Prajwal Devaraj Veeram: ‘ವೀರಂ’ ಚಿತ್ರದಲ್ಲಿ ಪ್ರಜ್ವಲ್‌ ದೇವರಾಜ್, ಶ್ರೀನಗರ ಕಿಟ್ಟಿ, ಶಿಷ್ಯ ದೀಪಕ್‌ ವೀರಾವೇಷ! ರಿಲೀಸ್‌ ದಿನಾಂಕ ನಿಗದಿ
ಕನ್ನಡ ಸುದ್ದಿ  /  ಮನರಂಜನೆ  /  Prajwal Devaraj Veeram: ‘ವೀರಂ’ ಚಿತ್ರದಲ್ಲಿ ಪ್ರಜ್ವಲ್‌ ದೇವರಾಜ್, ಶ್ರೀನಗರ ಕಿಟ್ಟಿ, ಶಿಷ್ಯ ದೀಪಕ್‌ ವೀರಾವೇಷ! ರಿಲೀಸ್‌ ದಿನಾಂಕ ನಿಗದಿ

Prajwal Devaraj Veeram: ‘ವೀರಂ’ ಚಿತ್ರದಲ್ಲಿ ಪ್ರಜ್ವಲ್‌ ದೇವರಾಜ್, ಶ್ರೀನಗರ ಕಿಟ್ಟಿ, ಶಿಷ್ಯ ದೀಪಕ್‌ ವೀರಾವೇಷ! ರಿಲೀಸ್‌ ದಿನಾಂಕ ನಿಗದಿ

ಪ್ರಜ್ವಲ್‌ ದೇವರಾಜ್‌ ನಾಯಕನಾಗಿ ನಟಿಸಿರುವ ‘ವೀರಂ’ ಸಿನಿಮಾ ಬಿಡುಗಡೆಗೆ ದಿನಾಂಕ ಘೋಷಿಸಿದೆ. ಅದಕ್ಕೂ ಮೊದಲ ಟ್ರೇಲರ್‌ ಸಹ ಹೊರಬಂದಿದೆ.

‘ವೀರಂ’ ಚಿತ್ರದಲ್ಲಿ ಪ್ರಜ್ವಲ್‌ ದೇವರಾಜ್, ಶ್ರೀನಗರ ಕಿಟ್ಟಿ, ಶಿಷ್ಯ ದೀಪಕ್‌ ವೀರಾವೇಷ! ರಿಲೀಸ್‌ ದಿನಾಂಕ ನಿಗದಿ
‘ವೀರಂ’ ಚಿತ್ರದಲ್ಲಿ ಪ್ರಜ್ವಲ್‌ ದೇವರಾಜ್, ಶ್ರೀನಗರ ಕಿಟ್ಟಿ, ಶಿಷ್ಯ ದೀಪಕ್‌ ವೀರಾವೇಷ! ರಿಲೀಸ್‌ ದಿನಾಂಕ ನಿಗದಿ

Prajwal Devaraj Veeram: ನಟ ಪ್ರಜ್ವಲ್‌ ದೇವರಾಜ್‌ ನಾಯಕನಾಗಿ ನಟಿಸಿರುವ ‘ವೀರಂ’ ಸಿನಿಮಾ ಇದೀಗ ಅಪ್‌ಡೇಟ್‌ ಹೊತ್ತು ಪ್ರೇಕ್ಷಕನ ಮುಂದೆ ಬಂದಿದೆ. ಈ ಹಿಂದೆಯೇ ಬಿಡುಗಡೆ ಆಗಬೇಕಿದ್ದ ಈ ಸಿನಿಮಾ, ಇದೀಗ ಕೊನೆಗೂ ರಿಲೀಸ್‌ ದಿನಾಂಕವನ್ನು ಟ್ರೇಲರ್‌ ಬಿಡುಗಡೆ ಮಾಡಿಕೊಳ್ಳುವ ಮೂಲಕ ಅಧಿಕೃತವಾಗಿ ಘೋಷಣೆ ಮಾಡಿದೆ. ಈ ಹಿಂದೆ ಡಾಟರ್ ಆಫ್ ಪಾರ್ವತಮ್ಮ, ಶುಗರ್‌ಲೆಸ್ ಸಿನಿಮಾ ನಿರ್ಮಾಣ ಮಾಡಿದ್ದ ನಿರ್ಮಾಪಕ ಕೆ.ಎಂ. ಶಶಿಧರ್ ಇದೀಗ ‘ವೀರಂ’ ಮೂಲಕ ಆಕ್ಷನ್ ಥ್ರಿಲ್ಲರ್ ಜಾನರ್ ಚಿತ್ರದೊಂದಿಗೆ ಬರುತ್ತಿದ್ದಾರೆ. ಶಶಿಧರ್ ಸ್ಟುಡಿಯೋಸ್ ಪ್ರೊಡಕ್ಷನ್‌ನ ಮೂರನೇ ಪ್ರಾಜೆಕ್ಟ್ ಇದಾಗಿದೆ.

‘ವೀರಂ’ ಚಿತ್ರದ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮವನ್ನು ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ನಟ ದೇವರಾಜ್‌ ಟ್ರೇಲರ್‌ ರಿಲೀಸ್‌ ಮಾಡಿದರು. ಅಂದಹಾಗೆ ಈ ಚಿತ್ರ ಏ. 7ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಖದರ್‌ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಹಾಗೂ ಹಿರಿಯ ನಟಿ ಶೃತಿ, ಅಕ್ಕ ತಮ್ಮನಾಗಿ ನಟಿಸಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಯಾಗಿ ಈ ಇಬ್ಬರು ಕಾಣಿಸಿಕೊಂಡಿದ್ದಾರೆ.

ಟ್ರೇಲರ್‌ನಲ್ಲಿ ವೀರಾವೇಷ ಕಾಣ್ತಿದೆ…

ಟ್ರೈಲರ್ ನೋಡಿದ ನಂತರ ಮಾತನಾಡಿದ ದೇವರಾಜ್, "ಟ್ರೇಲರ್‌ನಲ್ಲಿ ವೀರಾವೇಶ ಕಾಣಿಸ್ತಿದೆ. ಶ್ರುತಿ ಅವರಿದ್ದ ಮೇಲೆ ಎಮೋಷನ್ ಸೀನ್‌ಗಳು ಇದ್ದೇ ಇರುತ್ತವೆ. ಪ್ರಜ್ವಲ್, ಕಿಟ್ಟಿ ಹೀಗೆ ಎಲ್ಲ ಯುವ ನಟರೇ ಸೇರಿ ಈ ಚಿತ್ರ ಮಾಡಿದ್ದಾರೆ. ಚಿತ್ರಮಂದಿರದಲ್ಲಿ ಟ್ರೈಲರ್ ನೋಡಿದ್ದು ನನಗೆ ಮೊದಲ ಅನುಭವ. ಜನರ ಕೂಗಾಟ, ಚಪ್ಪಾಳೆ ಕೇಳಿ ತುಂಬಾ ಖುಷಿಯಾಯ್ತು" ಎಂದರು.

ಫ್ಯಾನ್‌ ಇಂಡಿಯಾ ಅಲ್ಲ ಫ್ಯಾನ್ಸ್‌ ಇಂಡಿಯಾ..

ಇವರೆಲ್ಲ ಸಿನಿಮಾನ ಪ್ರೀತಿಸುವಂಥ ಜನ, ಚಪ್ಪಾಳೆ ಶಿಳ್ಳೆ ಇದನ್ನೆಲ್ಲ ಬಹಳ ದಿನಗಳ ನಂತರ ನೋಡಿ ಖುಷಿಯಾಯ್ತು. ಸಿನಿಮಾದಲ್ಲಿರುವ ಹೋರಾಟ, ಸಾಹಸ ಜನರಿಗೆ ತಲುಪಬೇಕು. ಈ ಸಿನಿಮಾ ನನಗೆ ತುಂಬಾ ವಿಶೇಷ. ಏಕೆಂದರೆ ನಾನು ವಿಷ್ಣು ಸರ್ ಅಭಿಮಾನಿಯಾಗಿಯೇ ಬಂದವಳು, ಇದರಲ್ಲೂ ಅದೇ ಥರದ ಪಾತ್ರವಿದೆ, ಫಸ್ಟ್ ಟೈಮ್ ಪ್ರಜ್ವಲ್ ಅವರ ಅಭಿನಯ ನೋಡಿ ಕಣ್ಣಲ್ಲಿ ನೀರುಬಂತು. ಸಾಮಾನ್ಯವಾಗಿ ನಾನು ಡಬ್ಬಿಂಗ್ ಮಾಡುವಾಗ, ನನ್ನ ಪಾತ್ರ ನೋಡಿ ನಾನೇ ನಗುತ್ತೇನೆ. ಈಗ ಎಲ್ಲಾ ಕಡೆ ಪ್ಯಾನ್ ಇಂಡಿಯಾ ಕಾನ್ಸೆಪ್ಟ್‌ ಬಂದಿದೆ. ಆದರೆ ಫ್ಯಾನ್ಸ್ ಇಂಡಿಯಾ ಸಿನಿಮಾ ಇರುವುದು ಕರ್ನಾಟಕದಲ್ಲಿ ಮಾತ್ರ. ಅವರ ಶಿಳ್ಳೆ, ಕೇಕೆಯೇ ಕಲಾವಿದರಿಗೆ ಖುಷಿ" ಎಂದರು ಶ್ರುತಿ.

ಸಿನಿಮಾ ನಿಂತೋಯ್ತು ಎಂದವರೇ ಹೆಚ್ಚು..

"ಈ ಸಿನಿಮಾ ನಿಂತೋಯ್ತು, ಆಗೋದೇ ಇಲ್ಲ ಎಂದು ಕೆಲವರು ಹೇಳಿದ್ದರು. ಅವರಿಗೆಲ್ಲ ಏ.7ರಂದು ಸಿನಿಮಾ ತೋರಿಸುತ್ತೇನೆ. ಎಮೋಷನಲ್ ಥ್ರಿಲ್ಲರ್ ಡ್ರಾಮಾ ಜೊತೆಗೆ ಕಂಪ್ಲೀಟ್ ಪ್ಯಾಕೇಜ್ಡ್ ಮೂವೀ ಇದಾಗಿದ್ದು, ಸೆಕೆಂಡ್ ಹಾಫ್‌ನಲ್ಲಿ ಥ್ರಿಲ್ಲರ್ ಕಥೆಯಿದೆ. ಶಿಷ್ಯ ದೀಪಕ್‌ ಮೊದಲ ಬಾರಿಗೆ ಪೂರ್ಣಪ್ರಮಾಣದ ಖಳನಾಯಕನಾಗಿ ನಟಿಸಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್ ಅವರ ಪಾತ್ರವನ್ನಿಟ್ಟುಕೊಂಡು ಕಥೆ ಹೇಳಿದ್ದೇವೆ. ವಿಷ್ಣು ಅಭಿಮಾನಿಗಳಿಗೆ ಈ ಚಿತ್ರ ತುಂಬಾನೇ ಇಷ್ಟವಾಗುತ್ತದೆ ಎಂದರು ನಿರ್ಮಾಪಕ ಶಶಿಧರ್.

ವಿಷ್ಣು ದಾದಾ ಅವರ ಸವಿನೆನಪಿನಲ್ಲಿ ಈ ಚಿತ್ರ ಏ.7ಕ್ಕೆ ರಿಲೀಸಾಗುತ್ತಿದೆ. ಒಂದು ಸಿನಿಮಾನ ತೆರೆಯ ಮೇಲೆ ತಂದು ನಿಲ್ಲಿಸುವುದರ ಕಷ್ಟ ಆ ನಿರ್ಮಾಪಕನಿಗಷ್ಟೇ ಗೊತ್ತು ಎಂದರು ಶ್ರೀನಗರಕಿಟ್ಟಿ.

"ನಾನು ಚಿಕ್ಕವನಿದ್ದಾಗ ವಿಷ್ಣು ಅವರ ದಾದಾ ಚಿತ್ರವನ್ನು 2 ರೂ.75 ಪೈಸೆ ಕೊಟ್ಟು ಇಲ್ಲೇ ನೋಡಿದ್ದೆ. ಈಗ ಇದೇ ಚಿತ್ರಮಂದಿರದಲ್ಲಿ ನನ್ನ ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಬಲ ರಾಜವಾಡಿ, ಅಚ್ಯುತ್‌ಕುಮಾರ್, ಸ್ವಾತಿ, ಮೈಕೋ ನಾಗರಾಜ್, ಪ್ರಶಾಂತ್ ನಟನಾ, ಹನುಮಂತೇಗೌಡ ಅಲ್ಲದೆ ನಿರ್ದೇಶಕರಾದ ಜೋಸೈಮನ್, ವಿ.ನಾಗೇಂದ್ರಪ್ರಸಾದ್ ಹೀಗೆ ಬಹುದೊಡ್ಡ ತಾರಾಗಣವೇ ಇದೆ ಎಂಬುದು ನಿರ್ದೇಶಕ ಖದರ್‌ಕುಮಾರ್‌ ಅವರ ಮಾತು.

ನಾಯಕ ಪ್ರಜ್ವಲ್ ಮಾತನಾಡಿ, "ನಾನು ಹೋದ ಜನ್ಮದಲ್ಲಿ ತುಂಬ ಪುಣ್ಯ ಮಾಡಿದ್ದೆ ಅಂತ ಕಾಣಿಸುತ್ತೆ. ಇಂಥ ತಂದೆ ತಾಯಿ ಪಡೆದ ನಾನೇ ಧನ್ಯ. ಆರಂಭದಲ್ಲಿ ನಿರ್ಮಾಪಕ, ನಿರ್ದೇಶಕರು ನನ್ನ ಬಳಿ ಬಂದಾಗ ಅವರ ಕಣ್ಣಲ್ಲಿ ಒಂದು ಕನಸಿತ್ತು. ಕಿಟ್ಟಣ್ಣ ಕೂಡ ನನ್ನ ಈ ಚಿತ್ರದ ಭಾಗವಾಗಿದ್ದಾರೆ. ಕಥೆ ಕೇಳದೆ ಒಪ್ಪಿಕೊಂಡರು. ದಾದಾ ಅವರ ಅಚ್ಚೆ ಕೈಮೇಲೆ ಹಾಕಿಕೊಂಡು ಆಕ್ಟ್ ಮಾಡಲು ತುಂಬಾ ಖುಷಿಯಾಗಿತ್ತು. ನನ್ನ ದೊಡ್ಡ ಪವರ್ ಅಂದ್ರೆ ನನ್ನ ಅಭಿಮಾನಿಗಳು, ಮತ್ತೊಂದು ಕಡೆ ನನ್ನ ಕುಟುಂಬ" ಎಂದು ಹೇಳಿದರು.

ಖಳನಟನಾಗಿ ಕಾಣಿಸಿಕೊಂಡಿರುವ ಶಿಷ್ಯ ದೀಪಕ್ ಮಾತನಾಡುತ್ತ, ಈ ಪಾತ್ರವನ್ನು ನಾನು ಅನುಭವಿಸಿ ಮಾಡಿದ್ದೇನೆ. ನಿರ್ಮಾಪಕರು ನನ್ನ ಬಗ್ಗೆ ಬಹಳಷ್ಟು ಜನ ನೆಗೆಟಿವ್ ಮಾತಾಡಿದರೂ ಅದನ್ನು ಲೆಕ್ಕಿಸದೆ ನನಗೆ ಸಪೋರ್ಟ್ ಮಾಡಿದರು. ಶಿಷ್ಯ ದೀಪಕ್‌ನನ್ನು ಜೇಡ ದೀಪಕ್ ಮಾಡಿದ್ದಾರೆ ಎಂದು ಗಗ್ಗದಿತರಾದರು. ಅನೂಪ್ ಸೀಳನ್ ಅವರ ಸಂಗೀತ ಸಂಯೋಜನೆ, ಲವಿತ್ ಅವರ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ.

Whats_app_banner