Pushpa 2 Collection: ಬಾಕ್ಸ್ ಆಫೀಸ್‌ನಲ್ಲಿ ತಗ್ಗದ ಪುಷ್ಪ 2 ಅಬ್ಬರ, 4ನೇ ದಿನದಾಂತ್ಯಕ್ಕೆ 750 ಕೋಟಿ ಸಂಗ್ರಹ
Pushpa 2 Collection Day 4: ಪುಷ್ಪ 2 ಬಿಡುಗಡೆಯಾದ ದಿನದಿಂದ ಹೊಸ ಹೊಸ ದಾಖಲೆಗಳನ್ನು ಮಾಡುತ್ತಿದೆ. ಈಗಾಗಲೇ 500 ಕೋಟಿ ರೂ.ಗಳನ್ನು ಗಳಿಸಿರುವ ಪುಷ್ಪ ಸಿನಿಮಾ, ಭಾನುವಾರದ ಅಂತ್ಯದ ವೇಳೆಗೆ ಮತ್ತೊಂದು ದಾಖಲೆಯನ್ನು ಬರೆಯಲು ಸಜ್ಜಾಗಿದೆ.
![పుష్ప2లో అల్లు అర్జున్ పుష్ప2లో అల్లు అర్జున్](https://images.hindustantimes.com/kannada/img/2024/12/08/550x309/Pushpa_2_box_office_collection_1733650652842_1733662126858.jpg)
Pushpa 2 Box Office Collection Day 4: ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2: ದಿ ರೂಲ್' ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ. ಡಿಸೆಂಬರ್ 5ರ ಗುರುವಾರ ವಿಶ್ವದಾದ್ಯಂತ 12,500 ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಿತ್ತು. ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾದ ಪುಷ್ಪ 2 ಕೇವಲ ನಾಲ್ಕು ದಿನಗಳಲ್ಲಿ ದಾಖಲೆಯ ಕಲೆಕ್ಷನ್ ಮಾಡಿದೆ. sacnilk ವೆಬ್ ತಾಣದ ಪ್ರಕಾರ, ಪುಷ್ಪ 2 ಭಾನುವಾರದ ಅಂತ್ಯದ ವೇಳೆಗೆ 700 ಕೋಟಿ ರೂ.ಗಳನ್ನು ಸಂಗ್ರಹಿಸುವ ನಿರೀಕ್ಷೆಯಿದೆ ಎಂದಿದೆ.
ಪುಷ್ಪ 2 ಸಿನಿಮಾ ಬಿಡುಗಡೆಯಾದ ದಿನದಂದು 294 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಎರಡನೇ ದಿನವಾದ ಶುಕ್ರವಾರ 421.03 ಕೋಟಿ ರೂ.ಗೆ ಏರಿದೆ. ವಾರಾಂತ್ಯದ ಹಿನ್ನೆಲೆಯಲ್ಲಿ ಮತ್ತು ಚಿತ್ರಮಂದಿರಗಳಲ್ಲಿ ದೊಡ್ಡ ಚಿತ್ರಗಳಿಲ್ಲದ ಕಾರಣ ಪುಷ್ಪ 2 ಚಿತ್ರಕ್ಕೆ ದೊಡ್ಡ ಲಾಭವೇ ಆಗಿದೆ. ಶನಿವಾರದ ವೇಳೆಗೆ 620 ಕೋಟಿ ರೂ.ಗೆ ಏರಿಕೆಯಾಗಿದೆ. ಈಗ ಭಾನುವಾರದ ವೇಳೆಗೆ 750 ಕೋಟಿ ರೂ.ಗಳನ್ನು ಮುಟ್ಟಲಿದೆ ಎಂದು sacnilk ಅಂದಾಜಿಸಿದೆ.
ತೆಲುಗುಗಿಂತ ಹಿಂದಿಯಲ್ಲಿಯೇ ಅಧಿಕ
ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಮೊದಲ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ದಾಖಲೆ ಪುಷ್ಪ ಹೆಸರಿನಲ್ಲಿದೆ. ಅದೇ ರೀತಿ 500 ಕೋಟಿ ರೂ.ಗಳ ಗಡಿಯನ್ನು ದಾಟಿದ ಸಿನಿಮಾ ಎಂಬ ಹೆಗ್ಗಳಿಕೆಯೂ ಈ ಸಿನಿಮಾದ ಪಾಲಾಗಿದೆ. ಈಗ 750 ಕೋಟಿ ರೂಪಾಯಿ ಗಳಿಸಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ. ಪುಷ್ಪ 2 ತೆಲುಗುಗಿಂತ, ಹಿಂದಿಯಲ್ಲಿ ಹೆಚ್ಚು ಕಲೆಕ್ಷನ್ ಮಾಡುತ್ತಿದೆ.
ಸುಕುಮಾರ್ ನಿರ್ದೇಶನದ ಪುಷ್ಪ 2 ಚಿತ್ರದಲ್ಲಿ ಅಲ್ಲು ಅರ್ಜುನ್ ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಶ್ರೀಲೀಲಾ ಐಟಂ ಸಾಂಗ್‌ನಲ್ಲಿ ಮಿಂಚಿದ್ದಾರೆ. ಇನ್ನುಳಿದಂತೆ, ಫಹಾದ್ ಫಾಸಿಲ್, ರಾವ್ ರಮೇಶ್, ಜಗಪತಿ ಬಾಬು, ಸುನಿಲ್ ಮತ್ತು ಅನಸೂಯಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮುಂದಿನ ಆರು ವರ್ಷಗಳ ಬಳಿಕವಷ್ಟೇ ಪುಷ್ಪ 3 ಬರುವ ಸಾಧ್ಯತೆ ಇದೆ.
![Whats_app_banner Whats_app_banner](https://kannada.hindustantimes.com/static-content/1y/wBanner.png)