Pushpa 2 OTT: ಅಲ್ಲು ಅರ್ಜುನ್‌ ಪುಷ್ಪ 2 ಒಟಿಟಿ ಬಿಡುಗಡೆ ಯಾವಾಗ, ಯಾವ ಒಟಿಟಿಯಲ್ಲಿ? ಹೀಗಿದೆ ನಿರೀಕ್ಷಿತ ದಿನಾಂಕ
ಕನ್ನಡ ಸುದ್ದಿ  /  ಮನರಂಜನೆ  /  Pushpa 2 Ott: ಅಲ್ಲು ಅರ್ಜುನ್‌ ಪುಷ್ಪ 2 ಒಟಿಟಿ ಬಿಡುಗಡೆ ಯಾವಾಗ, ಯಾವ ಒಟಿಟಿಯಲ್ಲಿ? ಹೀಗಿದೆ ನಿರೀಕ್ಷಿತ ದಿನಾಂಕ

Pushpa 2 OTT: ಅಲ್ಲು ಅರ್ಜುನ್‌ ಪುಷ್ಪ 2 ಒಟಿಟಿ ಬಿಡುಗಡೆ ಯಾವಾಗ, ಯಾವ ಒಟಿಟಿಯಲ್ಲಿ? ಹೀಗಿದೆ ನಿರೀಕ್ಷಿತ ದಿನಾಂಕ

Pushpa 2 OTT: ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿರುವ ಅಲ್ಲು ಅರ್ಜುನ್‌ ಅವರ ಪುಷ್ಪ 2 ದಿ ರೂಲ್‌ ಸಿನಿಮಾ, ಕಲೆಕ್ಷನ್‌ ವಿಚಾರದಲ್ಲೂ ದಾಪುಗಾಲಿಟ್ಟಿದೆ. ಹೀಗಿರುವಾಗ ಇದೇ ಸಿನಿಮಾ ಯಾವಾಗ ಒಟಿಟಿ ಅಂಗಳ ಪ್ರವೇಶಿಸಲಿದೆ? ಹೀಗಿದೆ ನಿರೀಕ್ಷಿತ ದಿನಾಂಕ.

ಪುಷ್ಪ 2 ಒಟಿಟಿ ಬಿಡುಗಡೆ ಯಾವಾಗ, ಯಾವ ಒಟಿಟಿಯಲ್ಲಿ?
ಪುಷ್ಪ 2 ಒಟಿಟಿ ಬಿಡುಗಡೆ ಯಾವಾಗ, ಯಾವ ಒಟಿಟಿಯಲ್ಲಿ?

Pushpa 2 OTT Release Date: ಪುಷ್ಪ 2: ದಿ ರೂಲ್ ಕಳೆದ ತಿಂಗಳ ಡಿಸೆಂಬರ್ 5ರಂದು ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗಿತ್ತು. ದಾಖಲೆಯ ಕಲೆಕ್ಷನ್‌ ಮಾಡಿದ್ದ ಈ ಸಿನಿಮಾ, ಚಿತ್ರಮಂದಿರ, ಮತ್ತು ಮಲ್ಟಿಫ್ಲೆಕ್ಸ್‌ಗಳಲ್ಲಿ ಪ್ರದರ್ಶನ ಮುಂದುವರಿಸಿದೆ. ಜಾಗತಿಕವಾಗಿ 1750 ಕೋಟಿ ಕಲೆಕ್ಷನ್‌ ಮಾಡಿದ್ದ ಈ ಸಿನಿಮಾ, ಈ ವರ್ಷದ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾ ಎನಿಸಿಕೊಂಡಿದೆ. ಹೀಗೆ ನೋಡುಗರಿಂದ ಮೆಚ್ಚುಗೆ ಪಡೆದ ಈ ಸಿನಿಮಾ ಅದ್ಯಾವಾಗ ಒಟಿಟಿಗೆ ಆಗಮಿಸಲಿದೆ ಎಂದು ಕಾಯುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಹೀಗಿರುವಾಗಲೇ ನಿರೀಕ್ಷಿತ ದಿನಾಂಕವೊಂದು ಹೊರಬಿದ್ದಿದೆ.

ಸುಕುಮಾರ್‌ ನಿರ್ದೇಶನದಲ್ಲಿ ಮೂಡಿಬಂದ ಪುಷ್ಪ 2 ದಿ ರೂಲ್ ಸಿನಿಮಾದಲ್ಲಿ ಅಲ್ಲು ಅರ್ಜುನ್‌ ಪುಷ್ಪರಾಜ್‌ ಪಾತ್ರದಲ್ಲಿ ಕಾಣಿಸಿಕೊಂಡರೆ, ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿದ್ದಾರೆ. ಇನ್ನುಳಿದಂತೆ, ಸುನೀಲ್‌, ಫಹಾದ್‌ ಫಾಸಿಲ್‌, ಧನಂಜಯ್‌, ಜಗಪತಿ ಬಾಬು, ರಾವ್‌ ರಮೇಶ್‌, ಅನುಸೂಯಾ ಭಾರದ್ವಾಜ್‌ ಸೇರಿ ಇನ್ನೂ ಹತ್ತಾರು ಸ್ಟಾರ್ ಕಲಾವಿದರು ಈ ಸಿನಿಮಾದಲ್ಲಿದ್ದಾರೆ. ಮೈತ್ರಿ ಮೂವಿ ಮೇಕರ್ಸ್‌ ಸಂಸ್ಥೆ ಪುಷ್ಪ 2 ಸಿನಿಮಾವನ್ನು ಅದ್ಧೂರಿಯಾಗಿಯೇ ನಿರ್ಮಾಣ ಮಾಡಿದೆ.

ಮೂಲ ತೆಲುಗು ಜತೆಗೆ ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿಯೂ ಈ ಸಿನಿಮಾ ಬಿಡುಗಡೆ ಆಗಿ ಎಲ್ಲ ಭಾಷೆಗಳಿಂದಲೂ ದೊಡ್ಡ ಮೊತ್ತವನ್ನೇ ಬಾಚಿಕೊಂಡಿದೆ. ಅದರಲ್ಲೂ ಹಿಂದಿಯಲ್ಲಿ ದಾಖಲೆಯ ಕಲೆಕ್ಷನ್‌ ಮಾಡಿದೆ ಈ ಸಿನಿಮಾ. ಈಗ ಇದೇ ಸಿನಿಮಾದ ಒಟಿಟಿ ಬಿಡುಗಡೆ ಯಾವಾಗ, ಯಾವ ಒಟಿಟಿಯಲ್ಲಿ ಈ ಚಿತ್ರ ತೆರೆಗೆ ಬರಲಿದೆ ಎಂದೂ ಜನ ಹುಡುಕಾಡುತ್ತಿದ್ದಾರೆ. ಅದರಂತೆ ಇದೀಗ ನಿರೀಕ್ಷಿತ ದಿನಾಂಕವೊಂದು ಹೊರಬಿದ್ದಿದೆ.

ನೆಟ್‌ಫ್ಲಿಕ್ಸ್‌ನಲ್ಲಿ ಪುಷ್ಪ 2

ಈಗಾಗಲೇ ಅಧಿಕೃತವಾಗಿರುವಂತೆ ಪುಷ್ಪ 2 ಸಿನಿಮಾದ ಡಿಜಿಟಲ್‌ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಸಂಸ್ಥೆ ದೊಡ್ಡ ಮೊತ್ತಕ್ಕೆ ಖರೀದಿಸಿದೆ. ಡಿಜಿಟಲ್‌ ರೈಟ್ಸ್‌ ಪಡೆದ ವಿಚಾರವನ್ನು ಮೈತ್ರಿ ಮೋವಿ ಮೇಕರ್ಸ್‌ ಈ ಹಿಂದೆಯೇ ಹೇಳಿಕೊಂಡಿತ್ತು. ಆದರೆ, ಯಾವಾಗ ಡಿಜಿಟಲ್‌ ಸ್ಟ್ರೀಮಿಂಗ್‌ ಎಂಬುದು ಮಾತ್ರ ಹೊರಬಿದ್ದಿರಲಿಲ್ಲ. ಈಗ ನಿರೀಕ್ಷಿತ ದಿನಾಂಕವೊಂದು ಹೊರಬಿದ್ದಿದೆ. ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಪೂರ್ಣಗೊಳಿಸಿದ ನಂತರ ಪುಷ್ಪ 2 ಸಿನಿಮಾ ನೆಟ್‌ಫ್ಲಿಕ್ಸ್‌ಗೆ ಬರಲಿದೆ. ಅಂದರೆ, ಇದೇ ತಿಂಗಳ 29ರ ನಂತರ ಒಟಿಟಿ ಪ್ರವೇಶಿಸುವ ಸಾಧ್ಯತೆ ಇದೆ.

ದೇವಿ ಶ್ರೀ ಪ್ರಸಾದ್ ಸಂಗೀತ, ಮಿರೋಸ್ಲಾವ್ ಕುಬಾ ಬ್ರೋಜೆಕ್ ಛಾಯಾಗ್ರಹಣ ನವೀನ್ ನೂಲಿ ಅವರ ಸಂಕಲನ ಈ ಸಿನಿಮಾಕ್ಕಿದೆ. 400ರಿಂದ 500 ಕೋಟಿ ರೂ. ಬಜೆಟ್‌ನಲ್ಲಿ ಪುಷ್ಪ 2 ಸಿನಿಮಾ ನಿರ್ಮಾಣವಾಗಿದೆ.

Whats_app_banner