Pushpa 2 Collection: 32 ದಿನಗಳಲ್ಲಿ 1831 ಕೋಟಿ ಗಳಿಸಿದ ಪುಷ್ಪ 2; ಬಾಹುಬಲಿಯನ್ನೂ ಮೀರಿಸಿ ದಂಗಲ್ ಮೇಲೆ ಕಣ್ಣಿಟ್ಟ ಪುಷ್ಪರಾಜ್
ಕನ್ನಡ ಸುದ್ದಿ  /  ಮನರಂಜನೆ  /  Pushpa 2 Collection: 32 ದಿನಗಳಲ್ಲಿ 1831 ಕೋಟಿ ಗಳಿಸಿದ ಪುಷ್ಪ 2; ಬಾಹುಬಲಿಯನ್ನೂ ಮೀರಿಸಿ ದಂಗಲ್ ಮೇಲೆ ಕಣ್ಣಿಟ್ಟ ಪುಷ್ಪರಾಜ್

Pushpa 2 Collection: 32 ದಿನಗಳಲ್ಲಿ 1831 ಕೋಟಿ ಗಳಿಸಿದ ಪುಷ್ಪ 2; ಬಾಹುಬಲಿಯನ್ನೂ ಮೀರಿಸಿ ದಂಗಲ್ ಮೇಲೆ ಕಣ್ಣಿಟ್ಟ ಪುಷ್ಪರಾಜ್

ಡಿಸೆಂಬರ್​ 5ರಂದು ಬಿಡುಗಡೆಯಾದ ಮೊದಲ ದಿನವೇ 294 ಕೋಟಿ ಗಳಿಸಿದ್ದ ಪುಷ್ಪ 2 ಸಿನಿಮಾ ಇದೀಗ ಕಲೆಕ್ಷನ್ ವಿಚಾರದಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದ್ದ ಬಾಹುಬಲಿ-2 ಚಿತ್ರವನ್ನು ಹಿಂದಿಕ್ಕಿದೆ. ಪುಷ್ಪ 32 ದಿನಗಳಲ್ಲಿ ವಿಶ್ವಾದ್ಯಂತ 1831 ಕೋಟಿ ರೂ ಗಳಿಸಿ ಈ ದಾಖಲೆ ನಿರ್ಮಿಸಿದೆ.

Pushpa 2 Collection: 32 ದಿನಗಳಲ್ಲಿ ಪುಷ್ಪ 2 ಗಳಿಸಿದ್ದೆಷ್ಟು? ಬಾಹುಬಲಿಯನ್ನೂ ಮೀರಿಸಿ ದಂಗಲ್ ಮೇಲೆ ಕಣ್ಣಿಟ್ಟ ಪುಷ್ಪರಾಜ್
Pushpa 2 Collection: 32 ದಿನಗಳಲ್ಲಿ ಪುಷ್ಪ 2 ಗಳಿಸಿದ್ದೆಷ್ಟು? ಬಾಹುಬಲಿಯನ್ನೂ ಮೀರಿಸಿ ದಂಗಲ್ ಮೇಲೆ ಕಣ್ಣಿಟ್ಟ ಪುಷ್ಪರಾಜ್

ಐಕಾನ್​ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2: ದಿ ರೂಲ್ ತನ್ನ ಅಬ್ಬರ ಮುಂದುವರೆಸಿದೆ. ಸಿನಿಮಾ ಬಿಡುಗಡೆಯಾದ ತಿಂಗಳಲ್ಲೇ ಬಾಹುಬಲಿ 2 ನಿರ್ಮಿಸಿದ್ದ ಆಲ್​ಟೈಮ್​ ರೆಕಾರ್ಡ್ ಅನ್ನೇ ಪುಡಿಗಟ್ಟಿದೆ. ದಿನದಿಂದ ದಿನಕ್ಕೆ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಾ ಸಾಗುತ್ತಿರುವ ಪುಷ್ಪ ರಾಜ್​ನ ಕಣ್ಣು ಇದೀಗ ದಂಗಲ್​ ಮೇಲೆ ಬಿದ್ದಿದೆ. ಪ್ರಸ್ತುತ ಭಾರತದಲ್ಲೇ 1438 ಕೋಟಿ ಕಮಾಯಿ ಮಾಡಿರುವ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ ಅಭಿನಯದ ಪುಷ್ಪ 2 ಚಿತ್ರ ಒಟ್ಟಾರೆ ವಿಶ್ವದಾದ್ಯಂತ 1831 ಕೋಟಿ ರೂಪಾಯಿ ಗಳಿಸಿ ಬಾಕ್ಸಾಫೀಸ್​ನಲ್ಲಿ ಮುನ್ನುಗ್ಗುತ್ತಿದೆ. 32 ದಿನಗಳಲ್ಲೇ ಈ ಮೈಲಿಗಲ್ಲು ನೆಟ್ಟಿದ್ದು, ಪುಷ್ಪರಾಜ್​ನ ಹವಾ ಇನ್ನೂ ತಗ್ಗಿಲ್ಲ ಎಂಬುದಕ್ಕೆ ಈ ಅಂಕಿಅಂಶವೇ ಸಾಕ್ಷಿ.

ಬಾಹುಬಲಿ 2 ಸಿನಿಮಾ ಹಿಂದಿಕ್ಕಿದ ಪುಷ್ಪ 2

32 ದಿನಗಳಲ್ಲಿ ಪುಷ್ಪ-2 ವಿಶ್ವಾದ್ಯಂತ 1831 ಕೋಟಿ ಗಳಿಸಿದೆ ಎಂದು ಚಿತ್ರಕ್ಕೆ ಬಂಡವಾಳ ಹೂಡಿದ ಮೈತ್ರಿ ಮೂವಿ ಮೇಕರ್ಸ್ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ. #Pushpa2TheRule ಈಗ ಭಾರತೀಯ ಚಿತ್ರರಂಗದ ಇಂಡಸ್ಟ್ರಿ ಹಿಟ್ ಆಗಿದ್ದು ಅತ್ಯಧಿಕ ಕಲೆಕ್ಷನ್ ಮಾಡಿದ ಸಿನಿಮಾ ಆಗಿದೆ. ವಿಶ್ವಾದ್ಯಂತ 32 ದಿನಗಳಲ್ಲಿ 1831 ಕೋಟಿಗಳ ಒಟ್ಟು ಮೊತ್ತವನ್ನು ದಾಟಿ ಈ ದಾಖಲೆ ಮಾಡಿದೆ. ಎಸ್‌ಎಸ್ ರಾಜಮೌಳಿ ಅವರ ಬಾಹುಬಲಿ 2 ಇದುವರೆಗೆ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಪ್ರಭಾಸ್, ರಾಣಾ ದಗ್ಗುಬಾಟಿ, ತಮನ್ನಾ ಭಾಟಿಯಾ ಮತ್ತು ಅನುಷ್ಕಾ ಶೆಟ್ಟಿ ಸೇರಿದಂತೆ ದೊಡ್ಡ ತಾರಾಗಣ ಹೊಂದಿದ್ದ ಬಾಹುಬಲಿ - 2 ಚಿತ್ರವು 1800+ ಕೋಟಿ ಸಂಪಾದಿಸಿತ್ತು ಎಂದು ವರದಿಯಾಗಿತ್ತು. ಆದರೀಗ ಬಾಹುಬಲಿ 2 ಕಲೆಕ್ಷನ್ ಅನ್ನು ಪುಷ್ಪಾ 2 ಮುರಿದಿದೆ.

ದಂಗಲ್ ಕಲೆಕ್ಷನ್ ಬೀಟ್‌ ಮಾಡುವ ಸಾಧ್ಯತೆ

Sacnilk ಪ್ರಕಾರ ಪುಷ್ಪಾ 2 ಭಾರತದಲ್ಲಿ 32 ದಿನಗಳಲ್ಲಿ 1438 ಕೋಟಿ ಗಳಿಸಿದರೆ, ಬಾಹುಬಲಿ 1416.9 ಕೋಟಿ ರೂ ಗಳಿಸಿತ್ತು. ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರವೆಂದರೆ ಅಮೀರ್ ಖಾನ್-ನಟನೆಯ ದಂಗಲ್. ಈ ಸಿನಿಮಾ ಸಹ ವಿದೇಶದಲ್ಲಿ ಹೆಚ್ಚಿನ ಹಣವನ್ನು ಗಳಿಸಿತ್ತು. ಭಾರತದಲ್ಲಿ 535 ಕೋಟಿ ಗಳಿಸಿತ್ತು. ಆದರೆ, ದಂಗಲ್ ವಿಶ್ವಾದ್ಯಂತ 2000 ಕೋಟಿ ಕಲೆಕ್ಷನ್ ಮಾಡಿದ್ದು, ಪುಷ್ಪ 2 ಆ ದಾಖಲೆ ಮೇಲೆ ಕಣ್ಣಿಟ್ಟಿದೆ. ದಂಗಲ್ ದಾಖಲೆಯನ್ನು ಪುಷ್ಪರಾಜ್ ಮುರಿಯುತ್ತಾನಾ ಇಲ್ಲವೇ ಎಂಬುದನ್ನು ಕಾದುನೋಡೋಣ.

ಪುಷ್ಪಾ 3 ಚಿತ್ರಕ್ಕೆ ಕಾತರ

ಪುಷ್ಪ 2: ದಿ ರೂಲ್ ಬಿಡುಗಡೆಯಾದ ಮೊದಲ ದಿನವೇ ಮೊದಲ ದಿನವೇ (ಡಿಸೆಂಬರ್ 5 ರಂದು) 294 ಕೋಟಿ ಕಲೆಕ್ಷನ್ ಮಾಡಿತ್ತು. ಪುಷ್ಪ 2 ಸಿನಿಮಾ ಸುಕುಮಾರ್ ಅವರ 2021ರ ಚಲನಚಿತ್ರ ಪುಷ್ಪ: ದಿ ರೈಸ್‌ನ ಉತ್ತರ ಭಾಗವಾಗಿದ್ದು, ಇದು 300 ಕೋಟಿಗೂ ಹೆಚ್ಚು ಸಂಪಾದನೆ ಮಾಡಿತ್ತು. ಪುಷ್ಪಾ 1, ಪುಷ್ಪಾ 2 ಬಹುದೊಡ್ಡ ಯಶಸ್ಸು ಕಂಡಿದ್ದು, ಪುಷ್ಪಾ 3 ನೇ ಚಿತ್ರಕ್ಕೆ ಅಲ್ಲು ಅರ್ಜುನ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಶೂಟಿಂಗ್ ಯಾವಾಗ ಆರಂಭವಾಗುತ್ತದೆ ಎಂಬುದು ಇನ್ನೂ ಮಾಹಿತಿ ಸಿಕ್ಕಿಲ್ಲ.

Whats_app_banner