Pushpa 2: ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಪೂರ್ತಿ ಸಿನಿಮಾ ಲೀಕ್! ಪೈರಸಿಯಿಂದ ಆದಾಯದ ಮೇಲೆ ಬೀಳಲಿದ್ಯಾ ದೊಡ್ಡ ಹೊಡೆತ
Pushpa 2 The Rule: ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಚಿತ್ರ ಡಿಸೆಂಬರ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಯಾಗಿ ಕೆಲವೇ ಗಂಟೆಗಳಷ್ಟೇ ಕಳೆದಿದೆ. ಹೀಗಿರುವಾ ಸಿನಿಮಾ ಲೀಕ್ ಆಗಿರುವ ಸುದ್ದಿಯೊಂದು ಹರಿದಾಡುತ್ತಿದೆ.
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಚಿತ್ರ ಡಿಸೆಂಬರ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಕೆಲವೇ ಗಂಟೆಗಳಷ್ಟೇ ಕಳೆದಿದೆ. ಆದರೆ ಸಾಕಷ್ಟು ಜನ ಈ ಸಿನಿಮಾವನ್ನು ನೋಡಲು ಕಾತರರಾಗಿದ್ದು ಆನ್‌ಲೈನ್‌ನಲ್ಲಿ ಲಭ್ಯವಿದೆಯೇ ಎಂದು ಕುತೂಹಲಕ್ಕೆ ಸರ್ಚ್ ಮಾಡಿ ನೋಡಿದ್ದಾರೆ. ಆ ಸಮಯದಲ್ಲಿ ಉಚಿತವಾಗಿ ಈ ಸಿನಿಮಾ ಡೌನ್‌ಲೋಡ್ ಮಾಡಿಕೊಳ್ಳಲು ಲಭ್ಯವಿರುವುದು ಕಂಡುಬಂದಿದೆ. ಸಾಕಷ್ಟು ಹಣ ಸುರಿದು ಮಾಡಿದ ಸಿನಿಮಾ ಉಚಿತವಾಗಿ ನೋಡಲು ಸಿಗುತ್ತಿದೆ ಎಂಬ ಕಾರಣಕ್ಕಾಗಿ ಲಿಂಕ್ ಕೂಡ ಸಾಕಷ್ಟು ಜನರಿಗೆ ವರ್ಗಾವಣೆ ಆಗಿದೆ.
ವರದಿಗಳ ಪ್ರಕಾರ Ibomma, Movierulz, Tamilrockers, Filmyzilla, TamilYogi, Tamilblasters, Bolly4u, Jaisha Moviez, 9xmovies ಮತ್ತು Moviesdaಗಳಲ್ಲಿ ಸಿನಿಮಾವನ್ನು ಉಚಿತವಾಗಿ ನೋಡಲು ಲಭ್ಯವಿದೆ ಎಂಬ ಲಿಂಕ್ ಹರಿದಾಡುತ್ತಿದೆ ಎಂದು ಸುದ್ದಿಯಾಗಿದೆ. ಇದು 1080p, 720p, 480p, 360p, 240p, HD ಯಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿದೆ. ಪೈರಸಿ ಆದ ಕಾರಣ ಸಿನಿಮಾದ ಆದಾಯದ ಮೇಲೆ ಪರಿಣಾಮ ಬೀರಿರಬಹುದೇ ಎಂಬ ಪ್ರಶ್ನೆ ಮೂಡಿದೆ.
ಸಾಕಷ್ಟು ಶ್ರಮ ವಹಿಸಿ ನಿರ್ಮಾಣ ಮಾಡಿದ ಸಿನಿಮಾ ಈ ರೀತಿ ವೈರಲ್ ಆಗಿ ಕೇವಲ ಒಂದು ಕ್ಲಿಕ್‌ನಲ್ಲಿ ನೋಡಲು ಸಿಗುವಂತಾಗಿದೆ. ಸಾಕಷ್ಟು ಜನರು ಈಗಾಗಲೆ ಸಿನಿಮಾವನ್ನು ಡೌನ್‌ಲೋಡ್ ಕೂಡ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಆದರೆ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಅಲ್ಲು ಅರ್ಜುನ್ ಅಭಿನಯದ ಮೊದಲ ಶೋ ಅನ್ನು ಥಿಯೇಟರ್‌ಗಳಲ್ಲಿ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.
ಇನ್ನು ಈ ಸಿನಿಮಾವನ್ನು ಮೊಬೈಲ್‌ನಲ್ಲಿ ನೋಡಿದರೆ ಆ ರಿಚ್‌ನೆಸ್ ಫೀಲ್ ಇರುವುದಿಲ್ಲ ಎಂದಾದರು ಒಂದಷ್ಟು ಜನ ಥಿಯೇಟರ್‌ನಲ್ಲಿ ವೀಕ್ಷಣೆ ಮಾಡುತ್ತಾರೆ. ಹೀಗಾಗಿ ಆದಾಯಕ್ಕೆ ಇದು ಅಡ್ಡಿಯಾಗುವುದಿಲ್ಲ ಎಂಬ ಮಾತೂ ಕೇಳಿಬರುತ್ತಿದೆ. ಚಿತ್ರದ ಗ್ರ್ಯಾಂಡ್ ಪ್ರೀಮಿಯರ್‌ಗೆ ಗಂಟೆಗಳ ಮೊದಲು, ರಶ್ಮಿಕಾ ಮಂದಣ್ಣ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ಗೆ ಟಿಪ್ಪಣಿ ಬರೆದು ಸಿನಿಮಾ ವೀಕ್ಷಿಸಿ ಎಂದು ಹೇಳಿದ್ದರು. ಅವರು ಪುಷ್ಪ 2 ಬಿಡುಗಡೆಯ ಮೊದಲು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದರು.