ಪ್ರಭಾಸ್ ಅಭಿನಯದ 'ದಿ ರಾಜಾಸಾಬ್' ಸಿನಿಮಾಗಾಗಿ ಕಾದ ಅಭಿಮಾನಿಗಳಿಗೆ ಬೇಸರ; ಬಿಡುಗಡೆ ಇನ್ನಷ್ಟು ವಿಳಂಬ
ಪ್ರಭಾಸ್ ಅಭಿನಯದ 'ದಿ ರಾಜಾಸಾಬ್' ಸಿನಿಮಾಗಾಗಿ ಕಾದ ಅಭಿಮಾನಿಗಳಿಗೆ ಬೇಸರ ಉಂಟಾಗಿದೆ. ಸಾಕಷ್ಟು ದಿನಗಳಿಂದ ಕಾದಿದ್ದರೂ ಸಿನಿಮಾ ಮಾತ್ರ ಬಿಡುಗಡೆಯಾಗುತ್ತಿಲ್ಲ. ಏಪ್ರಿಲ್ 10ಕ್ಕೆ ಬಿಡುಗಡೆಯಾಗಬೇಕಿದ್ದ ಸಿನಿಮಾ ಈಗ ಇನ್ನಷ್ಟು ವಿಳಂಬಗೊಂಡಿದೆ.

'ದಿ ರಾಜಾ ಸಾಬ್' ಚಿತ್ರದ ಬಗ್ಗೆ ಕುತೂಹಲ ಸೃಷ್ಟಿಯಾಗಿದೆ. ಪ್ಯಾನ್ ಇಂಡಿಯಾ ರೆಬೆಲ್ ಸ್ಟಾರ್ ಪ್ರಭಾಸ್ ಅವರ ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಪ್ರಭಾಸ್ ತಮ್ಮ ಮೊದಲ ಹಾರರ್ ಹಾಗೂ ಹಾಸ್ಯ ಮಿಶ್ರಿತ ಚಿತ್ರವನ್ನು ನಿರ್ಮಿಸುತ್ತಿರುವುದರಿಂದ ಕುತೂಹಲ ಇನ್ನೂ ಹೆಚ್ಚಾಗಿದೆ. ಮಾರುತಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. 'ದಿ ರಾಜಾ ಸಾಬ್' ಸಿನಿಮಾದಲ್ಲಿ ಪ್ರಭಾಸ್ ಹೊಸದೊಂದು ರೀತಿಯಲ್ಲಿ ಅಭಿಮಾನಗಳೆದುರು ಬರಲಿದ್ದಾರೆ. ಏಪ್ರಿಲ್ 10ರಂದು ಈ ಸಿನಿಮಾ ಬಿಡುಗಡೆಯಾಗಲಿದೆ ಎಂದು ತಯಾರಕರು ಈ ಹಿಂದೆಯೇ ಘೋಷಿಸಿದ್ದರು. ಆದರೆ, ಏಪ್ರಿಲ್ 10ರಂದು ಈ ಸಿನಿಮಾ ಬಿಡುಗಡೆಯಾಗುವುದಿಲ್ಲ ಎಂದು ಹೇಳಲಾಗುತ್ತಿದೆ.
ಬಿಡುಗಡೆ ಯಾವಾಗ?
ಆಗಸ್ಟ್ ಮಧ್ಯದಲ್ಲಿ 'ದಿ ರಾಜಾ ಸಾಬ್' ಬಿಡುಗಡೆ ಮಾಡಲು ತಂಡ ನಿರ್ಧರಿಸಿದೆ ಎಂದು ವರದಿಯಾಗಿದೆ. ಆಗಸ್ಟ್ 15ರಂದು ಬಿಡುಗಡೆಯಾಗಬಹುದು ಎಂಬ ವದಂತಿಗಳು ಹೊರಬಂದಿವೆ. ಆಗಸ್ಟ್ ಬಿಡುಗಡೆಯ ಬಗ್ಗೆ ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ.
ಮುಂದೂಡಿಕೆಗೆ ಇದೇ ಕಾರಣ!
ರಾಜಾ ಸಾಬ್ ಚಿತ್ರದ ಚಿತ್ರೀಕರಣ ಇನ್ನೂ ಬಾಕಿ ಇದೆ. ಕೆಲವು ಹಾಡುಗಳ ಜೊತೆಗೆ ಕ್ಲೈಮ್ಯಾಕ್ಸ್ ಚಿತ್ರೀಕರಣ ಇನ್ನೂ ಬಾಕಿ ಇದೆ ಎನ್ನಲಾಗುತ್ತಿದೆ. ಆದ್ದರಿಂದ, ವಿಎಫ್ಎಕ್ಸ್ ಕೆಲಸಕ್ಕಾಗಿ ತಂಡವು ಹೆಚ್ಚಿನ ಸಮಯವನ್ನು ನಿರೀಕ್ಷಿಸುತ್ತಿದೆ. ಏಪ್ರಿಲ್ 10ರಂದು ಸಿನಿಮಾ ಬಿಡುಗಡೆಯಾಗುವುದು ಖಷಿತವಿಲ್ಲ. ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸದಿಂದ ಚಿತ್ರವನ್ನು ಮುಂದೂಡಲಾಗಿದೆ. ರಾಜಾ ಸಾಬ್ ಚಿತ್ರದ ತಂಡವು ಹೊಸ ಬಿಡುಗಡೆಯ ದಿನಾಂಕವನ್ನು ಯಾವಾಗ ಘೋಷಿಸುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ರಾಜಸಾಬ್ ಚಿತ್ರದಲ್ಲಿ ಪ್ರಭಾಸ್ ನಿಧಿ ಅಗರ್ವಾಲ್ ಮತ್ತು ಮಾಳವಿಕಾ ಮೋಹನನ್ ಜತೆ ನಟಿಸಿದ್ದಾರೆ. ಸಂಜಯ್ ದತ್, ರಿದ್ಧಿ ಕುಮಾರ್ ಮತ್ತು ಅನುಪಮ್ ಖೇರ್ ಪ್ರಮುಖ ಪಾತ್ರಗಳಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ರಾಜಾ ಸಾಬ್ ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆಯಾಗಿ ಹಲವು ತಿಂಗಳುಗಳೇ ಕಳೆದಿದೆ. ಒಂದು ದಟ್ಟ ಕಾಡು ಆ ಕಾಡಿನಲ್ಲಿ ಒಂದು ಪಿಯಾನೋ ನುಡಿಸುವವರಯ ಯಾರೂ ಇಲ್ಲದೆಯೂ ಅದು ಶಬ್ಧ ಮಾಡುತ್ತಿರುತ್ತದೆ. ಅದರ ಮೇಲೆ ಎಲೆಗಳು ಅಲುಗಾಡುತ್ತಾ ಇರುತ್ತದೆ. ಯಾರೋ ಒಬ್ಬ ಮಸುಕಿನಲ್ಲಿ ಕಾಣದ ಜಾಗದಲ್ಲಿ ಆ ದಟ್ಟಾರಣ್ಯದಲ್ಲಿ ನಡೆದುಕೊಂಡು ಸಾಗುತ್ತಾನೆ. ಈ ರೀತಿ ಕಾಣುವ ಮೋಷನ್ ಪೋಸ್ಟರ್ ಕೂಡ ರಿಲೀಸ್ ಆಗಿತ್ತು.
ರಾಜಾ ಸಾಬ್ ಚಿತ್ರವನ್ನು ಸುಮಾರು 200 ಕೋಟಿ ರೂ.ಗಳ ಬಜೆಟ್‌ನಲ್ಲಿ ನಿರ್ಮಿಸುವ ನಿರೀಕ್ಷೆಯಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ವಿಶ್ವ ಪ್ರಸಾದ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ತಮನ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರದಲ್ಲಿ ಮಾಸ್ ಹಾಡುಗಳಿವೆ. ಪ್ರಭಾಸ್ ಸಂಪೂರ್ಣ ಜೋಶ್ ನೊಂದಿಗೆ ನೃತ್ಯ ಮಾಡಲಿದ್ದಾರೆ ಎಂದು ತಮನ್ ಹೇಳಿದ್ದಾರೆ. ಈ ಮಾತು ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಪ್ರಭಾಸ್ ಪ್ರಸ್ತುತ ನಿರ್ದೇಶಕ ಹನು ರಾಘವಪುಡಿ ನಿರ್ದೇಶನದ ಆಕ್ಷನ್-ಡ್ರಾಮಾ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.
