OTT Updates: ತೆಲುಗು ಒಟಿಟಿಯಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಲವ್ ಮಾಕ್ಟೇಲ್ 2; ಸ್ಟ್ರೀಮಿಂಗ್ ದಿನಾಂಕ ಫಿಕ್ಸ್
Love Mocktail 2: ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾ ಲವ್ ಮಾಕ್ಟೇಲ್ 2 ತೆಲುಗು ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ರೊಮ್ಯಾಂಟಿಕ್ ಲವ್ ಸ್ಟೋರಿಯಾಗಿ ತಯಾರಾದ ಸಿನಿಮಾ ಅಕ್ಟೋಬರ್ 31 ರಂದು ಈಟಿವಿ ವಿನ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
Love Mocktail 2: ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ದಂಪತಿ ಕರಿಯರ್‌ನಲ್ಲಿ ಲವ್ ಮಾಕ್ಟೇಲ್ ಮುಖ್ಯವಾದ ಸಿನಿಮಾ. ಈ ಸಿನಿಮಾವನ್ನು ಕೃಷ್ಣ ಟಾಕೀಸ್ ಬ್ಯಾನರ್ ಅಡಿ ಸ್ವತಃ ಕೃಷ್ಣ ನಿರ್ಮಿಸಿ, ನಿರ್ದೇಶನ ಮಾಡಿದ್ದರು. ಮಿಲನಾ ಕೂಡಾ ಕೃಷ್ಣಗೆ ಸಾಥ್ ನೀಡಿದ್ದರು. ಈ ಸಿನಿಮಾ ನಂತರ ಕೃಷ್ಣ, ಮಿಲನಾ ಇಮೇಜ್ ಸಂಪೂರ್ಣ ಬದಲಾಯ್ತು. ಈ ಸಿನಿಮಾ ನಂತರ ಲವ್ ಮಾಕ್ಟೇಲ್ 2 ರಿಲೀಸ್ ಆಯ್ತು.
ಈಟಿವಿ ವಿನ್‌ನಲ್ಲಿ ಸ್ಟ್ರೀಮ್ ಆಗಲಿರುವ ಸಿನಿಮಾ
2 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾದ ಲವ್ ಮಾಕ್ಟೇಲ್ ಸಿನಿಮಾ ಸುಮಾರು 21 ಕೋಟಿ ರೂ. ಲಾಭ ಮಾಡಿತು. ಈ ಸಿನಿಮಾ ಇತ್ತೀಚೆಗೆ ಅದೇ ಹೆಸರಿನಲ್ಲಿ ತೆಲುಗು ಭಾಷೆಗೆ ಡಬ್ ಆಗಿ ಬಿಡುಗಡೆ ಆಯ್ತು. ಕನ್ನಡ ಒರಿಜಿನಲ್ ಸಿನಿಮಾಗೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿತ್ತು. ಆದರೆ ತೆಲುಗು ವರ್ಷನ್‌ಗೆ ಹೇಳಿಕೊಳ್ಳುವಂತ ರೆಸ್ಪಾನ್ಸ್ ಸಿಗಲಿಲ್ಲ. ಈಗ ಸಿನಿಮಾ ತೆಲುಗು ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಜೂನ್ ತಿಂಗಳಲ್ಲಿ ಈ ಸಿನಿಮಾ ಚಿತ್ರಮಂದಿರದಲ್ಲಿ ರಿಲೀಸ್ ಆಗಿತ್ತು. ಸುಮಾರು ನಾಲ್ಕು ತಿಂಗಳ ನಂತರ ಲವ್ ಮಾಕ್ಟೇಲ್ 2 ತೆಲುಗು ಒಟಿಟಿಯಲ್ಲಿ ಸ್ಟ್ರೀಮ್ ಆಗಲು ಹೊರಟಿದೆ. ಅಕ್ಟೋಬರ್ 31 ರಿಂದ ಈ ಟಿವಿ ವಿನ್‌ನಲ್ಲಿ ಈ ಒಟಿಟಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ. ಲವ್ ಮಾಕ್ಟೇಲ್ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಅಮೃತಾ ಅಯ್ಯಂಗಾರ್, ರಚೇಲ್ ಡೇವಿಡ್ ಹಾಗೂ ಇನ್ನಿತರರು ಸಟಿಸಿದ್ದಾರೆ. ಈ ಚಿತ್ರಕ್ಕೆ ನಕುಲ್ ಅಭಯಂಕರ್ ಸಂಗೀತ ನೀಡಿದ್ದಾರೆ. ತೆಲಗು ವೀಕ್ಷಕರು ಒಟಿಟಿಯಲ್ಲಿ ಸಿನಿಮಾಗೆ ಯಾವ ರೀತಿ ಪ್ರೀತಿ ತೋರಲಿದ್ದಾರೆ ಕಾದು ನೋಡಬೇಕು.
ಆದಿತ್ಯ-ನಿಧಿಮಾ ಲವ್ ಸ್ಟೋರಿ
ಲವ್ ಮಾಕ್ಟೇಲ್ ಭಾಗ 1ರಲ್ಲಿ ಆದಿತ್ಯ, ಇಷ್ಟಪಟ್ಟು ಮದುವೆ ಆಗಿದ್ದ ನಿಧಿಮಾ ಕ್ಯಾನ್ಸರ್‌ಗೆ ತುತ್ತಾಗಿ ಸಾವನ್ನಪ್ಪುತ್ತಾಳೆ. ಸತ್ತುಹೋದ ಹೆಂಡತಿಯನ್ನೇ ನೆನಪಿಸಿಕೊಂಡು ಆದಿತ್ಯ ಸುತ್ತುತ್ತಾನೆ. ಹೆಂಡತಿ ನಿಧಿಮಾ ಎಲ್ಲೂ ಹೋಗಿಲ್ಲ, ನನ್ನೊಂದಿಗೇ ಇದ್ದಾಳೆ ಎಂಬ ಭ್ರಮೆಯಲ್ಲಿ ಆದಿತ್ಯ ಮಾತನಾಡುತ್ತಿರುತ್ತಾನೆ. ಆದಿತ್ಯನಿಗೆ ಒಂದು ಪತ್ರ ಬರುತ್ತದೆ. ಇದರ ಮೂಲಕ ಆದಿತ್ಯ ಜೀವನದಲ್ಲಿ ಜಕಾನಾ ಹಾಗೂ ಸಿಹಿ ಎಂಬ ಇಬ್ಬರು ಯುವತಿಯರು ಬರುತ್ತಾರೆ. ಇವರಲ್ಲಿ ಆದಿ ಯಾರನ್ನು ಪ್ರೀತಿಸುತ್ತಾನೆ? ಮೊದಲ ಹೆಂಡತಿ ನಿಧಿಯನ್ನು ಮರೆಯುತ್ತಾನಾ? ಆದಿತ್ಯ ಜೀವನದಲ್ಲಿ ಯಾವ ರೀತಿ ಬದಲಾವಣೆಗಳಾಗುತ್ತವೆ ಅನ್ನೋದು ಸಿನಿಮಾ ಕಥೆ.
ಲವ್ ಮಾಕ್ಟೇಲ್ ಭಾಗ 1 ತೆಲುಗಿನಲ್ಲಿ ರೀಮೇಕ್ ಆಗಿತ್ತು. ಈ ಸಿನಿಮಾದಲ್ಲಿ ತಮನ್ನಾ ಭಾಟಿಯಾ ಹಾಗೂ ಸತ್ಯದೇವ್ ನಟಿಸಿದ್ದರು. ಈ ಸಿನಿಮಾಗೆ ಗುರ್ತುಂದಾ ಶೀತಕಾಲಂ ಎಂದು ಹೆಸರಿಡಲಾಗಿತ್ತು. ಲವ್ ಮಾಕ್ಟೇಲ್ 2, ಮೊದಲ ಭಾಗದಷ್ಟು ಸದ್ದು ಮಾಡದ ಕಾರಣ ತೆಲುಗಿನಲ್ಲಿ ರೀಮೇಕ್ ಆಗಲಿಲ್ಲ.