Sharath Padmanabh Marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಪಾರು' ಖ್ಯಾತಿಯ ಆದಿ ಅಲಿಯಾಸ್‌ ಶರತ್‌ ಪದ್ಮನಾಭ್‌
ಕನ್ನಡ ಸುದ್ದಿ  /  ಮನರಂಜನೆ  /   Sharath Padmanabh Marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಪಾರು' ಖ್ಯಾತಿಯ ಆದಿ ಅಲಿಯಾಸ್‌ ಶರತ್‌ ಪದ್ಮನಾಭ್‌

Sharath Padmanabh Marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಪಾರು' ಖ್ಯಾತಿಯ ಆದಿ ಅಲಿಯಾಸ್‌ ಶರತ್‌ ಪದ್ಮನಾಭ್‌

ಶರತ್‌ ಸಹ ಕಲಾವಿದರು, ಹಾಗೂ ಸ್ನೇಹಿತರು ಶರತ್‌ ಮದುವೆ ಆರತಕ್ಷೆಯ ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ನವದಂಪತಿಗೆ ಮದುವೆಯ ಶುಭ ಕೋರುತ್ತಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶರತ್‌ ಪದ್ಮನಾಭ್‌
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶರತ್‌ ಪದ್ಮನಾಭ್‌

ಕೆಲವು ದಿನಗಳ ಹಿಂದಷ್ಟೇ ಎಂಗೇಜ್‌ಮೆಂಟ್‌ ಆಗಿದ್ದ 'ಪಾರು' ಧಾರಾವಾಹಿ ಖ್ಯಾತಿಯ ಶರತ್‌ ಪದ್ಮನಾಭ್‌ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಿರಿಯ ನಟಿ ವಿನಯಾ ಪ್ರಸಾದ್‌, ನಾಗೇಶ್‌ ಯಾದವ್‌, ಮೋಕ್ಷಿತಾ, ಪವಿತ್ರಾ, ಸಿದ್ದು ಮೂಲಿಮನಿ, ಸಿತಾರಾ, ನಾಗೇಂದ್ರ ಷಾ ಸೇರಿದಂತೆ ಪಾರು ಧಾರಾವಾಹಿಯ ಕಲಾವಿದರು ಶರತ್‌ ಮದುವೆಯಲ್ಲಿ ಭಾಗವಹಿಸಿ ನವ ದಂಪತಿಗೆ ಶುಭ ಕೋರಿದ್ದಾರೆ.

ಶರತ್‌ ಪದ್ಮನಾಭ್‌, ತಮ್ಮ ಮದುವೆಗೆ ಕೆಲವರನ್ನು ಮಾತ್ರ ಆಹ್ವಾನಿಸಿದ್ದರು. 'ಪಾರು' ತಂಡದ ಜೊತೆಗೆ ನಟ ಅನಿರುದ್ಧ್‌ ಜತ್ಕರ್‌, ಗಟ್ಟಿಮೇಳ ಖ್ಯಾತಿಯ ರಕ್ಷ್‌, ಹಿಟ್ಲರ್‌ ಕಲ್ಯಾಣ ಖ್ಯಾತಿಯ ದಿಲೀಪ್‌ ರಾಜ್‌ ಹಾಗೂ ಪತ್ನಿ ವಿದ್ಯಾ ಕೂಡಾ ಶರತ್‌ ಮದುವೆಗೆ ತೆರಳಿದ್ದಾರೆ. ಆದರೆ ಕಳೆದ ವರ್ಷದ ನಿಶ್ಚಿತಾರ್ಥದ ಫೋಟೋಗಳನ್ನಾಗಲೀ, ನಿನ್ನೆಯ ಮದುವೆ ಫೋಟೋಗಳನ್ನಾಗಲೀ ಶರತ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿಲ್ಲ. ಶರತ್‌ ಸಹ ಕಲಾವಿದರು, ಸ್ನೇಹಿತರು, ಶರತ್‌ ಮದುವೆ ಆರತಕ್ಷೆಯ ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ನವದಂಪತಿಗೆ ಮದುವೆಯ ಶುಭ ಕೋರುತ್ತಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ಚಿಕ್ಕಮಗಳೂರಿನ ಶೃಂಗೇರಿಯ ಹಿಂಬರವಳ್ಳಿಯಲ್ಲಿ ಶರತ್‌ ನಿಶ್ಚಿತಾರ್ಥ ನೆರವೇರಿದ್ದು ಮದುವೆ ಕೂಡಾ ಶೃಂಗೇರಿಯಲ್ಲಿ ಜರುಗಲಿದೆ ಎನ್ನಲಾಗುತ್ತಿದೆ. ಶರತ್‌ ಮದುವೆ ವಿಚಾರ ತಿಳಿದ ಕಿರುತೆರೆ ಪ್ರಿಯರು ಶರತ್‌ಗೆ ವಿಶ್‌ ಮಾಡುತ್ತಿದ್ದಾರೆ. ಸದ್ಯಕ್ಕೆ ಶರತ್‌, 'ಪಾರು' ಧಾರಾವಾಹಿಯಲ್ಲಿ ಅಖಿಲಾಂಡೇಶ್ವರಿ ಮೊದಲ ಪುತ್ರ ಆದಿತ್ಯ ಪಾತ್ರದಲ್ಲಿ ನಟಿಸುತ್ತಿದ್ಧಾರೆ. ಆದಿತ್ಯ ಅಲಿಯಾಸ್‌ ಶರತ್‌ಗೆ ಪಾರು ಅಲಿಯಾಸ್‌ ಮೋಕ್ಷಿತಾ ಪೈ ಜೋಡಿಯಾಗಿ ನಟಿಸುತ್ತಿದ್ದಾರೆ.

ಧೃತಿ ಕ್ರಿಯೇಷನ್ಸ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗುತ್ತಿರುವ 'ಪಾರು' ಧಾರಾವಾಹಿಗೆ ನಟ, ನಿರ್ಮಾಪಕ ದಿಲೀಪ್ ರಾಜ್ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದಿಲೀಪ್‌ ಪತ್ನಿ ಶ್ರೀವಿದ್ಯಾ, ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ. ಗುರುಪ್ರಸಾದ್‌ ಮುಡೇನಹಳ್ಳಿ ಈ ಧಾರಾವಾಹಿಗೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಪ್ರತಿದಿನ ಸಂಜೆ 6.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ 'ಪಾರು' ಧಾರಾವಾಹಿ ಪ್ರಸಾರವಾಗುತ್ತಿದೆ.

'ಪಾರು' ಧಾರಾವಾಹಿ ವಿಭಿನ್ನ ಕಥೆಯಿಂದ ವೀಕ್ಷಕರನ್ನು ಸೆಳೆಯುತ್ತಿದೆ. ಧಾರಾವಾಹಿಯಲ್ಲಿ ಪ್ರೀತು, ಆದಿ, ಪಾರು, ದಾಮಿನಿ, ಜನನಿ, ಅಖಿಲಾಂಡೇಶ್ವರಿ ಸೇರಿದಂತೆ ಪ್ರತಿ ಪಾತ್ರವೂ ಜನರಿಗೆ ಬಹಳ ಇಷ್ಟವಾಗಿದೆ. ಹಾಗೇ ಈ ಧಾರಾವಾಹಿ, ನಾಯಕ ಆದಿ ಅಲಿಯಾಸ್‌ ಶರತ್‌ ಪದ್ಮನಾಭ್‌ಗೆ ಒಳ್ಳೆ ಹೆಸರು ತಂದುಕೊಟ್ಟಿದೆ. ನಟಿಸಿದ ಮೊದಲ ಧಾರಾವಾಹಿಯಲ್ಲೇ ಶರತ್‌ ವೀಕ್ಷಕರ ಗಮನ ಸೆಳೆದಿದ್ದಾರೆ. ಅಪ್ಪ-ಅಮ್ಮನಿಗೆ ಗೌರವ ನೀಡುವ, ಪತ್ನಿ ಪಾರುವನ್ನು ಅತಿಯಾಗಿ ಪ್ರೀತಿಸುವ ಆದಿಯ ಪಾತ್ರ ಎಲ್ಲರಿಗೂ ಬಹಳ ಇಷ್ಟವಾಗಿದೆ.

ಶರತ್‌, ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ಇಂಜಿನಿಯರಿಂಗ್‌ ಪದವೀಧರರಾಗಿರುವ ಶರತ್‌ ಪದ್ಮನಾಭ್‌, ಕೆಲವು ವರ್ಷ ಐಟಿ ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ. ಶರತ್‌ಗೆ ಬಾಲ್ಯದಿಂದಲೂ ನಟನೆಯಲ್ಲಿ ಆಸಕ್ತಿ. ಸೋಷಿಯಲ್‌ ಮೀಡಿಯಾದಲ್ಲಿ ಇವರ ಫೋಟೋಗಳನ್ನು ನೋಡಿದ ಧಾರಾವಾಹಿ ತಂಡ ಶರತ್‌ಗೆ ನಟನೆಗೆ ಅವಕಾಶ ನೀಡಿದೆ. ಧಾರಾವಾಹಿಯಲ್ಲಿ ನಟಿಸಲು ಅವಕಾಶ ದೊರೆಯುತ್ತಿದ್ದಂತೆ ಶರತ್‌ ಪದ್ಮನಾಭ್‌, ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಈಗ ನಟನೆಯಲ್ಲೇ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ. 'ಪಾರು' ಧಾರಾವಾಹಿಯಲ್ಲಿ ಶರತ್, ಅಖಿಲಾಂಡೇಶ್ವರಿ ಮೊದಲ ಪುತ್ರ ಆದಿತ್ಯನಾಗಿ ನಟಿಸುತ್ತಿದ್ದಾರೆ. ಶರತ್‌ ಪದ್ಮನಾಭ್‌ ಯಾವ ಹೀರೋಗೆ ಕೂಡಾ ಕಡಿಮೆ ಇಲ್ಲ. ಈಗ ಅವರು ಬೆಳ್ಳಿತೆರೆಗೆ ಕೂಡಾ ಎಂಟ್ರಿ ಕೊಟ್ಟಿದ್ದಾರೆ. 'ಪಾರು' ಜೊತೆಗೆ 'ಪುಟ್ಮಲ್ಲಿ' ಎಂಬ ಧಾರಾವಾಹಿಯಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿರುವ ಶರತ್‌, 'ನೀವು ಕರೆ ಮಾಡಿದ ಚಂದಾದಾರರು' ಚಿತ್ರದಲ್ಲಿ ನಟಿಸಿದ್ದಾರೆ.

Whats_app_banner