ಜೀ ಕನ್ನಡದಲ್ಲೀಗ ಮಹಾಸಂಚಿಕೆಗಳ ಮಹಾಪರ್ವ; ವಾರವಿಡೀ ಈ ಐದು ಸೀರಿಯಲ್‌ಗಳ ಒಂದೊಂದು ಗಂಟೆಯ ಎಕ್ಸ್ಟ್ರಾ ಮನರಂಜನೆ
Zee Kannada Serials: ಜೀ ಕನ್ನಡ ವಾಹಿನಿಯಲ್ಲಿ ಇಂದಿನಿಂದ ಮುಂದಿನ ಐದು ದಿನಗಳ ಕಾಲ ಮೆಗಾ ಧಾರಾವಾಹಿಗಳ ಮಹಾಸಂಚಿಕೆಗಳು ಪ್ರಸಾರವಾಗಲಿವೆ. ನಿತ್ಯ ಒಂದೊಂದು ಸೀರಿಯಲ್ ಒಂದು ಗಂಟೆ ಪ್ರಸಾರ ಕಾಣಲಿದೆ. ರೋಚಕ ಟ್ವಿಸ್ಟ್ ಜತೆಗೂ ವೀಕ್ಷಕರನ್ನು ಸೆಳೆಯಲಿವೆ.
Zee Kannada Serials: ಕಿರುತೆರೆ ವೀಕ್ಷಕರಿಗೆ ಜೀ ಕನ್ನಡ ವಾಹಿನಿ ಬಿಗ್ ಸರ್ಪ್ರೈಸ್ ನೀಡುತ್ತಿದೆ. ಇಷ್ಟು ದಿನ ವಾರದ ಐದು ದಿನಗಳಲ್ಲಿ ಅರ್ಧರ್ಧ ಗಂಟೆಗಳ ಕಾಲ ಪ್ರಸಾರ ಕಾಣುತ್ತಿದ್ದ ಸೀರಿಯಲ್‌ಗಳೀಗ ಒಂದು ಗಂಟೆಯಂತೆ ಪ್ರಸಾರವಾಗಲಿದೆ. ಜನಪ್ರಿಯ ಧಾರಾವಾಹಿಗಳಿಂದ ಮನೆ ಮಾತಾಗಿರುವ ಜೀ ಕನ್ನಡ, ವಾರವಿಡೀ ಅಂದರೆ ಸೋಮವಾರದಿಂದ ಶುಕ್ರವಾರದವರೆಗೆ ಧಾರಾವಾಹಿಗಳ ಮೂಲಕ ಒಂದು ಗಂಟೆಗಳ ಮಹಾಸಂಚಿಕೆಯ ಮೆರವಣಿಗೆ ನೀಡಲು ಸಜ್ಜಾಗಿದೆ.
ಸೀರಿಯಲ್‌ಗಳಲ್ಲಿ ಏನಾದರೂ ಅಚ್ಚರಿಯ ಬೆಳೆವಣಿಗೆ ನಡೆದರೆ, ಆಗೊಂದು ಈಗೊಂದು ಧಾರಾವಾಹಿಗಳು ಒಂದು ಗಂಟೆಯ ಮಹಾಮನರಂಜನೆಯನ್ನು ನೀಡುತ್ತಿದ್ದವು. ಇದೀಗ ಆ ಮಹಾ ಮನರಂಜನೆಯ ಪರಿಕಲ್ಪನೆಯನ್ನೇ ಜೀ ಕನ್ನಡ ಮತ್ತಷ್ಟು ಎತ್ತರಕ್ಕೆ ಏರಿಸುತ್ತಿದೆ. ಅದರಂತೆ, ಸಂಜೆ 6:30 ರಿಂದ ಶುರುವಾಗುವ ಆಯ್ದ ಕೆಲ ಸೀರಿಯಲ್‌ಗಳು ನಿತ್ಯದ ಅರ್ಧ ಗಂಟೆಯ ಬದಲು ಒಂದು ಗಂಟೆ ಪ್ರಸಾರ ಕಾಣಲಿವೆ. ದಿನಕ್ಕೆ ಒಂದೇ ಧಾರಾವಾಹಿ ಮಾತ್ರ ಒಂದು ಗಂಟೆ ಪ್ರಸಾರವಾಗಲಿದೆ.
ಯಾವ ಧಾರಾವಾಹಿಯಿಂದ ಏನು ಟ್ವಿಸ್ಟ್?
ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಕಂಠಿ ವಿರುದ್ಧ ಸ್ನೇಹಾ ಸಿಡಿದೆದ್ದಿದ್ದಾಳೆ. ಇತ್ತ ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್‌ಗೆ ಹೆತ್ತಮನ ದರ್ಶನವಾಗಿದೆ. ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಜಯಂತ್ ಮತ್ತು ವೆಂಕಿ ನಡುವಿನ ರಹಸ್ಯ ಬಯಲಾಗುತ್ತಾ ಅನ್ನೋ ಕುತೂಹಲವಿದೆ. ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಲ್ಲಿ ಶ್ರೀವಲ್ಲಿಯನ್ನು ವರಿಸಲು ಸುದ್ದು ಒಪ್ಪಿಗೆ ಸೂಚಿಸಿದ್ದಾನೆ. ಬ್ರಹ್ಮಗಂಟು ಧಾರಾವಾಹಿಯಲ್ಲಿ ಸೌಂದರ್ಯ ವಿರುದ್ಧ ದೀಪಾ ಸವಾಲೆಸೆದಿದ್ದಾಳೆ. ಹೀಗೆ ಈ ಐದು ಸೀರಿಯಲ್‌ಗಳು ಬಿಗ್ ಟ್ವಿಸ್ಟ್ ಹೊತ್ತು ವೀಕ್ಷಕರ ಬಳಿ ಬರಲಿವೆ.
ಯಾವ ಸಮಯಕ್ಕೆ ಯಾವ ಧಾರಾವಾಹಿ?
ಸೋಮವಾರ ಸಂಜೆ 6:30 ರಿಂದ 7:30ಕ್ಕೆ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಪ್ರಸಾರವಾದರೆ, ಮಂಗಳವಾರ ಸಂಜೆ 7 ರಿಂದ 8 ಗಂಟೆಯವರೆಗೆ ಅಮೃತಧಾರೆ ಸೀರಿಯಲ್‌ಅನ್ನು ವೀಕ್ಷಿಸಬಹುದು. ಬುಧವಾರ ರಾತ್ರಿ 8 ರಿಂದ 9 ಗಂಟೆಯವರೆಗೆ ಲಕ್ಷ್ಮಿ ನಿವಾಸ ಎಂದಿನಂತೆ ನಿತ್ಯ ಪ್ರಸಾರ ಇರಲಿದೆ. ಗುರುವಾರ ರಾತ್ರಿ 9 ರಿಂದ 10 ಗಂಟೆಯವರೆಗೆ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ನ ಮೆಗಾ ಒಂದು ಗಂಟೆಯ ಏಪಿಸೋಡ್ ಪ್ರಸಾರವಾಗಲಿದೆ.
ಅದೇ ರೀತಿ ಶುಕ್ರವಾರ ರಾತ್ರಿ 10 ರಿಂದ 11 ಗಂಟೆಯವರೆಗೆ ಬ್ರಹ್ಮಗಂಟು ಧಾರಾವಾಹಿ ನೋಡುಗರಿಗೆ ಹಬ್ಬದೂಟ ಹಾಕಿಸಲಿದೆ. ಒಟ್ಟಾರೆ ಐದು ಧಾರಾವಾಹಿಗಳು ಒಂದಿಡೀ ವಾರ ಹಲವು ತಿರುವುಗಳೊಂದಿಗೆ ಮಹಾಸಂಚಿಕೆಯ ಮಹಾ ಮನರಂಜನೆಯ ಜೊತೆಗೆ ಬರಲಿದೆ.
ವಿಭಾಗ