ಆರ್ ಮಾಧವನ್ ಅಭಿನಯದ ಹಿಸಾಬ್ ಬರಾಬರ್ ಹಿಂದಿ ಸಿನಿಮಾ ಸೇರಿದಂತೆ ಇಂದು ಒಟಿಟಿಯಲ್ಲಿ ಸ್ಟ್ರೀಮ್ ಆಗಲಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ
OTT Release Today: ಒಟಿಟಿಯಲ್ಲಿ ಇಂದು ಒಂದೇ ದಿನ ವೆಬ್ ಸಿರೀಸ್ ಹಾಗೂ ಸಿನಿಮಾಗಳು ಸೇರಿದಂತೆ ಒಟ್ಟು 11 ಕಂಟೆಂಟ್‌ಗಳು ಸ್ಟ್ರೀಮಿಂಗ್ ಆರಂಭಿಸಲಿವೆ. ಈಗಾಗಲೇ ಕೆಲವೊಂದು ನೋಡಲು ಲಭ್ಯವಿದೆ. ಯಾವ ಒಟಿಟಿಯಲ್ಲಿ ಯಾವ ಚಿತ್ರಗಳು ರಿಲೀಸ್ ಆಗಲಿವೆ? ಇಲ್ಲಿದೆ ಮಾಹಿತಿ.

Today OTT Movies : ಪ್ರತಿ ಶುಕ್ರವಾರ ಥಿಯೇಟರ್‌ಗಳು, ಮಲ್ಟಿಪ್ಲೆಕ್ಸ್‌ಗಳಲ್ಲಿ ಮಾತ್ರವಲ್ಲದೆ ಒಟಿಟಿಯಲ್ಲಿ ಕೂಡಾ ಸಿನಿಮಾಗಳೂ ಬಿಡುಗಡೆ ಆಗುತ್ತವೆ. ಈ ವಾರ ಕೂಡಾ ವಿವಿಧ ಒಟಿಟಿ ವೇದಿಕೆಗಳಲ್ಲಿ ಕ್ರೈಂ, ಥ್ರಿಲ್ಲರ್, ಹಾರರ್, ಕಾಮಿಡಿ, ಲವ್ ಸ್ಟೋರಿ ಸೇರಿದಂತೆ ವಿವಿಧ ಝೋನರ್ ಸಿನಿಮಾಗಳು ಸ್ಟ್ರೀಮಿಂಗ್ ಆರಂಭಿಸಲಿವೆ. ಜೊತೆ ವೆಬ್ ಸಿರೀಸ್‌ಗಳು ಇವೆ. ಯಾವ ಒಟಿಟಿಯಲ್ಲಿ ಯಾವ ಭಾಷೆಯ ಸಿನಿಮಾಗಳು ಬಿಡುಗಡೆ ಆಗುತ್ತಿವೆ ನೋಡೋಣ.
ನೆಟ್‌ಫ್ಲಿಕ್ಸ್ ಒಟಿಟಿ
ಷಾಫ್ಟೆಡ್ ( ಸ್ಪಾನಿಷ್ ಕಾಮಿಡಿ ವೆಬ್ ಸಿರೀಸ್) ಜನವರಿ 24
ದಿ ಸ್ಯಾಂಡ್ ಕಾಸ್ಟೆಲ್ (ಲೆಬನೀಸ್ ಸರ್ವೈವಲ್ ಫ್ಯಾಮಿಲಿ ಥ್ರಿಲ್ಲರ್ ಸಿನಿಮಾ) ಜನವರಿ 24
ದಿ ಟ್ರಾಮಾ ಕೋಡ್ ಹೀರೋಸ್ ಆನ್ ಕಾಲ್ ( ಕೊರಿಯನ್ ಮೆಡಿಕಲ್ ಥ್ರಿಲ್ಲರ್ ವೆಬ್ ಸಿರೀಸ್) ಜನವರಿ 24
ಆಹಾ ಒಟಿಟಿ
ರಜಾಕಾರ್ (ತೆಲುಗು ಪಿರಿಯಾಡಿಕ್ ಆಕ್ಷನ್ ಥ್ರಿಲ್ಲರ್ ಸಿನಿಮಾ) ಜನವರಿ 24
ದಿ ಸ್ಮೈಲ್ ಮ್ಯಾನ್ ( ತೆಲುಗು ಡಬ್ಬಿಂಗ್ ತಮಿಳು ಕ್ರೈಂ ಥ್ರಿಲ್ಲರ್ ಸಿನಿಮಾ) ಜನವರಿ 24
ಇದನ್ನು ಹೊರತುಪಡಿಸಿ..
ಸಿವರಪಲ್ಲಿ ( ತೆಲುಗು ಕಾಮಿಡಿ ವೆಬ್ ಸಿರೀಸ್) ಅಮೆಜಾನ್ ಪ್ರೈಂ ಒಟಿಟಿ - ಜನವರಿ 24
ಶ್ರೀಕಾಕುಳಂ ಷೆರ್ಲಾಕ್ ಹೋಮ್ಸ್ ( ತೆಲುಗು ಕಾಮಿಡಿ ಕ್ರೈಂ ಇನ್ವೆಷ್ಟಿಗೇಷನ್ ಸಿನಿಮಾ) ಈಟಿವಿ ವಿನ್- ಜನವರಿ 24
ಹಿಸಾಬ್ ಬರಾಬರ್ (ಹಿಂದಿ ಡಾರ್ಕ್ ಕಾಮಿಡಿ ಥ್ರಿಲ್ಲರ್ ಸಿನಿಮಾ) ಜಿ 5 ಒಟಿಟಿ- ಜನವರಿ 24
ಸ್ವೀಟ್ ಡ್ರೀಮ್ಸ್ (ಹಿಂದಿ ರೊಮ್ಯಾಂಟಿಕ್ ಸಿನಿಮಾ) ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ - ಜನವರಿ 24
ದಿ ಗರ್ಲ್ ವಿತ್ ದಿ ನೀಡಿಲ್(ಡಾನಿಷ್ ಕ್ರೈಮ್ ಸಿನಿಮಾ) ಮುಬಿ ಒಟಿಟಿ- ಜನವರಿ 24
ಲಾಫರ್ ಚೆಫ್ ಸೀಸನ್ 2( ಹಿಂದಿ ಕುಕಿಂಗ್ ರಿಯಾಲಿಟಿ ಶೋ) ಜಿಯೋ ಸಿನಿಮಾ - ಜನವರಿ 24
ದೀದಿ(ಅಮೆರಿಕನ್ ಕಾಮಿಡಿ ಸಿನಿಮಾ) ಜಿಯೋ ಸಿನಿಮಾ-ಜನವರಿ 26
ವೆಬ್ ಸಿರೀಸ್ ಹಾಗೂ ಸಿನಿಮಾಗಳು ಸೇರಿದಂತೆ ಇಂದು ಒಂದೇ ದಿನ 11 ಕಂಟೆಂಟ್‌ಗಳು ಸ್ಟ್ರೀಮಿಂಗ್ ಆರಂಭಿಸಲಿವೆ. ಅನಸೂಯಾ ಭಾರಧ್ವಾಜ್ ಅಭಿನಯದ ತೆಲುಗು ಆಕ್ಷನ್ ಥ್ರಿಲ್ಲರ್ ರಜಾಕರ್, ವೆನ್ನೆಲಾ ಕಿಶೋರ್ ಅಭಿನಯದ ತೆಲುಗು ಕಾಮಿಡಿ ಕ್ರೈಮ್ ಇನ್ವೆಸ್ಟಿಗೇಷನ್ ಸಿನಿಮಾ ಶ್ರೀಕಾಕುಳಂ ಶೆರ್ಲಾಕ್ ಹೋಮ್ಸ್, ತೆಲುಗಿನ ಡಬ್ಬಿಂಗ್ ತಮಿಳು ಕ್ರೈಮ್ ಥ್ರಿಲ್ಲರ್ ದಿ ಸ್ಮೈಲ್ ಮ್ಯಾನ್, ತೆಲುಗು ಕಾಮಿಡಿ ವೆಬ್ ಸರಣಿ ಶಿವರಾಪಳ್ಳಿ ಬಹಳ ವಿಶೇಷವಾಗಿದೆ.
ಇದರ ಜೊತೆಗೆ ಹಿಂದಿ ಡಾರ್ಕ್ ಥ್ರಿಲ್ಲರ್ ಸಿನಿಮಾ ಹಿಸಾಬ್ ಬರಾಬರ್ , ಹಿಂದಿ ರೊಮ್ಯಾಂಟಿಕ್ ಸಿನಿಮಾ ಸ್ವೀಟ್ ಡ್ರೀಮ್ಸ್, ಫ್ಯಾಮಿಲಿ ಥ್ರಿಲ್ಲರ್ ದಿ ಸ್ಯಾಂಡ್ ಕ್ಯಾಸಲ್ ಕಂಟೆಂಟ್ ಕೂಡಾ ಬಹಳ ಕುತೂಹಲ ಕೆರಳಿಸಿವೆ.
