Pushpa 2 Twitter Review: ಅಲ್ಲು ಅರ್ಜುನ್, ರಶ್ಮಿಕಾ ಅಭಿನಯ 'ಪುಷ್ಪ 2' ಹೇಗಿದೆ? ಇಲ್ಲಿದೆ ನೋಡಿ ಟ್ವಿಟರ್ ರಿವ್ಯೂ
ಕನ್ನಡ ಸುದ್ದಿ  /  ಮನರಂಜನೆ  /  Pushpa 2 Twitter Review: ಅಲ್ಲು ಅರ್ಜುನ್, ರಶ್ಮಿಕಾ ಅಭಿನಯ 'ಪುಷ್ಪ 2' ಹೇಗಿದೆ? ಇಲ್ಲಿದೆ ನೋಡಿ ಟ್ವಿಟರ್ ರಿವ್ಯೂ

Pushpa 2 Twitter Review: ಅಲ್ಲು ಅರ್ಜುನ್, ರಶ್ಮಿಕಾ ಅಭಿನಯ 'ಪುಷ್ಪ 2' ಹೇಗಿದೆ? ಇಲ್ಲಿದೆ ನೋಡಿ ಟ್ವಿಟರ್ ರಿವ್ಯೂ

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಬಹು ನಿರೀಕ್ಷಿತ ಚಿತ್ರ ಪುಷ್ಪ 2: ದಿ ರೂಲ್ ಥಿಯೇಟರ್‌ನಲ್ಲಿ ಬಿಡುಗಡೆಯಾಗಿದೆ. ಮೊದಲ ವಿಮರ್ಶೆಗಳ ಪ್ರವಾಹವೇ ಟ್ವೀಟರ್‌ನಲ್ಲಿ ಹರಿದು ಬಂದಿದೆ.

ಅಲ್ಲು ಅರ್ಜುನ್, ರಶ್ಮಿಕಾ ಅಭಿನಯ ಪುಷ್ಪ 2 ಹೇಗಿದೆ?
ಅಲ್ಲು ಅರ್ಜುನ್, ರಶ್ಮಿಕಾ ಅಭಿನಯ ಪುಷ್ಪ 2 ಹೇಗಿದೆ?

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಬಹು ನಿರೀಕ್ಷಿತ ಚಿತ್ರ ಪುಷ್ಪ 2: ದಿ ರೂಲ್ ಥಿಯೇಟರ್‌ನಲ್ಲಿ ಬಿಡುಗಡೆಯಾಗಿದೆ. ಮೊದಲ ವಿಮರ್ಶೆಗಳ ಪ್ರವಾಹವೇ ಟ್ವೀಟರ್‌ನಲ್ಲಿ ಹರಿದು ಬಂದಿದೆ. ಸಿನಿಮಾ ಹೇಗಿದೆ ಎಂದು ಸಾಕಷ್ಟು ಜನ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ರಶ್ಮಿಕಾ ಹಾಗೂ ಅಲ್ಲು ಅರ್ಜುನ್ ಅಭಿನಯದ ಪುಷ್ಪ 1 ಹಿಟ್ ಆಗಿರುವ ಕಾರಣ ಸಹಜ ಕುತೂಹಲ ಈ ಸಿನಿಮಾದ ಮೇಲೆ ಎಲ್ಲರಿಗೂ ಇದೆ. ಈ ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ. ಇನ್ನು ಕೆಲವರು ಈ ಸಿನಿಮಾ ಚೆನ್ನಾಗಿಲ್ಲ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ಹೀಗೆ ಸಾಕಷ್ಟು ರೀತಿಯ ಅಭಿಪ್ರಾಯಗಳನ್ನು ಹಲವರು ಹಂಚಿಕೊಂಡಿದ್ದಾರೆ.

ಅಲ್ಲು ಅರ್ಜುನ್ ಕರಿಯರ್‌ನಲ್ಲೇ ಇದೊಂದು ಬೆಸ್ಟ್‌ ಸಿನಿಮಾ ಮೊದಲಾರ್ಧ ಸಿನಿಮಾ ಸ್ಕ್ರೀನ್ ಪ್ಲೇ, ಮಾಸ್‌ ಸೀನ್ಸ್‌ ಎಲ್ಲವೂ ತುಂಬಾ ಚೆನ್ನಾಗಿದೆ. ಬಿಜಿಎಂ ಡಿಫರೆಂಟ್‌ ಲೆವೆಲ್‌ನಲ್ಲಿ ಸದ್ದು ಮಾಡಿದೆ ಎಂದು ಹೇಳಿದ್ದಾರೆ. ಕ್ಯಾಮರಾ ಮೂಮೆಂಟ್‌ ಹಾಗೂ ವಿಜುವಲ್ ಟ್ರೀಟ್‌ ಕೂಡ ಚೆನ್ನಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕೆಲವರು ಅಲ್ಲು ಅರ್ಜುನ್ ಅವರ ಈ ಸಿನಿಮಾದ ಬಗ್ಗೆ ನೆಗಟಿವ್ ಬರೆಯಲೇ ಬೇಕು ಎಂದು ನಿರ್ಧಾರ ಮಾಡಿಕೊಂಡಂತಿದೆ. ಇನ್ನು ಕೆಲವರು ಸಿನಿಮಾಗೆ ಉತ್ತಮ ರೇಟಿಂಗ್ ನೀಡಿದ್ದಾರೆ. 5ಕ್ಕೆ 4 ರೇಟಿಂಗ್ ನೀಡಿರುವ ಸಾಕಷ್ಟು ಅಭಿಪ್ರಾಯಗಳು ಟ್ವಿಟರ್‌ನಲ್ಲಿ ಕಂಡು ಬರುತ್ತಿದೆ. ಇದರಲ್ಲಿ ಅಲ್ಲು ಅರ್ಜುನ್ ಎಂಟ್ರಿಯನ್ನು ತೋರಿಸಿದ್ದಾರೆ.

ಒಂದೇ ಪದದಲ್ಲಿ ಹೇಳಬೇಕು ಎಂದರೆ ಈ ಸಿನಿಮಾ ನೋಡುವುದನ್ನು ಅವಾಯ್ಡ್‌ ಮಾಡಿ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಟಾಲಿವುಡ್‌ನ ವರ್ಸ್ಟ್‌ ಮೂವಿ ಇದು ಎಂದು ಹೇಳಿದ್ದಾರೆ.

Whats_app_banner