ಬಾಕ್ಸ್‌ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದ ಪುಷ್ಪ 2! ಹೊಸ ಇತಿಹಾಸ ಬರೆದ ಅಲ್ಲು ಅರ್ಜುನ್‌, ಎರಡನೇ ದಿನವೂ ತಗ್ಗದ ಆರ್ಭಟ
ಕನ್ನಡ ಸುದ್ದಿ  /  ಮನರಂಜನೆ  /  ಬಾಕ್ಸ್‌ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದ ಪುಷ್ಪ 2! ಹೊಸ ಇತಿಹಾಸ ಬರೆದ ಅಲ್ಲು ಅರ್ಜುನ್‌, ಎರಡನೇ ದಿನವೂ ತಗ್ಗದ ಆರ್ಭಟ

ಬಾಕ್ಸ್‌ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದ ಪುಷ್ಪ 2! ಹೊಸ ಇತಿಹಾಸ ಬರೆದ ಅಲ್ಲು ಅರ್ಜುನ್‌, ಎರಡನೇ ದಿನವೂ ತಗ್ಗದ ಆರ್ಭಟ

Pushpa 2 Box office Collection Day 2: ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಮೊದಲ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ದಾಖಲೆ RRR ಸಿನಿಮಾ ಹೆಸರಿನಲ್ಲಿತ್ತು. ಈಗ ಅಲ್ಲು ಅರ್ಜುನ್ ಅವರ ಪುಷ್ಪ 2 ಆ ದಾಖಲೆಯನ್ನು ಮುರಿದಿದೆ.

ಹೊಸ ಇತಿಹಾಸ ಬರೆದ ಅಲ್ಲು ಅರ್ಜುನ್‌
ಹೊಸ ಇತಿಹಾಸ ಬರೆದ ಅಲ್ಲು ಅರ್ಜುನ್‌

Pushpa 2 Box Office Collection Day 2: ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಸಿನಿಮಾ ಇದೀಗ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ವಿಚಾರದಲ್ಲಿ ಹೊಸ ದಾಖಲೆ ಬರೆದಿದೆ. ಸುಕುಮಾರ್ ನಿರ್ದೇಶನದ 'ಪುಷ್ಪ 2: ದಿ ರೂಲ್' ಡಿಸೆಂಬರ್ 5 ರಂದು (ಗುರುವಾರ) ವಿಶ್ವದಾದ್ಯಂತ ತೆರೆಕಂಡಿದೆ. ಆರು ಭಾಷೆಗಳಲ್ಲಿ ಜಗತ್ತಿನಾದ್ಯಂತ ಒಟ್ಟು12,500 ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಪುಷ್ಪ 2, ಮೊದಲ ದಿನವೇ ದಾಖಲೆಯ 294 ಕೋಟಿ ರೂಪಾಯಿ ಗಳಿಸಿದೆ ಎಂದು 'ಮೈತ್ರಿ ಮೂವಿ ಮೇಕರ್ಸ್' ಅಧಿಕೃತವಾಗಿ ಘೋಷಿಸಿದೆ. ಮೊದಲ ದಿನ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ ಪುಷ್ಪ 2 ಸಿನಿಮಾ.

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹಾದ್ ಫಾಸಿಲ್, ಜಗಪತಿ ಬಾಬು, ರಾವ್ ರಮೇಶ್, ಸುನಿಲ್ ಮತ್ತು ಅನಸೂಯಾ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಐಟಂ ಸಾಂಗ್ ಮೂಲಕ ಶ್ರೀಲೀಲಾ ಗಮನ ಸೆಳೆದಿದ್ದಾರೆ. 2021 ರಲ್ಲಿ ಬಿಡುಗಡೆಯಾದ 'ಪುಷ್ಪ: ದಿ ರೈಸ್' ಸಿನಿಮಾ ಎಲ್ಲಾ ಭಾಷೆಗಳಲ್ಲಿ ಸೂಪರ್ ಹಿಟ್ ಆಗಿತ್ತು. ಈಗ ಅದೇ ಚಿತ್ರದ ಸೀಕ್ವೆಲ್‌ ಪುಷ್ಪ 2 ಸಹ ಹೊಸ ದಾಖಲೆಗಳ ಸರಮಾಲೆಯನ್ನೇ ಧರಿಸಿದೆ. ಅದರಲ್ಲೂ ಹಿಂದಿ ಭಾಷೆಯಲ್ಲಿ ಈ ಸಿನಿಮಾ ಹತ್ತು ಹಲವು ರೆಕಾರ್ಡ್‌ ಬ್ರೇಕ್‌ ಮಾಡಿದ ಸೌತ್‌ ಸಿನಿಮಾ ಆಗಿದೆ.

RRR ದಾಖಲೆ ಪುಡಿ ಪುಡಿ

ಈ ಹಿಂದೆ ಮೊದಲ ದಿನ 209.2 ಕೋಟಿ ಗಳಿಸಿದ ಆರ್‌ಆರ್‌ಆರ್‌ ಚಿತ್ರದ ದಾಖಲೆಯನ್ನು ಪುಷ್ಪ 2 ಮುರಿದಿದೆ. ಜತೆಗೆ ವಿದೇಶಗಳಲ್ಲಿಯೇ ಈ ಸಿನಿಮಾ ಬರೋಬ್ಬರಿ 70 ಕೋಟಿ ರೂ.ಗಳನ್ನು ಗಳಿಸಿದೆ. ಸಿನಿಮಾ ಬಿಡುಗಡೆಯಾದ ಮೊದಲ ದಿನದಂದು ಅತಿ ಹೆಚ್ಚು ಕಲೆಕ್ಷನ್‌ ಮಾಡಿದ ಸಿನಿಮಾ ಎಂಬ ದಾಖಲೆ ಆರ್‌ಆರ್‌ಆರ್‌ ಹೆಸರಿನಲ್ಲಿತ್ತು. ಅಂದು ವಿಶ್ವಾದ್ಯಂತ 223 ಕೋಟಿ ರೂ. ಗಳಿಸಿತ್ತು. ಈಗ ಆರ್‌ಆರ್‌ಆರ್‌ ಸಿನಿಮಾದ ದಾಖಲೆಯನ್ನು ಪುಷ್ಪ 2 ಪುಡಿಗಟ್ಟಿ ಹೊಸ ದಾಖಲೆ ನಿರ್ಮಿಸಿದೆ.

ಹಿಂದಿಯಲ್ಲಿ ಪುಷ್ಪ 2 ಪ್ರಾಬಲ್ಯ

ದಕ್ಷಿಣದ ರಾಜ್ಯಗಳಲ್ಲಿ ಮಾತ್ರವಲ್ಲದೆ ಹಿಂದಿಯಲ್ಲೂ ಪುಷ್ಪ 2 ಕ್ರೇಜ್‌ ತುಸು ಜಾಸ್ತಿ ಇದೆ. ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಒಂದೇ ದಿನ 50 ಕೋಟಿ ರೂ.ಗಿಂತ ಹೆಚ್ಚು ಗಳಿಸಿದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪುಷ್ಪ 2 ಪಾತ್ರವಾಗಿದೆ. ಹಿಂದಿಯಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ಪಟ್ಟ ಪುಷ್ಪರಾಜನಿಗೆ ಸಿಕ್ಕಿದೆ. ಈ ಸಿನಿಮಾ, ಹಿಂದಿಯಲ್ಲಿ 72 ಕೋಟಿ ಗಳಿಸಿ ಅಗ್ರಸ್ಥಾನದಲ್ಲಿದೆ. ಡಬ್‌ ಆಗಿ ಬಿಡುಗಡೆಯಾದ ಸಿನಿಮಾಗಳ ಸಾಲಿನಲ್ಲಿಯೂ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಇದಾಗಿದೆ. ಒಟ್ಟಾರೆ, ಮುಂದಿನ ದಿನಗಳಲ್ಲಿ ಈ ದಾಖಲೆಗಳು ಇನ್ನಷ್ಟು ಏರಿಕೆಯಾಗಲಿವೆ.

ಎರಡನೇ ದಿನದ ಕಲೆಕ್ಷನ್‌ ಎಷ್ಟಾಗಬಹುದು?

ಪುಷ್ಪ 2 ದಿ ರೂಲ್‌ ಸಿನಿಮಾ ಮೊದಲ ದಿನವೇ 294 ಕೋಟಿ ಗಳಿಕೆ ಕಂಡಿದೆ. ಈ ಮೂಲಕ ಬಾಕ್ಸ್‌ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿರುವ ಈ ಸಿನಿಮಾ, ಎರಡನೇ ದಿನದ ಕಲೆಕ್ಷನ್‌ ಎಷ್ಟಾಗಬಹುದು ಎಂಬ ಕುತೂಹಲವಿತ್ತು. ಅದರಂತೆ, ಎರಡನೇ ದಿನ ನೂರು ಕೋಟಿಗೂ ಅಧಿಕ ಕಲೆಕ್ಷನ್‌ ಹರಿದುಬಂದಿದೆ. ಅಂದರೆ, ಎರಡೇ ದಿನದ ಅವಧಿಯಲ್ಲಿ ಪುಷ್ಪ 2 ಸಿನಿಮಾ 400 ಕೋಟಿ ಕಲೆಕ್ಷನ್‌ ದಾಟಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತವಾಗಿ ಚಿತ್ರತಂಡ ಘೋಷಣೆ ಮಾಡಬೇಕಿದೆ.

Whats_app_banner