ಕಿಚ್ಚ ಸುದೀಪ್ ಎನ್ನುವ ಬದಲು ಹುಚ್ಚ ಸುದೀಪ್ ಎಂದ ಕೆ ಮಂಜು; ನಂತರ ಏನಾಯ್ತು ನೋಡಿ
ವಿಷ್ಣು ಪ್ರಿಯ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ನಿರ್ಮಾಪಕ ಕೆ ಮಂಜು ಅವರು ಕಿಚ್ಚ ಸುದೀಪ್ ಎನ್ನುವ ಬದಲಾಗಿ ತಪ್ಪಿ ಹುಚ್ಚ ಸುದೀಪ್ ಎಂದಿದ್ದಾರೆ.

ವಿಷ್ಣು ಪ್ರಿಯ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ನಿರ್ಮಾಪಕ ಕೆ ಮಂಜು ಮಾತನಾಡುತ್ತಾ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ಕಿಚ್ಚ ಸುದೀಪ್ ಅವರ ಕುರಿತು ಮಾತನಾಡುತ್ತಾ ಇರುತ್ತಾರೆ. ತಮ್ಮ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಸಹಕಾರ ನೀಡಿದವರೆಲ್ಲರನ್ನೂ ನೆನಪು ಮಾಡಿಕೊಳ್ಳುತ್ತಾ ಕಿಚ್ಚ ಸುದೀಪ್ ಅವರಿಗೂ ಧನ್ಯವಾದ ತಿಳಿಸುತ್ತಾರೆ. ಆದರೆ ಆ ಸಂದರ್ಭದಲ್ಲಿ ಕಿಚ್ಚ ಸುದೀಪ್ ಎನ್ನುವ ಬದಲಾಗಿ ಅವರು ಬಾಯ್ತಪ್ಪಿ ಹುಚ್ಚ ಸುದೀಪ್ ಎಂದು ಹೇಳುತ್ತಾರೆ. ಆಗ ಎಲ್ಲರ ನಗು ಕೇಳಿಸಲು ಆರಂಭವಾಗಿ ತನ್ನ ಮಾತಿನಲ್ಲಿ ತಪ್ಪಾಗಿದೆ ಎಂದು ಅರಿತ ಅವರು ತಕ್ಷಣ ಬೇರೆ ರೀತಿಯಲ್ಲಿ ಮಾತನ್ನು ಬದಲಾಯಿಸಿ, ತಾನು ಹುಚ್ಚ ಸುದೀಪ್ ಎಂದು ಹೇಳುವುದಕ್ಕೂ ಕಾರಣವಿದೆ ಎನ್ನುತ್ತಾರೆ. ನಂತರ ಕೆ ಮಂಜು ಅವರ ಬಗ್ಗೆ ಸುದೀಪ್ ಕೂಡ ಮಾತನಾಡಿದ್ದಾರೆ. ಆ ಸಂದರ್ಭದಲ್ಲಿ ಏನಾಯ್ತು ಎಂಬ ವಿವರ ಇಲ್ಲಿದೆ.
ಸುದೀಪ್ ಬಗ್ಗೆ ಕೆ ಮಂಜು ಮಾತು
ಕೆ ಮಂಜು ಅವರ ಹುಟ್ಟುಹಬ್ಬದ ದಿನವೇ ಅವರ ಮಗ ನಾಯಕನಾಗಿ ಅಭಿನಯಿಸುತ್ತಿರುವ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಆ ಸಂದರ್ಭದಲ್ಲಿ ಕೆ ಮಂಜು ಮಾತನಾಡಿದ್ದಾರೆ. ಸುದೀಪ್ ಅವರ ಕಾಲಿಗೆ ಏಟು ಬಿದ್ದಿದೆ. ಆದರೂ ಅವರು ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಕಲಾವಿದರಾಗಿ, ಆಟಗಾರನಾಗಿ, ಬಿಗ್ ಬಾಸ್ ನಿರೂಪಕನಾಗಿ ಎಲ್ಲರಿಗೂ ಆತ್ಮೀಯವಾಗಿ ಇರುವ ವ್ಯಕ್ತಿ ಸುದೀಪ್. ಸಕಲವನ್ನು ಮಾಡಿ ಜಯಿಸಬಲ್ಲ ಶಕ್ತಿ ಇರುವವರು. ನಿಮಗೆ ನಾನು ಆಭಾರಿಯಾಗಿರುತ್ತೇನೆ ಎಂದು ಹೇಳಿದ್ದಾರೆ. ಹಿಂದೆಲ್ಲ100, 120 ಸಿನಿಮಾಗಳು ಬರುತ್ತಿದ್ದವು ಈಗ 290, 300 ಸಿನಿಮಾ ಬರ್ತಾ ಇದೆ. ಆದರೆ ನಿಲ್ಲುತ್ತಿಲ್ಲ. ಕನ್ನಡ ಚಿತ್ರರಂಗದಲ್ಲಿ ನಿಲ್ಲುವಂತ ಸಿನಿಮಾ ಮಾಡಬೇಕು ಎಂದು ಮಂಜು ಹೇಳಿದ್ದಾರೆ. ಅದೇ ಸಂದರ್ಭದಲ್ಲಿ ಯುವ ಜನತೆ ಸಿನಿಮಾ ಮಾಡುತ್ತಿದ್ದರೆ ಆ ಹುಡುಗರನ್ನು ಬೆಳೆಸಿ, ಚಿತ್ರರಂಗ ಉಳಿಬೇಕು, ಬೆಳಿಬೇಕು ಈ ಎಲ್ಲ ಆಸೆ ನಿಮಗೂ ಇದ್ರೆ ನೀವೆಲ್ಲ ಹಿರಿಯ ಕಲಾವಿದರು ಸಹಕಾರ ಮಾಡಬೇಕು ಎಂದು ಹೇಳಿದ್ದಾರೆ. ಕಿಚ್ಚ ಸುದೀಪ್ ಅವರ ಸಹಕಾರವನ್ನು ನೆನಪಿಸಿಕೊಂಡಿದ್ದಾರೆ.
ಕಾರ್ಯಕ್ರಮಕ್ಕೆ ಬಂದಿರುವ ಎಲ್ಲರಿಗೂ ಧನ್ಯವಾದ ತಿಳಿಸುತ್ತಾ, ಕಿಚ್ಚ ಸುದೀಪ್ ಅವರಿಗೂ ಧನ್ಯವಾದ ಹೇಳಲು ಮುಂದಾಗುತ್ತಾರೆ. ಆಗ ಕಿಚ್ಚ ಸುದೀಪ್ ಎನ್ನುವ ಬದಲು ಬಾಯ್ತಪ್ಪಿ ಹುಚ್ಚ ಸುದೀಪ್ ಎನ್ನುತ್ತಾರೆ. ಆಗ ಎಲ್ಲರ ನಗು ಕೇಳಿ ಮತ್ತೆ ತಮ್ಮ ಮಾತನ್ನು ಸರಿಪಡಿಸಿಕೊಳ್ಳುತ್ತಾರೆ ವೇದಿಕೆಯಲ್ಲೇ ಕ್ಷಣಾರ್ಧದಲ್ಲಿ ಆ ತಪ್ಪನ್ನು ತಿದ್ದಿಕೊಳ್ಳುತ್ತಾರೆ. ಈ ಸಿನಿಮಾ ನೋಡ್ದಾಗ ಹುಚ್ಚ ಫೀಲಿಂಗ್ ಬಂತು. ಉಸಿರೇ ಉಸಿರೇ ಹಾಡುಗಳ ಫೀಲಿಂಗ್ ಬಂತು ಹುಚ್ಚ ಸಿನಿಮಾದ ತರ ಈ ಸಿನಿಮಾಗೂ ಯಶಸ್ಸು ಸಿಗಲಿ ಎನ್ನುವ ಕಾರಣಕ್ಕೆ ಆ ರೀತಿ ಹೇಳಿದೆ ಮತ್ತೇನಿಲ್ಲ ಎಂದು ಹೇಳಿದ್ದಾರೆ.
ನಗುತ್ತಲೇ ಉತ್ತರಿಸಿದ ಕಿಚ್ಚ ಸುದೀಪ್
ಕಿಚ್ಚ ಸುದೀಪ್ ಅವರಿಗೂ ಅಷ್ಟು ಸುಲಭವಾಗಿ ಎಲ್ಲ ಅವಕಾಶಗಳು ಒದಗಿ ಬಂದಿರಲಿಲ್ಲ. ತಾಳ್ಮೆಯಿಂದರಬೇಕು ಆಗ ಸಿನಿಮಾ ಗೆಲ್ಲುತ್ತದೆ. ಹೊಸ ಕಲಾವಿದರೆಲ್ಲರೂ ದಯವಿಟ್ಟು ನಿಧಾನಕ್ಕೆ ತಾಳ್ಮೆಯಿಂದ ಯೋಚನೆ ಮಾಡಿ, ಸಿನಿಮಾ ಮಾಡಿ. ಲಾಭ ಮಾತ್ರ ಅಲ್ಲ ನಷ್ಟವನ್ನೂ ಸಹಿಸಿಕೊಳ್ಳುವ ಶಕ್ತಿ ಎಲ್ಲರಿಗೂ ಬರಲಿ ಎಂದಿದ್ದಾರೆ. ನಂತರ ಮಾತನಾಡಿದ ಕಿಚ್ಚ ಸುದೀಪ್ ಸಿನಿಮಾ ಒಳ್ಳೆ ಯಶಸ್ಸು ಪಡೆಯಲಿ ಎಂದು ಹಾರೈಸುತ್ತಾ ಕೆ ಮಂಜು ಅವರು ವೇದಿಕೆ ಮೇಲೆ ತಮ್ಮ ತಪ್ಪನ್ನು ಚೆನ್ನಾಗೇ ತಿದ್ದಿಕೊಂಡರು ಎಂದು ಮಂದಹಾಸ ಬೀರಿದ್ದಾರೆ.
ಇದೇ ತಿಂಗಳು ವಿಷ್ಣು ಪ್ರಿಯ ಸಿನಿಮಾ ಬಿಡುಗಡೆ
ಇದೇ ತಿಂಗಳು, ಫೆ 21ನೇ ತಾರೀಖು ರಾಜ್ಯಾದ್ಯಂತ ವಿಷ್ಣು ಪ್ರಿಯ ಸಿನಿಮಾ ಬಿಡುಗಡೆಯಾಗಲಿದೆ. ನಾನು 48 ಸಿನಿಮಾ ಮಾಡಿದ್ದೇನೆ. ತಮಿಳು, ಮಲಯಾಳಂ 2 ಒಟ್ಟು 50 ಸಿನಿಮಾ ಮಾಡಿದ್ದೇನೆ. ಈ ಕ್ಷೇತ್ರದ ಕಷ್ಟ ನಷ್ಟಗಳು ನನಗೆ ತಿಳಿದಿವೆ ಎನ್ನುತ್ತಾ ಮಾತನಾಡಲು ಆರಂಭಿಸಿದ ಅವರು ವಿಷ್ಣುವರ್ಧನ್ ಅವರನ್ನು ನೆನಪು ಮಾಡಿಕೊಳ್ಳುತ್ತಾರೆ. ಪ್ರತಿಯೊಂದು ವರ್ಷವೂ ಒಂದೊಂದು ಸಿನಿಮಾವನ್ನು ಮಾಡೋಣ ಎಂದು ವಿಷ್ಣುವರ್ಧನ್ ಹೇಳಿದ್ರು. ನಾನು ಒರಟ, ಹುಂಬ ಎಂದು ಕರೆಸಿಕೊಳ್ಳುತ್ತಿದ್ದೆ. ಇವತ್ತು ಈ ಮಟ್ಟಕ್ಕಾಗಿದ್ದೇನೆ ಎಂದರೆ ಅದಕ್ಕೆ ಕಾರಣ ವಿಷ್ಣುವರ್ಧನ್. ಅವರನ್ನು ನಾನು ದಿನವೂ ನೆನಪಿಸಿಕೊಳ್ಳುತ್ತೇನೆ, ಅವರನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಭಾವುಕರಾಗಿದ್ದಾರೆ.
