ಒಟಿಟಿಗೆ ಬಂದಿದೆ ಕನ್ನಡದ ಹಾರರ್ ಥ್ರಿಲ್ಲರ್‌ ಸಿನಿಮಾ ರಾಕ್ಷಸ; ಪ್ರಜ್ವಲ್ ದೇವರಾಜ್ ನಟನೆಯ ಚಿತ್ರವನ್ನು ಇಲ್ಲಿ ವೀಕ್ಷಿಸಿ
ಕನ್ನಡ ಸುದ್ದಿ  /  ಮನರಂಜನೆ  /  ಒಟಿಟಿಗೆ ಬಂದಿದೆ ಕನ್ನಡದ ಹಾರರ್ ಥ್ರಿಲ್ಲರ್‌ ಸಿನಿಮಾ ರಾಕ್ಷಸ; ಪ್ರಜ್ವಲ್ ದೇವರಾಜ್ ನಟನೆಯ ಚಿತ್ರವನ್ನು ಇಲ್ಲಿ ವೀಕ್ಷಿಸಿ

ಒಟಿಟಿಗೆ ಬಂದಿದೆ ಕನ್ನಡದ ಹಾರರ್ ಥ್ರಿಲ್ಲರ್‌ ಸಿನಿಮಾ ರಾಕ್ಷಸ; ಪ್ರಜ್ವಲ್ ದೇವರಾಜ್ ನಟನೆಯ ಚಿತ್ರವನ್ನು ಇಲ್ಲಿ ವೀಕ್ಷಿಸಿ

Rakshasa OTT Release: ಪ್ರಜ್ವಲ್‌ ದೇವರಾಜ್ ನಟನೆಯ, ಲೋಹಿತ್ ಎಚ್‌. ನಿರ್ದೇಶನದ ಹಾರರ್‌ ಸಿನಿಮಾ ರಾಕ್ಷಸ ಒಟಿಟಿಯಲ್ಲಿ ಪ್ರಸಾರ ಆರಂಭಿಸಿದೆ. ಈ ಸಿನಿಮಾವನ್ನು ಯಾವ ಒಟಿಟಿ ವೇದಿಕೆಯಲ್ಲಿ ನೋಡಬಹುದು ಎನ್ನುವ ವಿವರ ಇಲ್ಲಿದೆ.

ಒಟಿಟಿಗೆ ಬಂದಿದೆ ಕನ್ನಡದ ಹಾರರ್ ಥ್ರಿಲ್ಲರ್‌ ಸಿನಿಮಾ ರಾಕ್ಷಸ; ಪ್ರಜ್ವಲ್ ದೇವರಾಜ್ ನಟನೆಯ ಚಿತ್ರವನ್ನು ಇಲ್ಲಿ ವೀಕ್ಷಿಸಿ
ಒಟಿಟಿಗೆ ಬಂದಿದೆ ಕನ್ನಡದ ಹಾರರ್ ಥ್ರಿಲ್ಲರ್‌ ಸಿನಿಮಾ ರಾಕ್ಷಸ; ಪ್ರಜ್ವಲ್ ದೇವರಾಜ್ ನಟನೆಯ ಚಿತ್ರವನ್ನು ಇಲ್ಲಿ ವೀಕ್ಷಿಸಿ

Rakshasa OTT Release: ಸ್ಯಾಂಡಲ್‌ವುಡ್‌ನ ಡೈನಾಮಿಕ್‌ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಹಾರರ್ ಸಿನಿಮಾ ರಾಕ್ಷಸ ಒಟಿಟಿಯಲ್ಲಿ ಪ್ರಸಾರ ಆರಂಭಿಸಿದೆ. ನೀವು ಹಾರರ್ ಥ್ರಿಲ್ಲರ್ ಸಿನಿಮಾ ಪ್ರೇಮಿಯಾದ್ರೆ ಈ ವಾರಾಂತ್ಯದಲ್ಲಿ ಮಿಸ್ ಮಾಡದೇ ಈ ಸಿನಿಮಾ ನೋಡಿ. ಮಮ್ಮಿ ಸೇವ್ ಮಿ ನಿರ್ದೇಶಕ ಲೋಹಿತ್ ಎಚ್‌. ಈ ಸಿನಿಮಾಕ್ಕೂ ಆ್ಯಕ್ಷನ್ ಕಟ್ ಹೇಳಿದ್ದಾರೆ. ರಾಕ್ಷಸ ಸಿನಿಮಾ ಮಾರ್ಚ್ 7 ರಂದು ತೆರೆ ಕಂಡಿತ್ತು.

ರಾಕ್ಷಸ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಪ್ರಜ್ವಲ್ ದೇವರಾಜ್ ನಟನೆಗೆ ಶಹಭಾಸ್ ಎಂದಿರುವ ಪ್ರೇಕ್ಷಕ, ಚಿತ್ರದ ಹಾರರ್ ಎಲಿಮೆಂಟ್‌ಗಳನ್ನು ಮೆಚ್ಚಿರಲಿಲ್ಲ. ದೊಡ್ಡ ಪರದೆ ಮೇಲೆ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಇದೀಗ ಒಟಿಟಿ ಲೋಕವನ್ನು ಪ್ರವೇಶಿಸಿದ್ದಾನೆ ರಾಕ್ಷಸ.

ರಾಕ್ಷಸ ಸಿನಿಮಾವನ್ನು ಎಲ್ಲಿ ನೋಡಬಹುದು?

ಪ್ರಜ್ವಲ್ ದೇವರಾಜ್ ರಾಕ್ಷಸ ಸಿನಿಮಾ ಸನ್‌ ನೆಕ್ಸ್ಟ್‌ ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿದೆ. ಸನ್‌ ನೆಕ್ಸ್ಟ್‌ನಲ್ಲಿ ಈಗಾಗಲೇ ಪ್ರಜ್ವಲ್‌ ನಟನೆಯ ಜಂಟಲ್‌ಮ್ಯಾನ್ ಸೇರಿದಂತೆ ಹಲವು ಸಿನಿಮಾಗಳು ಸ್ಟ್ರೀಮ್ ಆಗುತ್ತಿವೆ.

ಪ್ರಜ್ವಲ್ ನಟನೆಯ ಮೊದಲ ಹಾರರ್ ಸಿನಿಮಾ

ರಾಕ್ಷಸ ಪ್ರಜ್ವಲ್ ದೇವರಾಜ್ ನಟನೆಯ ಮೊದಲ ಹಾರರ್ ಸಿನಿಮಾ. ಸಾಮಾನ್ಯ ಲವ್ ಸ್ಟೋರಿ, ಮನರಂಜನಾತ್ಮಕ ಚಿತ್ರಗಳಿಗಿಂತ ಮೊದಲ ಬಾರಿ ಒಂದು ಭಿನ್ನ ಪಾತ್ರಕ್ಕೆ ಜೀವ ತುಂಬಿದ ಪ್ರಜ್ವಲ್ ದೇವರಾಜ್ ಸೈ ಎನ್ನಿಸಿಕೊಂಡಿದ್ದಾರೆ. ಇವರ ಮುಂದಿನ ಕರಾವಳಿ ಚಿತ್ರ ಕೂಡ ವಿಭಿನ್ನ ಜಾನರ್‌ನ ಸಿನಿಮಾವಾಗಿದ್ದು, ಈ ಚಿತ್ರ ಇನ್ನಷ್ಟೇ ತೆರೆ ಕಾಣಬೇಕಿದೆ. ಇವರ ತಸ್ಸಮ ತದ್ಭವ ಸಿನಿಮಾ ಕೂಡ ವಿಭಿನ್ನ ಜಾನರ್‌ನ ಸಿನಿಮಾವಾಗಿದೆ. 

ರಾಕ್ಷಸ ಸಿನಿಮಾ ಹಿನ್ನೆಲೆ

ರಾಕ್ಷಸ ಸಿನಿಮಾದಲ್ಲಿ ಪ್ರಜ್ವಲ್ ಸಸ್ಪೆಂಡ್ ಆದ ಪೊಲೀಸ್ ಸತ್ಯನ ಪಾತ್ರವನ್ನು ನಿರ್ವಹಿಸಿದ್ದಾರೆ. ಕ್ರಿಮಿನಲ್ ಗ್ಯಾಂಗ್ ಮತ್ತು ಅವರ ಸಂಭಾವ್ಯ ಬಂಧನದ ತನಿಖೆಗೆ ಸಹಾಯ ಮಾಡಲು ಅವನ ಉನ್ನತ ಅಧಿಕಾರಿ ಅವನನ್ನು ಕರೆಯುತ್ತಾನೆ. ಅವನು ಆ ಗ್ಯಾಂಗ್ ಅನ್ನು ಯಶಸ್ವಿಯಾಗಿ ಹಿಡಿದು ಬಂಧಿಸಲು ಠಾಣೆಗೆ ತರುತ್ತಾನೆ. ಆದರೆ ನಂತರ ಅಂದುಕೊಂಡಂತೆ ಯಾವುದೂ ಆಗುವುದಿಲ್ಲ. ಇದು ಸತ್ಯನ ಬದುಕಿಗೆ ರೋಚಕ ತಿರುವನ್ನು ನೀಡುತ್ತದೆ. ಮುಂದೆ ಏನಾಗುತ್ತೆ ಅನ್ನೋದನ್ನು ತಿಳಿಯಲು ನೀವು ರಾಕ್ಷಸ ಸಿನಿಮಾವನ್ನೇ ನೋಡಬೇಕಿದೆ.

ರಾಕ್ಷಸ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್‌ಗೆ ಜೋಡಿಯಾಗಿ ಸೋನೆಲ್ ಮೊಂತೆರೊ ನಟಿಸಿದ್ದಾರೆ. ಏಪ್ರಿಲ್ 11 ರಿಂದ ರಾಕ್ಷಸ ಸನ್‌ ನೆಕ್ಸ್ಟ್‌ನಲ್ಲಿ ಪ್ರಸಾರ ಆರಂಭಿಸಿದೆ. ಈ ವಿಚಾರವನ್ನು ಸನ್‌ ನೆಕ್ಸ್ಟ್‌ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಪುಟದಲ್ಲಿ ಪೋಸ್ಟ್ ಹಾಕುವ ಮೂಲಕ ಖಚಿತ ಪಡಿಸಿದೆ.

ಪ್ರಜ್ವಲ್‌, ಸೋನೆಲ್ ಜೊತೆಗೆ ಗೌತಮ್‌, ವಿಹಾನ್ ಕೃಷ್ಣ, ವತ್ಸಲಾ ಮೋಹನ್‌, ಅರುಣ್ ರಾಥೋಡ್, ಶೋಭರಾಜ್‌, ಸೋಮಶೇಖರ್, ಶ್ರೀಧರ್‌ ಮೊದಲಾದವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಗುರು ಕಶ್ಯಪ್ ಎಚ್‌., ಲೋಹಿತ್ ವಿ. ಮತ್ತು ಶಶಿಕುಮಾರ್ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner