Pushpa 2 OTT: ಪುಷ್ಪ 2 ಸಿನಿಮಾ ಜ 30ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುವುದೇ? ಅಲ್ಲು ಅರ್ಜುನ್ ಚಿತ್ರದ ಒಟಿಟಿ ಅಪ್‌ಡೇಟ್
Pushpa 2 OTT release: ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ, ಸುಕುಮಾರ್ ನಿರ್ದೇಶನದ ಪುಷ್ಪ 2 ಸಿನಿಮಾವು ಜನವರಿ ತಿಂಗಳ ಕೊನೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಈ ಕುರಿತು ಚಿತ್ರತಂಡದ ಕಡೆಯಿಂದ ಇನ್ನೂ ಅಧಿಕೃತ ವಿವರ ಲಭಿಸಿಲ್ಲ.

Pushpa 2 OTT release Date: ಜನವರಿ 30 ಅಥವಾ ಜನವರಿ 31ರಂದು ಪುಷ್ಪ 2 ಸಿನಿಮಾವು ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ, ಸುಕುಮಾರ್ ನಿರ್ದೇಶನದ ಪುಷ್ಪ 2 ಸಿನಿಮಾವು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಜನವರಿ 17ರಂದು ಚಿತ್ರತಂಡವು ಪುಷ್ಪ 2 ಸಿನಿಮಾದ ರಿಲೋಡೇಡ್ ವರ್ಷನ್ (20 ನಿಮಿಷ ಹೆಚ್ಚುವರಿ ಫೂಟೇಜ್) ಬಿಡುಗಡೆ ಮಾಡಿತ್ತು.
ಡಿಸೆಂಬರ್ ತಿಂಗಳಲ್ಲಿ ಚಿತ್ರತಂಡವು ಪುಷ್ಪ 2 ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುವ ಕುರಿತು ಅಪ್‌ಡೇಟ್ ನೀಡಿದ್ದರು. ಚಿತ್ರಮಂದಿರದಲ್ಲಿ ಬಿಡುಗಡೆಯಾದ 56 ದಿನಗಳ ಬಳಿಕ ಒಟಿಟಿಯಲ್ಲಿ ಬಿಡುಗಡೆ ಮಾಡುವ ಸೂಚನೆ ನೀಡಿದ್ದರು. ಈ ಸಿನಿಮಾವು ಜನವರಿ 30 ಅಥವಾ ಜನವರಿ 31ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಕೆಲವು ವರದಿಗಳು ತಿಳಿಸಿವೆ.
ನೆಟ್‌ಫ್ಲಿಕ್ಸ್‌ನಲ್ಲಿ ಪುಷ್ಪ 2 ಸಿನಿಮಾದ ವಿಸ್ತರಿತ ಭಾಗವು ಸ್ಟ್ರೀಮಿಂಗ್ ಆಗುವುದೇ ಎನ್ನುವ ಕುತೂಹಲದಲ್ಲಿ ವೀಕ್ಷಕರಿದ್ದಾರೆ. ಈ ಚಿತ್ರದ ಮೂಲ ಆವೃತ್ತಿಗೆ ಹೋಲಿಸಿದರೆ ವಿಸ್ತರಿತ ಆವೃತ್ತಿಯಲ್ಲಿ ಹಲವು ಉತ್ತರ ಸಿಗದ ಪ್ರಶ್ನೆಗಳಿಗೆ ಉತ್ತರ ದೊರಕಿದೆ ಎಂದು ಸಿನಿಮಾ ನೋಡಿದವರು ಹೇಳಿದ್ದಾರೆ. ಈ ತಿಂಗಳ ಅಂತ್ಯದಲ್ಲಿ ಸಿನಿಮಾವನ್ನು ಆನ್‌ಲೈನ್‌ನಲ್ಲಿ ಸ್ಟ್ರೀಮಿಂಗ್ ಮಾಡುವ ಕುರಿತು ಚಿತ್ರತಂಡ ನೀಡುವ ಪ್ರಕಟಣೆಗಾಗಿ ಒಟಿಟಿ ವೀಕ್ಷಕರು ಕಾಯುತ್ತಿದ್ದಾರೆ.
ಡಿಸೆಂಬರ್ 20ರಂದು ಪುಷ್ಪ 2 ಸಿನಿಮಾದ ಒಟಿಟಿ ಬಿಡುಗಡೆ ಕುರಿತು ಚಿತ್ರದ ತಯಾರಕರಾ ಮೈತ್ರಿ ಮೂವಿ ಮೇಕರ್ಸ್ ಹೀಗ ಟ್ವೀಟ್ ಮಾಡಿತ್ತು. "ಪುಷ್ಪ 2 ದಿ ರೂಲ್ ಸಿನಿಮಾದ ಒಟಿಟಿ ಬಿಡುಗಡೆ ಕುರಿತು ವದಂತಿಗಳು ಹರಿದಾಡುತ್ತಿವೆ. ಈ ಬೃಹತ್ ಸಿನಿಮಾವನ್ನು ಹಿರಿಪರದೆ ಮೇಲೆ ನೋಡಿ ಆನಂದಿಸಿ. ಈ ಸಿನಿಮಾ ಜಗತ್ತಿನಾದ್ಯಂತ ಇರುವ ಥಿಯೇಟರ್‌ಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ" ಎಂದು ಮೈತ್ರಿ ಮೂವಿ ಮೇಕರ್ಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿತ್ತು.
ಪುಷ್ಪ 2 ಸಿನಿಮಾದ ಅವಧಿ ಎಷ್ಟು?
ಇತ್ತೀಚೆಗೆ ಪುಷ್ಪ 2 ಸಿನಿಮಾದ ವಿಸ್ತರಿತ ವರ್ಷನ್ ಅನ್ನು ಬಿಡುಗಡೆ ಮಾಡಲಾಗಿದೆ. ‘ಪುಷ್ಪ 2’ ಚಿತ್ರವು 3 ತಾಸು 20 ನಿಮಿಷ ಮತ್ತು 38 ಸಕೆಂಡ್‍ಗಳ (200.38 ನಿಮಿಷ) ಅವಧಿಯದ್ದಾಗಿತ್ತು. 2021ರಲ್ಲಿ ಬಿಡುಗಡೆಯಾದ ‘ಪುಷ್ಪ 1’ ಚಿತ್ರವು 179 ನಿಮಿಷಗಳ ಅವಧಿಯದ್ದಾಗಿತ್ತು. ಅದಕ್ಕೆ ಹೋಲಿಸಿದರೆ, ಎರಡನೆಯ ಭಾಗವು 21 ನಿಮಿಷಗಳಷ್ಟು ದೊಡ್ಡದಾಗಿತ್ತು. ಈಗ ‘ಪುಷ್ಪ 2’ ಚಿತ್ರಕ್ಕೆ 20 ನಿಮಿಷಗಳಷ್ಟು ಹೊಸದಾಗಿ ಸೇರ್ಪಡೆಯಾಗುವದರಿಂದ, ಮೂರು ತಾಸು 40 ನಿಮಿಷಗಳಷ್ಟಾಗುತ್ತದೆ. ಅಂದರೆ 220 ನಿಮಿಷಗಳಷ್ಟಾಗುತ್ತದೆ. ಇದೊಂದು ಸುದೀರ್ಘ ಸಿನಿಮಾ ಎನ್ನಲು ಅಡ್ಡಿಯಿಲ್ಲ.
‘ಪುಷ್ಪ – ದಿ ರೂಲ್’ ಸಿನಿಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಧನಂಜಯ್, ಫಹಾದ್ ಫಾಸಿಲ್, ಸುನೀಲ್, ಅನುಸೂಯ ಭಾರದ್ವಾಜ್ ಮುಂತಾದವರು ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಶ್ರೀಲೀಲಾ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಈ ಚಿತ್ರಕ್ಕೆ ಸುಕುಮಾರ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
