Puspa 2: ಕಿಸ್ಸಿಕ್ ಸಾಮಾನ್ಯ ಐಟಂ ಸಾಂಗ್ ಅಲ್ಲ, 20 ಐಟಂ ಸಾಂಗ್ ರಿಜೆಕ್ಟ್ ಮಾಡಿರೋಳು ನಾನು; ಸಮಂತಾ ಜತೆ ಹೋಲಿಕೆಗೆ ಶ್ರೀಲೀಲಾ ಮಾರುತ್ತರ
Puspa 2: ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿರುವ ಪುಷ್ಪ 2 ಸಿನಿಮಾದಲ್ಲಿ ಶ್ರೀಲೀಲಾರ ಐಟಂ ಡ್ಯಾನ್ಸ್ ಕಿಸ್ಸಿಕ್ ಕುರಿತು ಸೋಷಿಯಲ್ ಮೀಡಿಯಾದಲ್ಲಿ ನಾನಾ ಪ್ರತಿಕ್ರಿಯೆ ಬರುತ್ತಿದೆ. ಈ ಐಟಂ ಡ್ಯಾನ್ಸ್‌ಗೆ ಸಂಬಂಧಪಟ್ಟ ಟ್ರೋಲ್, ಸಮಂತಾ ಜತೆಗಿನ ಹೋಲಿಕೆಗೆ ಇದೀಗ ಶ್ರೀಲೀಲಾ ಪ್ರತಿಕ್ರಿಯೆ ನೀಡಿದ್ದಾರೆ.
Pushpa 2: ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಬಹುನಿರೀಕ್ಷಿತ ಸಿನಿಮಾ ಪುಷ್ಪ 2 ಇದೇ ಡಿಸೆಂಬರ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಐಟಂ ಡ್ಯಾನ್ಸ್ "ಕಿಸ್ಸಿಕ್" ಬಿಡುಗಡೆಯಾಗಿದೆ. ಈ ಡ್ಯಾನ್ಸ್‌ನಲ್ಲಿ ಶ್ರೀಲೀಲಾ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಇದೇ ಸಮಯದಲ್ಲಿ ಈ ಹಾಡಿಗೆ ಕೆಲವರು "ಇದು ಸಮಂತಾ ಮಾಡಿರುವ ಓ ಅಂತಾವಾ ಮಾಮಾ ಹಾಡಿನ ರೇಂಜ್‌ಗೆ ಇಲ್ಲ" ಎಂದು ಕೆಲವರು ಟ್ರೋಲ್ ಮಾಡಿದ್ದಾರೆ. ಇದೀಗ ತನ್ನ ಐಟಂ ಸಾಂಗ್‌ಗೆ ಬಂದಿರುವ ಟ್ರೋಲಿಂಗ್‌ಗೆ ಕನ್ನಡದಲ್ಲಿ ಕಿಸ್, ಜೇಮ್ಸ್ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಶ್ರೀಲೀಲಾ ಪ್ರತಿಕ್ರಿಯೆ ನೀಡಿದ್ದಾರೆ.
ಪುಷ್ಪ 2 ಭಾರತೀಯ ಚಿತ್ರರಂಗದಲ್ಲಿ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಇದು ಡಿಸೆಂಬರ್ 5, 2024ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಶ್ರೀಲೀಲಾ ನಟಿಸಿರುವ ಪುಷ್ಪ 2 ಸಿನಿಮಾದ ಕಿಸ್ಸಿಕ್ ಹಾಡು ವೈರಲ್ ಆಗಿದೆ. ಇದೇ ಸಮಯದಲ್ಲಿ ಈ ಹಾಡನ್ನು ಸಮಂತಾ ನಟಿಸಿದ್ದ ಓ ಅಂತಾವಾ ಮಾಮಾ ಜತೆ ಹೋಲಿಕೆ ಮಾಡಲಾಗುತ್ತಿದೆ. ಸಮಂತಾ ಅವರ ಡ್ಯಾನ್ಸ್ ಮತ್ತು ಹಾಡು ಸಖತ್ ಇತ್ತು, ಅದರ ಮುಂದೆ ಕಿಸ್ಸಿಕ್ ಸಪ್ಪೆ ಎಂದು ಸಾಕಷ್ಟು ಜನರು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
ಟ್ರೋಲಿಂಗ್‌ಗೆ ಶ್ರೀಲೀಲಾ ಪ್ರತಿಕ್ರಿಯೆ
ಪುಷ್ಪ 2 ಸಿನಿಮಾದ ಪ್ರಚಾರ ಭರದಿಂದ ಸಾಗುತ್ತಿದೆ. ಇದೇ ಸಮಯದಲ್ಲಿ ಶ್ರೀಲೀಲಾ ಅವರು ತನ್ನ ಮುಂದಿನ ಚಿತ್ರ ರಾಬಿನ್‌ಹುಡ್ ಪತ್ರಿಕಾಗೋಷ್ಠಿಯಲ್ಲಿ ಪುಷ್ಪ 2 ಹಾಡಿನ ಬಗ್ಗೆಯೂ ಮಾತನಾಡಿದ್ದಾರೆ. ರಾಬಿನ್‌ಹುಡ್ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಸಮಂತಾ ಮತ್ತು ಶ್ರೀಲೀಲಾ ಅವರ ನಡುವೆ ನಡೆಯುತ್ತಿರುವ ಹೋಲಿಕೆ ಕುರಿತು ಪ್ರಶ್ನಿಸಿದ್ದಾರೆ. "ಕಿಸ್ಸಿಕ್ ನಿಮ್ಮ ಸರಾಸರಿ ಐಟಂ ಸಾಂಗ್ ಅಲ್ಲ. ಈಗ ಸಾಕಷ್ಟು ಮರೆ ಮಾಡಲಾಗಿದೆ. ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಡಿಸೆಂಬರ್ 5ರಂದು ನೀವು ನನ್ನನ್ನು ಮತ್ತು ಅಲ್ಲು ಅರ್ಜುನ್ ಅವರನ್ನು ಜತೆಯಾಗಿ ನೋಡಿದ ಬಳಿಕ ಉತ್ತರಿಸಲಾಗುವುದು" ಎಂದು ಹೇಳಿದ್ದಾರೆ. ಅಂದರೆ, ಈ ಹಾಡಿನ ನಿಜವಾದ ಪೂರ್ಣ ವಿಡಿಯೋ ನೋಡಿದಾಗ ನಿಮಗೆ ಗೊತ್ತಾಗುವುದು" ಎಂದು ಹೇಳಿದ್ದಾರೆ.
ಶ್ರೀಲೀಲಾ ಇದೇ ಮೊದಲ ಬಾರಿಗೆ ಐಟಂ ಡ್ಯಾನ್ಸ್‌ನಲ್ಲಿ ಕಾಣಿಸಿದ್ದಾರೆ. ನೀವು ಏಕೆ ಪುಷ್ಪ 2 ಐಟಂ ಸಾಂಗ್ ಆಯ್ಕೆ ಮಾಡಿಕೊಂಡಿದ್ದೀರಿ ಎಂದು ಪತ್ರಕರ್ತರು ಕೇಳಿದ್ದಾರೆ. ಅದಕ್ಕೆ ಶ್ರೀಲೀಲಾ "ನಾನು ಪುಷ್ಪಕ್ಕಿಂತ ಮೊದಲು 20 ಐಟಂ ಹಾಡುಗಳನ್ನು ತಿರಸ್ಕರಿಸಿದ್ದೇನೆ. ಆದರೆ, ಈ ಹಾಡಿನ ಕಥೆ ಮತ್ತು ಸಂದರ್ಭವನ್ನು ಕೇಳಿದ ತಕ್ಷಣ ಒಪ್ಪಿಕೊಂಡೆ. ಕಿಸ್ಸಿಕ್ ಸಾಮಾನ್ಯ ಐಟಂ ಹಾಡು ಅಲ್ಲ. ಇದು ಚಿತ್ರ ಬಿಡುಗಡೆಯಾದ ಬಳಿಕ ನಿಮಗೆ ಅರ್ಥವಾಗಲಿದೆ" ಎಂದು ಅವರು ಹೇಳಿದ್ದಾರೆ.
ಪುಷ್ಪ 2 ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರು ತನ್ನ ಹಿಂದಿನ ಪುಷ್ಪರಾಜ್ ಪಾತ್ರದಲ್ಲಿ ಮುಂದುವರೆಯುತ್ತಾರೆ. ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಸುಕುಮಾರ್ ನಿರ್ದೇಶನದ ಪುಷ್ಪ ಸಿನಿಮಾವು 2021ರಲ್ಲಿ ಬಿಡುಗಡೆಯಾಗಿ ಸೂಪರ್‌ಹಿಟ್ ಆಗಿತ್ತು. ಪುಷ್ಪ 2 ತಂಡವು ಸಿನಿಮಾ ಪ್ರಚಾರಕ್ಕಾಗಿ ರಾಷ್ಟ್ರವ್ಯಾಪಿ 6 ನಗರಗಳ ಪ್ರವಾಸವನ್ನು ಕೈಗೊಂಡಿದೆ. ಈ ಪ್ರವಾಸವು ಭಾರತದಾದ್ಯಂತ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸುವ ಗುರಿಯನ್ನು ಹೊಂದಿದೆ. ಷ್ಪ ಸಿನಿಮಾ ಬಿಡುಗಡೆ ಆಗುವ ಮುನ್ನವೇ 1,065 ಕೋಟಿ ರೂ. ಬಿಸ್ನೆಸ್ ಮಾಡಿದೆ ಎಂಬ ಮಾತು ಕೇಳಿ ಬರುತ್ತಿದೆ. ಥಿಯಟ್ರಿಕಲ್, ಒಟಿಟಿ ಡಿಜಿಟಲ್ ಸ್ಟ್ರೀಮಿಂಗ್, ಆಡಿಯೋ, ಸಾಟಲೈಟ್ ಎಲ್ಲಾ ಸೇರಿ ಸಿನಿಮಾ ಭಾರೀ ಲಾಭ ಮಾಡಿದೆ ಎನ್ನಲಾಗುತ್ತಿದೆ. ಪುಷ್ಪ 2 ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ, ಮೊದಲ ಚಿತ್ರದ ಯಶಸ್ಸನ್ನು ಕಂಡ ಅಭಿಮಾನಿಗಳು ಪುಷ್ಪ 2ಮೇಲೆ ಸಹಜವಾಗಿಯೇ ಒಂದಿಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.