Rajkummar Rao: 44 ಕೋಟಿ ರೂ. ಮೌಲ್ಯದ ಬೃಹತ್ ಮನೆಯನ್ನು ಬಾಲಿವುಡ್ ನಟ ರಾಜ್ಕುಮಾರ್ ರಾವ್ಗೆ ನೀಡಿದ ಜಾನ್ವಿ ಕಪೂರ್!
ಬಾಲಿವುಡ್ನಲ್ಲಿ ಆಫ್ಬೀಟ್ ಸಿನಿಮಾಗಳ ಮೂಲಕವೇ ಸದ್ದು ಮಾಡುವ ನಟ ರಾಜ್ಕುಮಾರ್ ರಾವ್ ಇದೀಗ ಸದ್ದಿಲ್ಲದೆ, ಮನೆಯೊಂದನ್ನು ಖರೀದಿಸಿದ್ದಾರೆ. ವಿಶೇಷ ಏನೆಂದರೆ, ಆ ಮನೆ ಶ್ರೀದೇವಿ ಮತ್ತು ಬೋನಿ ಕಪೂರ್ ಪುತ್ರಿ ಜಾನ್ವಿ ಕಪೂರ್ ಅವರದ್ದು.
ಮುಂಬೈ: ಮಹಾನಗರಿ ಮುಂಬೈನಲ್ಲಿ ರಿಯಲ್ ಎಸ್ಟೇಟ್ಗೆ ಚಿನ್ನದ ಬೆಲೆ. ಅದರಲ್ಲೂ ಪ್ರತಿಷ್ಠಿತ ಏರಿಯಾಗಳಲ್ಲಿ ಮನೆ ಮಾಡಬೇಕು, ಕಟ್ಟಡ ಖರೀದಿಸಬೇಕು ಎಂದರೆ ಅವರು ಕೋಟಿ ಕುಳಗಳೇ ಆಗಿರಬೇಕು. ಹೀಗಿರುವಾಗಲೇ ಸಿನಿಮಾ ಮಂದಿಯಂತೂ ಆಗೊಂದು ಈಗೊಂದು ಎಂಬಂತೆ ಮನೆ ಖರೀದಿ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ 120 ಕೋಟಿ ಬೆಲೆಯ ಬೃಹತ್ ಅಪಾರ್ಟ್ಮೆಂಟ್ ಅನ್ನೇ ಖರೀದಿಸಿದ್ದರು ನಟ ರಣವೀರ್ ಸಿಂಗ್. ಇದೀಗ ರಾಜ್ಕುಮಾರ್ ರಾವ್ ಅವರೂ ಸಹ ಆ ಸಾಲಿನಲ್ಲಿದ್ದಾರೆ.
ಬಾಲಿವುಡ್ನಲ್ಲಿ ಆಫ್ಬೀಟ್ ಸಿನಿಮಾಗಳ ಮೂಲಕವೇ ಸದ್ದು ಮಾಡುವ ನಟ ರಾಜ್ಕುಮಾರ್ ರಾವ್ ಇದೀಗ ಸದ್ದಿಲ್ಲದೆ, ಮನೆಯೊಂದನ್ನು ಖರೀದಿಸಿದ್ದಾರೆ. ವಿಶೇಷ ಏನೆಂದರೆ, ಆ ಮನೆ ಶ್ರೀದೇವಿ ಮತ್ತು ಬೋನಿ ಕಪೂರ್ ಪುತ್ರಿ ಜಾನ್ವಿ ಕಪೂರ್ ಅವರದ್ದು. ಬಹುಮಹಡಿ ಕಟ್ಟಡವನ್ನು ಇದೀಗ ರಾಜ್ಕುಮಾರ್ ರಾವ್ಗೆ ನೀಡಿದ್ದಾರೆ. ಬರೋಬ್ಬರಿ 44 ಕೋಟಿ ರೂ. ನೀಡಿ ಆ ಮನೆಯನ್ನು ಖರೀದಿಸಿದ್ದಾರೆ ರಾಜ್ಕುಮಾರ್ ರಾವ್.
ಮುಂಬೈನ ಜುಹು ಪ್ರದೇಶದಲ್ಲಿನ ಈ ಮನೆಯನ್ನು 2020ರಲ್ಲಿಯೇ 39 ಕೋಟಿ ಕೊಟ್ಟು ರಾಜ್ಕುಮಾರ್ ರಾವ್ ಮತ್ತವರ ಪತ್ನಿ ಪತ್ರಲೇಖಾ ಖರೀದಿ ಮಾಡಿದ್ದರು. ಆದರೆ, ಅದರ ಕಾಗದ ಪತ್ರ ವ್ಯವಹಾರ ಮಾತ್ರ ಮುಗಿದಿರಲಿಲ್ಲ. ಇದೀಗ ಟ್ಯಾಕ್ಸ್, ಸ್ಟಾಂಪ್ ಡ್ಯೂಟಿ ಸೇರಿ 44 ಕೋಟಿ ರೂ.ಗೆ ವ್ಯವಹಾರ ಮುಗಿದಿದೆ. ಈ ಕಟ್ಟಡದ ವಿಸ್ತೀರ್ಣವೂ 3,456 ಚದರ ಅಡಿ ಇದ್ದು, ಪ್ರತಿ ಚದರ ಅಡಿಗೆ ಸುಮಾರು ರೂ 1.27 ಲಕ್ಷ ಬೆಲೆಯಿದೆ.
ಕೆಲ ಮೂಲಗಳ ಪ್ರಕಾರ, ರಾಜ್ಕುಮಾರ್ ರಾವ್ 2.19 ಕೋಟಿ ರೂಪಾಯಿಗಳ ಸ್ಟ್ಯಾಂಪ್ ತೆರಿಗೆಯನ್ನು ಪಾವತಿಸಿದ್ದಾರೆ. ಎರಡು ವರ್ಷಗಳ ಹಿಂದೆ ಜಾನ್ವಿ ಕಪೂರ್ ಅವರ ಸ್ಟ್ಯಾಂಪ್ ಡ್ಯೂಟಿ ನೋಡುವುದಾದರೆ, ಬರೋಬ್ಬರಿ 78 ಲಕ್ಷ ರೂಪಾಯಿ ಹೆಚ್ಚಳವಾಗಿದೆ. ವಿಶೇಷ ಏನೆಂದರೆ, ಸದ್ಯದ ರಾಜ್ಕುಮಾರ್ ದಂಪತಿಯ ಮನೆ ಸಹ ಅದೇ ಕಟ್ಟಡದಲ್ಲಿದ್ದು, ಅವರು ಬಾಡಿಗೆಗೆ ಇದ್ದಾರೋ ಅಥವಾ ಸ್ವಂತ ಮನೆಯೋ ಎಂಬ ಬಗ್ಗೆ ಮಾಹಿತಿ ಇಲ್ಲ. ಇದೇ ವರ್ಷದ ಜನವರಿಯಲ್ಲಿ ಕಾಜೋಲ್ ದೇವಗನ್ ಎರಡು ಅಪಾರ್ಟ್ಮೆಂಟ್ ಖರೀದಿಸಿದ್ದರು. ಅವುಗಳಿಗೆ 11.95 ಕೋಟಿ ಪಾವತಿಸಿದ್ದರು.
ರಣವೀರ್ ಖರೀದಿಸಿದ ಕಟ್ಟಡ 119 ಕೋಟಿ ಮೌಲ್ಯದ್ದು!
ಬಾಲಿವುಡ್ ನಟರು ಒಂದು ಕಾರು ಖರೀದಿ ಮಾಡಿದರೂ ಸುದ್ದಿಯಲ್ಲಿರುತ್ತಾರೆ. ಹೊಸ ಮನೆ ಪ್ರವೇಶಿಸಿದರೂ ಚರ್ಚೆಯಲ್ಲಿರುತ್ತಾರೆ. ಅಲ್ಲಿನ ನಟ ನಟಿಯರ ಐಶಾರಾಮಿ ಜೀವನಕ್ಕೇನೂ ಕೊರತೆಯಿಲ್ಲ. ಅದರಲ್ಲೂ ಕೋಟಿ ಕೋಟಿ ಬೆಲೆಯ ಬಂಗಲೆ, ಅಪಾರ್ಟ್ಮೆಂಟ್ ಖರೀದಿಯಂತೂ ತಿಂಗಳಿಗೊಬ್ಬರು ಮಾಡೇ ಮಾಡ್ತಾರೆ. ಇದೀಗ ನಟ ರಣವೀರ್ ಸಿಂಗ್ ಸಹ ಬೃಹತ್ ಹೂಡಿಕೆ ಮಾಡಿ ಆಸ್ತಿಯೊಂದನ್ನು ಖರೀದಿಸಿದ್ದಾರೆ. ಅದರ ಖರೀದಿಯ ಮೊತ್ತವೇ ಇದೀಗ ಅಚ್ಚರಿ ಮೂಡಿಸಿದೆ! ಮುಂಬೈನ ಬಾಂದ್ರಾ ಪ್ರದೇಶ ಸೆಲೆಬ್ರಿಟಿಗಳೇ ವಾಸಿಸುವ ಏರಿಯಾ. ಅಲ್ಲಿನ ರಿಯಲ್ ಎಸ್ಟೇಟ್ ಮೌಲ್ಯ ಕೋಟಿಗಟ್ಟಲೆ. ಇದೀಗ ಅದೇ ಏರಿಯಾದಲ್ಲಿ ರಣವೀರ್ ಸಿಂಗ್ ಆಸ್ತಿ ಖರೀದಿಸಿದ್ದಾರೆ. ಈಗಾಗಲೇ ಮುಂಬೈನ ಹಲವೆಡೆ ಅಪಾರ್ಟ್ಮೆಂಟ್ ಮತ್ತು ಬೃಹತ್ ಕಟ್ಟಡಗಳನ್ನು ಹೊಂದಿರುವ ರಣವೀರ್, ಇತ್ತೀಚೆಗಷ್ಟೇ 119 ಕೋಟಿ ರೂ. ಮೌಲ್ಯದ ಆಸ್ತಿ ಖರೀದಿಸಿ ಸುದ್ದಿಯಲ್ಲಿದ್ದಾರೆ. ಈ 119 ಕೋಟಿ ಖರೀದಿಗೆ 7 ಕೋಟಿ ರೂ. ಮೊತ್ತವನ್ನು ಸ್ಟಾಂಪ್ ಡ್ಯೂಟಿಗೆ ನೀಡಿದ್ದಾರೆ.
ರಣವೀರ್ ಸಿಂಗ್, ಅವರ ತಂದೆ ಜಗಜಿತ್ ಸುಂದರ್ ಸಿಂಗ್ ಭವ್ನಾನಿ ಓ ಫೈವ್ ಓ ಮೀಡಿಯಾ ವರ್ಕ್ಸ್ ಸಂಸ್ಥೆ ನಡೆಸುತ್ತಿದ್ದಾರೆ. ಈ ಸಂಸ್ಥೆಗಾಗಿಯೇ ರಣವೀರ್ ಸಿಂಗ್ ಜತೆ ಸೇರಿ ಸಮುದ್ರಕ್ಕೆ ಮುಖ ಮಾಡಿದ ಬೃಹತ್ ಅಪಾರ್ಟ್ಮೆಂಟ್ ಖರೀದಿ ಮಾಡಿದ್ದಾರೆ. ಆಸ್ತಿಯು ಒಟ್ಟು 11,266 ಚದರ ಅಡಿ ಕಾರ್ಪೆಟ್ ಪ್ರದೇಶ ಮತ್ತು 1,300 ಚದರ ಅಡಿ ಟೆರೇಸ್ ಅನ್ನು ಹೊಂದಿದೆ. ಈ ಸ್ಥಳದಲ್ಲಿ 19 ಕಾರ್ಗಳನ್ನು ಪಾರ್ಕ್ ಮಾಡಬಹುದಂತೆ. ವಿಶೇಷ ಏನೆಂದರೆ ಈ ಅಪಾರ್ಟ್ಮೆಂಟ್ ಶಾರುಖ್ ಖಾನ್ ಅವರ ನಿವಾಸ್ ಮನ್ನತ್ ಬಳಿ ಇದೆ.