Puneeth Rajkumar: ನೀನೆ ನೀನೆ ರಾಜಕುಮಾರ ಹಾಡಿನ ಮೂಲಕ ಅಪ್ಪುಗೆ ಪ್ರೀತಿಯ ಸ್ವರಾರ್ಪಣೆ; ಇಲ್ಲಿದೆ ಭಾವ ತುಂಬಿದ ಸುಂದರ ಸಾಲುಗಳು
ಕನ್ನಡ ಸುದ್ದಿ  /  ಮನರಂಜನೆ  /  Puneeth Rajkumar: ನೀನೆ ನೀನೆ ರಾಜಕುಮಾರ ಹಾಡಿನ ಮೂಲಕ ಅಪ್ಪುಗೆ ಪ್ರೀತಿಯ ಸ್ವರಾರ್ಪಣೆ; ಇಲ್ಲಿದೆ ಭಾವ ತುಂಬಿದ ಸುಂದರ ಸಾಲುಗಳು

Puneeth Rajkumar: ನೀನೆ ನೀನೆ ರಾಜಕುಮಾರ ಹಾಡಿನ ಮೂಲಕ ಅಪ್ಪುಗೆ ಪ್ರೀತಿಯ ಸ್ವರಾರ್ಪಣೆ; ಇಲ್ಲಿದೆ ಭಾವ ತುಂಬಿದ ಸುಂದರ ಸಾಲುಗಳು

Puneeth Rajkumar: ಎಲ್ಲರ ಅಚ್ಚುಮೆಚ್ಚಿನ ನಟ ದಿವಂಗತ ಪುನೀತ್‌ ರಾಜ್‌ಕುಮಾರ್ ಅವರ ಕುರಿತು ಸಾಕಷ್ಟು ಹಾಡುಗಳು ಹುಟ್ಟಿಕೊಂಡಿವೆ. ಎಷ್ಟೋ ಹಾಡುಗಳು ಎಲ್ಲರಿಗೂ ಕಂಠಪಾಟವಾಗಿವೆ. “ನೀನೆ ನೀನೆ ರಾಜಕುಮಾರ” ಎಂಬ ಹೊಸ ಹಾಡೊಂದು ನಿಮ್ಮ ಮುಂದಿದೆ.

ನೀನೆ ನೀನೆ ರಾಜಕುಮಾರ
ನೀನೆ ನೀನೆ ರಾಜಕುಮಾರ

ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿ, ಸಾಕಷ್ಟು ಜನರ ನೆಚ್ಚಿನ ನಟನಾಗಿ ಜೀವಿಸಿದ್ದ ಪುನೀತ್ ರಾಜ್‌ಕುಮಾರ್ ಅವರನ್ನು ಎಲ್ಲರೂ ಪ್ರೀತಿಯಿಂದ ಅಪ್ಪು ಎಂದೇ ಕರೆಯುತ್ತಾರೆ. ಆದರೆ ಅಪ್ಪು ಇಲ್ಲವಾದ ದಿನದಿಂದ ಇಂದಿನವರೆಗೂ ಅವರಿಲ್ಲ ಎಂಬ ನೋವು ಮಾತ್ರ ಸದಾ ಕಾಡುತ್ತದೆ. ಅಭಿಮಾನಿಗಳು ತಮ್ಮ ಪ್ರೀತಿಯ ನಟ ಪುನೀತ್ ರಾಜ್‌ಕುಮಾರ್ ಅವರನ್ನು ಒಂದಲ್ಲ ಒಂದು ರೀತಿಯಲ್ಲಿ ನೆನೆಯುತ್ತಾರೆ. 'ನೀನೆ ನೀನೆ ರಾಜಕುಮಾರ' ಎಂಬ ಹಾಡೊಂದು ಜನವರಿ 26ರಂದು ಬಿಡುಗಡೆಯಾಗಿದೆ. ಇದುವರೆಗೆ (ಫೆಬ್ರವರಿ 4) ಎಂಟು ಸಾವಿರಕ್ಕೂ ಅಧಿಕ ಜನರು ಈ ವಿಡಿಯೋ ಸಾಂಗ್‌ ವೀಕ್ಷಿಸಿದ್ದಾರೆ. ಆ ಹಾಡಿನ ಸುಂದರ ಸಾಲುಗಳನ್ನು ನಾವಿಲ್ಲಿ ನೀಡಿದ್ದೇವೆ.

ಇಂತಿವೆ ಹಾಡಿನ ಸಾಲುಗಳು

ಕೋಟಿ ಕನ್ನಡ ಉಸಿರ

ಅಧಿಕಾರಿ ನೀನೇ

ನೀನೆ ನೀನೆ ರಾಜಕುಮಾರ

ಮನದ ಮಂದಿರ ತುಂಬ

ನಿನ್ನ ನಗುವೇನೆ

ನೀನೆ ನೀನೆ ರಾಜಕುಮಾರ

ತಿರುಗೋಕೆ ಭೂಮಿ

ಆ ಆ ಆ ಆ…

ಆ ಸೂರ್ಯ ಬೇಕು

ಹಮ್ಮಿಂಗ್/ಸ್ವರಸ್

ತಿರುಗೋಕೆ ಭೂಮಿಗೆ

ಆ ಸೂರ್ಯ ಬೇಕು

ಅಭಿಮಾನಕ್ಕೆ ನೀನೆ ಸಾಕು, ರಾಜಕುಮಾರ....

ನೀನೆ ನೀನೆ ನೀನೇ ರಾಜಕುಮಾರ

ನೀನೆ ನೀನೆ ನೀನೇ ರಾಜಕುಮಾರ

ಓಹೋ ಓಹೋ ಓಹೋ ಓಹೋ….

ಚರಣ 1

ಕೊಡುವ ಕೈಯಿ ನೀನದು

ಕಾಯೋ ಕರುಣೆ ನೀನದು

ಪರರ ನೋವಿಗೆ ಮನಸು

ಕರಗದೆ ಇರದು...

ಕೊಡುವ ಕೈಯಿ ನೀನದು

ಕಾಯೋ ಕರುಣೆ ನೀನದು

ಪರರ ನೋವಿಗೆ ಮನಸು

ಕರಗದೆ ಇರದು...

ನಿನ್ನ ಖುಷಿಯೇ ಹರಾಡಿ

ಲೋಕದ ಪೂರ....

ಆ ಆ ಆ ಆ ಸಮಪಗಮನಿದನಿಸ

ನಿನ್ನ ಖುಷಿಯೇ ಹರಾಡಿ

ಲೋಕದ ಪೂರ....

ನೂರು ಜನರ ದಾರಿ

ಆಗಿದೆ ನೇರಾ...

ನೀನೆ ನೀನೆ ನೀನೆ ರಾಜಕುಮಾರ

ಚರಣ 2

ಕಲಿಯೋ ಮನಸು ಹಿರಿದು

ಮೋಸ ಕಪಟ ಇರದು

ನೀನ ಮುಂದೆ ಒಮ್ಮಮ್ಮೆ

ಆಗಸ ಕಿರಿದು..

ಕಲಿಯೋ ಮನಸು ಹಿರಿದು

ಮೋಸ ಕಪಟ ಇರದು

ನೀನ ಮುಂದೆ ಒಮ್ಮಮ್ಮೆ

ಆಗಸ ಕಿರಿದು..

ನೀನು ಕಲಿಸಿ ಹೋದೆ

ಜೀವನ ಸಾರ

ಆ ಆ ಆ ಆ ಸಮಪಗಮನಿದನಿಸ

ನೀನು ಕಲಿಸಿ ಹೋದೆ

ಜೀವನ ಸಾರ

ನಿನ್ನ ಒಂದೊಂದು ಮಾತು

ಭೂಮಿ ಭಾರ...

ನೀನೆ ನೀನೆ ನೀನೆ ರಾಜಕುಮಾರ

ಕೋಟಿ ಕನ್ನಡ ಉಸಿರ

ಅಧಿಕಾರಿ ನೀನೇ

ನೀನೆ ನೀನೆ ರಾಜಕುಮಾರ

ಮನದ ಮಂದಿರ ತುಂಬ

ನಿನ್ನ ನಗುವೇನೆ

ನೀನೆ ನೀನೆ ರಾಜಕುಮಾರ

ತಿರುಗೋಕೆ ಭೂಮಿಗೆ

ಆ ಸೂರ್ಯ ಬೇಕು

ಅಭಿಮಾನಗಳಿಗೆ ನೀನೆ ಸಾಕು ರಾಜಕುಮಾರ

ನೀನೆ ನೀನೆ ರಾಜಕುಮಾರ

ನೀನೆ ನೀನೆ ರಾಜಕುಮಾರ

ಗಾಯನ: ಸುನಿಲ್ ಕೋಶಿ, ಸ್ವರೂಪ್ ರಮೇಶ್, ಸಚಿನ್ ಪ್ರಕಾಶ್, ಸುಹಾಸ್ ಎಂ, ಆಕರ್ಷ್ ಅನಿಲ್‌ಕುಮಾರ್, ಅನಘಾ ಎಂ, ಶ್ರೀಕರ ಕೆ.ಎ, ಸಚಿನ್ ಅರಬಳ್ಳಿ, ಪ್ರತಿಶ್ರುತಿ ರಾಯ್, ಜಿ. ಕಲ್ಯಾಣ್, ಅರುಷಿ ರತೀಶ್, ರಿಶಾಲ್ ಮೆಲ್ಬಾ ಕ್ರಾಸ್ತಾ, ಸಜ್ವ ಕ್ರಾಸ್ತಾ H.J, ವಿನ್ಯಾಸ್ S.P. ಸ್ವರಾ ಅಗರವಾಲ್
ಸಾಹಿತ್ಯ: ಪವನ್ ಭಟ್
ಮ್ಯೂಸಿಕ್: ಸುನಿಲ್ ಕೋಶಿ

Whats_app_banner