ಕನ್ನಡ ಸುದ್ದಿ  /  ಮನರಂಜನೆ  /  Rakhi Sawant Iftar: ಇಫ್ತಾರ್‌ ಔತಣಕೂಟ ಆಯೋಜಿಸಿದ್ದ ನಟಿ ರಾಖಿ ಸಾವಂತ್‌... ವಿಡಿಯೋ ವೈರಲ್‌

Rakhi Sawant Iftar: ಇಫ್ತಾರ್‌ ಔತಣಕೂಟ ಆಯೋಜಿಸಿದ್ದ ನಟಿ ರಾಖಿ ಸಾವಂತ್‌... ವಿಡಿಯೋ ವೈರಲ್‌

ರಾಖಿ ಸಾವಂತ್‌ ತಮ್ಮ ಆಪ್ತ ಗೆಳತಿ ರಾಜಶ್ರೀ ಹಾಗೂ ಇನ್ನಿತರರೊಂದಿಗೆ ಇಫ್ತಾರ್‌ ಔತಣಕೂಟದಲ್ಲಿ ಭಾಗವಹಿಸಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ವಿಡಿಯೋದಲ್ಲಿ, ಬುರ್ಕಾ ಧರಿಸಿ ಪ್ರಾರ್ಥನೆ ಸಲ್ಲಿಸಿದ ನಂತರ ರಾಖಿ ಸಾವಂತ್‌ ಆಹಾರ ಸ್ವೀಕರಿಸುವುದನ್ನು ನೋಡಬಹುದು.

ಇಫ್ತಾರ್‌ ಔತಣಕೂಟ ಆಯೋಜಿಸಿದ್ದ ರಾಖಿ ಸಾವಂತ್‌
ಇಫ್ತಾರ್‌ ಔತಣಕೂಟ ಆಯೋಜಿಸಿದ್ದ ರಾಖಿ ಸಾವಂತ್‌ (PC: Viral Bhayani)

ಬಾಲಿವುಡ್‌ ನಟಿ ರಾಖಿ ಸಾವಂತ್‌ ಆದಿಲ್‌ ಖಾನ್‌ ದುರಾನಿಯನ್ನು ಮದುವೆ ಆದ ನಂತರ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಕೆಲವೆಡೆ ಹಿಜಾಬ್‌ ಧರಿಸಿ ಕಾಣಿಸಿಕೊಂಡಿದ್ದರು. ಇದೀಗ ಅವರು ರಂಜಾನ್‌ ಉಪವಾಸ ಕೈಗೊಂಡಿದ್ದು ಸ್ನೇಹಿತರು ಹಾಗೂ ಮಾಧ್ಯಮದವರಿಗಾಗಿ ಇಫ್ತಾರ್‌ ಭೋಜನಕೂಟ ಆಯೋಜಿಸಿದ್ದಾರೆ.

ರಾಖಿ ಸಾವಂತ್‌ ತಮ್ಮ ಆಪ್ತ ಗೆಳತಿ ರಾಜಶ್ರೀ ಹಾಗೂ ಇನ್ನಿತರರೊಂದಿಗೆ ಇಫ್ತಾರ್‌ ಔತಣಕೂಟದಲ್ಲಿ ಭಾಗವಹಿಸಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ವಿಡಿಯೋದಲ್ಲಿ, ಬುರ್ಕಾ ಧರಿಸಿ ಪ್ರಾರ್ಥನೆ ಸಲ್ಲಿಸಿದ ನಂತರ ರಾಖಿ ಸಾವಂತ್‌ ಆಹಾರ ಸ್ವೀಕರಿಸುವುದನ್ನು ನೋಡಬಹುದು. ಈ ವಿಡಿಯೋಗೆ ನೆಟಿಜನ್ಸ್‌ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮಲ್ಲಿ ಬಹಳ ಬದಲಾವಣೆ ಆಗಿದೆ. ಈ ಪರಿವರ್ತನೆಯೇ ಮುಂದಿನ ದಿನಗಳಲ್ಲಿ ನಿಮಗೆ ಒಳಿತು ಮಾಡಲಿದೆ. ದೇವರು ನಿಮಗೆ ಆಶೀರ್ವದಿಸುತ್ತಾನೆ ಎಂದು ಕೆಲವರು ಕಮೆಂಟ್‌ ಮಾಡಿದರೆ, ಪತಿ ಆದಿಲ್‌ ಖಾನ್‌ ವಿರುದ್ಧ ದೂರು ನೀಡಿ, ಆತನನ್ನು ಜೈಲಿಗೆ ಕಳಿಸಿದ್ದೀರಿ. ಇಷ್ಟಾದ ನಂತರವೂ ಆತನ ಬಗ್ಗೆ ಪ್ರೀತಿ ಇರುವಂತೆ ನಟಿಸಿ ರಂಜಾನ್‌ ಉಪವಾಸ ಮಾಡುತ್ತಿದ್ದೀರಿ, ನಿಮ್ಮನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಮೆಂಟ್‌ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಗುಟ್ಟಾಗಿ ಮದುವೆಯಾಗಿದ್ದ ಆದಿಲ್‌ ಖಾನ್-ರಾಖಿ ಸಾವಂತ್‌

ಕಳೆದ 2 ವರ್ಷಗಳಿಂದ ರಾಖಿ ಸಾವಂತ್‌ ಹಾಗೂ ಆದಿಲ್‌ ಖಾನ್‌ ಜೊತೆಯಾಗಿ ಸುತ್ತುತ್ತಿದ್ದರು. ನಮ್ಮಿಬ್ಬರದ್ದೂ ಪವಿತ್ರ ಪ್ರೀತಿ ಎಂದು ರಾಖಿ ಸಾವಂತ್‌ ಕೂಡಾ ಹೇಳಿಕೊಂಡಿದ್ದರು. ಕಳೆದ ವರ್ಷ ಇಬ್ಬರೂ ಗುಟ್ಟಾಗಿ ಮದುವೆ ಆಗಿದ್ದರು. ಆದರೆ ಕೆಲವು ದಿನಗಳ ನಂತರ ರಾಖಿ ಸಾವಂತ್‌ ಆದಿಲ್‌ ನನಗೆ ಮೋಸ ಮಾಡುತ್ತಿದ್ದಾನೆ ಎಂದು ಕಣ್ಣೀರಿಟ್ಟಿದ್ದರು.

ಯಾರಿಗೂ ತಿಳಿಯದಂತೆ ಮದುವೆಯಾಗಿದ್ದೆವು. ಆದರೆ ಆದಿಲ್‌ ಖಾನ್‌ ನನಗೆ ಮೋಸ ಮಾಡುತ್ತಿದ್ದಾನೆ ಎಂದು ರಾಖಿ ಕೆಲವು ದಿನಗಳ ಹಿಂದೆ ಕಣ್ಣೀರಿಟ್ಟಿದ್ದರು. ಆದಿಲ್‌ ಖಾನ್‌ ಹಾಗೂ ನಾನು 6 ತಿಂಗಳ ಹಿಂದೆಯೇ ಮದುವೆಯಾಗಿದ್ದೆವು. ಆತನ ಇಷ್ಟದಂತೆ ನಾನು ಫಾತಿಮಾ ಆಗಿ ಬದಲಾದೆ. ನಮ್ಮ ಮದುವೆ ವಿಚಾರವನ್ನು ಆದಿಲ್‌ ಖಾನ್‌ ಯಾರಿಗೂ ಹೇಳದಂತೆ ತಾಕೀತು ಮಾಡಿದ್ದರು. ಈಗ ನೋಡಿದರೆ ಆತ ನನ್ನನ್ನು ಮದುವೆಯೇ ಆಗಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದಿದ್ದರು. ಆದರೆ ಆದಿಲ್‌ ಮಾಧ್ಯಗಳ ಮುಂದೆ ತಾನು ರಾಖಿಯನ್ನು ಮದುವೆ ಆಗಿರುವುದಾಗಿ ಒಪ್ಪಿಕೊಂಡಿದ್ದರು. ''ನಮ್ಮಿಬ್ಬರ ಮದುವೆ ವಿಚಾರ ತಿಳಿದರೆ ನನ್ನ ತಂಗಿಗೆ ಗಂಡು ಸಿಗುವುದಿಲ್ಲ ಎಂದು ಭಯವಿತ್ತು. ರಾಖಿ ಹಾಗೂ ನಾನು ಪ್ರೀತಿಸುತ್ತಿದ್ದು ನನ್ನ ಮನೆಯವರಿಗೆ ಇಷ್ಟವಿರಲಿಲ್ಲ. ಆದ್ದರಿಂದ ಇಬ್ಬರೂ ಗುಟ್ಟಾಗಿ ಮದುವೆಯಾಗಬೇಕಾಯ್ತು. ಇದನ್ನು ನಾನು ನನ್ನ ಪೋಷಕರಿಗೆ ನಿಧಾನವಾಗಿ ಮನವರಿಕೆ ಮಾಡುತ್ತೇನೆ. ರಾಖಿ ಹಾಗೂ ನಾವಿಬ್ಬರೂ ಈಗ ಸಂತೋಷವಾಗಿದ್ದೇವೆ'' ಎಂದಿದ್ದರು.

ಪತಿ ವಿರುದ್ಧ ದೂರು ನೀಡಿದ್ದ ರಾಖಿ ಸಾವಂತ್‌

ಹಣ ದುರುಪಯೋಗ, ಅತ್ಯಾಚಾರ, ಮತ್ತೊಬ್ಬ ನಟಿಯೊಂದಿಗೆ ಅಫೇರ್‌ ಕಾರಣ ನೀಡಿ ರಾಖಿ ಸಾವಂತ್‌ ಆದಿಲ್‌ ಖಾನ್‌ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಮುಂಬೈ ಪೊಲೀಸರು ಆದಿಲ್‌ ಬಂಧಿಸಿದ್ದರು. ಸದ್ಯಕ್ಕೆ ಆದಿಲ್‌ ಖಾನ್‌ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆದಿಲ್‌ ಖಾನ್‌ ನನ್ನ ಮೂಲಕ ಫೇಮಸ್‌ ಆಗಲು ಆಸೆ ಪಡುತ್ತಿದ್ದಾನೆ. ಆದಿಲ್ ಬೇರೆ ಹುಡುಗಿಗೆ ಹತ್ತಿರವಾಗುತ್ತಿದ್ದಾನೆ, ಆ ಹುಡುಗಿಯನ್ನು ಮರೆತುಬಿಡುತ್ತೇನೆ ಎಂದು ಆದಿಲ್‌ ಕುರಾನ್‌ ಮೇಲೆ ಆಣೆ ಮಾಡಿ ಹೇಳಿದ್ದನು. ಆದರೆ ಅವನು ತಪ್ಪು ಮಾಡಿದ್ದಾನೆ. ನುಡಿದಂತೆ ನಡೆಯುತ್ತಿಲ್ಲ, ಆದಿಲ್ ದೊಡ್ಡ ವಂಚಕ ಎಂದು ರಾಖಿ ಆರೋಪಿಸಿದ್ದರು.