ಒಟಿಟಿಯಲ್ಲಿ ನೋಡಬಹುದಾದ ದಕ್ಷಿಣ ಭಾರತದ 10 ಬೆಸ್ಟ್ ರೊಮ್ಯಾಂಟಿಕ್ ಕಾಮಿಡಿ ಸಿನಿಮಾಗಳು; ಖುಷಿಯಿಂದ ಗೂಗ್ಲಿವರೆಗೆ
ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಯಾರಿಗೆ ಇಷ್ಟವಾಗೊಲ್ಲ ಹೇಳಿ. ಈ ಸಿನಿಮಾಗಳು ಎದೆಯಲ್ಲಿ ಕಚಗುಳಿ ಇಡುವ ಜೊತೆಗೆ ಮುಖದಲ್ಲಿ ನಗು ಮೂಡಿಸುತ್ತವೆ. ನಿಮಗೂ ಅಂತಹ ಸಿನಿಮಾಗಳು ಇಷ್ಟ ಎಂದರೆ ಒಟಿಟಿಯಲ್ಲಿರುವ 10 ಬೆಸ್ಟ್ ದಕ್ಷಿಣ ಭಾರತದ ಸಿನಿಮಾಗಳ ಪಟ್ಟಿ ಇಲ್ಲಿದೆ ಗಮನಿಸಿ.

ವಾರಾಂತ್ಯದಲ್ಲಿ ಬೇಸರವಾದಾಗ ಸಿನಿಮಾ ನೋಡುವ ಹವ್ಯಾಸವನ್ನು ಹಲವರು ರೂಢಿಸಿಕೊಂಡಿರುತ್ತಾರೆ. ಈಗಂತೂ ಹಲವು ಒಟಿಟಿ ವೇದಿಕೆಗಳು ಸಾಕಷ್ಟು ಸಿನಿಮಾಗಳನ್ನು ಮನೆಯಲ್ಲೇ ಕೂತು ನೋಡುವ ಅವಕಾಶ ಒದಗಿಸುತ್ತವೆ. ನೀವು ಎಲ್ಲಾ ಜಾನರ್‌ನ ಸಿನಿಮಾಗಳನ್ನು ಒಟಿಟಿಯಲ್ಲಿ ವೀಕ್ಷಿಸಬಹುದು. ರೊಮ್ಯಾಂಟಿಕ್ ಕಾಮಿಡಿ ಸಿನಿಮಾಗಳು ನಿಮಗೆ ಇಷ್ಟವಾಗುತ್ತವೆ ಎಂದರೆ ಒಟಿಟಿಯಲ್ಲಿ ಸಾಕಷ್ಟು ಸಿನಿಮಾಗಳು ಸಿಗುತ್ತವೆ. ಅದರಲ್ಲಿ 10 ಬೆಸ್ಟ್ ದಕ್ಷಿಣ ಭಾರತದ ರೊಮ್ಯಾಂಟಿಕ್ ಕಾಮಿಡಿ ಸಿನಿಮಾಗಳ ಪಟ್ಟಿ ಇಲ್ಲಿ ನೀಡಲಾಗಿದೆ.
ಪ್ರೇಮಲು
2024ರಲ್ಲಿ ಬಿಡುಗಡೆಯಾದ ಮಲಯಾಳಂ ಚಿತ್ರ. ಗಿರೀಶ್ ಎಡಿ ನಿರ್ದೇಶನದ ಈ ಸಿನಿಮಾದಲ್ಲಿ ನೆಲ್ಸನ್, ಮಮಿತಾ ಬೈಜು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಸಚಿನ್ ಸಂತೋಷ್ ಹಾಗೂ ರೀನು ರಾಯ್ ನಡುವೆ ನಡೆಯುವ ಪ್ರೇಮಪುರಾಣದ ಕಥೆಯ ಜೊತೆ ಇದರಲ್ಲಿ ಸಾಕಷ್ಟು ಕಾಮಿಡಿ ದೃಶ್ಯಗಳೂ ಇವೆ. ಈ ಚಿತ್ರವನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ನೋಡಬಹುದು. ಐಎಂಡಿಬಿ ಈ ಚಿತ್ರಕ್ಕೆ 10 ರಲ್ಲಿ 7.8 ಅಂಕ ನೀಡಿದೆ.
ಲವ್ ಟುಡೆ
ಇದು 2022ರಲ್ಲಿ ಬಿಡುಗಡೆಯಾದ ತಮಿಳು ಸಿನಿಮಾ. ಪ್ರದೀಪ್ ರಂಗನಾಥ್ ನಿರ್ದೇಶನದ ಈ ಚಿತ್ರದಲ್ಲಿ ಪ್ರದೀಪ್ ಹಾಗೂ ಇವಾನಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. 5 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 105 ಕೋಟಿ ಗಳಿಸಿತ್ತು. ನೆಟ್‌ಫ್ಲಿಕ್ಸ್ ಒಟಿಟಿ ವೇದಿಕೆಯಲ್ಲಿ ಈ ಸಿನಿಮಾವನ್ನು ನೋಡಬಹುದು. ಐಎಂಡಿಬಿ ಈ ಚಿತ್ರಕ್ಕೆ 10ಕ್ಕೆ 8 ರೇಟಿಂಗ್ ನೀಡಿದೆ.
ಮಿಸ್ ಶೆಟ್ಟಿ ಅಂಡ್ ಮಿಸ್ಟರ್ ಪೊಲಿಶೆಟ್ಟಿ
ಅನುಷ್ಕಾ ಶೆಟ್ಟಿ ಹಾಗೂ ನವೀನ್ ಪೊಲಿಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ 2023ರಲ್ಲಿ ಬಿಡುಗಡೆಯಾಗಿತ್ತು. ಮಹೇಶ್ ಬಾಬು ಪಚಿಗೊಲ್ಲ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು. ಈ ರೊಮ್ಯಾಂಟಿಕ್ ಕಾಮಿಡಿ ಸಿನಿಮಾವನ್ನು ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದು. ಐಎಂಡಿಬಿಯಲ್ಲಿ ಈ ಚಿತ್ರಕ್ಕೆ 10ಕ್ಕೆ 7 ರೇಟಿಂಗ್ ಇದೆ.
ಕೃಷ್ಣ ವೃಂದಾ ವಿಹಾರಿ
ಇದು 2022ರಲ್ಲಿ ಬಿಡುಗಡೆಯಾದ ತೆಲುಗು ಸಿನಿಮಾ. ಅನಿಶ್ ಆರ್. ಕೃಷ್ಣನ್ ನಿರ್ದೇಶನದ ಈ ಚಿತ್ರದಲ್ಲಿ ನಾಗಶೌರ್ಯ ಮತ್ತು ಶೆರ್ಲಿ ಸೆಟಿಯಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ನೆಟ್‌ಫ್ಲಿಕ್‌ನಲ್ಲಿ ನೋಡಬಹುದು. ಈ ಚಿತ್ರಕ್ಕೆ ಐಎಂಡಿಬಿಯಲ್ಲಿ 10ಕ್ಕೆ 5.8 ರೇಟಿಂಗ್ ಇದೆ.
ಹಾಯ್ ನಾನ್ನಾ
ಇದು ನ್ಯಾಚುಲರ್ ಸ್ಟಾರ್ ನಾನಿ ಅಭಿನಯದ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ. ಶೌರ್ಯ ಯುವಿ ನಿರ್ದೇಶನದ ಈ ಚಿತ್ರದಲ್ಲಿ ಭಾವನಾತ್ಮಕ ಅಂಶವೂ ಇದೆ. ಈ ಚಿತ್ರದಲ್ಲಿ ಮೃಣಾಲ್ ಠಾಕೂರ್ ನಾನಿಗೆ ಜೋಡಿಯಾಗಿದ್ದಾರೆ. 2023ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದು. ಈ ಸಿನಿಮಾಕ್ಕೆ ಐಎಂಡಿಬಿ 10ಕ್ಕೆ 8.2 ರೇಟಿಂಗ್ ನೀಡಿದೆ.
ಖುಷಿ
2023ರಲ್ಲಿ ಬಿಡುಗಡೆಯಾದ ತೆಲುಗು ಚಿತ್ರವಿದು. ಇದರಲ್ಲಿ ಸಮಂತಾ ಹಾಗೂ ವಿಜಯ್ ದೇವರಕೊಂಡ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಶಿವ ನಿರ್ವಾಣ ನಿರ್ದೇಶನದ ಈ ಚಿತ್ರವನ್ನು ನೆಟ್‌ಫ್ಲಿಕ್ಸ್ ಒಟಿಟಿ ವೇದಿಕೆಯಲ್ಲಿ ನೋಡಬಹುದು. ಈ ಸಿನಿಮಾಕ್ಕೆ ಐಎಂಡಿಬಿಯಲ್ಲಿ 5.4 ರೇಟಿಂಗ್ ಇದೆ.
18 ಪೇಜಸ್
ಇದು ತೆಲುಗಿನ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ. 2022ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಅನುಪಮಾ ಪರಮೇಶ್ವರನ್ ಹಾಗೂ ನಿಖಿಲ್ ಸಿದ್ಧಾರ್ಥ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರವನ್ನು ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದು. ಈ ಸಿನಿಮಾಕ್ಕೆ ಐಎಂಡಿಬಿ 10ಕ್ಕೆ 7.1 ರೇಟಿಂಗ್ ನೀಡಿದೆ.
ಆಯ್
ಇದು 2024ರಲ್ಲಿ ಬಿಡುಗಡೆಯಾದ ತೆಲುಗು ಚಿತ್ರ. ಅಂಜಿ ಜೆ ಮಣಿಪುತ್ರ ನಿರ್ದೇಶನದ ಈ ಸಿನಿಮಾವನ್ನು ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದು. ಈ ಚಿತ್ರಕ್ಕೆ ಐಎಂಡಿಬಿ 6.4 ರೇಟಿಂಗ್ ನೀಡಿದೆ.
ಗೂಗ್ಲಿ
ಇದು 2013ರಲ್ಲಿ ಬಿಡುಗಡೆಯಾದ ಕನ್ನಡ ಸಿನಿಮಾ. ರಾಕಿಂಗ್ ಸ್ಟಾರ್ ಯಶ್ ಹಾಗೂ ಕೃತಿ ಕರಬಂಧ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶನವಿದೆ. ಈ ಸಿನಿಮಾವನ್ನು ಜಿಯೊ ಹಾಟ್ ಸ್ಟಾರ್ ಹಾಗೂ ಏರಟೆಲ್ ಎಕ್ಸ್‌ಸ್ಟ್ರೀಮ್‌ನಲ್ಲಿ ವೀಕ್ಷಣೆ ಮಾಡಬಹುದು. ಈ ಚಿತ್ರಕ್ಕೆ ಐಎಂಡಿಬಿ 7.5 ರೇಟಿಂಗ್ ಇದೆ.
ತಿರುಚಿತ್ರಂಬಲಂ
ಇದು 2022ರಲ್ಲಿ ಬಿಡುಗಡೆಯಾದ ತಮಿಳು ಚಿತ್ರ. ಮಿಥುನ್ ಆರ್ ಜವಹಾರ್ ನಿರ್ದೇಶನದ ಈ ಸಿನಿಮಾದಲ್ಲಿ ಧನುಶ್ ಹಾಗೂ ನಿತ್ಯಾ ಮೆನನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಐಎಂಡಿಬಿ 10ಕ್ಕೆ 7.9 ರೇಟಿಂಗ್ ನೀಡಿದೆ. ಇದನ್ನು ಅಮೆಜಾನ್ ಪ್ರೈಮ್‌ನಲ್ಲಿ ನೋಡಬಹುದು.