ಕನ್ನಡ ಸುದ್ದಿ  /  Entertainment  /  Ott Updates Telugu Movie Kushi Ott Released Today Vijay Devarakonda Samantha Movie Romatic Comedy Movies Netflix Pcp

Kushi OTT: ಒಟಿಟಿಗೆ ಬಂತು ಖುಷಿ, ಥಿಯೇಟರ್‌ನಿಂದ ಒಂದೇ ತಿಂಗಳಲ್ಲಿ ಒಟಿಟಿಗೆ ಬಂದ ವಿಜಯ್‌ ದೇವರಕೊಂಡ ಸಮಂತಾ ಸಿನಿಮಾ

Kushi OTT Updates: ವಿಜಯ್ ದೇವರಕೊಂಡ ಮತ್ತು ಸಮಂತಾ ಅಭಿನಯದ ಖುಷಿ ಚಿತ್ರ ಇಂದು ಅಂದರೆ ಅಕ್ಟೋಬರ್‌ 1ರಂದು ಬಿಡುಗಡೆಯಾಗಿದೆ. ತೆಲುಗು ಸಿನಿಮಾ ಪ್ರಿಯರು ಈ ಚಿತ್ರವನ್ನು ಒಟಿಟಿಯಲ್ಲಿ ನೋಡಬಹುದು. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.

Kushi OTT: ಒಟಿಟಿಗೆ ಬಂತು ಖುಷಿ, ಥಿಯೇಟರ್‌ನಿಂದ ಒಂದೇ ತಿಂಗಳಲ್ಲಿ ಒಟಿಟಿಗೆ ಸಮಂತಾ ಸಿನಿಮಾ
Kushi OTT: ಒಟಿಟಿಗೆ ಬಂತು ಖುಷಿ, ಥಿಯೇಟರ್‌ನಿಂದ ಒಂದೇ ತಿಂಗಳಲ್ಲಿ ಒಟಿಟಿಗೆ ಸಮಂತಾ ಸಿನಿಮಾ

Kushi OTT Details: ಒಟಿಟಿಯಲ್ಲಿ ಒಂದೊಳ್ಳೆ ಲವ್‌ ಸ್ಟೋರಿ ನೋಡಬೇಕೆಂದು ಬಯಸುವವರಿಗೆ ತೆಲುಗಿನಲ್ಲಿ ಹೊಸ ಚಿತ್ರವೊಂದು ಬಿಡುಗಡೆಯಾಗಿದೆ. ನಾಯಕ ವಿಜಯ್ ದೇವರಕೊಂಡ ಮತ್ತು ಸ್ಟಾರ್ ನಾಯಕಿ ಸಮಂತಾ ಅಭಿನಯದ ಖುಷಿ ಚಿತ್ರವು ಅಕ್ಟೋಬರ್‌ 1 ಅಂದರೆ ಇಂದಿನಿಂದ ವೀಕ್ಷಣೆಗೆ ಲಭ್ಯ. ಫೀಲ್‌ ಗುಡ್‌ ಚಿತ್ರಗಳನ್ನು ಬಿಡುಗಡೆ ಮಾಡಿ ಜನಪ್ರಿಯತೆ ಪಡೆದಿರುವಂತಹ ನಿರ್ದೇಶಕ ಶಿವ ನಿರ್ವಾಣ ಅವರು ಖುಷಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರಕ್ಕೆ ಹೆಶಬ್‌ ಅಬ್ದುಲ್‌ ವಹಾಬ್‌ ಸಂಗೀತ ಸಂಯೋಜನೆ ಇದೆ.

ಟ್ರೆಂಡಿಂಗ್​ ಸುದ್ದಿ

ಆದರೆ, ಖುಷಿ ಚಿತ್ರವು ಥಿಯೇಟರ್‌ನಲ್ಲಿ ಬಿಡುಗಡೆಯಾದಗ ಅಂದುಕೊಂಡಷ್ಟು ಯಶಸ್ಸು ಪಡೆಯಲಿಲ್ಲ. ಹೀಗಾಗಿ, ಸಿನಿಮಾ ಬಿಡುಗಡೆಯಾದ ಒಂದೇ ತಿಂಗಳಲ್ಲಿ ಒಟಿಟಿಗೆ ಆಗಮಿಸಿದೆ. ಹೀಗಿದ್ದರೂ ಸಾಕಷ್ಟು ಜನರು ಖುಷಿ ಒಟಿಟಿ ರಿಲೀಸ್‌ಗೆ ಕಾಯುತ್ತಿದ್ದರು. ಕೊನೆಗೂ ಖುಷಿ ಒಟಿಟಿಯಲ್ಲಿ ಬಿಡುಗಡೆಯಾಗಿದ್ದು, ಇಂದು ಭಾನುವಾರ ರಜೆ ಆಗಿರುವುದರಿಂದ ಬಿಡುವು ಇರುವವರು ಟಿವಿ ಮುಂದೆ ಕುಳಿತುಕೊಳ್ಳಬಹುದು.

ಕನ್ನಡದಲ್ಲೂ ಖುಷಿ ನೋಡಿ

ವಿಜಯ ದೇವರಕೊಂಡ ಮತ್ತು ಸಮಂತಾ ಅಭಿನಯದ ಖುಷಿ ಚಿತ್ರವನ್ನು ಭಾರತದ ವಿವಿಧ ಭಾಷೆಗಳಲ್ಲಿ ವೀಕ್ಷಿಸಬಹುದು. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ನೋಡಬಹುದಾಗಿದೆ. ಈಗ ಬಹುತೇಕ ಸಿನಿಮಾಗಳು ಬಹುಭಾಷೆಗಳಲ್ಲಿ ಲಭ್ಯ ಇರುವುದರಿಂದ ಯಾವುದೇ ಭಾಷೆಯ ಚಿತ್ರವನ್ನು ತಮ್ಮದೇ ಭಾಷೆಯಲ್ಲಿ ನೋಡುವ ಅವಕಾಶವು ಸಿನಿಪ್ರಿಯರಿಗೆ ದೊರಕಿದೆ.

ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ

ಅಂದಹಾಗೆ, ಖುಷಿ ಚಿತ್ರವು ಯಾವ ಒಟಿಟಿಯಲ್ಲಿ ಬಿಡುಗಡೆಯಾಗಿದೆ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಖುಷಿ ಚಿತ್ರವು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ನೆಟ್‌ಫ್ಲಿಕ್ಸ್‌ ಚಂದಾದಾರಿಕೆ ಹೊಂದಿರುವವರು ಮಾತ್ರ ಈ ಸಿನಿಮಾ ನೋಡಬಹುದು.

ಥಿಯೇಟರ್‌ನಲ್ಲಿ ಮಿಶ್ರ ಪ್ರತಿಕ್ರಿಯೆ

ಖುಷಿ ಚಿತ್ರವು ಸೆಪ್ಟೆಂಬರ್‌ 1ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ಈ ಸಿನಿಮಾ ಬಹುನಿರೀಕ್ಷೆ ಹುಟ್ಟುಹಾಕಿತ್ತು. ಬಿಡುಗಡೆಯಾದ ಒಂದೆರಡು ದಿನದಲ್ಲಿ ನಿರೀಕ್ಷೆ ಠುಸ್‌ ಆಗಿತ್ತು. ಮೊದಲ ಎರಡು ದಿನ ಕಲೆಕ್ಷನ್‌ ಚೆನ್ನಾಗಿತ್ತಾದರೂ ಬಳಿಕ ಇಳಿಮುಖವಾಯಿತು. ಈ ಸಿನಿಮಾ ಸುಮಾರು 15 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ ಎಂದು ಅಂದಾಜಿಸಲಾಗಿದೆ.

ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಎರ್ನೇನಿ ಮತ್ತು ರವಿಶಂಕರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಚಿನ್ ಖೇಡ್ಕರ್, ಮುರಳಿ ಶರ್ಮಾ, ಜಯರಾಮ್, ರೋಹಿಣಿ ಮತ್ತು ವೆನ್ನೆಲ ಕಿಶೋರ್ ಖುಷಿ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಖುಷಿ ಸಿನಿಮಾದ ಕಥೆ

ಬಿಎಸ್‌ಎನ್‌ಎಲ್ ಉದ್ಯೋಗಿ ವಿಪ್ಲವ್‌ (ವಿಜಯ್ ದೇವರಕೊಂಡ) ಕಾಶ್ಮೀರದಲ್ಲಿ ಆರಾಧ್ಯ (ಸಮಂತಾ)ಳನ್ನು ಪ್ರೀತಿಸುತ್ತಾನೆ. ಅವಳೂ ಅವನನ್ನು ಪ್ರೀತಿಸುತ್ತಾಳೆ. ಎರಡು ಕುಟುಂಬಗಳ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿವೆ. ಇದರಿಂದಾಗಿ ವಿಪ್ಲವ್‌ ಮತ್ತು ಆರಾಧ್ಯ ಮದುವೆಗೆ ಸಹಜವಾಗಿಯೇ ಕುಟುಂಬದವರು ಸಮ್ಮತಿಸುವುದಿಲ್ಲ. ಇಬ್ಬರೂ ಮದುವೆಯಾಗಿ ಹೊರಗೆ ಹೋಗಿ ಸುಖವಾಗಿರಲು ಬಯಸುತ್ತಾರೆ. ಆದರೆ ಮದುವೆಯಾದ ಕೆಲವೇ ವರ್ಷಗಳಲ್ಲಿ ವಿಪ್ಲವ್‌ ಮತ್ತು ಆರಾಧ್ಯ ನಡುವೆ ವಿರಸ ಮೂಡುತ್ತದೆ. ಇಬ್ಬರು ಬೇರೆಯಾಗುತ್ತಾರೆ. ಬಳಿಕ ಭಾವನಾತ್ಮಕ ತಾಕಲಾಟ ನಡೆಯುತ್ತದೆ. ಮುಂದೆ ಏನಾಗುತ್ತದೆ ಎಂದು ತಿಳಿಯಲು ಖುಷಿ ಚಿತ್ರವನ್ನು ನೋಡಬಹುದು.

ಮನರಂಜನೆ, ಬಿಗ್‌ಬಾಸ್ ಕನ್ನಡ 10 ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, ಹಿಂದೂಸ್ತಾನ್ ಟೈಮ್ಸ್ ಕನ್ನಡ ,ನೋಡಿ.