ಸೋಷಿಯಲ್‌ ಮೀಡಿಯಾದಲ್ಲಿ ನಟಿಯ ಖಾಸಗಿ ಕ್ಷಣಗಳ ವಿಡಿಯೋ, ಫೋಟೋಗಳು ಲೀಕ್‌! ಯಾರು ಈ ಪ್ರಗ್ಯಾ ನಗ್ರಾ?
ಕನ್ನಡ ಸುದ್ದಿ  /  ಮನರಂಜನೆ  /  ಸೋಷಿಯಲ್‌ ಮೀಡಿಯಾದಲ್ಲಿ ನಟಿಯ ಖಾಸಗಿ ಕ್ಷಣಗಳ ವಿಡಿಯೋ, ಫೋಟೋಗಳು ಲೀಕ್‌! ಯಾರು ಈ ಪ್ರಗ್ಯಾ ನಗ್ರಾ?

ಸೋಷಿಯಲ್‌ ಮೀಡಿಯಾದಲ್ಲಿ ನಟಿಯ ಖಾಸಗಿ ಕ್ಷಣಗಳ ವಿಡಿಯೋ, ಫೋಟೋಗಳು ಲೀಕ್‌! ಯಾರು ಈ ಪ್ರಗ್ಯಾ ನಗ್ರಾ?

Pragya Nagra: ಬಹುಭಾಷಾ ನಟಿ ಪ್ರಗ್ಯಾ ನಗ್ರಾ ಅವರದ್ದು ಎನ್ನಲಾದ ಖಾಸಗಿ ಕ್ಷಣಗಳ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಪಂಜಾಬ್‌ ಮೂಲದ ಪ್ರಗ್ಯಾ, ಕಳೆದ ಎರಡು ವರ್ಷಗಳಿಂದ ಸೌತ್‌ ಸಿನಿಮಾರಂಗದಲ್ಲಿ ಬೀಡು ಬಿಟ್ಟಿದ್ದಾರೆ. ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ.

ನಟಿಯ ಖಾಸಗಿ ಕ್ಷಣಗಳ ವಿಡಿಯೋ, ಫೋಟೋಗಳು ಲೀಕ್‌!
ನಟಿಯ ಖಾಸಗಿ ಕ್ಷಣಗಳ ವಿಡಿಯೋ, ಫೋಟೋಗಳು ಲೀಕ್‌! (twitter)

Pragya Nagra: ಇತ್ತೀಚಿನ ದಿನಗಳಲ್ಲಿ ಸೋಷಿಯಲ್‌ ಮೀಡಿಯಾದ ಬಳಕೆ ಹೆಚ್ಚಾಗುತ್ತಿದ್ದಂತೆ, ಅದರಿಂದ ಅನುಕೂಲವಾದಷ್ಟೇ ಪ್ರಮಾಣದಲ್ಲಿ ಸಮಸ್ಯೆಗಳೂ ಎದುರಾಗುತ್ತಿವೆ. ಅದರಲ್ಲೂ ಎಐ ತಂತ್ರಜ್ಞಾನದ ಬಳಕೆ ವ್ಯಾಪಕವಾಗುತ್ತಿದ್ದಂತೆ, ಫೋಟೋಗಳ ಮಾರ್ಫಿಂಗ್‌, ವಿಡಿಯೋಗಳ ಡೀಫ್‌ ಫೇಕ್‌ ಮಾಡಿ ಹರಿಬಿಡುವ ಕೆಟ್ಟ ಕೆಲಸ ಎಗ್ಗಿಲ್ಲದೆ ನಡೆಯುತ್ತಿದೆ. ಈ ನಡುವೆಯೇ ಮಾಲಿವುಡ್‌ನ ಮಲ್ಲು ಬೆಡಗಿ ಪ್ರಗ್ಯಾ ನಗ್ರಾ ಅವರದ್ದು ಎನ್ನಲಾದ ವಿಡಿಯೋ ಲೀಕ್‌ ಆಗಿದೆ!

ಮಲಯಾಳಂ ಸಿನಿಮಾಗಳ ಜತೆಗೆ ತೆಲುಗಿನಲ್ಲಿಯೂ ಖ್ಯಾತಿ ಪಡೆದ ಪ್ರಗ್ಯಾ ನಗ್ರಾ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಸೆನ್ಸೆಷನ್‌ ಸೃಷ್ಟಿಸಿದ್ದಾರೆ. ವ್ಯಕ್ತಿ ಜತೆಗಿನ ಇಂಟಿಮೇಟ್‌ ದೃಶ್ಯಗಳ ಕೆಲವು ಲೀಕ್ಡ್‌ ಎಂಎಂಎಸ್‌ ವಿಡಿಯೋ ಕ್ಲಿಪ್‌ನ ಸ್ಟ್ರೀನ್‌ಶಾಟ್‌ಗಳು ಹರಿದಾಡುತ್ತಿವೆ. ಇವು ಪ್ರಗ್ಯಾ ಅವರದ್ದೇ ವಿಡಿಯೋ ಕ್ಲಿಪ್‌ಗಳು ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ. ವಿಡಿಯೋ ಕ್ಲಿಪ್‌ಗಳಲ್ಲಿ ಮುಖ ಕಾಣದ ಫೋಟೋಗಳಿವೆ. ಟ್ವಿಟರ್‌ನಲ್ಲೂ #PragyaNagra ಹೆಸರಿನ ಜತೆಗೆ ಆ ಫೋಟೋ ಮತ್ತು ವಿಡಿಯೋ ಕ್ಲಿಪ್‌ಗಳು ವೈರಲ್‌ ಪಟ್ಟ ಪಡೆದುಕೊಂಡು ಟ್ರೆಂಡ್‌ ಆಗುತ್ತಿವೆ. ಆದರೆ, ಈ ಫೋಟೋ ಮತ್ತು ವಿಡಿಯೋಗಳ ಬಗ್ಗೆ ಈ ವರೆಗೂ ನಟಿ ಪ್ರಗ್ಯಾ ತುಟಿ ಬಿಚ್ಚಿಲ್ಲ.

ಯಾರು ಈ ಪ್ರಗ್ಯಾ ನಗ್ರಾ?

ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ 1.1 ಮಿಲಿಯನ್‌ (11 ಲಕ್ಷ) ಫಾಲೋವರ್ಸ್‌ ಹೊಂದಿರುವ ಪ್ರಗ್ಯಾ ನಾಗ್ರಾ, ತಮ್ಮ ಬೋಲ್ಡ್‌ ಫೋಟೋಗಳ ಮೂಲಕವೇ ಕಿಚ್ಚು ಹಚ್ಚುತ್ತಿರುತ್ತಾರೆ. ಮೂಲ ಪಂಜಾಬಿಯಾದರೂ, ಸೌತ್‌ನ ಸಿನಿಮಾಗಳಲ್ಲಿಯೇ ಹೆಚ್ಚು ಶೈನ್‌ ಆಗುತ್ತಿದ್ದಾರೆ. ಮಲಯಾಳಂ ಜತೆಗೆ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ನಟಿಯಾಗಿ ಪ್ರಗ್ಯಾ ಗುರುತಿಸಿಕೊಂಡಿದ್ದಾರೆ.

ಸೌತ್‌ ಸಿನಿಮಾಗಳಲ್ಲಿ ನಟನೆ

2022 ರಲ್ಲಿ ತಮಿಳಿನ ‘ವರಲಾರು ಮುಕ್ಕಿಯಂ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ಪ್ರಗ್ಯಾ, 2023 ರಲ್ಲಿ ಮಲಯಾಳಂ ಚಿತ್ರ ‘ನಾಧಿಕಲಿಲ್ ಸುಂದರಿ ಯಮುನಾ’ದಲ್ಲಿಯೂ ನಟಿಸಿದರು. ತಮಿಳು ಎನ್ 4 ಚಿತ್ರದಲ್ಲಿ ಸ್ವಾತಿ ಹೆಸರಿನ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ನಡುವೆ ಇತ್ತೀಚೆಗಷ್ಟೇ ತೆಲುಗಿನಲ್ಲಿ ಲಗ್ಗಂ ಸಿನಿಮಾ ನವೆಂಬರ್ 22 ರಂದು ಆಹಾ ಒಟಿಟಿಯಲ್ಲಿ ನೇರವಾಗಿ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ನಟ ಸಾಯಿ ರೋನಕ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಪಂಜಾಬಿ ಮೂಲದ ನಟಿ

ಕೆಲ ಮೂಲಗಳ ಪ್ರಕಾರ, ಪ್ರಗ್ಯಾ ಮೂಲತಃ ಹರಿಯಾಣದ ಅಂಬಾಲಾದವರು. ಪಂಜಾಬಿ ಕುಟುಂಬದಲ್ಲಿ ಜನಿಸಿರುವ ಪ್ರಗ್ಯಾ ಮಾಡೆಲ್ ಆಗಿ ವೃತ್ತಿಜೀವನ ಆರಂಭಿಸಿದ್ದವರು. ಮಾಡೆಲಿಂಗ್‌ ಜತೆಗೆ ದೆಹಲಿಯಲ್ಲಿಯೇ ಶಾಲಾ ಮತ್ತು ಕಾಲೇಜು ಶಿಕ್ಷಣ ಪೂರ್ಣಗೊಳಿಸಿದ್ದಾರೆ. ಪ್ರಗ್ಯಾ ನಾಗ್ರಾ ಅವರ ತಂದೆ ಭಾರತೀಯ ಸೇನೆಯಲ್ಲಿ ಸೇವೆಯಲ್ಲಿದ್ದವರು. ಚೆನ್ನೈನಲ್ಲಿಯೂ ಕೆಲ ಕಾಲ ಸೇವೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯೂ ಪ್ರಗ್ಯಾಗೆ ಸೌತ್‌ ಸಿನಿಮಾರಂಗದ ಕಡೆ ಒಲವು ಹೆಚ್ಚಲು ಕಾರಣವಾಗಿದೆ.

Whats_app_banner