'#PMF49' ಚಿತ್ರಕ್ಕಾಗಿ ಗೋಲ್ಡನ್ ಸ್ಟಾರ್ ಗಣೇಶ್ ಜತೆ ಕೈಜೋಡಿಸಿದ ಪೀಪಲ್ ಮೀಡಿಯಾ ಫ್ಯಾಕ್ಟರಿ; ಬರಲಿದೆ ಹೊಸ ಸಿನಿಮಾ
ಸ್ಯಾಂಡಲ್‌ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಅಭಿಮಾನಿಗೆ ಗುಡ್ ನ್ಯೂಸ್ ನೀಡಿದ್ದಾರೆ. #PMF49 ಚಿತ್ರಕ್ಕಾಗಿ ಗೋಲ್ಡನ್ ಸ್ಟಾರ್ ಗಣೇಶ್ ಜತೆ ಖ್ಯಾತ ತೆಲುಗಿನ ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ ಕೈಜೋಡಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
![ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಕೈಜೋಡಿಸಿದ ಖ್ಯಾತ ತೆಲುಗಿನ ಪೀಪಲ್ ಮೀಡಿಯಾ ಫ್ಯಾಕ್ಟರಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಕೈಜೋಡಿಸಿದ ಖ್ಯಾತ ತೆಲುಗಿನ ಪೀಪಲ್ ಮೀಡಿಯಾ ಫ್ಯಾಕ್ಟರಿ](https://images.hindustantimes.com/kannada/img/2024/12/28/550x309/ganesh_1735387291711_1735387296043.png)
ಸ್ಯಾಂಡಲ್‌ವುಡ್‌ನ ಗೋಲ್ಡನ್ ಸ್ಟಾರ್ ಗಣೇಶ್ ಸದ್ಯ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಅವರ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸಿಕೊಂಡು, ಒಟಿಟಿಯಲ್ಲಿಯೂ ಕಮಾಲ್ ಮಾಡುತ್ತಿದೆ. ಅಷ್ಟೇ ಅಲ್ಲ ಈ ಸಿನಿಮಾವನ್ನು ಒಟಿಟಿಯಲ್ಲಿ ನೋಡಲು ಸಾಕಷ್ಟು ದಿನ ಅಭಿಮಾನಿಗಳು ಕಾದಿದ್ದರು. ಏನೇ ಹೇಳಿ ಗೋಲ್ಡ್ ಸ್ಟಾರ್ ಯಾವ ಸಿನಿಮಾ ಮಾಡಿದ್ರೂ ನಾವಂತೂ ನೋಡ್ತೀವಿ ಎನ್ನುವ ಜನರೂ ಇದ್ದಾರೆ. ಹೀಗಿರುವಾಗಲೇ ಇದೇ ಗಣೇಶ್ ಅಭಿಮಾನಿಗಳಿಗೆ ಈಗ ಹೊಸದೊಂದು ಸರ್ಪ್ರೈಸ್ ಸುದ್ದಿ ಹೊರಬಿದ್ದಿದೆ.
ಗೋಲ್ಡನ್ ಸ್ಟಾರ್ ಗಣೇಶ್ ಗುಡ್ ನ್ಯೂಸ್
ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್‌ನೀಡಿದ್ದಾರೆ. ತೆಲುಗಿನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿ ಜತೆಗೆ ಗೋಲ್ಡನ್ ಸ್ಟಾರ್ ಗಣೇಶ್ ಕೈ ಜೋಡಿಸಿದ್ದಾರೆ. ಅಂದರೆ ಈ ಸಂಸ್ಥೆ ನಿರ್ಮಾಣ ಮಾಡಲಿರುವ #PMF49 ಸಿನಿಮಾದಲ್ಲಿ ನಾಯಕನಾಗಿ ಗಣೇಶ್ ನಟಿಸಲಿದ್ದಾರೆ. ಇವರ ಜೋಡಿಯಾಗಿ ಯಾರಿರಲಿದ್ದಾರೆ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಆದರೂ ಗಣೇಶ್ ಇನ್ನೊಂದು ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದಂತು ಪಕ್ಕಾ ಆಗಿದೆ. ಈ ಮೂಲಕ ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಯಿಂದ ಕನ್ನಡದಲ್ಲಿಯೂ ದೊಡ್ಡ ದೊಡ್ಡ ಸಿನಿಮಾಗಳು ಮೂಡಿಬರಲಿವೆ.
ಕಾರ್ತಿಕೇಯ 2, ವೆಂಕಿ ಮಾಮಾ, ಓ ಬೇಬಿ, ಧಮಾಕಾ ಮತ್ತು ನ್ಯೂ-ಸೆನ್ಸ್‌ನಂತಹ ಬ್ಲಾಕ್‌ಬಸ್ಟರ್ ಹಿಟ್‌ಗಳನ್ನು ಕೊಟ್ಟ ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ ತೆಲುಗು ಚಿತ್ರೋದ್ಯಮಕ್ಕೆ ಗಣನೀಯ ಕೊಡುಗೆ ನೀಡಿದೆ. ಇದೀಗ #PMF49 ಮೂಲಕ ಸ್ಯಾಂಡಲ್‌ವುಡ್‌ನ ಸ್ಟಾರ್ ನಟ ಗಣೇಶ್ ಅವರ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ. ಅದ್ಧೂರಿ ಸಿನಿಮಾ ನಿರ್ಮಾಣದ ಪ್ಲಾನ್ ನಡೆಯುತ್ತಿದೆ.
ಒಳ್ಳೆ ಕಥೆ ನೀಡುವ ಧ್ಯೇಯ ಚಿತ್ರತಂಡದ್ದು
ಟಿಜಿ ವಿಶ್ವ ಪ್ರಸಾದ್ ನೇತೃತ್ವದ ಪೀಪಲ್ ಮೀಡಿಯಾ ಫ್ಯಾಕ್ಟರಿ, ಒಳ್ಳೆಯ ಕಥೆ ಮತ್ತು ಅತ್ಯಾಧುನಿಕ ನಿರ್ಮಾಣದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದೆ. ಈ ಮೂಲಕ ಕನ್ನಡದ ಚಿತ್ರರಂಗದ ಸಾಮರ್ಥ್ಯವನ್ನು ಮಗದಷ್ಟು ಹಿರಿದಾಗಿಸುವ ಧ್ಯೇಯ ಈ ಸಿನಿಮಾ ತಂಡದ್ದು.
ಖ್ಯಾತ ನೃತ್ಯ ನಿರ್ದೇಶಕ ಧನಂಜಯ್ ಈ ಸಿನಿಮಾ ಮೂಲಕ ದೊಡ್ಡ ಪ್ರಾಜೆಕ್ಟ್‌ವೊಂದರ ಜವಾಬ್ದಾರಿ ಹೊತ್ತಿದ್ದಾರೆ. ಇದು ಇವರ ಚೊಚ್ಚಲ ನಿರ್ದೇಶನದ ಸಿನಿಮಾ. ಟಿಜಿ ವಿಶ್ವ ಪ್ರಸಾದ್ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿಬರಲಿದ್ದು, ಅದ್ಧೂರಿಯಾಗಿಯೇ ಸಿನಿಮಾ ಸೆಟ್ಟೇರಲಿದೆ. ಇನ್ನುಳಿದಂತೆ ಚಿತ್ರದ ಶೀರ್ಷಿಕೆ, ತಾರಾಗಣ ಮತ್ತು ತಾಂತ್ರಿಕ ವರ್ಗದ ಬಗ್ಗೆ ಮಾಹಿತಿಯನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ಮುಂದಿನ ದಿನಗಳಲ್ಲಿ ನೀಡಲಿದೆ. ಚಿತ್ರತಂಡ ಹೇಗಿರಲಿದೆ ಎಂಬ ಮಾಹಿತಿ ಕೂಡ ಸ್ವಲ್ಪ ದಿನಗಳ ನಂತರ ಲಭ್ಯವಾಗಲಿದೆ.
![Whats_app_banner Whats_app_banner](https://kannada.hindustantimes.com/static-content/1y/wBanner.png)