ಪುಷ್ಪ 2: ದಿ ರೂಲ್ ಭಾರತದ ಅತಿದೊಡ್ಡ ಬಾಕ್ಸ್ ಆಫೀಸ್ ಹಿಟ್ ಆಗುವ ಸಾಧ್ಯತೆ ಇರುವ ಸಿನಿಮಾ; ಇಲ್ಲಿದೆ ಅಂದಾಜು ಮೊತ್ತ
ಕನ್ನಡ ಸುದ್ದಿ  /  ಮನರಂಜನೆ  /  ಪುಷ್ಪ 2: ದಿ ರೂಲ್ ಭಾರತದ ಅತಿದೊಡ್ಡ ಬಾಕ್ಸ್ ಆಫೀಸ್ ಹಿಟ್ ಆಗುವ ಸಾಧ್ಯತೆ ಇರುವ ಸಿನಿಮಾ; ಇಲ್ಲಿದೆ ಅಂದಾಜು ಮೊತ್ತ

ಪುಷ್ಪ 2: ದಿ ರೂಲ್ ಭಾರತದ ಅತಿದೊಡ್ಡ ಬಾಕ್ಸ್ ಆಫೀಸ್ ಹಿಟ್ ಆಗುವ ಸಾಧ್ಯತೆ ಇರುವ ಸಿನಿಮಾ; ಇಲ್ಲಿದೆ ಅಂದಾಜು ಮೊತ್ತ

ಪುಷ್ಪ 2: ದಿ ರೂಲ್ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಲಿದೆ ಎಂದು ಅಂದಾಜಿಸಲಾಗಿದೆ. 'ಪುಷ್ಪ 1' ಚಿತ್ರಕ್ಕಿಂತಲೂ ಹೆಚ್ಚು ಹಿಟ್ ಆಗಲಿದ್ದು ಭಾರತದ ಅತಿದೊಡ್ಡ ಬಾಕ್ಸ್ ಆಫೀಸ್ ಹಿಟ್ ಆಗುವ ಸಾಧ್ಯತೆ ಇರುವ ಸಿನಿಮಾ ಇದು ಎಂದು ಅಂದಾಜಿಸಲಾಗಿದೆ.

ಪುಷ್ಪ 2: ದಿ ರೂಲ್ ಬಾಕ್ಸ್‌ ಆಫೀಸ್‌ ಕಲೆಕ್ಷನ್ ಅಂದಾಜು
ಪುಷ್ಪ 2: ದಿ ರೂಲ್ ಬಾಕ್ಸ್‌ ಆಫೀಸ್‌ ಕಲೆಕ್ಷನ್ ಅಂದಾಜು

ಪುಷ್ಪ 2: ದಿ ರೂಲ್ ಭಾರತದ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಸದ್ದು ಮಾಡಲಿದೆ ಎಂದು ಅಂದಾಜಿಸಲಾಗಿದೆ. ಅಷ್ಟೇ ಅಲ್ಲ ಪುಷ್ಪ 1 ಕಲೆಕ್ಷನ್‌ಗಿಂತ ಪುಷ್ಪ 2 ಸಿನಿಮಾದ ಕಲೆಕ್ಷನ್ ಇನ್ನೂ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಮುಂಗಡ ಟಿಕೆಟ್‌ ಬುಕ್ಕಿಂಗ್‌ನಿಂದಲೇ ಸಾಕಷ್ಟು ಹಣ ಗಳಿಕೆ ಆಗಿದೆ. ಇನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಹಣ ಗಳಿಕೆಯಾಗಲಿದೆ ಎಂದು ಹೇಳಿದ್ದಾರೆ. ಅಲ್ಲು ಅರ್ಜುನ್ ಅವರು ಪುಷ್ಪಾ ರಾಜ್ ಪಾತ್ರದಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಅವರಿಗಾಗಿಯೇ ಸಿನಿಮಾ ನೋಡಲು ಬರುವವರೂ ಇದ್ದಾರೆ.

ದಾಖಲೆಯ ಕಲೆಕ್ಷನ್ ಮಾಡಲಿದೆ ಸಿನಿಮಾ

ಎಲಾರಾ ಕ್ಯಾಪಿಟಲ್ ವರದಿಯ ಪ್ರಕಾರ, ಸುಕುಮಾರ್ ಬಂಡ್ರೆಡ್ಡಿ ನಿರ್ದೇಶನದ ಚಿತ್ರವು 1,000 ಕೋಟಿ ರೂಪಾಯಿಗಳನ್ನು ಜಾಗತಿಕ ಮಟ್ಟದಲ್ಲಿ ಕಲೆಕ್ಷನ್ ಮಾಡಿದೆ. ಪುಷ್ಪ 2: ದಿ ರೂಲ್‌ನ ಹಿಂದಿ ಆವೃತ್ತಿಯು 500 ಕೋಟಿ ರೂಪಾಯಿಗಳನ್ನು ಗಳಿಸುವ ನಿರೀಕ್ಷೆಯಿದೆ. "ಪುಷ್ಪ 2: ದಿ ರೂಲ್ ಎಲ್ಲಾ ಭಾಷೆಗಳಲ್ಲಿ ದೇಶದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರವಾಗುವ ಸಾಧ್ಯತೆಯಿದೆ" ಎಂದು ಮೀರಜ್ ಎಂಟರ್‌ಟೈನ್‌ಮೆಂಟ್‌ನ ವ್ಯವಸ್ಥಾಪಕ ನಿರ್ದೇಶಕ ಅಮಿತ್ ಶರ್ಮಾ ಹೇಳಿದ್ದಾರೆ.

ಹಿಂದಿ ಭಾಷೆಯ ಆವೃತ್ತಿಯು ಆರಂಭಿಕ ದಿನದಲ್ಲಿ 60-65 ಕೋಟಿ ರೂಪಾಯಿಗಳನ್ನು ಗಳಿಸುವ ನಿರೀಕ್ಷೆಯಿದೆ. ಮೊದಲ ವಾರಾಂತ್ಯದಲ್ಲಿ 200 ಕೋಟಿ ರೂಪಾಯಿಗಳನ್ನು ಮೀರಿದ ಬಾಕ್ಸ್ ಆಫೀಸ್‌ ಕಲೆಕ್ಷನ್ ಮಾಡಲಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಈ ಸಿನಿಮಾವು ಇತಿಹಾಸವನ್ನು ನಿರ್ಮಿಸಲು ಸಿದ್ಧವಾಗಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಮೂವೀಮ್ಯಾಕ್ಸ್ ಸಿನಿಮಾಸ್‌ನ ಪ್ರೋಗ್ರಾಮಿಂಗ್ ಮತ್ತು ಕಾರ್ಯತಂತ್ರದ ಉಪಕ್ರಮಗಳ ಮುಖ್ಯಸ್ಥ ಆಶಿಶ್ ಪಾಂಡೆ ಕೂಡ ಈ ಸಿನಿಮಾ ಬಾಕ್ಸ್‌ ಆಫೀಸ್‌ ಕಲೆಕ್ಷನ್ ಮಾಡುವಲ್ಲಿ ದಾಖಲೆ ನಿರ್ಮಿಸಲಿದೆ ಎಂದು ಹೇಳಿದ್ದಾರೆ.

ಅಂದಾಜು ಮೊತ್ತ

ಜಾಗತಿಕವಾಗಿ 1,000 ಕೋಟಿ ರೂಪಾಯಿಗಳ ಒಟ್ಟು ಬಾಕ್ಸ್ ಆಫೀಸ್ ಸಂಗ್ರಹ ಮಾಡಲು ಸಿದ್ಧವಾಗಿದೆ

  1. ಮೊದಲ ವಾರಾಂತ್ಯದಲ್ಲಿ ಚಿತ್ರವು 200 ಕೋಟಿ ರೂಪಾಯಿಗಳನ್ನು ಮೀರುವ ನಿರೀಕ್ಷೆಯನ್ನು ಪಿವಿಆರ್ ಐನಾಕ್ಸ್ ಹೊಂದಿದೆ

2) ಸಿನಿಮಾ ಹಿಂದಿ ಆವೃತ್ತಿಯು ಆರಂಭಿಕ ದಿನದಲ್ಲಿ 60-65 ಕೋಟಿ ರೂಪಾಯಿಗಳನ್ನು ಗಳಿಸುವ ನಿರೀಕ್ಷೆಯಿದೆ

3) ಮೂವೀಮ್ಯಾಕ್ಸ್ ಸಿನಿಮಾಸ್ ಚಿತ್ರದ ಹಿಂದಿ ಆವೃತ್ತಿಯು ವಾರಾಂತ್ಯದಲ್ಲಿ ರೂ 600- 800 ಕೋಟಿ ಗಳಿಸುವ ನಿರೀಕ್ಷೆಯಿದೆ

4) ಮುಂದುವರಿದ ಭಾಗದ ಮುಂಗಡ ಬುಕ್ಕಿಂಗ್ ಮೊದಲ ದಿನವೇ 50 ಕೋಟಿ ರೂ ಸಂಗ್ರಹವಾಗಿದೆ.

Whats_app_banner