Kannada News  /  Entertainment  /  Rakhi Sawant And Adil Khan Controversy Happy Ending

Rakhi Sawant Marriage: ಸುಖಾಂತ್ಯ ಕಂಡ ನಟಿ ರಾಖಿ ಸಾವಂತ್‌ - ಆದಿಲ್‌ ಖಾನ್‌ ಮದುವೆ ವಿವಾದ

ರಾಖಿ ಸಾವಂತ್‌-ಆದಿಲ್‌ ಖಾನ್‌ ದುರ್ರಾನಿ
ರಾಖಿ ಸಾವಂತ್‌-ಆದಿಲ್‌ ಖಾನ್‌ ದುರ್ರಾನಿ (PC: Rakhi Sawant Instagram)

ಈ ವಿವಾದ ಸುಖಾಂತ್ಯ ಕಂಡಿದೆಯಂತೆ. ಆಂಗ್ಲ ಪತ್ರಿಕೆಯೊಂದಿಗೆ ಆದಿಲ್‌ ಖಾನ್‌ ಮಾತನಾಡಿದ್ದು, ರಾಖಿ ಹಾಗೂ ನಾನು ಮದುವೆಯಾಗಿರುವುದು ನಿಜ. ಆದರೆ ಇದು ನನ್ನ ಮನೆಯವರಿಗೆ ತಿಳಿದಿರಲಿಲ್ಲ. ನಮ್ಮಿಬ್ಬರ ಮದುವೆ ವಿಚಾರ ತಿಳಿದರೆ ನನ್ನ ತಂಗಿಗೆ ಗಂಡು ಸಿಗುವುದಿಲ್ಲ ಎಂದು ಭಯವಿತ್ತು. ರಾಖಿ ಹಾಗೂ ನಾನು ಪ್ರೀತಿಸುತ್ತಿದ್ದು ನನ್ನ ಮನೆಯವರಿಗೆ ಇಷ್ಟವಿರಲಿಲ್ಲ.

ಬಾಲಿವುಡ್‌ ನಟಿ ರಾಖಿ ಸಾವಂತ್‌ ಇತ್ತೀಚೆಗೆ ತಮ್ಮ ಬಾಯ್‌ಫ್ರೆಂಡ್‌ ಆದಿಲ್ ಖಾನ್‌ ದುರ್ರಾನಿ ಅವರನ್ನು ಮದುವೆ ಆಗಿದ್ದಾರೆ ಎನ್ನಲಾದ ಫೋಟೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಆದರೆ ರಾಖಿ ಮದುವೆ ಬಗ್ಗೆ ಅನೇಕ ಊಹಾ ಪೋಹಗಳು ಹರಿದಾಡಿದ್ದವು. ಇದರ ಬೆನ್ನಲ್ಲೇ ಆದಿಲ್‌ ನನಗೆ ಮೋಸ ಮಾಡುತ್ತಿದ್ದಾನೆಂದು ರಾಖಿ ಕಣ್ಣೀರಿಟ್ಟಿದ್ದರು.

ಟ್ರೆಂಡಿಂಗ್​ ಸುದ್ದಿ

ರಾಖಿ ಸಾವಂತ್‌ ತಾಯಿ ಜಯಾ ಭೇಡಾ ಅವರು ಬ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ರಾಖಿ, ಆಸ್ಪತ್ರೆಯಿಂದಲೇ ಲೈವ್‌ ಮಾಡಿ ತನ್ನ ತಾಯಿಗೆ ಬ್ರೈನ್‌ ಟ್ಯೂಮರ್‌ ಇದ್ದು ನೀವೆಲ್ಲರೂ ಆಕೆಗಾಗಿ ಪ್ರಾರ್ಥಿಸಿ ಎಂದು ಮನವಿ ಮಾಡಿದ್ದರು. ಆಸ್ಪತ್ರೆ ಬೆಡ್‌ ಮೇಲೆ ಚಿಕಿತ್ಸೆ ಪಡೆಯುತ್ತಿರುವ ತಮ್ಮ ತಾಯಿಯನ್ನು ಕೂಡಾ ರಾಖಿ ಸಾವಂತ್‌ ತೋರಿಸಿದ್ದರು. ಇದರ ಬೆನ್ನಲ್ಲೇ ರಾಖಿ ಸಾವಂತ್‌, ತಾವು ಆದಿಲ್‌ ಖಾನ್‌ನನ್ನು ಮದುವೆ ಆಗಿದ್ದಾರೆ ಎನ್ನಲಾದ ಫೋಟೋ ಹಂಚಿಕೊಂಡಿದ್ದರು. ಇದನ್ನು ನೋಡಿದ ಹಲವರು ಅತ್ತ ನಿಮ್ಮ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರೆ ನಿಮಗೆ ಮದುವೆ ಬೇಕಿತ್ತಾ? ಎಂದು ಪ್ರಶ್ನಿಸಿದ್ದರು. ಇನ್ನೂ ಕೆಲವರು ರಾಖಿ ಸಾವಂತ್‌ ಗರ್ಭಿಣಿ, ಆದ್ದರಿಂದಲೇ ಇಷ್ಟು ತರಾತುರಿಯಲ್ಲಿ ಮದುವೆಯಾಗಿದ್ದಾರೆ ಎಂದಿದ್ದರು. ಆದರೆ ನಂತರವಷ್ಟೇ ರಾಖಿ ಹಾಗೂ ಆದಿಲ್‌ 6 ತಿಂಗಳ ಹಿಂದೆಯೇ ಮದುವೆಯಾಗಿದ್ದಾರೆ ಎಂಬ ನಿಜ ಎಲ್ಲರಿಗೂ ತಿಳಿಯಿತು.

ಆದರೆ ರಾಖಿ ಸಾವಂತ್‌, ಆದಿಲ್‌ ಖಾನ್‌ ನನಗೆ ಮೋಸ ಮಾಡುತ್ತಿದ್ದಾನೆ ಎಂದು ಕಣ್ಣೀರಿಟ್ಟಿದ್ದರು. ಆದಿಲ್‌ ಖಾನ್‌ ಹಾಗೂ ನಾನು 6 ತಿಂಗಳ ಹಿಂದೆಯೇ ಮದುವೆಯಾಗಿದ್ದೆವು. ಆತನ ಇಷ್ಟದಂತೆ ನಾನು ಫಾತಿಮಾ ಆಗಿ ಬದಲಾದೆ. ನಮ್ಮ ಮದುವೆ ವಿಚಾರವನ್ನು ಆದಿಲ್‌ ಖಾನ್‌ ಯಾರಿಗೂ ಹೇಳದಂತೆ ತಾಕೀತು ಮಾಡಿದ್ದರು. ಈಗ ನೋಡಿದರೆ ಆತ ನನ್ನನ್ನು ಮದುವೆಯೇ ಆಗಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದಿದ್ದರು. ಕಳೆದ ಒಂದು ವಾರದಿಂದ ರಾಖಿ ಆದಿಲ್‌ ಮದುವೆ ವಿಚಾರವೇ ಭಾರೀ ಸುದ್ದಿ ಮಾಡುತ್ತಿದೆ.

ಆದರೆ ಈಗ ಈ ವಿವಾದ ಸುಖಾಂತ್ಯ ಕಂಡಿದೆಯಂತೆ. ಆಂಗ್ಲ ಪತ್ರಿಕೆಯೊಂದಿಗೆ ಆದಿಲ್‌ ಖಾನ್‌ ಮಾತನಾಡಿದ್ದು, ರಾಖಿ ಹಾಗೂ ನಾನು ಮದುವೆಯಾಗಿರುವುದು ನಿಜ. ಆದರೆ ಇದು ನನ್ನ ಮನೆಯವರಿಗೆ ತಿಳಿದಿರಲಿಲ್ಲ. ನಮ್ಮಿಬ್ಬರ ಮದುವೆ ವಿಚಾರ ತಿಳಿದರೆ ನನ್ನ ತಂಗಿಗೆ ಗಂಡು ಸಿಗುವುದಿಲ್ಲ ಎಂದು ಭಯವಿತ್ತು. ರಾಖಿ ಹಾಗೂ ನಾನು ಪ್ರೀತಿಸುತ್ತಿದ್ದು ನನ್ನ ಮನೆಯವರಿಗೆ ಇಷ್ಟವಿರಲಿಲ್ಲ. ಆದ್ದರಿಂದ ಇಬ್ಬರೂ ಗುಟ್ಟಾಗಿ ಮದುವೆಯಾಗಬೇಕಾಯ್ತು. ಇದನ್ನು ನಾನು ನನ್ನ ಪೋಷಕರಿಗೆ ನಿಧಾನವಾಗಿ ಮನವರಿಕೆ ಮಾಡುತ್ತೇನೆ. ರಾಖಿ ಹಾಗೂ ನಾವಿಬ್ಬರೂ ಈಗ ಸಂತೋಷವಾಗಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ರಾಖಿ ಮದುವೆ ವಿವಾದ ಸುಖಾಂತ್ಯ ಕಂಡಿದೆ.