ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ತೋರಿಸಿ ಪೌರಾಣಿಕ ಆ್ಯನಿಮೇಟೆಡ್ ಸಿನಿಮಾ; ಒಟಿಟಿಯಲ್ಲಿರುವ ಅತ್ಯುತ್ತಮ ಚಿತ್ರಗಳಿವು
ಭಾರತೀಯ ಪುರಾಣ ಮತ್ತು ದಂತಕಥೆಗಳನ್ನು ಆಧರಿಸಿದ ಸಾಕಷ್ಟು ಆ್ಯನಿಮೇಟೆಡ್ ಚಲನಚಿತ್ರಗಳು ಬಿಡುಗಡೆಯಾಗಿವೆ. ಒಟಿಟಿಯಲ್ಲೂ ಕೂಡ ಈ ಸಿನಿಮಾಗಳು ಲಭ್ಯವಿವೆ. ಬೇಸಿಗೆ ರಜೆಯಲ್ಲಿ ಈ ಚಿತ್ರಗಳನ್ನು ಮಕ್ಕಳಿಗೆ ತಪ್ಪದೇ ತೋರಿಸಿ.

ಒಟಿಟಿ ವೇದಿಕೆ ಅನ್ನೋದು ಮನೆಯಲ್ಲೇ ನಮಗೆ ವಿವಿಧ ಪ್ರಕಾರದ ಸಿನಿಮಾಗಳನ್ನು ನೋಡಲು ಅವಕಾಶ ಮಾಡಿಕೊಡುತ್ತಿದೆ. ಒಟಿಟಿಯಲ್ಲಿ ಸಾಕಷ್ಟು ಮಕ್ಕಳ ಚಿತ್ರಗಳು ಕೂಡ ಲಭ್ಯವಿವೆ. ಬೇಸಿಗೆ ರಜಾದಿನಗಳಲ್ಲಿ ನಿಮ್ಮ ಮಕ್ಕಳಿಗೆ ಭಾರತೀಯ ಪುರಾಣ ಮತ್ತು ದಂತಕಥೆಗಳ ಬಗ್ಗೆ ಕಲಿಸಲು ನೀವು ಬಯಸಿದರೆ ಈ ಕೆಲವು ಆ್ಯನಿಮೇಟೆಡ್ ಚಿತ್ರಗಳನ್ನು ತೋರಿಸಬಹುದು. ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಜಿಯೋಹಾಟ್ಸ್ಟಾರ್ ಮತ್ತು ಯೂಟ್ಯೂಬ್ನಂತಹ ಒಟಿಟಿ ಪ್ಲಾಟ್ಫಾರ್ಮ್ಗಳಲ್ಲಿರುವ ಕೆಲವು ಪ್ರಸಿದ್ಧ ಮಕ್ಕಳ ಚಿತ್ರಗಳ ಬಗ್ಗೆ ಇಲ್ಲಿದೆ ಮಾಹಿತಿ.
1. ಬಾಲ ಗಣೇಶ್ - ಅಮೆಜಾನ್ ಪ್ರೈಮ್ ವಿಡಿಯೊ
ಗಣಪತಿ ಮಕ್ಕಳಿಗೆ ತುಂಬಾ ಪ್ರಿಯವಾದ ದೇವರು. ಅಂತಹ ದೇವರ ಮಹಿಮೆಗಳನ್ನು ಮತ್ತು ಅವನ ಸಾಹಸಗಳನ್ನು ಅನಿಮೇಷನ್ ರೂಪದಲ್ಲಿ ತರುವ ಸಿನಿಮಾ ‘ಬಾಲ್ ಗಣೇಶ್‘. ನೀವು ಅದನ್ನು ಪ್ರೈಮ್ ವಿಡಿಯೊದಲ್ಲಿ ವೀಕ್ಷಿಸಬಹುದು. ಜಿಯೊ ಹಾಟ್ಸ್ಟಾರ್ನಲ್ಲೂ ಈ ಸಿನಿಮಾ ಲಭ್ಯವಿದೆ.
2. ಮಹಾಭಾರತ (2013) - ಜಿಯೊ ಹಾಟ್ಸ್ಟಾರ್
ನಮ್ಮ ದೇಶದ ಪ್ರಮುಖ ಮಹಾಕಾವ್ಯಗಳಲ್ಲಿ ಒಂದು ಮಹಾಭಾರತ. ಇದನ್ನು 2013 ರಲ್ಲಿ ಮಹಾಭಾರತ ಎಂಬ ಅನಿಮೇಟೆಡ್ ಚಲನಚಿತ್ರದ ರೂಪದಲ್ಲಿ ಜೀವಂತಗೊಳಿಸಲಾಯಿತು. ಇದನ್ನು ಜಿಯೋಹಾಟ್ಸ್ಟಾರ್ನಲ್ಲಿ ನೋಡಬಹುದು. ಇದರಲ್ಲಿ ಮೂಲ ಟಿವಿ ಸರಣಿ ಮಹಾಭಾರತವೂ ಲಭ್ಯವಿದೆ.
3. ರಾಮಾಯಣ: ದಿ ಎಪಿಕ್ - ಯುಟ್ಯೂಬ್
ನೀವು ರಾಮನ ಕಥೆಯನ್ನು ಎಷ್ಟೇ ಬಾರಿ ಕೇಳಿದರೂ ಅಥವಾ ನೋಡಿದರೂ ನಿಮಗೆ ಎಂದಿಗೂ ಬೇಸರವಾಗುವುದಿಲ್ಲ. ಅದಕ್ಕಾಗಿಯೇ ರಾಮಾಯಣವನ್ನು ದಶಕಗಳಿಂದ ವಿವಿಧ ರೂಪಗಳಲ್ಲಿ ತೋರಿಸಲಾಗುತ್ತಿದೆ. ರಾಮಾಯಣ: ದಿ ಎಪಿಕ್ ಒಂದು ಅನಿಮೇಟೆಡ್ ಚಿತ್ರ. ಇದನ್ನು ಯುಟ್ಯೂಬ್ನಲ್ಲಿ ಉಚಿತವಾಗಿ ವೀಕ್ಷಿಸಬಹುದು.
4. ಹನುಮಾನ್ - ಯುಟ್ಯೂಬ್
ಹನುಮಾನ್ ಒಂದು ಅನಿಮೇಟೆಡ್ ಸಿನಿಮಾವಾಗಿದ್ದು, ಇದು ಹನುಮಂತನ ಹುಟ್ಟಿನಿಂದ ಮರಣದವರೆಗಿನ ಸಂಪೂರ್ಣ ಜೀವನವನ್ನು ತೋರಿಸುತ್ತದೆ. ಅದು 2005 ರಲ್ಲಿ ಬಂದಿತು. ಮುಖೇಶ್ ಖನ್ನಾ ತಮ್ಮ ಧ್ವನಿಯಲ್ಲಿ ಹನುಮಂತನ ಜೀವನಕ್ಕೆ ಜೀವ ತುಂಬಿದರು. ನೀವು ಅದನ್ನು ಯುಟ್ಯೂಬ್ನಲ್ಲಿ ವೀಕ್ಷಿಸಬಹುದು.
5. ಕೃಷ್ಣ ದಿ ಬರ್ತ್ - ಪ್ರೈಮ್ ವಿಡಿಯೊ, ಜೀ 5
ಈ ಅನಿಮೇಟೆಡ್ ಚಲನಚಿತ್ರ ಕೃಷ್ಣ ದಿ ಬರ್ತ್ನಲ್ಲಿ ಬಾಲ ಕೃಷ್ಣನ ಲೀಲೆಗಳನ್ನು ತೋರಿಸಲಾಗಿದೆ. ಇದು ಪ್ರೈಮ್ ವಿಡಿಯೊ ಮತ್ತು ಜೀ 5 ಒಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ಲಭ್ಯವಿದೆ. ಇದು 2006 ರಲ್ಲಿ ಬಂದ ಸಿನಿಮಾ.
6. ದಿ ಲೆಜೆಂಡ್ ಆಫ್ ಬುದ್ಧ - ಪ್ರೈಮ್ ವಿಡಿಯೊ, ಜಿಯೊ ಹಾಟ್ಸ್ಟಾರ್
‘ದಿ ಲೆಜೆಂಡ್ ಆಫ್ ಬುದ್ಧ‘ ಬುದ್ಧನ ಜೀವನದ ಕುರಿತ ಒಂದು ಅನಿಮೇಟೆಡ್ ಚಿತ್ರ. ಈ ಚಿತ್ರವನ್ನು ಪ್ರೈಮ್ ವಿಡಿಯೊ ಮತ್ತು ಜಿಯೊ ಹಾಟ್ಸ್ಟಾರ್ನಲ್ಲಿ ವೀಕ್ಷಿಸಬಹುದು. 77ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ ವಿಭಾಗಕ್ಕೆ ಈ ಚಿತ್ರವನ್ನು ಸಲ್ಲಿಸಲಾಗಿದ್ದರೂ, ಅದು ನಾಮನಿರ್ದೇಶನಗೊಂಡಿಲ್ಲ.
7. ಸನ್ಸ್ ಆಫ್ ರಾಮ್ - ಪ್ರೈಮ್ ವಿಡಿಯೋ
ಸನ್ಸ್ ಆಫ್ ರಾಮ್ ಎಂಬ ಅನಿಮೇಟೆಡ್ ಚಲನಚಿತ್ರವು ಲವಕುಶರ ಜೀವನವನ್ನು ಆಧರಿಸಿದೆ. ಈ ಚಿತ್ರ ಪ್ರೈಮ್ ವಿಡಿಯೊದಲ್ಲಿ ಲಭ್ಯವಿದೆ.
8. ಅರ್ಜುನ್ ದಿ ವಾರಿಯರ್ ಪ್ರಿನ್ಸ್ - ನೆಟ್ಫ್ಲಿಕ್ಸ್
ಇದು ಮಹಾಭಾರತದ ಪ್ರಮುಖ ಪಾತ್ರವಾದ ಅರ್ಜುನನನ್ನು ಆಧರಿಸಿದ ಅನಿಮೇಟೆಡ್ ಚಲನಚಿತ್ರವಾಗಿದೆ. ನೀವು ಈ ಚಲನಚಿತ್ರವನ್ನು ನೆಟ್ಫ್ಲಿಕ್ಸ್, ಪ್ರೈಮ್ ವಿಡಿಯೊ ಮತ್ತು ಯೂಟ್ಯೂಬ್ನಲ್ಲಿ ವೀಕ್ಷಿಸಬಹುದು.
ವಿಭಾಗ