ಬಾಕ್ಸ್ ಆಫೀಸ್‌ನಲ್ಲಿ ಭಾರೀ ಕಲೆಕ್ಷನ್ ಮಾಡಿದ ಪುಷ್ಪ 2 ಸಿನಿಮಾ; ಬಿಡುಗಡೆಯಾದ 6 ದಿನದಲ್ಲಿ 645 ಕೋಟಿ ರೂಪಾಯಿ ಸಂಗ್ರಹ
ಕನ್ನಡ ಸುದ್ದಿ  /  ಮನರಂಜನೆ  /  ಬಾಕ್ಸ್ ಆಫೀಸ್‌ನಲ್ಲಿ ಭಾರೀ ಕಲೆಕ್ಷನ್ ಮಾಡಿದ ಪುಷ್ಪ 2 ಸಿನಿಮಾ; ಬಿಡುಗಡೆಯಾದ 6 ದಿನದಲ್ಲಿ 645 ಕೋಟಿ ರೂಪಾಯಿ ಸಂಗ್ರಹ

ಬಾಕ್ಸ್ ಆಫೀಸ್‌ನಲ್ಲಿ ಭಾರೀ ಕಲೆಕ್ಷನ್ ಮಾಡಿದ ಪುಷ್ಪ 2 ಸಿನಿಮಾ; ಬಿಡುಗಡೆಯಾದ 6 ದಿನದಲ್ಲಿ 645 ಕೋಟಿ ರೂಪಾಯಿ ಸಂಗ್ರಹ

ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಅಭಿನಯದ 'ಪುಷ್ಪ 2 ದಿ ರೂಲ್' ಸಿನಿಮಾ ಬಿಡುಗಡೆಯಾಗಿ 6 ದಿನ ಕಳೆದಿದೆ. ಬಾಕ್ಸ್‌ ಆಫೀಸ್‌ ಕಲೆಕ್ಷನ್ ಓಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇಷ್ಟು ದಿನಗಳಲ್ಲಿ ಪುಷ್ಪ 2 ಸಿನಿಮಾ ಸಂಗ್ರಹಿಸಿದ ಅಂದಾಜು ಮೊತ್ತ ಇಲ್ಲಿದೆ.

ಬಾಕ್ಸ್ ಆಫೀಸ್‌ನಲ್ಲಿ ಭಾರೀ ಕಲೆಕ್ಷನ್ ಮಾಡಿದ ಪುಷ್ಪ 2 ಸಿನಿಮಾ
ಬಾಕ್ಸ್ ಆಫೀಸ್‌ನಲ್ಲಿ ಭಾರೀ ಕಲೆಕ್ಷನ್ ಮಾಡಿದ ಪುಷ್ಪ 2 ಸಿನಿಮಾ

ಅಲ್ಲು ಅರ್ಜುನ್ ಅಭಿನಯದ ಆಕ್ಷನ್ ಥ್ರಿಲ್ಲರ್ ಸಿನಿಮಾ ‘ಪುಷ್ಪ 2’ ಬಾಕ್ಸ್ ಆಫೀಸ್‌ನಲ್ಲಿ ತನ್ನ ಓಟವನ್ನು ಮುಂದುವರೆಸಿದೆ. ರಶ್ಮಿಕಾ ಹಾಗೂ ಶ್ರೀಲೀಲಾ ಕೂಡ ಈ ಸಿನಿಮಾದಲ್ಲಿ ಮಿಂಚಿದ್ದಾರೆ. 'ಪುಷ್ಪ 1' ಸಿನಿಮಾ ಮೂಡಿ ಬಂದಿದ್ದ ರೀತಿಯನ್ನು ಇಷ್ಟಪಟ್ಟ ಅಭಿಮಾನಿಗಳು ‘ಪುಷ್ಪ 2’ ಸಿನಿಮಾವನ್ನು ಕೂಡ ನೋಡಲೇಬೇಕು ಎಂದುಕೊಂಡವರಿದ್ದಾರೆ. ಪುಷ್ಪರಾಜ್ ಅಭಿಮಾನಿಗಳು ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಿಸುತ್ತಿದ್ದಾರೆ. ಬಾಕ್ಸ್‌ ಆಫೀಸ್‌ ಕಲೆಕ್ಷನ್ ಕೂಡ ಏರುತ್ತಲೇ ಇದೆ. ವಾರಾಂತ್ಯ ಮಾತ್ರವಲ್ಲದೇ ಉಳಿದ ದಿನಗಳಲ್ಲಿಯೂ ಕಲೆಕ್ಷನ್ ಜೋರಾಗಿಯೇ ಇದೆ.

ಪುಷ್ಪ 2 ಇದುವರೆಗೆ 644.45 ಕೋಟಿ ಕಲೆಕ್ಷನ್ ಮಾಡಿದೆ

sacnilk.comನ ಇತ್ತೀಚಿನ ಬಾಕ್ಸ್ ಆಫೀಸ್ ವರದಿಯ ಪ್ರಕಾರ 645 ಕೋಟಿ ದಾಟಿದೆ ಎಂದು ಹೇಳಲಾಗಿದೆ. ಬಿಡುಗಡೆಯಾದ ಆರನೇ ದಿನಕ್ಕೆ 'ಪುಷ್ಪ 2' 52.50 ಕೋಟಿ ಸಂಗ್ರಹಿಸಿದೆ. ಅಲ್ಲು ಅರ್ಜುನ್ ಅಭಿನಯದ ಚಿತ್ರ ಮಂಗಳವಾರ (ಡಿ 10) 600 ಕೋಟಿ ಗಡಿ ದಾಟಿತ್ತು. ಚಿತ್ರ ಶುಕ್ರವಾರ (ಡಿ 6) 93.8 ಕೋಟಿ ಮತ್ತು ಶನಿವಾರ (ಡಿ 7) 119.25 ಕೋಟಿ ಗಳಿಸಿದೆ . ಭಾನುವಾರ (ಡಿ 8) ಪುಷ್ಪ 2 ಸುಮಾರು 141.5 ಕೋಟಿ ಕಲೆಕ್ಷನ್ ಮಾಡಿದ್ದು, ಇದುವರೆಗಿನ ಒಂದೇ ದಿನದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದೆ. ಪುಷ್ಪ 2 ಇದುವರೆಗೆ 644.45 ಕೋಟಿ ಕಲೆಕ್ಷನ್ ಮಾಡಿದೆ.

ಪುಷ್ಪ 2: ದಿ ರೂಲ್ ಪುಷ್ಪ: ದಿ ರೈಸ್ ನಿಂದ ಕಥೆಯನ್ನು ಮುಂದಕ್ಕೆ ಕೊಂಡೊಯ್ಯುತ್ತದೆ, ಪುಷ್ಪ ರಾಜ್ ಈಗ ಶ್ರೀಮಂತನಾಗಿದ್ದಾನೆ. ಸಿನಿಮಾದ ಕಥೆ ನೋಡಿದ ಜನರು ಆಶ್ಚರ್ಯಪಟ್ಟಿದ್ದಾರೆ. ಕೆಂಪು ಚಂದನ ಕಳ್ಳಸಾಗಣೆ ಮಾಡಿ ಬಂದ ಆದಾಯದಿಂದ ಪುಷ್ಪರಾಜ್ ಶ್ರೀಮಂತನಾಗಿರುತ್ತಾನೆ. ಆದರೆ ತನ್ನ ಪತ್ನಿ ಶ್ರೀವಲ್ಲಿಯನ್ನು ಮಾತ್ರ ಅಪಾರವಾಗಿ ಪ್ರೀತಿಸುತ್ತಾನೆ. ರಶ್ಮಿಕಾ ಪುಷ್ಪಾರಾಜ್ ಪತ್ನಿ ಶ್ರೀವಲ್ಲಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಈ ಸಿನಿಮಾದ ಎರಡು ಹಾಡುಗಳು ತುಂಬಾ ವೈರಲ್ ಆಗಿದೆ. ಶ್ರೀಲೀಲಾ ಡಾನ್ಸ್‌ ಕೂಡ ಹಲವರು ಕೊಂಡಾಡಿದ್ದಾರೆ. ಕಿಸಿಕ್ ಸಾಂಗ್‌ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿ ಭನ್ವರ್ ಸಿಂಗ್ ಶೆಕಾವತ್ ಪಾತ್ರದಲ್ಲಿ ಫಹಾದ್ ನಟಿಸಿದ್ದಾರೆ. ಒಟ್ಟಿನಲ್ಲಿ ಒಳ್ಳೆಯ ಕಲಾವಿದರ ದಂಡು ಈಗ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದೆ. ಮುಂದೆ ‘ಪುಷ್ಪ 3’ ಸಿನಿಮಾ ಕೂಡ ತೆರೆಕಾಣಲಿದೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ವಿಜಯ್ ದೇವರಕೊಂಡ ಸಹ ಅಭಿನಯಿಸಲಿದ್ದಾರೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿದೆ.

Whats_app_banner