ನೆಟ್‌ಫ್ಲಿಕ್ಸ್‌ಗೆ ಬರ್ತಿದೆ ಕ್ಷಣಕ್ಷಣಕ್ಕೂ ರೋಚಕ ತಿರುವು ಹೊಂದಿರುವ ವೆಡ್‌ನಸ್ ಡೇ ಸೀಸನ್ 2; ಇಲ್ಲಿದೆ ಸ್ಟ್ರೀಮಿಂಗ್ ವಿವರ
ನೆಟ್‌ಫ್ಲಿಕ್ಸ್ ಓಟಿಟಿ ವೇದಿಕೆಯಲ್ಲಿ ವೆಡ್‌ನಸ್ ಸೀಸನ್ 2ರ ಟೀಸರ್ ಬಿಡುಗಡೆಯಾಗಿದೆ. 2022ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಕಂಡ ಈ ವೆಬ್ ಸರಣಿಯ ಸೀಸನ್ 2 ಎರಡು ಭಾಗಗಳಲ್ಲಿ ಸ್ಟ್ರೀಮ್ ಆಗಲಿದೆ.

‘ವೆಡ್‌ನಸ್ ಡೇ‘ 2022ರಲ್ಲಿ ಬಿಡುಗಡೆಯಾದ ಸೂಪರ್ ನ್ಯಾಚುರಲ್, ಹಾರರ್ ಕಾಮಿಡಿ ವೆಬ್ ಸಿರೀಸ್. ಇದೀಗ 3 ವರ್ಷಗಳ ಬಳಿಕ ಇದರ ಭಾಗ 2 ಬಿಡುಗಡೆಗೆ ಸಜ್ಜಾಗಿದೆ. ಏಪ್ರಿಲ್ 23 ರಂದು ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್‌ನಲ್ಲಿ ಇದರ ಟೀಸರ್ ಬಿಡುಗಡೆಯಾಗಿದೆ. ಮೊದಲ ಸೀಸನ್ ಅದ್ಭುತವಾಗಿದ್ದು, ಪ್ರೇಕ್ಷಕರನ್ನು ರೋಮಾಂಚನಗೊಳಿಸಿತ್ತು. ಇದೀಗ ವೆಡ್‌ನೆಸ್ ಡೇ ಸೀಸನ್ 2, ಎರಡು ಭಾಗಗಳಲ್ಲಿ ಬರಲಿದೆ ಎಂದು ತಯಾರಕರು ಹೇಳಿದ್ದಾರೆ.
ವೆಡ್‌ನಸ್ ಡೇ ಟೀಸರ್
ವೆಡ್‌ನಸ್ ಡೇ ಸೀಸನ್ 2ರ ಟೀಸರ್ ಭಯಾನಕವಾಗಿದೆ. ಈ ಸರಣಿಯ ಪ್ರಮುಖ ಪಾತ್ರ ಆಡಮ್ಸ್ ಹೊಸ ಸೀಸನ್‌ನಲ್ಲಿ ಇನ್ನಷ್ಟು ಭಯಾನಕವಾಗಿ ಹಾಗೂ ಅಪಾಯಕಾರಿ ಎನ್ನುವಂತೆ ಕಾಣುತ್ತಿದೆ. ಏಪ್ರಿಲ್ 23 ರ ರಾತ್ರಿ ವೆಡ್‌ನಸ್ ಟೀಸರ್ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿತ್ತು.
‘ನೀವು ಬಿಡುವು ಮಾಡಿಕೊಳ್ಳಿ, ಆಗಸ್ಟ್ 6ಕ್ಕೆ ತೆರೆ ಮೇಲೆ ಬರಲಿದೆ ವೆಡ್‌ನೆಸ್ ಡೇ ಸೀಸನ್ 2‘ ಎಂದು ಶೀರ್ಷಿಕೆ ಬರೆದುಕೊಂಡ ಟೀಸರ್ ಬಿಡುಗಡೆ ಮಾಡಿದೆ ವೆಬ್ ಸಿರೀಸ್ ತಂಡ.
ಮೊದಲೇ ಹೇಳಿದರೆ ಸೀಸನ್ 2, ಎರಡು ಭಾಗಗಳನ್ನು ಹೊಂದಿದ್ದು ಮೊದಲ ಭಾಗ ಆಗಸ್ಟ್ 6ಕ್ಕೆ ಬಿಡುಗಡೆಯಾದರೆ ಎರಡನೇ ಭಾಗ ಸೆಪ್ಟೆಂಬರ್ 3 ರಂದು ಬಿಡುಗಡೆಯಾಗುತ್ತಿದೆ. ಈ ಎರಡೂ ಕೂಡ ನೆಟ್‌ಫ್ಲಿಕ್ಸ್ ಒಟಿಟಿ ವೇದಿಕೆಯಲ್ಲೇ ಪ್ರಸಾರವಾಗಲಿದೆ.
ವೆಡ್‌ನೆಸ್ ವೆಬ್ ಸಿರೀಸ್ ಬಗ್ಗೆ
ವೆಡ್‌ನೆಸ್ ಒಂದು ಅಮೇರಿಕನ್ ಸೂಪರ್ ನ್ಯಾಚುರಲ್ ಹಾರರ್ ಕಾಮಿಡಿ ಸರಣಿ. ಇದು ಆಡಮ್ಸ್ ಪಾತ್ರದ ಸುತ್ತ ಸುತ್ತುವ ಸರಣಿಯಾಗಿದೆ. ಆ ಪಾತ್ರವನ್ನು ಜೆನ್ನಾ ಒರ್ಟೆಗಾ ನಿರ್ವಹಿಸಿದ್ದಾರೆ. ಆಡಮ್ಸ್‌ನಲ್ಲಿ ಕೆಲವು ಸೂಪರ್ ನ್ಯಾಚುರಲ್ ಶಕ್ತಿ ಇರುತ್ತದೆ. ಅವಳು ತನ್ನ ಸಹೋದರನಿಗೆ ತೊಂದರೆ ಕೊಡುವ ಪುಂಡ ಹುಡುಗರ ಮೇಲೆ ಸೂಪರ್ ನ್ಯಾಚರಲ್ ಶಕ್ತಿ ಉಪಯೋಗಿಸುತ್ತಾಳೆ.
ಇದು ಶಾಲಾ ಆಡಳಿತ ಮಂಡಳಿಗೆ ವಿಷಯ ತಿಳಿದಾಗ, ಅವರು ಅವಳನ್ನು ಶಾಲೆಯಿಂದ ಹೊರಹಾಕುತ್ತಾರೆ. ಅಲ್ಲಿಂದ ಅವಳು ವರ್ಮೊಂಟ್‌ನ ಜೆರಿಕೊದಲ್ಲಿರುವ ನೆವರ್‌ಮೋರ್ ಅಕಾಡೆಮಿಗೆ ಹೋಗುತ್ತಾಳೆ. ಅಲ್ಲಿಯೂ ಸಹ, ಅವಳ ನಡವಳಿಕೆಯು ಇತರ ವಿದ್ಯಾರ್ಥಿಗಳಿಗೆ ವಿಚಿತ್ರವಾಗಿ ತೋರುತ್ತದೆ. ಆದಾಗ್ಯೂ, ತನ್ನ ಶಕ್ತಿಗಳಿಂದ, ಅಲ್ಲಿ ನಡೆಯುವ ಕೊಲೆ ರಹಸ್ಯವನ್ನು ಅವಳು ಭೇದಿಸುತ್ತಾಳೆ. ಮೊದಲ ಸೀಸನ್‌ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಹಾಗಾಗಿ ಆಗಸ್ಟ್‌ನಲ್ಲಿ ಬರಲಿರುವ ವೆಡ್‌ನಸ್ ಡೇ ಎರಡನೇ ಸೀಸನ್‌ಗಾಗಿ ಅವರು ಕಾತರದಿಂದ ಕಾಯುತ್ತಿದ್ದಾರೆ.
ವಿಭಾಗ


