ಅಮೆಜಾನ್ ಪ್ರೈಮ್‌ನಲ್ಲಿರುವ ಟಾಪ್ 5 ತಮಿಳು ಥ್ರಿಲ್ಲರ್‌ ವೆಬ್‌ ಸಿರೀಸ್‌ಗಳು; ಕನ್ನಡದಲ್ಲೂ ಸ್ಟ್ರೀಮ್ ಆಗ್ತಿವೆ
ಕನ್ನಡ ಸುದ್ದಿ  /  ಮನರಂಜನೆ  /  ಅಮೆಜಾನ್ ಪ್ರೈಮ್‌ನಲ್ಲಿರುವ ಟಾಪ್ 5 ತಮಿಳು ಥ್ರಿಲ್ಲರ್‌ ವೆಬ್‌ ಸಿರೀಸ್‌ಗಳು; ಕನ್ನಡದಲ್ಲೂ ಸ್ಟ್ರೀಮ್ ಆಗ್ತಿವೆ

ಅಮೆಜಾನ್ ಪ್ರೈಮ್‌ನಲ್ಲಿರುವ ಟಾಪ್ 5 ತಮಿಳು ಥ್ರಿಲ್ಲರ್‌ ವೆಬ್‌ ಸಿರೀಸ್‌ಗಳು; ಕನ್ನಡದಲ್ಲೂ ಸ್ಟ್ರೀಮ್ ಆಗ್ತಿವೆ

ಕ್ಷಣ ಕ್ಷಣಕ್ಕೂ ರೋಮಾಂಚನ ನೀಡುವ, ಸಖತ್ ಥ್ರಿಲ್ಲಿಂಗ್ ಆಗಿರುವ ವೆಬ್ ಸರಣಿಗಳನ್ನು ನೋಡಬೇಕು ಅಂತಿದ್ದೀರಾ, ಅಮೆಜಾನ್ ಪ್ರೈಮ್‌ನಲ್ಲಿದೆ 5 ತಮಿಳು ಥ್ರಿಲ್ಲರ್ ವೆಬ್‌ ಸಿರೀಸ್‌ಗಳು. ಕನ್ನಡದಲ್ಲೂ ಸ್ಟ್ರೀಮ್ ಆಗುತ್ತಿವೆ.

ಅಮೆಜಾನ್ ಪ್ರೈಮ್‌ನಲ್ಲಿರುವ ಟಾಪ್ 5 ತಮಿಳು ಥ್ರಿಲ್ಲರ್‌ ವೆಬ್‌ ಸಿರೀಸ್‌ಗಳು; ಕನ್ನಡದಲ್ಲೂ ಸ್ಟ್ರೀಮ್ ಆಗ್ತಿವೆ
ಅಮೆಜಾನ್ ಪ್ರೈಮ್‌ನಲ್ಲಿರುವ ಟಾಪ್ 5 ತಮಿಳು ಥ್ರಿಲ್ಲರ್‌ ವೆಬ್‌ ಸಿರೀಸ್‌ಗಳು; ಕನ್ನಡದಲ್ಲೂ ಸ್ಟ್ರೀಮ್ ಆಗ್ತಿವೆ

ಕನ್ನಡದಲ್ಲಿ ಅಯ್ಯನ ಮನೆ ಎಂಬ ಮೊದಲ ವೆಬ್‌ ಸಿರೀಸ್ ಬಿಡುಗಡೆಯಾಗಿ ಜನ ಮೆಚ್ಚುಗೆ ಪಡೆಯುತ್ತಿದೆ. ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಈಗಾಗಲೇ ಸಾಕಷ್ಟು ವೆಬ್‌ ಸಿರೀಸ್‌ಗಳು ಬಿಡುಗಡೆಯಾಗಿ ವಿವಿಧ ಒಟಿಟಿ ವೇದಿಕೆಗಳಲ್ಲಿ ಸ್ಟ್ರೀಮ್ ಆಗುತ್ತಿವೆ. ತಮಿಳಿನ ಕೆಲವು ಥ್ರಿಲ್ಲರ್ ವೆಬ್‌ ಸರಣಿಗಳು ಅಮೆಜಾನ್ ಪ್ರೈಮ್‌ನಲ್ಲಿ ಟ್ರೆಂಡ್‌ನಲ್ಲಿವೆ. ಸುಡಾಲ್‌ ಸೇರಿದಂತೆ ಇನ್ನೂ ಕೆಲವು ವೆಬ್‌ ಸರಣಿಗಳು ಸೂಪರ್‌ ಹಿಟ್ ಆಗಿವೆ. ನಿಮಗೂ ಥ್ರಿಲ್ಲರ್ ವೆಬ್‌ ಸರಣಿ ನೋಡುವ ಆಸೆ ಇದ್ದರೆ ಅಮೆಜಾನ್ ಪ್ರೈಮ್‌ನಲ್ಲಿರುವ ಈ 5 ಟಾಪ್ ವೆಬ್ ಸಿರೀಸ್‌ಗಳನ್ನು ನೋಡಲು ಮರೆಯಬೇಡಿ.

ಸುಡಾಲ್: ದಿ ವೋರ್ಟೆಕ್ಸ್ ಸೀಸನ್ 1,2

ತಮಿಳು ಕ್ರೈಮ್ ಥ್ರಿಲ್ಲರ್ ವೆಬ್ ಸರಣಿ ಸುಡಾಲ್: ದಿ ವೋರ್ಟೆಕ್ಸ್ ಅಮೆಜಾನ್ ಪ್ರೈಮ್ ವಿಡಿಯೊ ಒಟಿಟಿಯಲ್ಲಿ ಬಿಡುಗಡೆಯಾಗಿ ಸಾಕಷ್ಟು ಯಶಸ್ಸು ಕಂಡಿದೆ. ಐಶ್ವರ್ಯಾ ರಾಜೇಶ್ ಮತ್ತು ಕಾಥಿರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸರಣಿಯ ಮೊದಲ ಸೀಸನ್ 2022 ರಲ್ಲಿ ಬಿಡುಗಡೆಯಾಯಿತು ಜನ ಮೆಚ್ಚುಗೆ ಪಡೆಯಿತು. ಈ ಸರಣಿಯು ಕೊಲೆ ರಹಸ್ಯಗಳ ಸುತ್ತ ಸುತ್ತುವ ರೊಮಾಂಚಕ ಕಥಾ ಹಿನ್ನೆಲೆಯನ್ನು ಹೊಂದಿದೆ. ಮೊದಲ ಸೀಸನ್ ದೊಡ್ಡ ಹಿಟ್ ಆದ ಹಿನ್ನೆಲೆಯಲ್ಲಿ ಸುಡಾಲ್ ಎರಡನೇ ಸೀಸನ್ ಕೂಡ ಈ ವರ್ಷದ ಫೆಬ್ರವರಿ 28 ಬಿಡುಗಡೆಯಾಯಿತು. ಇದು ಕೂಡ ಯಶಸ್ವಿಯಾಯಿತು. ಸುಡಾಲ್ ವೆಬ್ ಸರಣಿಯ ಎರಡೂ ಸೀಸನ್‌ಗಳು ತಮಿಳು ಜೊತೆಗೆ ತೆಲುಗು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗುತ್ತಿವೆ.

ಇನ್ಸ್‌ಪೆಕ್ಟರ್ ರಿಷಿ

ನವೀನ್ ಚಂದ್ರ ನಟಿಸಿದ ತಮಿಳು ಹಾರರ್ ಕ್ರೈಮ್ ಥ್ರಿಲ್ಲರ್ ಸರಣಿಯಾದ ಇನ್ಸ್‌ಪೆಕ್ಟರ್ ರಿಷಿ, ಮಾರ್ಚ್ 2024ರಲ್ಲಿ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಬಿಡುಗಡೆಯಾಗಿತ್ತು. ಈ ಸರಣಿಯು ಕಾಡಿನಲ್ಲಿ ನಡೆಯುವ ಕೊಲೆಗಳ ಸುತ್ತಲಿನ ರಹಸ್ಯಗಳು, ನಿಗೂಢತೆಗಳು ಮತ್ತು ಭಯಾನಕ ಅಂಶಗಳೊಂದಿಗೆ ಹಿಡಿತ ಮತ್ತು ಸಸ್ಪೆನ್ಸ್‌ನಿಂದ ಕೂಡಿದೆ. ಈ ಸರಣಿಯನ್ನು ಜೆ.ಎಸ್. ನಂದಿನಿ ನಿರ್ದೇಶಿಸಿದ್ದಾರೆ. ಸುನೈನಾ ಮತ್ತು ಕನ್ನ ರವಿ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ಸ್‌ಪೆಕ್ಟರ್ ರಿಷಿ ಸರಣಿಯು ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ತಮಿಳು ಮತ್ತು ತೆಲುಗು, ಹಿಂದಿ, ಮಲಯಾಳಂ ಮತ್ತು ಕನ್ನಡ ಡಬ್ಬಿಂಗ್ ಆವೃತ್ತಿಗಳಲ್ಲಿ ಲಭ್ಯವಿದೆ. ಈ ಸರಣಿಯು ಸಾಕಷ್ಟು ಮಂದಿ ವೀಕ್ಷಿಸಿದ್ದಾರೆ.

ವದಂತಿ: ದಿ ಫೇಬಲ್ ಆಫ್ ವೆಲೋನಿ

ತಮಿಳಿನ ಸಸ್ಪೆನ್ಸ್ ಕ್ರೈಮ್‌ ಥ್ರಿಲ್ಲರ್ ‘ವದಂತಿ: ದಿ ಫೇಬಲ್ ಆಫ್ ವೆಲೋನಿ‘ ವೆಬ್ ಸರಣಿಯು ಡಿಸೆಂಬರ್ 2022ರಲ್ಲಿ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಬಿಡುಗಡೆಯಾಗಿ ಸಾಕಷ್ಟು ಹಿಟ್ ಕಂಡಿತು. ಈ ಸರಣಿಯಲ್ಲಿ ಎಸ್.ಜೆ. ಸೂರ್ಯ ಮತ್ತು ಸಂಜನಾ ಕೃಷ್ಣಮೂರ್ತಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಸರಣಿಯು ಯುವತಿಯ ಕೊಲೆ ಮತ್ತು ಪ್ರಕರಣದ ತನಿಖೆಯ ಸುತ್ತ ಸುತ್ತುತ್ತದೆ. ಈ ಸರಣಿಯನ್ನು ಆಂಡ್ರ್ಯೂ ಲೂಯಿಸ್ ನಿರ್ದೇಶಿಸಿದ್ದಾರೆ. ವದಂತಿ ಸರಣಿಯು ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ ಸ್ಟ್ರೀಮ್ ಆಗುತ್ತಿದೆ.

ಸ್ನೇಕ್ಸ್ ಅಂಡ್ ಲ್ಯಾಡರ್ಸ್

2024ರ ಅಕ್ಟೋಬರ್‌ನಲ್ಲಿ ಸ್ನೇಕ್ಸ್ ಅಂಡ್ ಲ್ಯಾಡರ್ಸ್ ವೆಬ್ ಸರಣಿಯು ಅಮೆಜಾನ್ ಪ್ರೈಮ್ ವಿಡಿಯೊ ಒಟಿಟಿಗೆ ಪ್ರವೇಶ ಮಾಡಿತು. ಈ ಕ್ರೈಮ್ ಥ್ರಿಲ್ಲರ್ ಸರಣಿಯಲ್ಲಿ ಪ್ರವೀಣ್ ಚಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಮತ್ತು ಅಶೋಕ್ ವೀರಪ್ಪನ್, ಭರತ್ ಮುರಳೀಧರನ್ ಮತ್ತು ಕಮಲಾ ನಿರ್ದೇಶಿಸಿದ್ದಾರೆ. ಕಾಡಿಗೆ ಹೋಗಿ ಪುರಾತನ ಡಾಲರ್ ಅನ್ನು ಕಂಡುಕೊಳ್ಳುವ ಮಕ್ಕಳು, ಅದನ್ನು ಹುಡುಕಲು ಪ್ರಯತ್ನಿಸುವ ಗ್ಯಾಂಗ್ ಮತ್ತು ಪೊಲೀಸ್ ತನಿಖೆಯ ಕಥೆಯನ್ನು ಈ ಸರಣಿ ಹೊಂದಿದೆ. ಸ್ನೇಕ್ಸ್ ಅಂಡ್ ಲ್ಯಾಡರ್ಸ್ ಸರಣಿಯನ್ನು ತಮಿಳಿನಲ್ಲಿ ನಿರ್ಮಿಸಲಾಗಿದ್ದು ತೆಲುಗು, ಹಿಂದಿ, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಡಬ್ಬಿಂಗ್ ಮಾಡಲಾಗಿದೆ.

ವೆಲ್ಲಾ ರಾಜಾ

ವೆಲ್ಲಾ ರಾಜ ವೆಬ್ ಸರಣಿಯು 2018 ರಲ್ಲಿ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಬಿಡುಗಡೆಯಾಯಿತು. ಈ ಥ್ರಿಲ್ಲರ್ ಸರಣಿಯಲ್ಲಿ ಬಾಬಿ ಸಿಹಾ, ಪಾರ್ವತಿ ನಾಯರ್ ಮತ್ತು ಕಾಳಿ ವೆಂಕಟ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಸರಣಿಯನ್ನು ಗುಹಾನ್ ಸೆನ್ನಿಯಪ್ಪನ್ ನಿರ್ದೇಶಿಸಿದ್ದಾರೆ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.