ಕನ್ನಡ ಸುದ್ದಿ  /  ಮನರಂಜನೆ  /  ಯೂಟ್ಯೂಬ್‌ನಲ್ಲಿ ಹೊಂದಿಸಿ ಬರೆಯಿರಿ ಸಿನಿಮಾ ಬಿಡುಗಡೆ; ಚಿತ್ರ ನಿಮ್ಮ ಮನಸ್ಸಿಗೆ ಹಿಡಿಸಿದರೆ, ಹಣವನ್ನೂ ರವಾನಿಸಬಹುದು

ಯೂಟ್ಯೂಬ್‌ನಲ್ಲಿ ಹೊಂದಿಸಿ ಬರೆಯಿರಿ ಸಿನಿಮಾ ಬಿಡುಗಡೆ; ಚಿತ್ರ ನಿಮ್ಮ ಮನಸ್ಸಿಗೆ ಹಿಡಿಸಿದರೆ, ಹಣವನ್ನೂ ರವಾನಿಸಬಹುದು

ಕಳೆದ ವರ್ಷದ ಫೆಬ್ರವರಿಯಲ್ಲಿ ಬಿಡುಗಡೆಯಾದ ಹೊಂದಿಸಿ ಬರೆಯಿರಿ ಸಿನಿಮಾ, ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಮೆಚ್ಚುಗೆ ಸಿಕ್ಕರೂ, ಗಳಿಕೆಯಲ್ಲಿ ಏರಿಕೆ ಕಂಡಿರಲಿಲ್ಲ. ಅದಾದ ಬಳಿಕ ಒಟಿಟಿಯಲ್ಲೂ ಸ್ಟ್ರೀಮಿಂಗ್‌ ಆರಂಭಿಸಿತ್ತು. ಈಗ ಇದೇ ಸಿನಿಮಾ ನೇರವಾಗಿ ಯೂಟ್ಯೂಬ್‌ನಲ್ಲಿ ರಿಲೀಸ್‌ ಆಗಿದೆ.

ಯೂಟ್ಯೂಬ್‌ನಲ್ಲಿ ಹೊಂದಿಸಿ ಬರೆಯಿರಿ ಸಿನಿಮಾ ಬಿಡುಗಡೆ; ಚಿತ್ರ ನಿಮ್ಮ ಮನಸ್ಸಿಗೆ ಹಿಡಿಸಿದರೆ, ಹಣವನ್ನೂ ರವಾನಿಸಬಹುದು
ಯೂಟ್ಯೂಬ್‌ನಲ್ಲಿ ಹೊಂದಿಸಿ ಬರೆಯಿರಿ ಸಿನಿಮಾ ಬಿಡುಗಡೆ; ಚಿತ್ರ ನಿಮ್ಮ ಮನಸ್ಸಿಗೆ ಹಿಡಿಸಿದರೆ, ಹಣವನ್ನೂ ರವಾನಿಸಬಹುದು

Hondisi Bareyiri on Youtube: ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡಿದ್ದ ಹೊಂದಿಸಿ ಬರೆಯಿರಿ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿತ್ತು. ಅದಾದ ಬಳಿಕ ಅದೇ ಚಿತ್ರ ಅಮೆಜಾನ್‌ ಪ್ರೈಂ ಒಟಿಟಿಯಲ್ಲಿಯೂ ರಿಲೀಸ್‌ ಆಗಿ ಹೆಚ್ಚೆಚ್ಚು ಜನರಿಂದ ವೀಕ್ಷಣೆಗೊಳಪಟ್ಟಿತ್ತು. ಇದೀಗ ಇದೇ ಸಿನಿಮಾ ಯೂಟ್ಯೂಬ್‌ಗೂ ಆಗಮಿಸಿದೆ. ಪ್ರೈಂ ಮೆಂಬರ್‌ಶಿಪ್‌ ಇಲ್ಲದವರು, ಯೂಟ್ಯೂಬ್‌ನಲ್ಲಿ ಉಚಿತವಾಗಿಯೇ ಈ ಸಿನಿಮಾ ವೀಕ್ಷಿಸಬಹುದು.

ಟ್ರೆಂಡಿಂಗ್​ ಸುದ್ದಿ

ರಾಮೇನಹಳ್ಳಿ ಜಗನ್ನಾಥ ನಿರ್ದೇಶನದ ಹಾಗೂ ಸಂಡೇ ಸಿನಿಮಾಸ್ ನಿರ್ಮಾಣ ಸಂಸ್ಥೆಯ ಚೊಚ್ಚಲ ಸಿನಿಮಾ ಹೊಂದಿಸಿ ಬರೆಯಿರಿ ಯೂಟ್ಯೂಬ್‌‌ನಲ್ಲಿ ಬಿಡುಗಡೆಯಾಗಿದೆ. ಅಮೇಜಾನ್ ಪ್ರೈಮ್‌ನಲ್ಲಿ ಇನ್ನೂ ಸ್ಟ್ರೀಮ್ ಆಗುತ್ತಿದ್ದರೂ, ಇದು ಭಾರತ, ಯುಎಸ್ ಮತ್ತು ಯುಕೆ ಹೊರತಾಗಿ ಬೇರೆ ದೇಶಗಳಲ್ಲಿ ಸ್ಟ್ರೀಮ್ ಆಗುತ್ತಿಲ್ಲ. ಹಾಗಾಗಿ ಉಳಿದ ಎಲ್ಲ ದೇಶಗಳ ಕನ್ನಡಿಗರಿಗೆ ತಲುಪಬೇಕು. ಥಿಯೇಟರ್‌ನಲ್ಲಿ ಚಿತ್ರ ನೋಡಿರದ ಹಾಗೂ ಒಟಿಟಿ ಚಂದಾದಾರರ ಆಗದ ಎಲ್ಲರಿಗೂ ಚಿತ್ರ ತಲುಪಲಿ ಎನ್ನುವ ಉದ್ದೇಶ ಚಿತ್ರತಂಡ ಈ ನಿರ್ಧಾರ ಮಾಡಿದೆ.

ಚಿತ್ರ ಇಷ್ಟವಾದರೆ, ಹಣ ನೀಡಿ..

ಹೊಂದಿಸಿ ಬರೆಯಿರಿ ಸಿನಿಮಾಗೆ ಹಾಕಿದ್ದ ಹಣ ವಾಪಸ್ ಆಗದಿದ್ದರೂ ಚಿತ್ರತಂಡ ಇಂತಹ ಗಟ್ಟಿ ನಿರ್ಧಾರಕ್ಕೆ ಬಂದಿದೆ. ಹಾಗಂತ ಯೂಟ್ಯೂಬ್‌ನಲ್ಲಿ ರೆಂಟಲ್ ಮೊಡೆಲ್ ಆಯ್ಕೆ ಮಾಡಿ ಒಂದಿಷ್ಟು ಹಣ ನಿಗದಿ ಪಡಿಸಿ ನೋಡಿ ಎಂದು ಕೇಳುವುದಕ್ಕಿಂತ, ಉಚಿತವಾಗಿ ಯೂಟ್ಯೂಬ್‌ನಲ್ಲಿ ಎಲ್ಲರೂ ಸಿನಿಮಾ ನೋಡಲಿ, ಅವರಿಗೆ ಸಿನಿಮಾ ಇಷ್ಟವಾದರೆ ಮಾತ್ರ ತೋಚಿದಷ್ಟು ಹಣ ಕೊಡಲಿ ಎಂಬ ನಿರ್ಧಾರ ಮಾಡಿದೆ ಚಿತ್ರತಂಡ. ಹೀಗಾಗಿ ನಿರ್ಮಾಣ ಸಂಸ್ಥೆ ಸಂಡೇ ಸಿನಿಮಾಸ್‌ನ ಕ್ಯೂ ಆರ್‌ ಕೋಡ್‌, UPI ಐಡಿ ಹಾಗೂ ಬ್ಯಾಂಕ್‌ಗೆ ಸಂಬಂಧಿಸಿದ ಮಾಹಿತಿಯನ್ನು ಲಗತ್ತಿಸಿಲಾಗಿದೆ. ಯೂಟ್ಯೂಬ್‌ ಡಿಸ್ಕ್ರಿಪ್ಷನ್‌ನಲ್ಲೂ ಇದರ ಬಗ್ಗೆ ಮಾಹಿತಿ ಇದೆ.

ಎಲ್ಲರಿಗೂ ತಲುಪಿಸಿ..

ನಮ್ಮ ಹೊಂದಿಸಿ ಬರೆಯಿರಿ ಚಿತ್ರದ ಯೂಟ್ಯೂಬ್‌ ಲಿಂಕ್‌ಅನ್ನು ನಿಮ್ಮ ಸೋಷಿಯಲ್‌ ಮೀಡಿಯಾದಲ್ಲಿ, ವಾಟ್ಸಾಪ್‌ ಸ್ಟೇಟಸ್‌ನಲ್ಲಿ ಶೇರ್‌ ಮಾಡುವ ಮೂಲಕ ಎಲ್ಲರಿಗೂ ತಲುಪಿಸಿ. ನಮ್ಮ ಸಂಸ್ಥೆಯ ಮುಂದಿನ ಸಿನಿಮಾಗಳಿಗೆ ಪ್ರೋತ್ಸಾಹಿಸಿ, ಈಗಾಗಲೇ ಪ್ರೀ ಪ್ರೊಡಕ್ಷನ್ ಹಂತದಲ್ಲಿರುವ ನಮ್ಮ ಮುಂದಿನ ಚಿತ್ರದ ವಿವರಣೆಯನ್ನು ಆದಷ್ಟು ಬೇಗ ಹಂಚಿಕೊಳ್ಳುತ್ತೇವೆ ಎಂದಿದ್ದಾರೆ ರಾಮೇನಹಳ್ಳಿ ಜಗನ್ನಾಥ.

ಸಿನಿಮಾದಲ್ಲಿ ಯಾರೆಲ್ಲ ನಟಿಸಿದ್ದಾರೆ

ರಾಮೇನಹಳ್ಳಿ ಜಗನ್ನಾಥ ನಿರ್ದೇಶನದ ಜೊತೆಗೆ ತಮ್ಮ ಸ್ನೇಹಿತರ ಜೊತೆಗೂಡಿ ಸಂಡೇ ಸಿನಿಮಾಸ್ ಬ್ಯಾನರ್ ನಡಿ ನಿರ್ಮಾಣ ಮಾಡಿರುವ ಹೊಂದಿಸಿ ಬರೆಯಿರಿ ಸಿನಿಮಾದಲ್ಲಿ ಪ್ರವೀಣ್ ತೇಜ್, ನವೀನ್ ಶಂಕರ್, ಶ್ರೀ ಮಹದೇವ್, ಅನಿರುದ್ದ್ ಆಚಾರ್ಯ, ಭಾವನಾ ರಾವ್, ಐಶಾನಿ ಶೆಟ್ಟಿ, ಸಂಯುಕ್ತ ಹೊರ್ನಾಡ್, ಅರ್ಚನಾ ಜೋಯಿಸ್ ಹಲವರು ನಟಿಸಿದ್ದಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ)

ಟಿ20 ವರ್ಲ್ಡ್‌ಕಪ್ 2024