Hisaab Barabar OTT: ಟ್ರೆಂಡಿಂಗ್‌ನಲ್ಲಿದೆ ‘ಹಿಸಾಬ್ ಬರಾಬರ್’ ಸಿನಿಮಾ; ಸರ್ಕಾರಿ ಅಧಿಕಾರಿ ಪಾತ್ರದಲ್ಲಿ ಅಭಿನಯಿಸಿದ ಆರ್ ಮಾಧವನ್
ಆರ್ ಮಾಧವನ್ ಪ್ರಾಮಾಣಿಕ ಸರ್ಕಾರಿ ಅಧಿಕಾರಿ ಪಾತ್ರದಲ್ಲಿ ಅಭಿನಯಿಸಿದ ಸಿನಿಮಾ ‘ಹಿಸಾಬ್ ಬರಾಬರ್’ ಒಟಿಟಿ ಟ್ರೆಂಡಿಂಗ್‌ನಲ್ಲಿದೆ. ಹಾಸ್ಯದ ಸ್ಪರ್ಶದೊಂದಿಗೆ ಗಂಭೀರ ವಿಷಯದ ಮೇಲೆ ಈ ಸಿನಿಮಾ ಮೂಡಿಬಂದಿದೆ.

ಆರ್ ಮಾಧವನ್ ಅಭಿನಯಿಸಿದ ಸಿನಿಮಾ ಎಂದ ತಕ್ಷಣ ಹಲವರ ಗಮನದ ಆ ಸಿನಿಮಾದ ಕಡೆ ಸಾಗುತ್ತದೆ. ಅದೇ ರೀತಿ ‘ಹಿಸಾಬ್ ಬರಾಬರ್’ ಎಂಬ ಅವರ ಇತ್ತೀಚಿನ ಹಿಂದಿ ಸಿನಿಮಾ ಕೂಡ ಸದ್ದು ಮಾಡುತ್ತಿದೆ. ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ‘ಹಿಸಾಬ್ ಬರಾಬರ್’ ಸಿನಿಮಾದಲ್ಲಿ ಪ್ರಾಮಾಣಿಕ ಸರ್ಕಾರಿ ಅಧಿಕಾರಿ ಪಾತ್ರದಲ್ಲಿ ಆರ್ ಮಾಧವನ್ ಅಭಿನಯಿಸಿದ್ದಾರೆ. ರಾಧಾ ಮೋಹನ್ ಎಂಬ ಭಾರತೀಯ ರೈಲ್ವೇಯಲ್ಲಿ ಕೆಲಸ ಮಾಡುವ ಪ್ರಾಮಾಣಿಕ ಟಿಸಿ ಪಾತ್ರದಲ್ಲಿ ಅಭಿನಯಿಸಿ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಬ್ಯಾಂಕರ್ ಮಿಕ್ಕಿ ಮೆಹ್ತಾ ಸಾಮಾನ್ಯ ಜನರ ಹಣವನ್ನು ಯಾರಿಗೂ ಗೊತ್ತಾಗದ ರೀತಿಯಲ್ಲಿ ಲೂಟಿ ಮಾಡಿ ವಂಚನೆ ಮಾಡುತ್ತಾ ಇರುತ್ತಾನೆ. ಆ ವಂಚನೆಯನ್ನು ರಾಧಾ ಮೋಹನ್ (ಆರ್ ಮಾಧವನ್) ಪತ್ತೆ ಮಾಡುತ್ತಾನೆ.
ಆದರೆ ಪತ್ತೆ ಮಾಡುವಾಗ ಎದುರಾಗುವ ಸವಾಲುಗಳನ್ನು ಆತ ಹೇಗೆ ಎದುರಿಸುತ್ತಾನೆ ಎಂಬುದು ಕುತೂಹಲಕರವಾಗಿದೆ. ಈ ಸಿನಿಮಾದಲ್ಲಿ ಟಿಸಿಯೊಬ್ಬ, ಸಿಎ ಅಧಿಕಾರಿಯಂತೆ ಕೆಲಸ ಮಾಡಿ ತಪ್ಪು ಕಂಡು ಹಿಡಿಯುತ್ತಾನೆ. ಯಾಕೆಂದರೆ ಅಷ್ಟೊಂದು ದೊಡ್ಡ ಹಣಕಾಸಿನ ವಂಚನೆಯನ್ನು ಆತ ಪತ್ತೆ ಮಾಡುತ್ತಾನೆ. ಆದರೆ ಆ ಸಂದರ್ಭದಲ್ಲಿ ರಾಧಾ ಮೋಹನ್ ತನ್ನ ಮನೆಯನ್ನೇ ತಾನು ಕಳೆದುಕೊಳ್ಳಬೇಕಾದ ಪ್ರಸಂಗ ಎದುರಾಗುತ್ತದೆ. ಜೈಲಿಗೆ ಹೋಗುತ್ತಾನೆ, ಹೀಗೆ ಸಾಕಷ್ಟು ನೋವುಗಳನ್ನು ಅವನು ಎದುರಿಸುತ್ತಾನೆ. ಆದರೂ ಆತ ತನ್ನ ಪ್ರಯತ್ನ ನಿಲ್ಲಿಸುವುದಿಲ್ಲ.
ವೀಕ್ಷಣೆ ಎಲ್ಲಿ?
ಈ ಸಿನಿಮಾ ಮೂರು ಭಾಷೆಗಳಲ್ಲಿ ಲಭ್ಯವಿದೆ. ಹಿಂದೆ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಲಭ್ಯವಿದೆ. ಜೀ5 ಒಟಿಟಿಯಲ್ಲಿ ನೀವು ಈ ಸಿನಿಮಾ ನೋಡಬಹುದು. ಜನವರಿ 24ರಿಂದಲೇ ಈ ಸಿನಿಮಾ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ. ನೀವೂ ಈ ಸಿನಿಮಾವನ್ನು ಜೀ5 ಒಟಿಟಿಯಲ್ಲಿ ವೀಕ್ಷಿಸಬಹುದು. ಈ ಸಿನಿಮಾ ಒಟಿಟಿ ಟ್ರೆಂಡಿಂಗ್‌ನಲ್ಲಿದೆ.
ಈ ಸಿನಿಮಾ ನೋಡುಗರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. 'ಹಿಸಾ ಬರಾಬರ್' ಸಿನಿಮಾ ರೈಲ್ವೆ ಟಿಸಿಯೊಬ್ಬ ಬ್ಯಾಂಕ್‌ನಲ್ಲಿ ಆಗುತ್ತಿರುವ ಹಣಕಾಸು ವಂಚನೆಯನ್ನು ಕಂಡು ಹಿಡಿಯುವ ಕಥೆಯಾಗಿದ್ದರೂ, ಇದರಲ್ಲಿ ಅಲ್ಲಲ್ಲಿ ಇರುವ ಹಾಸ್ಯ ಜನರ ಮನ ಸೆಳೆಯುತ್ತದೆ. ನಿರ್ದೇಶಕ ಅಶ್ವಿನ್ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಸಿನಿಮಾದ ಕಥೆ ಚೆನ್ನಾಗಿದ್ದರೂ, ಆ ಕಥೆ ಕುತೂಹಲಕಾರಿಯಾಗಿಲ್ಲ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಚಿತ್ರತಂಡ ಹಾಗೂ ತಾರಾಗಣ
ಮಾಧವನ್ ಜತೆಗೆ ಹಿಸಾಬ್ ಬರಾಬರ್ ಚಿತ್ರದಲ್ಲಿ ಕೃತಿ ಕುಲ್ಹಾರಿ, ನೀಲ್ ನಿತಿನ್ ಮುಖೇಶ್, ರಶ್ಮಿ ದೇಸಾಯಿ, ಶೌನಕ್ ದುಗ್ಗಲ್, ರವಿ ಮಾರಿಯಾ, ಹಿಮಾಂಶು ಮಲಿಕ್ ಮತ್ತು ಮನು ರಿಷಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜಿಯೋ ಸ್ಟುಡಿಯೋಸ್ ಮತ್ತು ಎಸ್‌ಪಿ ಸಿನಿಕಾರ್ಪ್ ಬ್ಯಾನರ್‌ನಡಿಯಲ್ಲಿ ಜ್ಯೋತಿ ದೇಶಪಾಂಡೆ, ಶರದ್ ಪಟೇಲ್ ಮತ್ತು ಶ್ರೇಯಾಂಶಿ ಪಟೇಲ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ತಾರಾಗಣ: ಮಾಧವನ್, ನೀಲ್ ನಿತಿನ್ ಮುಖೇಶ್, ಕೀರ್ತಿ ಕುಲ್ಹಾರಿ ಮತ್ತು ಇತರರು
ನಿರ್ದೇಶಕ: ಅಶ್ವಿನಿ ಧೀರ್
ನಿರ್ಮಾಪಕರು: ಕೆಟಿ ಕುಂಜುಮೋನ್, ಜಿಯೋ ಸ್ಟುಡಿಯೋಸ್, ಎಸ್ಪಿ ಸಿನಿಕಾರ್ಪ್
ಸಂಗೀತ ನಿರ್ದೇಶಕ: ಅಮನ್ ಪಂತ್
ಛಾಯಾಗ್ರಾಹಕ: ಎಂ. ಸುಕುಮಾರ್
ಸಂಪಾದಕ: ಮನನ್ ಸಾಗರ್
