ಶ್ವೇತಾ ಬಸು ನಟನೆಯ ಜಿಂದಗಿನಾಮ ವೆಬ್ ಸರಣಿ ಒಟಿಟಿಯಲ್ಲಿ ಸ್ಟ್ರೀಮಿಂಗ್; ಮಾನಸಿಕ ತೊಳಲಾಟದ ಕಥೆಯಿರುವ ಅಂಥಾಲಜಿ ಸೀರೀಸ್ ಇದು
ಕೊತ್ತ ಬಂಗಾರು ಲೋಕಂ ಚಿತ್ರದ ಮೂಲಕ ತೆಲುಗು ಸಿನಿಪ್ರಿಯರಿಗೆ ಪರಿಚಯವಾಗಿದ್ದ ಶ್ವೇತಾ ಬಸು ಪ್ರಸಾದ್ ಕೆಲವು ವರ್ಷಗಳಿಂದ ನಟನಟಯಿಂದ ದೂರ ಉಳಿದಿದ್ದರು. ಇದೀಗ ಮತ್ತೆ ಆಕೆ ನಟನೆಯಲ್ಲಿ ಬ್ಯುಸಿ ಇದ್ದಾರೆ. ಶ್ವೇತಾ ನಟನೆಯ ಜಿಂದಗಿನಾಮ ವೆಬ್ ಸರಣಿ ಸೋನಿ ಲಿವ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಪ್ರತಿದಿನ ಒಂದಲ್ಲಾ ಒಂದು ಹೊಸ ಕಂಟೆಂಟ್‌ಗಳು ಸ್ಟ್ರೀಮಿಂಗ್ ಆಗುತ್ತಲೇ ಇದೆ. ಥ್ರಿಲ್ಲರ್, ಹಾರರ್, ಲವ್ ಸ್ಟೋರಿ ಸೇರಿದಂತೆ ವಿವಿಧ ರೀತಿಯ ಅನೇಕ ವೆಬ್ ಸೀರೀಸ್, ಸಿನಿಮಾಗಳು ಒಟಿಟಿಗೆ ಎಂಟ್ರಿ ಕೊಡುತ್ತಿವೆ. ಬುಧವಾರ ಕೂಡಾ ಹೊಸ ವೆಬ್ ಸೀರೀಸ್ ಸ್ಟ್ರೀಮಿಂಗ್ ಆರಂಭಿಸಿದೆ.
6 ಕಥೆಗಳ ಸಂಗ್ರಹ ಹೊಂದಿರುವ ಆಂಥಾಲಜಿ ವೆಬ್ ಸೀರೀಸ್
ಸೋನಿ ಲಿವ್ ಒಟಿಟಿಯಲ್ಲಿ ಜಿಂದಗಿ ನಮೋ ಎಂಬ ಹೊಸ ವೆಬ್ ಸೀರೀಸ್ ಸ್ಟ್ರೀಮಿಂಗ್ ಆರಂಭಿಸಿದೆ. ಇದಕ್ಕೂ ಮುನ್ನ ಅಕ್ಟೋಬರ್ 10 ರಂದು ವೆಬ್ ಸೀರೀಸ್ ಪ್ರಸಾರವಾಗಲಿದೆ ಎಂದು ಸೋನಿ ಲಿವ್ ಹೇಳಿಕೊಂಡಿತ್ತು. ಆದರೆ ಅನೌನ್ಸ್ ಮಾಡಿದ ಒಂದು ದಿನ ಮುಂಚಿತವಾಗೇ ಸ್ಟ್ರೀಮಿಂಗ್ ಆರಂಭಿಸಿದೆ. ಇಂಗ್ಲೀಷ್ ಸಬ್ ಟೈಟಲ್ ಜೊತೆ ಹಿಂದಿಯಲ್ಲಿ ಈ ಸೀರೀಸ್ ಪ್ರಸಾರವಾಗುತ್ತಿದೆ. ಸೋನಿ ಲಿವ್ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ವೆಬ್ ಸೀರೀಸ್ ಸ್ಟ್ರೀಮಿಂಗ್ ಬಗ್ಗೆ ಬರೆದುಕೊಂಡಿದೆ. ಕಷ್ಟಗಳನ್ನು ಹೋಗಲಾಡಿಸಲು ಮೊದಲ ಹೆಜ್ಜೆಯಾಗಿ ಅದನ್ನು ಸ್ವೀಕರಿಸಬೇಕು. ಆಸೆ, ಬಲಕ್ಕೆ ಸಂಬಂಧಿಸಿದ 6 ಕಥೆಗಳ ಸಂಗ್ರಹವನ್ನು ಜಿಂದಗಿ ನಮೋ ವೆಬ್ ಸೀರೀಸ್‌ನೊಂದಿಗೆ ತಂದಿದ್ದೇವೆ ಎಂದು ಸೋನಿ ಹೇಳಿಕೊಂಡಿದೆ.
ಕೊತ್ತ ಬಂಗಾರು ಲೋಕಂ ನಟಿ ಶ್ವೇತಾ ಬಸು ಪ್ರಸಾದ್ ನಟನೆಯ ಸೀರೀಸ್
ಜಿಂದಗಿ ನಮೋ ವೆಬ್ ಸೀರೀಸ್‌ಗೆ ಆದಿತ್ಯ, ಸುಕೃತಿ ತ್ಯಾಗಿ, ಡ್ಯಾನಿ ಮಾಮಿಕ, ರಾಶಿ ಶಾಂಡಿಲ್ಯ, ಸಹನ್ , ಮಿತಕ್ಷರ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಒಬ್ಬೊಬ್ಬರು ಒಂದೊಂದು ಕಥೆಯನ್ನು ನಿರ್ದೇಶನ ಮಾಡಿದ್ದಾರೆ. ಈ ಸೀರಿಸ್‌ನಲ್ಲಿ ತೆಲುಗಿನ ಕೊತ್ತ ಬಂಗಾರುಲೋಕಂ ನಾಯಕಿ ಶ್ವೇತಾ ಬಸು, ಪಂಕಜ್ ಕೋಲಿ, ಶ್ರೇಯಸ್ ತಲ್ಪಡೇ, ಅಂಜಲಿ ಪಾಟೀಲ್, ಸುಮಿತ್ ವ್ಯಾಸ್, ಇವಾಂಕಾ ದಾಸ್, ಮಹ್ಮದ್ ಸಮಾದ್, ಶಿವಾನಿ ರಘುವಂಶಿ ಹಾಗೂ ಇನ್ನಿತರರು ನಟಿಸಿದ್ದಾರೆ. ಸುಮಾರು 14 ವರ್ಷಗಳ ಹಿಂದೆ ತೆರೆ ಕಂಡಿದ್ದ ಕೊತ್ತ ಬಂಗಾರು ಲೋಕಂ ಸಿನಿಮಾ ಮೂಲಕ ಶ್ವೇತಾ ಬಸು ಒಳ್ಳೆ ಹೆಸರು ಸಂಪಾದಿಸಿದ್ದರು. ಅದರೆ ನಂತರ ಅವರು ಸಿನಿಮಾಗಳಿಂದ ದೂರ ಉಳಿದಿದ್ದರು. ಇದೀಗ ಮತ್ತೆ ಶ್ವೇತಾ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಈಗ ಆಕೆ ನೋಡಲು ಕೂಡಾ ಬಹಳ ಬದಲಾಗಿದ್ದಾರೆ.
ಮಾನಸಿಕ ಆರೋಗ್ಯ ಸಮಸ್ಯೆ ಕಥೆ ಹೊಂದಿರುವ ವೆಬ್ ಸರಣಿ
ಜಿಂದಗಿ ನಮೋ ವೆಬ್ ಸರಣಿಯಲ್ಲಿ ಸ್ವಾಗತಂ, ಕೆಡ್ಜ್, ಭನ್ವರ್, ದಿ ಡೈಲಿ ಪಪ್ಪೆಟ್ ಶೋ, ವನ್ ವನ್ , ಪರ್ಪುಲ್ ದುನಿಯಾ ಎಂಬ 6 ಕಥೆಗಳು ಇವೆ. ಮೊದಲ ಸೀಸನ್‌ನಲ್ಲಿ 6 ಎಪಿಸೋಡ್‌ಗಳಿವೆ. ಈ ಅಂಥಾಲಜಿ ಸೀರೀಸ್ ಯಾವ ರೀತಿ ಜನರ ಮೆಚ್ಚುಗೆ ಪಡೆಯಲಿದೆ ಕಾದು ನೋಡಬೇಕು. ಜಿಂದಗಿ ನಮೋ ವೆಬ್ ಸರಣಿಯನ್ನು ಅವ್ಲಾಜ್ ಎಂಟರ್‌ಟೈನ್ಮೆಂಟ್, ಯಾಂಟಿಮ್ಯಾಟರ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದ್ದಾರೆ. ಈ 6 ಕಥೆಗಳಲ್ಲಿ ನಟಿಸಿರುವ ಪ್ರಮುಖ ಪಾತ್ರಗಳು ಆರೋಗ್ಯ ಸಮಸ್ಯೆಯಿಂದ ಹೋರಾಡುವವರು. ನಿಜ ಜೀವನದಲ್ಲಿ ಎಲ್ಲರೂ ಎದುರಿಸುವ ಕೆಲವು ಸಮಸ್ಯೆಗಳನ್ನು ಮೇಕರ್ಸ್ ಈ ಸೀರೀಸ್‌ನಲ್ಲಿ ತೋರಿಸಿದ್ದಾರೆ. ಸರಣಿಯಲ್ಲಿ ಹೆಚ್ಚು ಭಾಗ ಬಹಳ ಎಮೋಷನಲ್ ಆಗಿದೆ.
ಟಾಪ್ ಟ್ರೆಂಡಿಂಗ್‌ನಲ್ಲಿರುವ ಮನ್ವತ್ ಮರ್ಡರ್ಸ್
ಸೋನಿ ಲಿವ್‌ನಲ್ಲಿ ಸದ್ಯಕ್ಕೆ ಮನ್ವತ್ ಮರ್ಡರ್ಸ್ ಎಂಬ ವೆಬ್ ಸೀರೀಸ್ ಟಾಪ್ ಟೆಂಡಿಂಗ್‌ನಲ್ಲಿದೆ. ಒಳ್ಳೆ ವ್ಯೂವ್ಸ್ ಪಡೆದು ಸ್ಟ್ರೀಮ್ ಆಗುತ್ತಿದೆ. ಕಳೆದ ವಾರವೇ ಸೋನಿ ಲಿವ್‌ನಲ್ಲಿ ಈ ಸರಣಿ ಸ್ಟ್ರೀಮಿಂಗ್ ಆಗುತ್ತಿದೆ. ಅಷುತೋಷ್ ಗೋವಾರ್ಕರ್, ಥಹಾನ್‌ಕರ್, ಸೋನಾಲಿ ಕುಲಕರ್ಣಿ, ಉಮೇಶ್ ಜಗಪತ್, ಶಾರ್ದೂಲ್ ಷರಫ್ ಈ ಸೀರೀಸ್‌ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಮರಾಠಿ ಕ್ರೈಂ ಥ್ರಿಲ್ಲರ್ ಸೀರೀಸ್‌ಗೆ ಆಶಿಷ್ ಅವಿನಾಷ್ ಬಂಡೆ ನಿರ್ದೇಶನ ಮಾಡಿದ್ದಾರೆ. ಮರಾಠಿ ಜೊತೆಗೆ ಹಿಂದಿ, ತೆಲುಗಿನಲ್ಲಿ ಕೂಡಾ ಸ್ಟ್ರೀಮಿಂಗ್ ಆಗುತ್ತಿದೆ.
ವಿಭಾಗ