ಕನ್ನಡ ಸುದ್ದಿ  /  Entertainment  /  Prakash Raj Tweet About Hindi Imposition

Prakash Raj: ಬಲವಂತ ಹಿಂದಿ ಹೇರಿಕೆ ವಿರುದ್ಧ ಪ್ರಕಾಶ್‌ ರಾಜ್‌ ಟ್ವೀಟ್‌ ವೈರಲ್‌.. ಏನಿದೆ ಟ್ವೀಟ್‌ನಲ್ಲಿ?

ನನ್ನ ಬೇರು.. ನನ್ನ ಮೂಲ ನನ್ನ ಕನ್ನಡ.. ನನ್ನ ತಾಯನ್ನು ಗೌರವಿಸದೆ ನಿನ್ನ ಹಿಂದಿಯನ್ನು ಹೇರಿದರೆ ನಾವು ಹೀಗೇ ಪ್ರತಿಭಟಿಸುತ್ತೇವೆ .. ಹೆದರೊಲ್ಲ..ಅಷ್ಟೇ ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ ನಾನು ಏಳು ಭಾಷೆಗಳನ್ನು ಬಲ್ಲೆ. ಒಂದು ಭಾಷೆಯನ್ನು ಕಲಿತು ಮಾತನಾಡುವುದು ಎಂದರೆ ಆ ಭಾಷೆಯ ಜನರನ್ನು ಗೌರವಿಸುವುದು.

ಬಹುಭಾಷಾ ನಟ ಪ್ರಕಾಶ್‌ ರಾಜ್
ಬಹುಭಾಷಾ ನಟ ಪ್ರಕಾಶ್‌ ರಾಜ್

ಬಲವಂತ ಹಿಂದಿ ಹೇರಿಕೆ ವಿರುದ್ಧ ಜನ ಸಾಮಾನ್ಯರು ಮಾತ್ರವಲ್ಲ ಸೆಲೆಬ್ರಿಟಿಗಳು ಕೂಡಾ ವಿರೋಧ ವ್ಯಕ್ತಪಡಿಸುತ್ತಿದ್ಧಾರೆ. ಕಳೆದ ವರ್ಷ ಕಿಚ್ಚ ಸುದೀಪ್‌, ಬಾಲಿವುಡ್‌ ನಟ ಅಜಯ್‌ ದೇವಗನ್‌ ಅವರ ಟ್ವೀಟ್‌ಗೆ ಖಡಕ್‌ ಪ್ರತಿಕ್ರಿಯೆ ನೀಡಿದ್ದು, ಈ ಟ್ವೀಟ್‌ಗಳು ವೈರಲ್‌ ಆಗಿದ್ದು ತಿಳಿದ ವಿಚಾರ. ಇದೀಗ ಬಹುಭಾಷಾ ನಟ ಪ್ರಕಾಶ್‌ ರಾಜ್‌ ಕೂಡಾ ಹಿಂದಿ ಹೇರಿಕೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಪ್ರಕಾಶ್‌ ರಾಜ್‌ ಕೂಡಾ ಮೊದಲಿನಿಂದ ಬಲವಂತ ಹಿಂದಿ ಹೇರಿಕೆಯನ್ನು ವಿರೋಧಿಸುತ್ತಲೇ ಬಂದಿದ್ದಾರೆ. 3 ವರ್ಷಗಳ ಹಿಂದೆ ಅವರು ಹಂಚಿಕೊಂಡಿದ್ದ ಪೋಸ್ಟ್‌ವೊಂದು ಈಗ ವೈರಲ್‌ ಆಗುತ್ತಿದ್ದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. 2020 ರಲ್ಲಿ ಪ್ರಕಾಶ್‌ ರಾಜ್‌ ಒಂದು ಫೋಟೋ ಹಂಚಿಕೊಂಡಿದ್ದರು. ಅವರು ಹಂಚಿಕೊಂಡಿರುವ ಫೊಟೋದಲ್ಲಿ ತಾವು ಧರಿಸಿದ್ದ ಕಪ್ಪು ಬಣ್ಣದ ಟಿ ಶರ್ಟ್‌ ಮೇಲೆ 'ನಂಗೆ ಹಿಂದಿ ಬರಲ್ಲ ಹೋಗ್ರಪ್ಪ' ಎಂದು ಬರೆಯಲಾಗಿತ್ತು. ''ಹಲವು ಭಾಷೆ ಬಲ್ಲೆ.. ಹಲವು ಭಾಷೆಗಳಲ್ಲಿ ಕೆಲಸ ಮಾಡಬಲ್ಲೆ..ಆದರೆ ನನ್ನ ಕಲಿಕೆ..ನನ್ನ ಗ್ರಹಿಕೆ..ನನ್ನ ಬೇರು..ನನ್ನ ಶಕ್ತಿ...ನನ್ನ ಹೆಮ್ಮೆ..ನನ್ನ ಮಾತೃಭಾಷೆ ಕನ್ನಡ #ಹಿಂದಿ_ಹೇರಿಕೆ_ಬೇಡ'' ಎಂದು ಪ್ರಕಾಶ್‌ ರಾಜ್‌ ಬರೆದುಕೊಂಡಿದ್ದರು.‌

ಇತ್ತೀಚೆಗೆ ಶಶಾಂಕ್‌ ಶೇಖರ್‌ ಝಾ ಎಂಬುವವರು ಅಂದು ಪ್ರಕಾಶ್‌ ರಾಜ್‌ ಹಂಚಿಕೊಂಡಿದ್ದ ಫೋಟೋವನ್ನು ತಮ್ಮ ಟ್ಟಿಟ್ಟರ್‌ನಲ್ಲಿ ಹಂಚಿಕೊಂಡು ''ಪ್ರೀತಿಯ ತಮಿಳುನಾಡು ಪೊಲೀಸರೇ ಪ್ರಕಾಶ್‌ ರಾಜ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದೀರಾ?'' ಎಂದು ಪ್ರಶ್ನಿಸಿದ್ದರು. ಇದೀಗ ಶಶಾಂಕ್‌ ಹಂಚಿಕೊಂಡಿರುವ ಪೋಸ್ಟ್‌ನ ಸ್ಕ್ರೀನ್‌ ಶಾಟ್‌ ಹಂಚಿಕೊಂಡಿರುವ ಪ್ರಕಾಶ್‌ ರಾಜ್‌, ''ನನ್ನ ಬೇರು.. ನನ್ನ ಮೂಲ ನನ್ನ ಕನ್ನಡ.. ನನ್ನ ತಾಯನ್ನು ಗೌರವಿಸದೆ ನಿನ್ನ ಹಿಂದಿಯನ್ನು ಹೇರಿದರೆ ನಾವು ಹೀಗೇ ಪ್ರತಿಭಟಿಸುತ್ತೇವೆ .. ಹೆದರೊಲ್ಲ..ಅಷ್ಟೇ ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ ನಾನು ಏಳು ಭಾಷೆಗಳನ್ನು ಬಲ್ಲೆ. ಒಂದು ಭಾಷೆಯನ್ನು ಕಲಿತು ಮಾತನಾಡುವುದು ಎಂದರೆ ಆ ಭಾಷೆಯ ಜನರನ್ನು ಗೌರವಿಸುವುದು. ನಾನು ಹೋಗುವಲ್ಲೆಲ್ಲಾ ಅಯಾ ಭಾಷೆಯಲ್ಲಿ ಸಂವಾದಿಸುತ್ತೇನೆ. ನನ್ನ ಭಾಷೆಯನ್ನು ಹೇರುವುದಿಲ್ಲ.. ಆದರೆ ನನ್ನ ಕನ್ನಡವನ್ನು ಅವಮಾನಿಸಿ ನಿಮ್ಮ ಭಾಷೆಯನ್ನು ಹೇರಿದರೆ ನಿಂತು ಹೋರಾಡುತ್ತೇನೆ'' ಎಂದು ತಿರುಗೇಟು ನೀಡಿದ್ದಾರೆ. ಪ್ರಕಾಶ್‌ ರಾಜ್‌ ಅವರ ಟ್ವೀಟ್‌ಗೆ ಕೆಲವರು ಬೆಂಬಲ ವ್ಯಕ್ತಪಡಿಸಿ ಟ್ವೀಟ್‌ ಮಾಡಿದರೆ, ಕೆಲವರು ಅವರ ಕಾಲೆಳೆದಿದ್ದಾರೆ.

ಪ್ರಕಾಶ್‌ ರಾಜ್‌ ಮುಂಬರುವ ಸಿನಿಮಾಗಳು

ಪ್ರಕಾಶ್‌ ರಾಜ್‌ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ಅವರು ಬ್ಯುಸಿ ಇದ್ದಾರೆ. ಜನವರಿ 13 ರಂದು ತೆರೆ ಕಂಡಿದ್ದ ಚಿರಂಜೀವಿ ಅಭಿನಯದ ವಾಲ್ತೇರು ವೀರಯ್ಯ ಚಿತ್ರದಲ್ಲಿ ಪ್ರಕಾಶ್‌ ರಾಜ್‌ ಕಾಣಿಸಿಕೊಂಡಿದ್ದರು. ಇದೀಗ ಅವರು ತೆಲುಗಿನ ಶಾಕುಂತಲಂ, ತಮಿಳಿನ ವಿಡುದಲ, ಪೊನ್ನಿಯಿನ್‌ ಸೆಲ್ವನ್‌ 2, ಮಲಯಾಳಂನ ವರಾಲ್‌, ವಾಯ್ಸ್‌ ಆಫ್‌ ಸತ್ಯಾನಂದನ್‌, ಕುಂಜಮಿನ್ನೀಸ್‌ ಹಾಸ್ಟಿಟಲ್‌ ಹಾಗೂ ಕನ್ನಡದ ಕಬ್ಜ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ತೆಲುಗಿನ ಶಾಕುಂತಲಂ ಹಾಗೂ ಕನ್ನಡದ ಕಬ್ಜ ಸಿನಿಮಾಗಳು ಬಿಡುಗಡೆಗೆ ಸಿದ್ಧವಿದೆ.

IPL_Entry_Point