ಸೂಕ್ಷ್ಮದರ್ಶಿನಿ, ಬ್ರೇಕ್‌ ಔಟ್‌ ಸೇರಿದಂತೆ ಕಳೆದ ವಾರ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಿರುವ ಸಿನಿಮಾಗಳಲ್ಲಿ ಯಾವುದು ಬೆಸ್ಟ್‌?
ಕನ್ನಡ ಸುದ್ದಿ  /  ಮನರಂಜನೆ  /  ಸೂಕ್ಷ್ಮದರ್ಶಿನಿ, ಬ್ರೇಕ್‌ ಔಟ್‌ ಸೇರಿದಂತೆ ಕಳೆದ ವಾರ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಿರುವ ಸಿನಿಮಾಗಳಲ್ಲಿ ಯಾವುದು ಬೆಸ್ಟ್‌?

ಸೂಕ್ಷ್ಮದರ್ಶಿನಿ, ಬ್ರೇಕ್‌ ಔಟ್‌ ಸೇರಿದಂತೆ ಕಳೆದ ವಾರ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಿರುವ ಸಿನಿಮಾಗಳಲ್ಲಿ ಯಾವುದು ಬೆಸ್ಟ್‌?

OTT Update: ಕಳೆದ ಮೂರು ದಿನಗಳಲ್ಲಿ ವಿವಿಧ ಒಟಿಟಿಗಳಲ್ಲಿ ಅನೇಕ ಸಿನಿಮಾಗಳು ತೆರೆ ಕಂಡಿವೆ. ಅದರಲ್ಲಿ ಸೂಷ್ಮದರ್ಶಿನಿ, ಬಚ್ಚಲ ಮಲ್ಲಿ, ಸೀಕ್ರೇಟ್‌ ಸೇರಿದಂತೆ ಕೆಲವು ಸಿನಿಮಾಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಹಬ್ಬದ ರಜೆಗೆ ನೀವು ಒಟಿಟಿಯಲ್ಲಿ ನೋಡಬಹುದಾದ ಚಿತ್ರಗಳ ಬಗ್ಗೆ ಇಲ್ಲಿದೆ ಮಾಹಿತಿ.

ಕಳೆದ ಮೂರು ದಿನಗಳಲ್ಲಿ ಒಟಿಟಿಯಲ್ಲಿ ಬಿಡುಗಡೆ ಆದ ಅತ್ಯುತ್ತಮ ಸಿನಿಮಾಗಳು
ಕಳೆದ ಮೂರು ದಿನಗಳಲ್ಲಿ ಒಟಿಟಿಯಲ್ಲಿ ಬಿಡುಗಡೆ ಆದ ಅತ್ಯುತ್ತಮ ಸಿನಿಮಾಗಳು (PC: Twitter)

ದಿನ ಕಳೆದಂತೆ ಒಟಿಟಿಯಲ್ಲಿ ಕಂಟೆಂಟ್‌ಗಳು ಹೆಚ್ಚುತ್ತಿವೆ. ಕಳೆದ ವಾರ ಕೂಡಾ ಶುಕ್ರವಾರದಿಂದ ಭಾನುವಾರದವರೆಗೂ ಸಾಕಷ್ಟು ಹೊಸ ಸಿನಿಮಾಗಳು, ವೆಬ್‌ ಸರಣಿಗಳು ಸ್ಟ್ರೀಮಿಂಗ್‌ ಆರಂಭಿಸಿವೆ. ಕಳೆದ 3 ದಿನಗಳಲ್ಲಿ ಬಿಡುಗಡೆಯಾದ ಚಿತ್ರಗಳಲ್ಲಿ ಇಂಟ್ರೆಸ್ಟಿಂಗ್‌ ಆದ ವಿವಿಧ ಭಾಷೆಗಳ ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ.

ಸೂಷ್ಮದರ್ಶಿನಿ ಮಲಯಾಳಂ ಸಿನಿಮಾ

ಮಲಯಾಳಂ ಡಾರ್ಕ್ ಕಾಮಿಡಿ ಮಿಸ್ಟರಿ ಥ್ರಿಲ್ಲರ್ ಚಿತ್ರ ಸೂಕ್ಷದರ್ಶಿನಿ ಚಿತ್ರಮಂದಿರದಲ್ಲಿ ಉತ್ತಮ ಯಶಸ್ಸು ಕಂಡಿದೆ. ಈ ಸಿನಿಮಾ, ಜನವರಿ 11 ರಿಂದ ತೆಲುಗು, ಮಲಯಾಳಂ, ಕನ್ನಡ, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಐಎಂಡಿಬಿ 8.1 ರೇಟಿಂಗ್‌ ಈ ಚಿತ್ರಕ್ಕೆ ಇದೆ.

ಮಿಸ್ ಯೂ ತೆಲುಗು ಸಿನಿಮಾ

ಮಿಸ್ ಯೂ, ರೊಮ್ಯಾಂಟಿಕ್ ಕಾಮಿಡಿ ಎಂಟರ್‌ಟೈನರ್ ಚಿತ್ರ. ಇದರಲ್ಲಿ ಸಿದ್ಧಾರ್ಥ್ ಮತ್ತು ಆಶಿಕಾ ರಂಗನಾಥ್ ಮೊದಲ ಬಾರಿಗೆ ಜೋಡಿಯಾಗಿದ್ದಾರೆ. ಅಮೆಜಾನ್ ಪ್ರೈಮ್‌ನಲ್ಲಿ ಜನವರಿ 10 ರಿಂದ ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಸ್ಟ್ರೀಮ್ ಆಗುತ್ತಿದೆ.

ಬಚ್ಚಲ ಮಲ್ಲಿ ತೆಲುಗು ಸಿನಿಮಾ

ಅಲ್ಲರಿ ನರೇಶ್ ಮತ್ತೊಮ್ಮೆ ಗಂಭೀರ ಪಾತ್ರದಲ್ಲಿ ನಟಿಸಿರುವ ಬಚ್ಚಲ ಮಲ್ಲಿ 3 ಒಟಿಟಿ ವೇದಿಕೆಗಳಲ್ಲಿ ಸ್ಟ್ರೀಮ್ ಆಗುತ್ತಿದೆ. ಜನವರಿ 10 ರಿಂದ ಅಮೆಜಾನ್ ಪ್ರೈಮ್, ಸನ್‌ಎನ್‌ಎಕ್ಸ್ ಮತ್ತು ಇಟಿವಿ ವಿನ್ ಒಟಿಟಿಗಳಲ್ಲಿ ಬಿಡುಗಡೆಯಾದ ಈ ಚಿತ್ರವೂ ಮಿಶ್ರ ಟಾಕ್ ಪಡೆದುಕೊಂಡಿದೆ.

ಹೈಡ್‌ ಅಂಡ್‌ ಸೀಕ್ ತೆಲುಗು ಸಿನಿಮಾ

ಇದು ಇನ್ವೆಸ್ಟಿಗೇಷನ್‌ ಕ್ರೈಂ ಥ್ರಿಲ್ಲರ್ ಚಲನಚಿತ್ರವಾಗಿದ್ದು, ವಿಶ್ವಂತ್, ಶಿಲ್ಪಾ ಮಂಜುನಾಥ್, ರಿಯಾ ಸಚಿದೇವ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ. ಜನವರಿ 10 ರಂದು ಆಹಾ ಒಟಿಟಿಯಲ್ಲಿ ಈ ಸಿನಿಮಾ ಸ್ಟ್ರೀಮಿಂಗ್‌ ಆರಂಭಿಸಿದೆ. ಈ ಚಿತ್ರ ಐಎಂಡಿಬಿಯಿಂದ 9.1 ರೇಟಿಂಗ್ ಪಡೆದುಕೊಂಡಿದೆ.

ಸೀಕ್ರೇಟ್‌ ಮಲಯಾಳಂ ಸಿನಿಮಾ

ಸೀಕ್ರೆಟ್ ಟ್ವಿಸ್ಟ್‌ಗಳನ್ನು ಹೊಂದಿರುವ ಮಲಯಾಳಂ ಕ್ರೈಮ್ ಥ್ರಿಲ್ಲರ್ ಸ್ರೀಕ್ರೇಟ್‌ ಸಿನಿಮಾ ಐಎಂಡಿಬಿಯಿಂದ 8.4 ರೇಟಿಂಗ್ ಪಡೆದಿದೆ. ಈ ಸಿನಿಮಾ ಜನವರಿ 10 ರಂದು ಸನ್ ಎನ್‌ಎಕ್ಸ್‌ ಮತ್ತು ಮನೋರಮಾ ಮ್ಯಾಕ್ಸ್ ಒಟಿಟಿಗಳಲ್ಲಿ ಸ್ಟ್ರೀಮ್ ಆಗುತ್ತಿದೆ.

ಪ್ರೇಮಿಂಚೊದ್ದು ತೆಲುಗು ಸಿನಿಮಾ

ಪ್ರೇಮಿಂಚೊದ್ದು ತೆಲುಗು ಲವ್‌ ಥ್ರಿಲ್ಲರ್‌ ಸಿನಿಮಾ. ಜನವರಿ 10 ರಿಂದ ಅಮೆಜಾನ್‌ ಪ್ರೈಂ ಹಾಗೂ ಮತ್ತು Bcineet ನಲ್ಲಿ ಸ್ಟ್ರೀಮ್ ಆಗುತ್ತಿದೆ.

ವಿ2 ಡಬಲ್ ಮರ್ಡರ್ ಮಲಯಾಳಂ ಸಿನಿಮಾ

ಒಟಿಟಿ ಮಾತ್ರವಲ್ಲದೆ ಸಿನಿಪ್ರಿಯರು ಯೂಟ್ಯೂಬ್‌ನಲ್ಲಿ ಕೂಡಾ ಮಲಯಾಳಂ ಸಿನಿಮಾಗಳನ್ನು ಹುಡುಕುತ್ತಿದ್ದಾರೆ. ವಿ2 ಡಬಲ್‌ ಮರ್ಡರ್‌ ಹೆಸರಿನಲ್ಲೇ ಈ ಸಿನಿಮಾ ತೆಲುಗು ಭಾಷೆಯಲ್ಲಿ ಲಭ್ಯವಿದೆ.

ಬ್ರೇಕ್‌ ಔಟ್‌ ತೆಲುಗು ಸಿನಿಮಾ

ಖ್ಯಾತ ಕಾಮಿಡಿ ನಟ ಬ್ರಹ್ಮಾನಂದಂ ಪುತ್ರ ರಾಜ್‌ ಗೌತಮ್ ಅಭಿನಯದ ಸರ್ವೈವಲ್ ಥ್ರಿಲ್ಲರ್ ಸಿನಿಮಾ ಬ್ರೇಕ್‌ ಔಟ್‌. ಈ ಚಿತ್ರ ಜನವರಿ 9 ರಿಂದ ಈಟಿವಿ ವಿನ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.

ಹಬ್ಬದ ರಜೆಯಲ್ಲಿ ಈ ಸಿನಿಮಾಗಳನ್ನು ಎಂಜಾಯ್‌ ಮಾಡಬಹುದಾಗಿದೆ.

Whats_app_banner