
ರೋಡೀಸ್ ಡಬಲ್ ಕ್ರಾಸ್ (ಹಿಂದಿ ರಿಯಾಲಿಟಿ ಶೋ)- ಜಿಯೋ ಸಿನಿಮಾ - ಜನವರಿ 11
ಒಂದೇ ದಿನ 10 ಚಿತ್ರಗಳು ಸ್ಟ್ರೀಮಿಂಗ್
ಶುಕ್ರವಾರದಿಂದ 10 ಹೊಸ ಸಿನಿಮಾಗಳು ಮತ್ತು ವೆಬ್ ಸರಣಿಗಳು ಒಟ್ಟಿಗೆ ಸ್ಟ್ರೀಮ್ ಆಗುತ್ತಿವೆ. ಅವುಗಳಲ್ಲಿ ಅಲ್ಲರಿ ನರೇಶ್ ಅಭಿನಯದ ತೆಲುಗು ಗ್ರಾಮೀಣ ಕಥಾ ಹಂದರವುಳ್ಳ ರೊಮ್ಯಾಂಟಿಕ್ ಆಕ್ಷನ್ ಥ್ರಿಲ್ಲರ್ ಬಚ್ಚಲ ಮಲ್ಲಿ, ಸಿದ್ಧಾರ್ಥ್ ಆಶಿಕಾ ರಂಗನಾಥ್ ನಟನೆಯ ರೊಮ್ಯಾಂಟಿಕ್ ಎಂಟರ್‌ಟೈನರ್ ತಮಿಳು ಸಿನಿಮಾ ಮಿಸ್ ಯೂ, ತೆಲುಗು ಕ್ರೈಮ್ ಥ್ರಿಲ್ಲರ್ ಸಿನಿಮಾ ಹೈಡ್ ಅಂಡ್ ಸೀಕ್, ನೈಜ ಘಟನೆ ಆಧರಿಸಿದ ದಿ ಸಾಬರಮತಿ ರಿಪೋರ್ಟ್ ಬೇಡಿಕೆ ಇರುವ ಸಿನಿಮಾಗಳಾಗಿವೆ.
ಈ ವೀಕೆಂಡ್‌ಗೆ ನೀವು ಇದರಲ್ಲಿ ನಿಮ್ಮಿಷ್ಟದ ಚಿತ್ರಗಳನ್ನು ಎಂಜಾಯ್ ಮಾಡಬಹುದು.