Bhuvanam Gaganam Teaser: ಪ್ರಥ್ವಿ- ಪ್ರಮೋದ್ ನಟನೆಯ ‘ಭುವನಂ ಗಗನಂ’ ಟೀಸರ್ ರಿಲೀಸ್; ನಿರ್ಮಾಪಕರ ಹುಟ್ಟುಹಬ್ಬಕ್ಕೆ ಉಡುಗೊರೆ
ಕಳೆದ ವರ್ಷ ಸೆಟ್ಟೇರಿರುವ ‘ಭುವನಂ ಗಗನಂ’ ಸಿನಿಮಾ ಈಗಾಗಲೇ ಶೇಕಡ 60ರಷ್ಟು ಚಿತ್ರೀಕರಣವನ್ನು ಮುಗಿಸಿದೆ. ಇದೀಗ ಕಿರು ಟೀಸರ್ ಮೂಲಕ ಆಗಮಿಸಿದೆ.
Bhuvanam Gaganam Teaser: ಗಿರೀಶ್ ಮೂಲಿಮನಿ ನಿರ್ದೇಶನ ಸಾರಥ್ಯದಲ್ಲಿ ‘ದಿಯಾ’ ಖ್ಯಾತಿಯ ಪೃಥ್ವಿ ಅಂಬರ್, ‘ಬಾಂಡ್ ರವಿ’ ಖ್ಯಾತಿಯ ಪ್ರಮೋದ್ ನಾಯಕ ನಟರಾಗಿ ನಟಿಸುತ್ತಿರುವ ಸಿನಿಮಾ ‘ಭುವನಂ ಗಗನಂ’. ಎಸ್ ವಿ ಸಿ ಫಿಲ್ಮಂಸ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ ಚೊಚ್ಚಲ ಚಿತ್ರದ ಟೀಸರ್ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ.
ಟ್ರೆಂಡಿಂಗ್ ಸುದ್ದಿ
ಚಿತ್ರದ ನಿರ್ಮಾಪಕ ಎಂ. ಮುನೇಗೌಡ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದೆ. ಕಳೆದ ವರ್ಷ ಸೆಟ್ಟೇರಿರುವ ‘ಭುವನಂ ಗಗನಂ’ ಸಿನಿಮಾ ಈಗಾಗಲೇ ಶೇಕಡ 60ರಷ್ಟು ಚಿತ್ರೀಕರಣವನ್ನು ಮುಗಿಸಿದೆ. 'ಭುವನಂ ಗಗನಂ' ಲವ್ ಸಬ್ಜೆಕ್ಟ್ ಒಳಗೊಂಡ ಫ್ಯಾಮಿಲಿ ಎಮೋಷನ್ಸ್ ಕಥಾಹಂದರದ ಸಿನಿಮಾ. ಚಿತ್ರದಲ್ಲಿ ನಾಯಕಿಯರಾಗಿ ರೆಚೆಲ್ ಡೇವಿಡ್, ರಚನಾ ರೈ ನಟಿಸುತ್ತಿದ್ದಾರೆ. ಈ ಹಿಂದೆ ‘ರಾಜರು’ ಚಿತ್ರ ನಿರ್ದೇಶಿಸಿದ್ದ ಗಿರೀಶ್ ಮೂಲಿಮನಿ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಸ್ಯಾಂಡಲ್ ವುಡ್ ಅಂಗಳದ ಇಬ್ಬರು ಪ್ರತಿಭಾನ್ವಿತ ನಟರ ಕಾಂಬಿನೇಶನ್ ಒಳಗೊಂಡ ಈ ಚಿತ್ರ ಬಿಗ್ ಬಜೆಟ್ ನಲ್ಲಿ ಅದ್ದೂರಿಯಾಗಿ ಮೂಡಿ ಬರುತ್ತಿದೆ. ಈಗಾಗಲೇ ಬೆಂಗಳೂರು, ಮೈಸೂರು ಸುತ್ತಮುತ್ತ 40 ದಿನಗಳ ಚಿತ್ರೀಕರಣವನ್ನು ಚಿತ್ರತಂಡ ಕಂಪ್ಲೀಟ್ ಮಾಡಿದೆ. ಮಂಗಳೂರು, ಕನ್ಯಾಕುಮಾರಿ, ಬೆಂಗಳೂರಿನಲ್ಲಿ ಮುಂದಿನ ಹಂತದ ಚಿತ್ರೀಕರಣವನ್ನು ನಡೆಸಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.
ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಸ್ಪರ್ಶ ರೇಖಾ, ಹರಿಣಿ, ಚೇತನ್ ದುರ್ಗ, ಅಭಿಷೇಕ್ ಒಳಗೊಂಡ ತಾರಾಬಳಗ ಚಿತ್ರದಲ್ಲಿದೆ. ಕೆ. ರವಿವರ್ಮಾ ನಿರ್ದೇಶನದಲ್ಲಿ ಚಿತ್ರದ ಸಾಹಸ ದೃಶ್ಯಗಳು ಮೂಡಿ ಬರಲಿದ್ದು, ಉದಯ್ ಲೀಲಾ ಕ್ಯಾಮೆರಾ ವರ್ಕ್, ಗುಮ್ಮಿನೇನಿ ವಿಜಯ್ ಮ್ಯೂಸಿಕ್, ಸುನೀಲ್ ಕಶ್ಯಪ್ ಸಂಕಲನ ಚಿತ್ರಕ್ಕಿದೆ.
ಸಿನಿಮಾ ಸಂಬಂಧಿ ಈ ಸುದ್ದಿಗಳನ್ನೂ ಓದಿ
Kabzaa Day 1 Collection: ಮೊದಲ ದಿನ ‘ಕಬ್ಜ’ ಬೊಕ್ಕಸಕ್ಕೆ ಹರಿದು ಬಂತು 55 ಕೋಟಿ ರೂಪಾಯಿ.. ಯಾವ ಭಾಷೆಯಲ್ಲಿ ಎಷ್ಟೆಷ್ಟು?
ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿ ನಟಿಸಿರುವ ಕಬ್ಜ ಸಿನಿಮಾಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಿನ್ನೆ (ಮಾರ್ಚ್ 17) ಬಿಡುಗಡೆ ಆಗಿದ್ದ ಈ ಸಿನಿಮಾ ಪ್ರೇಕ್ಷಕರನ್ನು ಮತ್ತೊಂದು ಹೊಸ ಲೋಕಕ್ಕೆ ಕರೆದೊಯ್ದಿದೆ. ಮೆಚ್ಚುಗೆಯ ಜತೆಗೆ ಕಲೆಕ್ಷನ್ ವಿಚಾರದಲ್ಲಿಯೂ ಈ ಸಿನಿಮಾ ದಾಖಲೆಯನ್ನು ಬರೆದಿದೆ. ಅಂದರೆ, ಮೊದಲ ದಿನವೇ ಒಟ್ಟಾರೆಯಾಗಿ 55 ಕೋಟಿ ರೂ. ಗಳಿಕೆ ಕಂಡಿದೆ ಕಬ್ಜ. ಪೂರ್ತಿ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ